Ezra · chapter 3 · verse 2
Ezra 3:2 in Kannada
ಆಗ ಯೋಚಾದಾಕನ ಮಗನಾದ ಯೇಷೂವನೂ ಅವನ ಸಹೋದರರಾದ ಯಾಜಕರೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಸಹೋದರರೂ ಎದ್ದು ದೇವರ ಮನುಷ್ಯನಾದ ಮೋಶೆಯ ನ್ಯಾಯ ಪ್ರಮಾಣದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವದಕ್ಕೆ ಇಸ್ರಾಯೇಲ್ ದೇವರ ಬಲಿಪೀಠವನ್ನು ಕಟ್ಟಿಸಿದರು.
Aaga yochaadaakana maganaada yeshoovanoo avana sahodararaada yaajakaroo sheyalteeyelana maganaada jerubbaabelanoo avana sahodararoo eddu devara manushyanaada mosheya nyaaya pramaanadalli barediruva haage dahanabaligalannu arpisuvadakke israayel devara balipeethavannu kattisidaru.
Ezra 3:2 in English
- King James Version (KJV)
- Then stood up Jeshua the son of Jozadak, and his brethren the priests, and Zerubbabel the son of Shealtiel, and his brethren, and builded the altar of the God of Israel, to offer burnt offerings thereon, as [it is] written in the law of Moses the man of God.
- World English Bible (WEB)
- Then Jeshua the son of Jozadak stood up with his brothers the priests and Zerubbabel the son of Shealtiel and his relatives, and built the altar of the God of Israel, to offer burnt offerings on it, as it is written in the law of Moses the man of God.
- American Standard Version (ASV)
- Then stood up Jeshua the son of Jozadak, and his brethren the priests, and Zerubbabel the son of Shealtiel, and his brethren, and builded the altar of the God of Israel, to offer burnt-offerings thereon, as it is written in the law of Moses the man of God.
- Bible in Basic English (BBE)
- Then Jeshua, the son of Jozadak, and his brothers the priests, and Zerubbabel, the son of Shealtiel, with his brothers, got up and made the altar of the God of Israel for burned offerings as is recorded in the law of Moses, the man of God.
- Darby Translation (DBY)
- Then stood up Jeshua the son of Jozadak, and his brethren the priests, and Zerubbabel the son of Shealtiel, and his brethren, and built the altar of the God of Israel, to offer up burnt-offerings on it, as it is written in the law of Moses the man of God.
- Webster's Bible (WBS)
- Then stood up Jeshua the son of Jozadak, and his brethren the priests, and Zerubbabel the son of Shealtiel, and his brethren, and built the altar of the God of Israel, to offer burnt-offerings on it as [it is] written in the law of Moses the man of God.
- Young's Literal Translation (YLT)
- And rise doth Jeshua son of Jozadak, and his brethren the priests, and Zerubbabel son of Shealtiel, and his brethren, and they build the altar of the God of Israel, to cause to ascend upon it burnt-offerings, as it is written in the law of Moses, the man of God.
Read in context
- 1ಏಳನೇ ತಿಂಗಳು ಬಂದ ತರುವಾಯ ಇಸ್ರಾಯೇಲ್ ಮಕ್ಕಳು ಪಟ್ಟಣಗಳಲ್ಲಿ ಇರುವಾಗ ಜನರು ಒಬ್ಬ ಮನುಷ್ಯನೇ ಎಂಬಂತೆ ಯೆರೂಸಲೇಮಿನಲ್ಲಿ ಕೂಡಿಕೊಂಡರು.
- 2ಆಗ ಯೋಚಾದಾಕನ ಮಗನಾದ ಯೇಷೂವನೂ ಅವನ ಸಹೋದರರಾದ ಯಾಜಕರೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಸಹೋದರರೂ ಎದ್ದು ದೇವರ ಮನುಷ್ಯನಾದ ಮೋಶೆಯ ನ್ಯಾಯ ಪ್ರಮಾಣದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವದಕ್ಕೆ ಇಸ್ರಾಯೇಲ್ ದೇವರ ಬಲಿಪೀಠವನ್ನು ಕಟ್ಟಿಸಿದರು.
- 3ಬಲಿಪೀಠವನ್ನು ಅದರ ಅಧಾರಗಳ ಮೇಲೆ ಇಟ್ಟರು; ಯಾಕಂದರೆ ಆ ದೇಶದ ಜನರಿ ಗೋಸ್ಕರ ಅವರಿಗೆ ಹೆದರಿಕೆ ಇತ್ತು. ಅವರು ಅದರ ಮೇಲೆ ದಹನಬಲಿಗಳನ್ನು ಉದಯದಲ್ಲಿಯೂ ಸಾಯ ಂಕಾಲದಲ್ಲಿಯೂ ಅರ್ಪಿಸಿದರು.
- 4ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.
Cross references
- Luke 3:27 ಲೂಕನು 3:27ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾ ಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು;
- Haggai 1:1 ಹಗ್ಗಾಯ 1:1ಅರಸನಾದ ದಾರ್ಯಾವೆಷನ ಎರಡನೇ ವರುಷದ, ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಕೈಯಿಂದ ಯೆಹೂದದ ಅಧಿಪತಿಯಾದ ಶೆಯಲ್ತಿ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಉಂಟಾಯಿತು.
