Ezra · chapter 7 · verse 26
Ezra 7:26 in Kannada
ಇದಲ್ಲದೆ ಯಾವನಾದರೂ ನಿನ್ನ ದೇವರ ಕಟ್ಟಳೆ ಯನ್ನೂ ಅರಸನ ಕಟ್ಟಳೆಯನ್ನೂ ಕೈಕೊಳ್ಳದಿದ್ದರೆ ಮರಣಕ್ಕಾದರೂ ಗಡೀಪಾರಿಗಾದರೂ ಆಸ್ತಿ ಹಿಡಿಯು ವದಕ್ಕಾದರೂ ಸೆರೆಗಾದರೂ ಅವನಿಗೆ ಬೇಗ ನ್ಯಾಯ ತೀರಿಸಲ್ಪಡಲಿ ಅಂದನು.
Idallade yaavanaadaroo ninna devara kattale yannoo arasana kattaleyannoo kaikolladiddare maranakkaadaroo gadeepaarigaadaroo aasti hidiyu vadakkaadaroo seregaadaroo avanige bega nyaaya teerisalpadali andanu.
Ezra 7:26 in English
- King James Version (KJV)
- And whosoever will not do the law of thy God, and the law of the king, let judgment be executed speedily upon him, whether [it be] unto death, or to banishment, or to confiscation of goods, or to imprisonment.
- World English Bible (WEB)
- Whoever will not do the law of your God and the law of the king, let judgment be executed on him with all diligence, whether it is to death, or to banishment, or to confiscation of goods, or to imprisonment.
- American Standard Version (ASV)
- And whosoever will not do the law of thy God, and the law of the king, let judgment be executed upon him with all diligence, whether it be unto death, or to banishment, or to confiscation of goods, or to imprisonment.
- Bible in Basic English (BBE)
- And if anyone does not keep the law of your God and the law of the king, take care that punishment is given to him, by death or by driving him from his country or by taking away his goods or by putting him in prison.
- Darby Translation (DBY)
- And whosoever will not do the law of thy God and the law of the king, let judgment be executed diligently upon him, whether unto death, or to banishment, or to confiscation of goods, or to imprisonment.
- Webster's Bible (WBS)
- And whoever will not do the law of thy God, and the law of the king, let judgment be executed speedily upon him, whether [it be] to death, or to banishment, or to confiscation of goods, or to imprisonment.
- Young's Literal Translation (YLT)
- and any who doth not do the law of thy God, and the law of the king, speedily is judgment done upon him, whether to death, or to banishment, or to confiscation of riches, and to bonds.'
Read in context
- 24ಇದಲ್ಲದೆ ಯಾಜಕರೂ ಲೇವಿ ಯರೂ ಹಾಡುಗಾರರೂ ದ್ವಾರಪಾಲಕರೂ ನೆತಿನಿ ಯರೂ ಮೊದಲಾದ ದೇವರ ಆಲಯದ ಸೇವಕರನ್ನು ಕುರಿತು ಏನಂದರೆ--ಅವರ ಮೇಲೆ ತೆರಿಗೆಯನ್ನಾದರೂ ಕಪ್ಪವನ್ನಾದರೂ ಸುಂಕವನ್ನಾದರೂ ಹೊರಿಸಲು ಅಪ್ಪಣೆ ಇಲ್ಲವೆಂದು ನಿಮಗೆ ತಿಳಿಸುತ್ತೇನೆ.
- 25ಆದರೆ ಎಜ್ರನೇ, ನೀನು ನಿನ್ನ ದೇವರ ನ್ಯಾಯ ಪ್ರಮಾಣಗಳನ್ನು ತಿಳಿದಿರುವದರಿಂದ ನದಿಯ ಆಚೆಯ ಲ್ಲಿರುವ ಸಮಸ್ತ ಜನರಿಗೆ ನ್ಯಾಯತೀರಿಸುವ ಹಾಗೆಯೂ ಅವುಗಳನ್ನು ಅರಿಯದವರಿಗೆ ಬೋಧಿಸುವ ಹಾಗೆಯೂ ನಿನ್ನ ಕೈಯಲ್ಲಿರುವ ನಿನ್ನ ದೇವರ ಜ್ಞಾನದ ಪ್ರಕಾರ ಯಜಮಾನರನ್ನೂ ನ್ಯಾಯಾಧಿಪತಿಗಳನ್ನೂ ನೇಮಿಸು.
