Ezra · chapter 5 · verse 13
Ezra 5:13 in Kannada
ಆದರೆ ಬಾಬೆಲಿನ ಅರಸ ನಾದ ಕೋರೆಷನು ಮೊದಲನೇ ವರುಷದಲ್ಲಿ ಅರಸ ನಾದ ಕೋರೆಷನು ದೇವರ ಈ ಆಲಯವನ್ನು ಕಟ್ಟಲು ಆಜ್ಞೆಯನ್ನು ಕೊಟ್ಟನು.
Aadare baabelina arasa naada koreshanu modalane varushadalli arasa naada koreshanu devara ee aalayavannu kattalu aajnyeyannu kottanu.
Ezra 5:13 in English
- King James Version (KJV)
- But in the first year of Cyrus the king of Babylon [the same] king Cyrus made a decree to build this house of God.
- World English Bible (WEB)
- But in the first year of Cyrus king of Babylon, Cyrus the king made a decree to build this house of God.
- American Standard Version (ASV)
- But in the first year of Cyrus king of Babylon, Cyrus the king made a decree to build this house of God.
- Bible in Basic English (BBE)
- But in the first year of Cyrus, king of Babylon, Cyrus the king gave an order for the building of this house of God;
- Darby Translation (DBY)
- But in the first year of Cyrus king of Babylon, king Cyrus gave orders to build this house of God.
- Webster's Bible (WBS)
- But in the first year of Cyrus the king of Babylon, [the same] king Cyrus made a decree to build this house of God.
- Young's Literal Translation (YLT)
- but in the first year of Cyrus king of Babylon, Cyrus the king made a decree to build this house of God,
Read in context
- 11ಅವರು ನಮಗೆ ಕೊಟ್ಟ ಪ್ರತ್ಯುತ್ತರವೇನಂದರೆನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರುಷಗಳ ಹಿಂದೆ ಇಸ್ರಾ ಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿಸಿ ತೀರಿಸಿದ್ದ ಆಲಯವನ್ನು ನಾವು ಕಟ್ಟಿಸುತ್ತೇವೆ.
- 12ಆದರೆ ನಮ್ಮ ತಂದೆಗಳು ಪರಲೋಕದ ದೇವರಿಗೆ ಕೋಪವನ್ನು ಎಬ್ಬಿಸಿದ ತರುವಾಯ ಆತನು ಅವರನ್ನು ಬಾಬೆಲಿನ ಅರಸನಾಗಿದ್ದ ಕಸ್ದೀಯರ ದೇಶದವನಾದ ನೆಬೂಕ ದ್ನೆಚ್ಚರನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಈ ಆಲಯವನ್ನು ಹಾಳುಮಾಡಿ ಜನರನ್ನು ಬಾಬೆಲಿಗೆ ತಕ್ಕೊಂಡು ಹೋದನು.
- 13ಆದರೆ ಬಾಬೆಲಿನ ಅರಸ ನಾದ ಕೋರೆಷನು ಮೊದಲನೇ ವರುಷದಲ್ಲಿ ಅರಸ ನಾದ ಕೋರೆಷನು ದೇವರ ಈ ಆಲಯವನ್ನು ಕಟ್ಟಲು ಆಜ್ಞೆಯನ್ನು ಕೊಟ್ಟನು.
- 14ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತಕ್ಕೊಂಡು ಬಾಬೆಲಿನ ಮಂದಿರಕ್ಕೆ ತಂದ ದೇವರ ಆಲಯದ ಬೆಳ್ಳಿಬಂಗಾರದ ಸಾಮಾನುಗಳನ್ನು ಅರಸನಾದ ಕೋರೆ ಷನು ಬಾಬೆಲಿನ ಮಂದಿರದಿಂದ ತಕ್ಕೊಂಡು ತಾನು ನೇಮಿಸಿದ ಅಧಿಪತಿಯಾದ ಶೆಷ್ಬಚ್ಚರನಿಗೆ ಒಪ್ಪಿಸಿ ಅವ ನಿಗೆ--
- 15ಈ ಪಾತ್ರೆಗಳನ್ನು ತೆಗೆದುಕೊಂಡು ಯೆರೂ ಸಲೇಮಿನಲ್ಲಿರುವ ಆಲಯಕ್ಕೆ ತಕ್ಕೊಂಡು ಹೋಗು; ದೇವರ ಆಲಯವು ಅದರ ಸ್ಥಳದಲ್ಲಿ ಕಟ್ಟಿಸಲ್ಪಡಲಿ ಅಂದನು.
