Ezra · chapter 5 · verse 1
Ezra 5:1 in Kannada
ಆದರೆ ಪ್ರವಾದಿಗಳಾದ ಹಗ್ಗಾಯನೂ ಇದ್ದೋನನ ಮಗನಾದ ಜೆಕರ್ಯನೂ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರಿಗೆ, ಇಸ್ರಾಯೇಲ್ ದೇವರ ನಾಮದಲ್ಲಿ ಅವರಿಗೆ ಪ್ರವಾದಿಸಿದರು.
Aadare pravaadigalaada haggaayanoo iddonana maganaada jekaryanoo yehooda mattu yeroosaleminalli iruva yehoodyarige, israayel devara naamadalli avarige pravaadisidaru.
Ezra 5:1 in English
- King James Version (KJV)
- Then the prophets, Haggai the prophet, and Zechariah the son of Iddo, prophesied unto the Jews that [were] in Judah and Jerusalem in the name of the God of Israel, [even] unto them.
- World English Bible (WEB)
- Now the prophets, Haggai the prophet and Zechariah the son of Iddo, prophesied to the Jews who were in Judah and Jerusalem. They prophesied to them in the name of the God of Israel.
- American Standard Version (ASV)
- Now the prophets, Haggai the prophet, and Zechariah the son of Iddo, prophesied unto the Jews that were in Judah and Jerusalem; in the name of the God of Israel [prophesied they] unto them.
- Bible in Basic English (BBE)
- Now the prophets Haggai and Zechariah, the son of Iddo, were preaching to the Jews in Judah and Jerusalem in the name of the God of Israel.
- Darby Translation (DBY)
- Now the prophets, Haggai the prophet and Zechariah the son of Iddo, prophesied to the Jews that were in Judah and Jerusalem; in the name of the God of Israel [did they prophesy] to them.
- Webster's Bible (WBS)
- Then the prophets, Haggai the prophet, and Zechariah the son of Iddo, prophesied to the Jews that [were] in Judah and Jerusalem in the name of the God of Israel, [even] to them.
- Young's Literal Translation (YLT)
- And prophesied have the prophets, (Haggai the prophet, and Zechariah son of Iddo) unto the Jews who [are] in Judah and in Jerusalem, in the name of the God of Israel — unto them.
Read in context
- 1ಆದರೆ ಪ್ರವಾದಿಗಳಾದ ಹಗ್ಗಾಯನೂ ಇದ್ದೋನನ ಮಗನಾದ ಜೆಕರ್ಯನೂ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರಿಗೆ, ಇಸ್ರಾಯೇಲ್ ದೇವರ ನಾಮದಲ್ಲಿ ಅವರಿಗೆ ಪ್ರವಾದಿಸಿದರು.
- 2ಆಗ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನೂ ಯೋಚಾದಾಕನ ಮಗ ನಾದ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿ ರುವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿ ದರು; ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
- 3ಆ ವೇಳೆಯಲ್ಲಿ ನದಿಯ ಈಚೆಯಲ್ಲಿರುವ ತತ್ತೆನೈನೆಂಬ ಅಧಿಪತಿಯೂ ಶೆತ ರ್ಬೋಜೆನೈಯೂ, ಅವರ ಜೊತೆಗಾರರೂ ಅವರ ಬಳಿಗೆ ಬಂದು--ಈ ಮನೆಯನ್ನು ಕಟ್ಟುವದಕ್ಕೂ ಈ ಗೋಡೆಯನ್ನು ಕಟ್ಟಿತೀರಿಸುವದಕ್ಕೂ ನಿಮಗೆ ಅಪ್ಪಣೆ ಕೊಟ್ಟವರು ಯಾರೆಂದು ಅವರನ್ನು ಕೇಳಿದರು.
Cross references
- Haggai 1:1–1 ಹಗ್ಗಾಯ 1:1–1ಅರಸನಾದ ದಾರ್ಯಾವೆಷನ ಎರಡನೇ ವರುಷದ, ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಕೈಯಿಂದ ಯೆಹೂದದ ಅಧಿಪತಿಯಾದ ಶೆಯಲ್ತಿ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಉಂಟಾಯಿತು.
- Zechariah 4:6–10 ಜೆಕರ್ಯ 4:6–10ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಓ ಮಹಾ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬೈಲಾಗುವಿ; ಅದಕ್ಕೆ--ಕೃಪೆಯೇ, ಕೃಪೆಯೇ ಎಂದು ಅರ್ಭಟಗಳ ಸಂಗಡ ಮುಖ್ಯ ಕಲ್ಲನ್ನು ಅವನು ಹೊರಗೆ ತರುವನು. ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. ಹೇಗಂದರೆ-- ಜೆರುಬ್ಬಾಬೆಲನ ಕೈಗಳು ಈ ಮನೆಯ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳು ಸಹ ಅದನ್ನು ಪೂರೈಸುವವು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ. ಸಣ್ಣ ಕಾರ್ಯಗಳ ದಿನವನ್ನು ತಿರಸ್ಕರಿಸಿದವನ್ಯಾರು? ಆ ಏಳು ಅಂದರೆ ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಕರ್ತನ ಕಣ್ಣುಗಳು ನೂಲು ಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುತ್ತವೆ.
