Ezekiel · chapter 46 · verse 13
Ezekiel 46:13 in Kannada
ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
Neenu pratidinavoo kartanige ondu varushada dosharahitavaada kurimariya dahanabaliyannu siddamaadabeku. Heege pratidinavoo munjaane nadeyabeku.
Ezekiel 46:13 in English
- King James Version (KJV)
- Thou shalt daily prepare a burnt offering unto the LORD [of] a lamb of the first year without blemish: thou shalt prepare it every morning.
- World English Bible (WEB)
- “‘“You shall prepare a lamb a year old without defect for a burnt offering to the LORD daily. Morning by morning you shall prepare it.
- American Standard Version (ASV)
- And thou shalt prepare a lamb a year old without blemish for a burnt-offering unto Jehovah daily: morning by morning shalt thou prepare it.
- Bible in Basic English (BBE)
- And you are to give a lamb a year old without any mark on it for a burned offering to the Lord every day: morning by morning you are to give it.
- Darby Translation (DBY)
- And thou shalt daily offer a burnt-offering unto Jehovah, of a yearling-lamb without blemish: thou shalt prepare it morning by morning.
- Webster's Bible (WBS)
- Thou shalt daily prepare a burnt-offering to the LORD [of] a lamb of the first year without blemish: thou shalt prepare it every morning.
- Young's Literal Translation (YLT)
- 'And a lamb, son of a year, a perfect one, thou dost make a burnt-offering daily to Jehovah; morning by morning thou dost make it.
Read in context
- 11ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.
- 12ಪ್ರಧಾನನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಕರ್ತನಿಗೆ ಸಿದ್ಧಮಾಡು ವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲನ್ನು ಅವನಿಗೆ ತೆರೆಯಬೇಕು; ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ತು ದಿನದಲ್ಲಿ ಮಾಡಿದ ಹಾಗೆ ಸಿದ್ದಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಲನ್ನು ಮುಚ್ಚಬೇಕು.
- 13ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
- 14ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಏಫದ ಆರನೇ ಪಾಲನ್ನು ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಎಣ್ಣೆಯ ಹಿನ್ನಿನಲ್ಲಿ ಮೂರನೇ ಪಾಲನ್ನು ಸಿದ್ಧಮಾಡಬೇಕು. ಇದು ಕರ್ತನಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದೆ ಆಹಾರದ ಅರ್ಪಣೆಯಾಗಿದೆ.
- 15ಹೀಗೆ ಅವರು ಕುರಿಮರಿಯನ್ನು ಆಹಾರದ ಅರ್ಪಣೆಯನ್ನು ಎಣ್ಣೆಯನ್ನು ಪ್ರತಿದಿನದ ಮುಂಜಾನೆಯಲ್ಲಿ ಎಡೆಬಿಡದೆ ದಹನಬಲಿಯನ್ನಾಗಿ ಸಿದ್ಧಮಾಡಬೇಕು.
Cross references
- Isaiah 50:4 ಯೆಶಾಯ 50:4ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.
- Exodus 12:5 ವಿಮೋಚನಕಾಂಡ 12:5ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು.
- Leviticus 12:6 ಯಾಜಕಕಾಂಡ 12:6ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು.
- 1 Peter 1:19–20 1 ಪೇತ್ರನು 1:19–20ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ. ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟು ಈ ಅಂತ್ಯ ಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
- Psalm 92:2 ಕೀರ್ತನೆಗಳು 92:2ಬೆಳಿಗ್ಗೆ ನಿನ್ನ ಪ್ರೀತಿ ಕರುಣೆಯನ್ನೂ ಪ್ರತಿ ರಾತ್ರಿ ಯಲ್ಲಿ ನಿನ್ನ ನಂಬಿಗಸ್ತಿಕೆಯನ್ನೂ
- Numbers 28:10 ಅರಣ್ಯಕಾಂಡ 28:10ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
- Exodus 29:38–42 ವಿಮೋಚನಕಾಂಡ 29:38–42ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು. ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು. ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು. ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು.
- Revelation 13:8 ಪ್ರಕಟನೆ 13:8ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು.
- John 1:29 ಯೋಹಾನನು 1:29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
- Numbers 28:3–8 ಅರಣ್ಯಕಾಂಡ 28:3–8ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು. ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು. ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು. ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು. ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು; ಅದರ ಆಹಾ ರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಉದಯದಲ್ಲಿ ಮಾಡಿದ ಹಾಗೆ ಕರ್ತನಿಗೆ ಸುವಾಸನೆ ಯಾಗುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
- Daniel 8:11–13 ದಾನಿಯೇಲನು 8:11–13ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು; ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು. ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