- 26ಇದಲ್ಲದೆ ಯಾವನಾದರೂ ನಿನ್ನ ದೇವರ ಕಟ್ಟಳೆ ಯನ್ನೂ ಅರಸನ ಕಟ್ಟಳೆಯನ್ನೂ ಕೈಕೊಳ್ಳದಿದ್ದರೆ ಮರಣಕ್ಕಾದರೂ ಗಡೀಪಾರಿಗಾದರೂ ಆಸ್ತಿ ಹಿಡಿಯು ವದಕ್ಕಾದರೂ ಸೆರೆಗಾದರೂ ಅವನಿಗೆ ಬೇಗ ನ್ಯಾಯ ತೀರಿಸಲ್ಪಡಲಿ ಅಂದನು.
- 27ಆಗ ಎಜ್ರನು -- ಯೆರೂಸಲೇಮಿನಲ್ಲಿರುವ ಕರ್ತನ ಆಲಯವನ್ನು ಅಲಂಕರಿಸುವದಕ್ಕೆ ಅರ ಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟು ಅರಸನ ಮುಂದೆಯೂ ಅವನ ಸಲಹೆಗಾರರ ಮುಂದೆಯೂ ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆ ಮಾಡಿದ ನಮ್ಮ ತಂದೆಗಳ ದೇವರಾಗಿ ರುವ ಕರ್ತನು ಸ್ತುತಿಸಲ್ಪಡಲಿ.ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು.
- 28ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು.
Cross references
- Ezra 6:11 ಎಜ್ರನು 6:11ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ.
- Deuteronomy 13:1–18 ಧರ್ಮೋಪದೇಶಕಾಂಡ 13:1–18ಪ್ರವಾದಿಯಾಗಲಿ ಕನಸುಗಳನ್ನು ಕಾಣುವವನಾಗಲಿ ನಿಮ್ಮ ಮಧ್ಯದಲ್ಲಿ ಎದ್ದು ನಿನಗೆ ಸೂಚನೆಯನ್ನಾದರೂ ಅದ್ಭುತವನ್ನಾದರೂ ತೋರಿಸಿ ದರೆ ನೀನು ತಿಳಿಯದ ಬೇರೆ ದೇವರುಗಳನ್ನು ಅನುಸರಿಸಿ--ಅವರಿಗೆ ನಾವು ಸೇವೆಮಾಡೋಣ ಎಂದು ಹೇಳಿ ಅವನು ನಿನಗೆ ಹೇಳಿದ ಸೂಚನೆಯೂ ಅದ್ಭುತವೂ ಸಂಭವಿಸಿದರೆ ಆ ಪ್ರವಾದಿಯ ಇಲ್ಲವೆ ಕನಸು ಕಾಣುವವನ ಮಾತುಗಳನ್ನು ಕೇಳಬಾರದು. ನಿಮ್ಮ ದೇವರಾದ ಕರ್ತನು ನಿಮ್ಮನ್ನು ಶೋಧಿಸಿ ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣ ಪ್ರಾಣದಿಂದಲೂ ನಿಮ್ಮ ದೇವರಾದ ಕರ್ತನನ್ನು ಪ್ರೀತಿ ಮಾಡುತ್ತೀರೇನೋ ಎಂದು ಪರೀಕ್ಷಿಸುತ್ತಾನೆ. ನಿಮ್ಮ ದೇವರಾದ ಕರ್ತನನ್ನೇ ಅನುಸರಿಸಿ ಆತನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಂಡು ಆತನ ಸ್ವರವನ್ನು ಕೇಳಿ ಆತನಿಗೆ ಸೇವೆಮಾಡಿ ಆತನಿಗೆ ಅಂಟಿಕೊಳ್ಳಬೇಕು. ಅಂಥ ಪ್ರವಾದಿಯನ್ನಾದರೂ ಕನಸು ಕಾಣುವವನ ನ್ನಾದರೂ ಕೊಂದುಹಾಕಬೇಕು; ಐಗುಪ್ತದೇಶದೊಳ ಗಿಂದ ನಿನ್ನನ್ನು ಹೊರಗೆ ಬರಮಾಡಿ, ದಾಸತ್ವದ ಮನೆ ಯೊಳಗಿಂದ ನಿನ್ನನ್ನು ವಿಮೋಚಿಸಿದ ನಿನ್ನ ಕರ್ತನಾದ ದೇವರಿಂದ ತಿರುಗುವಂತೆ ಮತ್ತು ನಿನ್ನ ದೇವರಾದ ಕರ್ತನು ನಿನಗೆ ನಡೆಯಲು ಆಜ್ಞಾಪಿಸಿದ ಮಾರ್ಗ ದಿಂದ ನಿನ್ನನ್ನು ದೂಡುವಂತೆ ಮಾತನಾಡಿದ್ದಾನೆ. ಹೀಗೆ ನೀನು ಕೆಟ್ಟದ್ದನ್ನು