- Ezra 2:2 ಎಜ್ರನು 2:2ಜೆರುಬ್ಬಾಬೆಲನ ಸಂಗಡ ಬಂದ ಸೀಮೆಗಳ ಮಕ್ಕಳು ಯಾರಂದರೆ -- ಯೆಷೂವನು, ನೆಹೆವಿಾಯನು, ಸೆರಾಯನು, ರೆಲಾಯನು ಮೊರ್ದೆಕಾಯನು, ಬಿಲ್ಷಾ ನನು, ಮಿಸ್ಪಾರನು, ಬಿಗ್ವಾಯನು, ರೆಹೂಮನು, ಬಾಣನು, ಇಸ್ರಾಯೇಲ್ ಜನರಾದ ಮನುಷ್ಯರ ಲೆಕ್ಕವೇನಂದರೆ--
- 1 Chronicles 3:17 1 ಪೂರ್ವಕಾಲವೃತ್ತಾಂತ 3:17ಯೆಕೊನ್ಯನ ಮಕ್ಕಳು -- ಅಸ್ಸೀರನು; ಅವನ ಮಗನು ಶೆಯಲ್ತೀಯೇಲನು,
- Exodus 20:24–25 ವಿಮೋಚನಕಾಂಡ 20:24–25ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡ ಬೇಕು. ಅದರ ಮೇಲೆ ನಿನ್ನ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಗಳನ್ನೂ ಎತ್ತುಗಳನ್ನೂ ಅರ್ಪಿಸಬೇಕು; ನನ್ನ ಹೆಸರನ್ನು ಜ್ಞಾಪಕಮಾಡುವ ಎಲ್ಲಾ ಸ್ಥಳಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು. ನೀನು ನನಗೆ ಯಜ್ಞವೇದಿ ಯನ್ನು ಕಲ್ಲಿನಿಂದ ಮಾಡಿದರೆ ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಉಳಿಯನ್ನು ಅದರ ಮೇಲೆ ಎತ್ತಿದರೆ ನೀನು ಅದನ್ನು ಅಪವಿತ್ರ ಮಾಡಿದವನಾಗಿದ್ದೀ.ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.
- Matthew 1:12–13 ಮತ್ತಾಯನು 1:12–13ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು; ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು;
- Haggai 2:2–4 ಹಗ್ಗಾಯ 2:2–4ಯೆಹೂದದ ಅಧಿಪತಿಯಾದ ಶೆಯಲ್ತೀ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಜನರಲ್ಲಿ ಉಳಿದವರಿಗೂ ನೀನು ಹೇಳತಕ್ಕದ್ದೇನಂದರೆ-- ಈ ಆಲಯವನ್ನು ಅದರ ಪೂರ್ವದ ಮಹಿಮೆಯಲ್ಲಿ ನೋಡಿದವರೊಳಗೆ ಉಳಿದ ವರು ನಿಮ್ಮಲ್ಲಿ ಯಾರು? ಈಗ ಅದನ್ನು ಹೇಗೆ ನೋಡು ತ್ತೀರಿ? ಇದು ನಿಮ್ಮ ಕಣ್ಣುಗಳಿಗೆ ಅದರ ಹೋಲಿಕೆಯು ಏನೂ ಇಲ್ಲದ ಹಾಗೆ ತೋರು ತ್ತದಲ್ಲವೋ? ಆದಾಗ್ಯೂ ಈಗ ಕರ್ತನು ಹೇಳುತ್ತಾನೆ --ಜೆರುಬ್ಬಾಬೆಲನೇ, ಬಲವಾಗಿರು; ಪ್ರಧಾನ ಯಾಜಕ ನಾದ ಯೆಹೋಚಾದಾಕನ ಮಗನಾದ ಯೆಹೋ ಶುವನೇ, ಬಲವಾಗಿರು; ದೇಶದ ಜನರೆಲ್ಲರೇ, ಬಲ ವಾಗಿರ್ರಿ ಎಂದು ಕರ್ತನು ಹೇಳುತ್ತಾನೆ; ಕೆಲಸ ಮಾಡಿರಿ; ನಾನು ನಿಮ್ಮ ಸಂಗಡ ಇದ್ದೇನೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
- Numbers 28:3–31 ಅರಣ್ಯಕಾಂಡ 28:3–31ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು. ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು. ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು. ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು. ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು; ಅದರ ಆಹಾ ರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಉದಯದಲ್ಲಿ ಮಾಡಿದ ಹಾಗೆ ಕರ್ತನಿಗೆ ಸುವಾಸನೆ ಯಾಗುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು. ಆದರೆ ಸಬ್ಬತ್ ದಿವಸದಲ್ಲಿ ಆಹಾರದ ಅರ್ಪಣೆ ಗಾಗಿ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿ ಮರಿಗಳನ್ನೂ ಎರಡು ದಶಾಂಶಗಳಷ್ಟು ಎಣ್ಣೇ ಕಲಸಿದ ಹಿಟ್ಟನ್ನೂ ಅದಕ್ಕೆ ಪಾನದ ಅರ್ಪಣೆಯನ್ನೂ ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ. ನಿಮ್ಮ ತಿಂಗಳುಗಳ ಆರಂಭದಲ್ಲಿ ನೀವು ಕರ್ತನಿಗೆ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ಮಚ್ಚೆಯಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ ಒಂದೊಂದು ಹೋರಿಗೆ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟಿನ ಮೂರು ದಶಾಂಶಗಳು; ಒಂದೊಂದು ಟಗರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಎರಡು ದಶಾಂಶಗಳು. ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ. ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ. ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು. ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು. ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಮೊದಲನೇ ದಿವಸದಲ್ಲಿ ಪರಿಶುದ್ಧ ಸಭೆಯನ್ನು ಕೂಡಿಸಬೇಕು. ಯಾವ ತರವಾದ ಕಷ್ಟಕರವಾದ ಕೆಲಸ ವನ್ನು ನೀವು ಆ ದಿವಸದಲ್ಲಿ ಮಾಡಬಾರದು. ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು. ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು. ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನು ಅರ್ಪಿಸಬೇಕು. ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಪಾಪ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು. ಇವುಗಳನ್ನು ನಿತ್ಯವಾದ ದಹನಬಲಿಯಾಗಿರುವ ಉದಯದ ದಹನಬಲಿಯ ಹೊರತಾಗಿ ನೀವು ಅರ್ಪಿಸಬೇಕು. ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು. ಏಳನೇ ದಿವಸದಲ್ಲಿ ನಿಮಗೆ ಪರಿಶುದ್ಧವಾದ ಸಭೆಯು ಇರಬೇಕು; ಯಾವ ಕೆಲಸವನ್ನೂ ನೀವು ಮಾಡಬಾರದು. ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು. ನೀವು ಕರ್ತನಿಗೆ ಸುವಾಸನೆಯುಳ್ಳ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ಅವುಗಳ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ದಶಾಂಶವನ್ನೂ ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಮೇಕೆಮರಿಯನ್ನೂ ಅರ್ಪಿಸಬೇಕು.ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು. ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.
- Zechariah 3:1 ಜೆಕರ್ಯ 3:1ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
- Haggai 2:21 ಹಗ್ಗಾಯ 2:21ಹೇಗಂದರೆ, ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನಿಗೆ ನೀನು ಹೇಳತಕ್ಕದ್ದೇನಂದರೆ--ನಾನು ಆಕಾಶಗಳನ್ನೂ ಭೂಮಿಯನ್ನೂ ಕದಲಿಸುವೆನು.
- Haggai 1:12 ಹಗ್ಗಾಯ 1:12ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾ ಬೆಲನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನೂ ಜನರಲ್ಲಿ ಉಳಿದವರೆ ಲ್ಲರೂ ತಮ್ಮ ದೇವರಾದ ಕರ್ತನ ಶಬ್ದವನ್ನೂ ತಮ್ಮ ದೇವರಾದ ಕರ್ತನು ಕಳುಹಿಸಿದ ಪ್ರವಾದಿಯಾದ ಹಗ್ಗಾಯನ ಮಾತುಗಳನ್ನೂ ಕೇಳಿದರು; ಜನರು ಕರ್ತ ನಿಗೆ ಭಯಪಟ್ಟರು.
- Nehemiah 12:8 ನೆಹೆಮೀಯ 12:8ಲೇವಿಯರು ಯಾರಂದರೆ -- ಯೇಷೂವನು ಬಿನ್ನೂಯನು ಕದ್ಮೀಯೇಲನು ಶೇರೇಬ್ಯನು ಯೆಹೂ ದನು, ಸ್ತುತಿಸುವ ಕಾರ್ಯದ ಮೇಲಾಗಿದ್ದ ಮತ್ತನ್ಯನೂ ಅವನ ಸಹೋದರರೂ.
Original words (Hebrew)
- up · H6965קוּם qûwm
- Jeshua · H3442יֵשׁוּעַ Yêshûwaʻ
- son · H1121בֵּן bên
- Jozadak · H3136יוֹצָדָק Yôwtsâdâq
- brethren · H251אָח ʼâch
- priests · H3548כֹּהֵן kôhên
- Zerubbabel · H2216זְרֻבָּבֶל Zᵉrubbâbel
- son · H1121בֵּן bên
- Shealtiel · H7597שְׁאַלְתִּיאֵל Shᵉʼaltîyʼêl
- brethren · H251אָח ʼâch
- builded · H1129בָּנָה bânâh
- altar · H4196מִזְבֵּחַ mizbêach
- God · H430אֱלֹהִים ʼĕlôhîym
- Israel · H3478יִשְׂרָאֵל Yisrâʼêl
- offer · H5927עָלָה ʻâlâh
- offerings · H5930עֹלָה ʻôlâh
- written · H3789כָּתַב kâthab
- law · H8451תּוֹרָה tôwrâh
- Moses · H4872מֹשֶׁה Môsheh
- man · H376אִישׁ ʼîysh
- God · H430אֱלֹהִים ʼĕlôhîym