Cross references
- Ezra 6:3–5 ಎಜ್ರನು 6:3–5ಅರಸನಾದ ಕೋರೆಷನ ಮೊದಲನೇ ವರುಷ ದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನಲ್ಲಿ ರುವ ದೇವರ ಆಲಯಕ್ಕೋಸ್ಕರ ಕೊಟ್ಟ ಅಪ್ಪಣೆ ಏನಂದರೆ--ಅವರು ಬಲಿಗಳನ್ನು ಅರ್ಪಿಸಿದ ಸ್ಥಳವಾದ ಆಲಯವು ಕಟ್ಟಲ್ಪಡಲಿ. ಅದರ ಅಸ್ತಿವಾರಗಳು ಬಲ ವಾಗಿ ಹಾಕಲ್ಪಡಲಿ; ಅದರ ಎತ್ತರ ಅರುವತ್ತು ಮೊಳ ಅದರ ಅಗಲ ಅರುವತ್ತು ಮೊಳ ಆಗಿರಲಿ; ದೊಡ್ಡ ಕಲ್ಲುಗಳ ಮೂರು ಸಾಲುಗಳೂ ಹೊಸ ತೊಲೆಗಳ ಒಂದು ಸಾಲೂ ಇರಲಿ. ಅದರ ಖರ್ಚು ಅರಮನೆ ಯಿಂದ ಕೊಡಲ್ಪಡಲಿ. ಇದಲ್ಲದೆ ನೆಬೂಕದ್ನೇಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದು ಕೊಂಡು ಬಾಬೆಲಿಗೆ ಒಯ್ದು ದೇವರ ಆಲಯದ ಬೆಳ್ಳಿ ಬಂಗಾರದ ಸಾಮಾನುಗಳನ್ನು ತಿರಿಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತಕ್ಕೊಂಡು ಹೋಗಿ ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇರಿಸಲಿ ಎಂಬದೇ.
- Ezra 1:1–8 ಎಜ್ರನು 1:1–8ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ-- ಪಾರಸಿಯ ಅರಸನಾದ ಕೋರೆಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾಗಿರುವ ಕರ್ತನು ಭೂಮಿಯ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದಲ್ಲಿರುವ ಯೆರೂಸಲೇಮಿನಲ್ಲಿ ತನಗೆ ಮನೆಯನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು). ಇದಲ್ಲದೆ ಯಾವ ಸ್ಥಳದಲ್ಲಾದರೂ ಯಾವನಾದರೂ ಪರದೇಶಸ್ಥ ನಾಗಿ ಉಳಿದಿದ್ದರೆ ಅವನ ಸ್ಥಳದ ಮನುಷ್ಯರು ಯೆರೂ ಸಲೇಮಿನಲ್ಲಿರುವ ದೇವರ ಆಲಯಕ್ಕೆ ಕೊಡುವ ಉಚಿತವಾದ ಕಾಣಿಕೆ ಅಲ್ಲದೆ ಅವನಿಗೆ ಬೆಳ್ಳಿಯಿಂದ ಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗ ಳಿಂದಲೂ ಸಹಾಯಮಾಡಲಿ ಅಂದನು. ಆಗ ಯೆಹೂದ, ಬೆನ್ಯಾವಿಾನ್ ತಂದೆಗಳ ಮುಖ್ಯ ಸ್ಥರೂ ಯಾಜಕರೂ ಲೇವಿಯರೂ ಯೆರೂಸಲೇಮಿನ ಲ್ಲಿರುವ ಕರ್ತನ ಆಲಯವನ್ನು ಕಟ್ಟುವದಕ್ಕೆ ಹೋಗಲು ಕರ್ತನಿಂದ ಪ್ರೇರೇಪಿಸಲ್ಪಟ್ಟವರೆಲ್ಲರೂ ಎದ್ದರು. ಅವರ ಸುತ್ತಲಿರುವವರೆಲ್ಲರೂ ಮನಃ ಪೂರ್ವಕವಾದ ಎಲ್ಲಾ ಕಾಣಿಕೆಗಳ ಹೊರತಾಗಿ ಬೆಳ್ಳಿಯ ಸಾಮಾನು ಗಳಿಂದಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗಳಿಂದಲೂ ಬೆಲೆಯುಳ್ಳವುಗಳಿಂದಲೂ ಅವರಿಗೆ ಸಹಾಯ ಮಾಡಿದರು. ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು. ಅವು ಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸ ದವನಾದ ಮಿತ್ರದಾತನ ಕೈಯಿಂದ ತರಿಸಿ ಯೆಹೂದದ ಪ್ರಭುವಾದ ಶೆಷ್ಬಚ್ಚರನಿಗೆ ಎಣಿಸಿ ಕೊಟ್ಟನು.
Original words (Hebrew)
- But · H1297בְּרַם bᵉram
- first · H2298חַד chad
- year · H8140שְׁנָה shᵉnâh
- Cyrus · H3567כּוֹרֶשׁ Kôwresh
- king · H4430מֶלֶךְ melek
- Babylon · H895בַּבֶל Babel
- king · H4430מֶלֶךְ melek
- Cyrus · H3567כּוֹרֶשׁ Kôwresh
- made · H7761שׂוּם sûwm
- decree · H2942טְעֵם ṭᵉʻêm
- build · H1124בְּנָא bᵉnâʼ
- this · H1836דֵּן dên
- house · H1005בַּיִת bayith
- God · H426אֱלָהּ ʼĕlâhh