Ezra · chapter 6 · verse 10
Ezra 6:10 in Kannada
ಅವರಿಗೆ ಬೇಕಾದ ಹೋರಿ ಗಳೂ ಟಗರುಗಳೂ ಕುರಿಮರಿಗಳೂ ಗೋಧಿಯೂ ಉಪ್ಪೂ ದ್ರಾಕ್ಷಾರಸವೂ ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಲ್ಪಡಲಿ.
Avarige bekaada hori galoo tagarugaloo kurimarigaloo godhiyoo uppoo draakshaarasavoo enneyoo pratidina tappade yeroosaleminalliruva yaajakara nemakada prakaara avarige kodalpadali.
Ezra 6:10 in English
- King James Version (KJV)
- That they may offer sacrifices of sweet savours unto the God of heaven, and pray for the life of the king, and of his sons.
- World English Bible (WEB)
- that they may offer sacrifices of pleasant aroma to the God of heaven, and pray for the life of the king and of his sons.
- American Standard Version (ASV)
- that they may offer sacrifices of sweet savor unto the God of heaven, and pray for the life of the king, and of his sons.
- Bible in Basic English (BBE)
- So that they may make offerings of a sweet smell to the God of heaven, with prayers for the life of the king and of his sons.
- Darby Translation (DBY)
- that they may present sweet odours to the God of the heavens, and pray for the life of the king and of his sons.
- Webster's Bible (WBS)
- That they may offer sacrifices of sweet savors to the God of heaven, and pray for the life of the king, and of his sons.
- Young's Literal Translation (YLT)
- that they be bringing near sweet savours to the God of heaven, and praying for the life of the king, and of his sons.
Read in context
- 8ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನಂದರೆ--ಅವರು ಅಭ್ಯಂತರ ಮಾಡಲ್ಪಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ಕಪ್ಪದಿಂದಲೇ ಈ ಮನುಷ್ಯರಿಗೆ ಖರ್ಚು ಕೊಡಲ್ಪಡಲಿ.
- 9ಇದಲ್ಲದೆ ಅವರು ಪರ ಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ ಅರಸನ ಪ್ರಾಣಕ್ಕೋಸ್ಕರವೂ ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡುವ ಹಾಗೆಯೂ ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ
- 10ಅವರಿಗೆ ಬೇಕಾದ ಹೋರಿ ಗಳೂ ಟಗರುಗಳೂ ಕುರಿಮರಿಗಳೂ ಗೋಧಿಯೂ ಉಪ್ಪೂ ದ್ರಾಕ್ಷಾರಸವೂ ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಲ್ಪಡಲಿ.
- 11ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ.
- 12ಇದಲ್ಲದೆ ತನ್ನ ನಾಮವನ್ನು ಇರಿಸಲು ಮಾಡಿದ ದೇವರು ಯೆರೂಸಲೇಮಿನಲ್ಲಿರುವ ದೇವರ ಈ ಆಲಯವನ್ನು ಬದಲು ಮಾಡುವದಕ್ಕೂ ಕೆಡಿಸು ವದಕ್ಕೂ ತಮ್ಮ ಕೈಯನ್ನು ಚಾಚುವ ಎಲ್ಲಾ ಅರಸುಗ ಳನ್ನೂ ಜನರನ್ನೂ ಆತನು ಕೆಡಿಸಲಿ. ದಾರ್ಯಾ ವೆಷನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಅದು ತ್ವರೆ ಯಾಗಿ ಮಾಡಲ್ಪಡಲಿ ಎಂಬದು.
Cross references
- Jeremiah 29:7 ಯೆರೆಮೀಯ 29:7ನಾನು ನಿಮ್ಮನ್ನು ಸೆರೆಯಾಗಿ ಒಯ್ಯಲ್ಪಟ್ಟ ಪಟ್ಟಣದ ಸಮಾಧಾನವನ್ನು ಹುಡುಕಿರಿ; ಅದಕ್ಕೋಸ್ಕರ ಕರ್ತನಿಗೆ ಪ್ರಾರ್ಥನೆ ಮಾಡಿರಿ; ಅದರ ಸಮಾಧಾನದಿಂದ ನಿಮಗೆ ಸಮಾ ಧಾನವಾಗುವದು.
- Ezra 7:23 ಎಜ್ರನು 7:23ಪರಲೋಕದ ದೇವರಿಂದ ಏನಾದರೂ ಆಜ್ಞಾಪಿಸ ಲ್ಪಟ್ಟರೆ ಅದು ಪರಲೋಕದ ದೇವರ ಆಲಯಕ್ಕೋಸ್ಕರ ಜಾಗ್ರತೆಯಾಗಿ ಮಾಡಲ್ಪಡಲಿ. ಯಾಕಂದರೆ ಅರಸನೂ ಅವನ ಕುಮಾರರೂ ಆಳುವ ರಾಜ್ಯದ ಮೇಲೆ ರೌದ್ರ ಯಾಕೆ ಇರಬೇಕು?
- 1 Timothy 2:1–2 1 ತಿಮೊಥೆಯನಿಗೆ 2:1–2ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿ ಗೋಸ್ಕರವೂ ಅರಸರುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿ ಗಳನ್ನೂ ಮಾಡಬೇಕೆಂದು ಎಚ್ಚರಿಸುತ್ತೇನೆ. ಹೀಗೆ ನಾವು ಶಾಂತಿ ಸಮಾಧಾನಗಳಿಂದ ಕೂಡಿದ ಜೀವನ ವನ್ನು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ನಡಿಸುವದಕ್ಕಾಗುವದು.
- Genesis 8:21 ಆದಿಕಾಂಡ 8:21ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.
- Ephesians 5:2 ಎಫೆಸದವರಿಗೆ 5:2ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
- Leviticus 1:13 ಯಾಜಕಕಾಂಡ 1:13ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
- Leviticus 1:9 ಯಾಜಕಕಾಂಡ 1:9ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.