- Zechariah 1:1–21 ಜೆಕರ್ಯ 1:1–21ದಾರ್ಯಾವೆಷನ ಎರಡನೆಯ ವರುಷದ ಎಂಟನೆಯ ತಿಂಗಳಲ್ಲಿ ಕರ್ತನ ವಾಕ್ಯವು ಇದ್ದೋನನ ಮಗನಾದ ಬೆರಕ್ಯನ ಮಗನಾದ ಜೆಕರ್ಯ ನೆಂಬ ಪ್ರವಾದಿಗೆ ಉಂಟಾಯಿತು. ಹೇಗಂದರೆ-- ಕರ್ತನು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿ ದ್ದಾನೆ. ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು. ದಾರ್ಯಾವೆಷನ ಎರಡನೆಯ ವರುಷದ ಹನ್ನೊಂ ದನೆ ತಿಂಗಳಾದ ಶೆಬಾಟ್ ಎಂಬ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ವಾಕ್ಯವು ಇದ್ದೋನಿನ ಮಗನಾದ ಬೆರೆಕ್ಯನ ಮಗನಾದ ಪ್ರವಾದಿಯಾದ ಜೆಕರ್ಯನಿಗೆ ಉಂಟಾಯಿತು. ಹೇಗೆಂದರೆ, ನಾನು ರಾತ್ರಿಯಲ್ಲಿ ನೋಡಿದಾಗ ಇಗೋ, ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬ ಮನುಷ್ಯನು; ಅವನು ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು ಕಪಿಲ ಬಿಳೀ ಕುದುರೆಗಳು ಇದ್ದವು. ಆಗ ನಾನು--ಓ ನನ್ನ ಒಡೆಯನೇ, ಇವೇನು ಅಂದೆನು. ಆಗ ನನ್ನ ಸಂಗಡ ಮಾತನಾಡಿದ ದೂತ ನು--ಇವೇನೆಂದು ನಿನಗೆ ತೋರಿಸುತ್ತೇನೆ ಅಂದೆನು. ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು ಉತ್ತರಕೊಟ್ಟು ಹೇಳಿದ್ದೇನಂದರೆ--ಇವರು ಭೂಮಿ ಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ನಡೆದಾಡುವದಕ್ಕೆ ಕರ್ತನು ಕಳುಹಿಸಿದವರು ಅಂದನು. ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಕರ್ತನ ದೂತನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ -- ಭೂಮಿಯಲ್ಲಿ ಇತ್ತಿಂದ ಅತ್ತ ಅತ್ತಿಂದ ಇತ್ತ ನಡೆದಾಡಿದ್ದೇವೆ; ಇಗೋ, ಭೂಮಿಯೆಲ್ಲಾ ಸುಮ್ಮನಿದ್ದು ಶಾಂತಿಯಾಗಿದೆ ಅಂದರು. ಆಗ ಕರ್ತನ ದೂತನು ಉತ್ತರಕೊಟ್ಟು ಹೀಗಂ ದನು--ಓ ಸೈನ್ಯಗಳ ಕರ್ತನೇ, ನೀನು ಯೆರೂಸಲೇ ಮನ್ನೂ ಯೆಹೂದದ ಪಟ್ಟಣಗಳನ್ನೂ ಎಷ್ಟರ ವರೆಗೆ ಕನಿಕರಿಸದೆ ಇರುವಿ? ಅವುಗಳ ಮೇಲೆ ಈ ಎಪ್ಪತ್ತು ವರುಷಗಳು ಸಿಟ್ಟು ಮಾಡಿದ್ದೀಯಲ್ಲವೋ ಅಂದನು. ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು. ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ. ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ --ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ; ನನ್ನ ಆಲಯವು ಅದರಲ್ಲಿ ಕಟ್ಟ ಲ್ಪಡುವದೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಯೆರೂ ಸಲೇಮಿನ ಮೇಲೆ ಅಳತೆ ನೂಲು ಚಾಚಲ್ಪಡುವದು. ಇನ್ನೂ ಕೂಗಿ ಹೇಳು, ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವವು; ಕರ್ತನು ಚೀಯೋನನ್ನು ಇನ್ನು ಆದರಿಸುವನು; ಯೆರೂಸಲೇಮನ್ನು ಇನ್ನು ಆದುಕೊಳ್ಳುವನು. ನಾನು ನನ್ನ ಕಣ್ಣುಗಳನ್ನು ಎತ್ತಿದಾಗ ಇಗೋ, ನಾಲ್ಕು ಕೊಂಬುಗಳನ್ನು ನೋಡಿದೆನು. ಆಗ ನನ್ನ ಕೂಡ ಮಾತನಾಡಿದ ದೂತನಿಗೆ ನಾನು--ಇದೇನು ಅಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು--ಇವು ಯೆಹೂದವನ್ನೂ ಇಸ್ರಾಯೇಲನ್ನೂ ಯೆರೂಸ ಲೇಮನ್ನೂ ಚದರಿಸಿದ ಕೊಂಬುಗಳು ಅಂದನು. ಆಗ ಕರ್ತನು ನನಗೆ ನಾಲ್ಕು ಬಡಗಿಯವರನ್ನು ತೋರಿಸಿದನು.ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು. ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು.
- Micah 5:4 ಮೀಕ 5:4ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.
Original words (Hebrew)
- prophets · H5029נְבִיא nᵉbîyʼ
- Haggai · H2292חַגַּי Chaggay
- prophet · H5029נְבִיא nᵉbîyʼ
- Zechariah · H2148זְכַרְיָה Zᵉkaryâh
- son · H1247בַּר bar
- Iddo · H5714עִדּוֹ ʻIddôw
- prophesied · H5013נְבָא nᵉbâʼ
- unto · H5922עַל ʻal
- Jews · H3062יְהוּדָאִי Yᵉhûwdâʼîy
- Judah · H3061יְהוּד Yᵉhûwd
- Jerusalem · H3390יְרוּשָׁלֵם Yᵉrûwshâlêm
- name · H8036שֻׁם shum
- God · H426אֱלָהּ ʼĕlâhh
- Israel · H3479יִשְׂרָאֵל Yisrâʼêl
- unto · H5922עַל ʻal