ನಿನ್ನ ಮಧ್ಯದಿಂದ ತೆಗೆದುಹಾಕಬೇಕು. ನಿನ್ನ ತಾಯಿಯ ಮಗನಾದ ನಿನ್ನ ಸಹೋದರ ನಾಗಲಿ ಮಗನಾಗಲಿ ಮಗಳಾಗಲಿ ಮಗ್ಗುಲಲ್ಲಿರುವ ಹೆಂಡತಿಯಾಗಲಿ ನಿನ್ನ ಪ್ರಾಣದಂತೆ ನಿನಗಿರುವ ಸ್ನೇಹಿತ ನಾಗಲಿ ನೀನೂ ನಿನ್ನ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು ನಿನಗೆ ಸವಿಾಪವಾಗಲಿ ನಿನಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯ ವರೆಗೆ ನಿನ್ನ ಸುತ್ತಲಿರುವ ಜನಗಳ ದೇವರುಗಳನ್ನು ಹೋಗಿ ಸೇವಿಸೋಣ ಎಂದು ನಿನ್ನನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ ನೀನು ಅವನಿಗೆ ಸಮ್ಮತಿಸಬಾರದು; ಅವನ ಮಾತನ್ನು ಕೇಳಬಾರದು; ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನೀನು ಅವ ನನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು. ಅವನನ್ನು ಖಂಡಿತವಾಗಿ ಕೊಲ್ಲಬೇಕು. ಅವನನ್ನು ಕೊಲ್ಲುವ ಹಾಗೆ ಮೊದಲು ನಿನ್ನ ಕೈ, ಆ ಮೇಲೆ ಎಲ್ಲಾ ಜನರ ಕೈ ಅವನ ಮೇಲೆ ಇರಬೇಕು. ಐಗುಪ್ತ ದೇಶದೊಳಗಿಂದಲೂ ದಾಸತ್ವದ ಮನೆಯೊ ಳಗಿಂದಲೂ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನ ಬಳಿಯಿಂದ ನಿನ್ನನ್ನು ದೂಡುವದಕ್ಕೆ ಅವನು ಪ್ರಯತ್ನಮಾಡಿದ್ದರಿಂದ ಅವನು ಸಾಯುವಹಾಗೆ ಕಲ್ಲೆಸೆಯಬೇಕು. ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ. ನಿನ್ನ ದೇವರಾದ ಕರ್ತನು ನಿನಗೆ ವಾಸಮಾಡು ವದಕ್ಕೆ ಕೊಡುವ ನಿನ್ನ ಪಟ್ಟಣಗಳೊಳಗೆ ಒಂದರಲ್ಲಿ ಬೆಲಿಯಾಳನ ಮಕ್ಕಳು ನಿನ್ನ ಮಧ್ಯದಿಂದ ಹೊರಟು ಹೋಗಿ ನೀವು ತಿಳಿಯದ ಬೇರೆ ದೇವರುಗಳನ್ನು--ನಾವು ಸೇವಿಸೋಣ ಎಂದು ಹೇಳಿ ತಮ್ಮ ಪಟ್ಟಣದ ನಿವಾಸಿಗಳನ್ನು ಹಿಂದೆ ಎಳೆದಿದ್ದಾರೆಂದು ಕೇಳಿದರೆ ನೀನು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು; ಆ ಕಾರ್ಯವು ನಿಶ್ಚಯವಾಗಿ ಸತ್ಯ ವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ, ಆ ಪಟ್ಟಣದ ನಿವಾಸಿಗಳನ್ನು ಕತ್ತಿಯಿಂದ ಸಂಪೂರ್ಣ ವಾಗಿ ನಾಶಮಾಡಿ ಅದನ್ನೂ ಅದರಲ್ಲಿರುವ ಎಲ್ಲವನ್ನೂ ಸಮಸ್ತ ಪಶುಗಳನ್ನೂ ಸಹ ಕತ್ತಿಯಿಂದ ನಿರ್ಮೂಲ ಮಾಡಬೇಕು. ಇದಲ್ಲದೆ ಅದರ ಎಲ್ಲಾ ಕೊಳ್ಳೆಯನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ ಆ ಪಟ್ಟಣವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ಸಂಪೂರ್ಣವಾಗಿ ನಿನ್ನ ದೇವರಾದ ಕರ್ತನಿಗೆ ಬೆಂಕಿಯಿಂದ ಸುಟ್ಟುಬಿಡಬೇಕು; ಅದು ಎಂದೆಂದಿಗೂ ದಿಬ್ಬವಾಗಬೇಕು; ತರುವಾಯ ಅದನ್ನು ಕಟ್ಟಬಾರದು. ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಶಬ್ದವನ್ನು ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ನಿನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಸರಿ ಯಾದದ್ದನ್ನು ಮಾಡಲಾಗಿಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು. ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು.
- Leviticus 20:1–27 ಯಾಜಕಕಾಂಡ 20:1–27ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ನೀನು ತಿರಿಗಿ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು. ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ. ಆ ಮನು ಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ ಹೇಗಾದರೂ ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ ಅವನನ್ನು ಕೊಲ್ಲದೆ ಹೋದರೆ ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಮಂತ್ರವಾದಿಗಳ ಕಡೆಗೆ ತಿರುಗಿ ಕೊಳ್ಳುವವನಿಗೂ ವ್ಯಭಿಚಾರಮಾಡುವಂತೆ ಮಾಟಗಾರರನ್ನು ಹಿಂಬಾಲಿಸುವವನಿಗೂ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ. ನೀವು ನನ್ನ ನಿಯಮಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ನಿಮ್ಮನ್ನು ಶುದ್ಧಪಡಿಸುವ ಕರ್ತನು ನಾನೇ. ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು. ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು; ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು. ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು. ಒಬ್ಬ ಮನುಷ್ಯನು ತನಗೆ ಒಬ್ಬ ಹೆಂಡತಿಯನ್ನೂ ಅವಳ ತಾಯಿಯನ್ನೂ ತೆಗೆದುಕೊಂಡರೆ ಅದು ದುಷ್ಟತನವಾಗಿದೆ; ನಿಮ್ಮಲ್ಲಿ ದುಷ್ಟತನವು ಇರದಂತೆ ಅವನೂ ಅವರೂ ಬೆಂಕಿ ಯಿಂದ ಸುಡಲ್ಪಡಬೇಕು. ಒಬ್ಬನು ಪಶುವಿನೊಂದಿಗೆ ಸಂಗಮಿಸಿದರೆ ಅವನಿಗೆ ನಿಶ್ಚಯವಾಗಿ ಮರಣದಂಡನೆ ಯಾಗಬೇಕು, ನೀವು ಆ ಪಶುವನ್ನು ವಧಿಸಬೇಕು. ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವದಕ್ಕಾಗಿ ಮಲಗಿಕೊಂಡರೆ ನೀವು ಆ ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು; ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು; ಅವರ ರಕ್ತವು ಅವರ ಮೇಲೆ ಇರುವದು. ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯನ್ನು ತೆಗೆದುಕೊಂಡು ಅವಳ ಬೆತ್ತಲೆ ತನವನ್ನು ನೋಡಿದರೆ ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ; ಅವರು ತಮ್ಮ ಜನರ ದೃಷ್ಟಿಯಲ್ಲಿಯೇ ತೆಗೆದು ಹಾಕಲ್ಪಡಬೇಕು; ಅವರ ರಕ್ತವು ಅವರ ಮೇಲೆ ಇರುವದು. ಅವನು ತನ್ನ ಸಹೋದರಿಯ ಬೆತ್ತಲೆತನ ವನ್ನು ಕಾಣುವಂತೆ ಮಾಡಿದ್ದರಿಂದ ತನ್ನ ಅಪರಾಧ ವನ್ನು ತಾನೇ ಹೊತ್ತುಕೊಳ್ಳುವನು. ಒಬ್ಬನು ರೋಗದಲ್ಲಿರುವ ಒಬ್ಬ ಸ್ತ್ರೀಯೊಂದಿಗೆ ಮಲಗಿ ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಿದರೆ ಅವನು ಅವಳ ಬುಗ್ಗೆಯನ್ನು ಬಯಲುಪಡಿಸಿದ್ದಾನೆ; ಅವಳು ತನ್ನ ರಕ್ತದ ಬುಗ್ಗೆಯನ್ನು ಬಯಲುಪಡಿಸಿದ್ದಾಳೆ; ಆದದರಿಂದ ಅವರಿಬ್ಬರೂ ಅವರ ಜನರ ಮಧ್ಯದಿಂದ ತೆಗೆದುಹಾಕಲ್ಪಡಬೇಕು. ಇದಲ್ಲದೆ ನೀನು ನಿನ್ನ ತಾಯಿಯ ಸಹೋದರಿಯ ಇಲ್ಲವೆ ತಂದೆಯ ಸಹೋದರಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು, ಕಾಣುವಂತೆ ಮಾಡಿದವನು ತನ್ನ ಹತ್ತಿರದ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡಿದ್ದಾನೆ; ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಒಬ್ಬನು ತನ್ನ ಚಿಕ್ಕಪ್ಪನ ಹೆಂಡತಿಯೊಂದಿಗೆ ಸಂಗಮಿಸಿದರೆ ಅವನು ತನ್ನ ಚಿಕ್ಕಪ್ಪನ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ತಮ್ಮ ಪಾಪವನ್ನು ಹೊತ್ತುಕೊಳ್ಳಬೇಕು; ಅವರು ಮಕ್ಕಳಿಲ್ಲದೆ ಸಾಯು ವರು. ಇದಲ್ಲದೆ ಒಬ್ಬನು ತನ್ನ ಸಹೋದರನ ಹೆಂಡತಿಯನ್ನು ತೆಗೆದುಕೊಂಡರೆ ಅದು ಅಶುದ್ಧ ವಾದದ್ದು; ಅವನು ತನ್ನ ಸಹೋದರನ ಬೆತ್ತಲೆ ತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ಮಕ್ಕಳಿ ಲ್ಲದವರಾಗುವರು. ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ. ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ. ನಾನು ನಿಮಗೆ ಹೇಳಿದ್ದೇನಂದರೆ--ನೀವು ಅವರ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ. ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ. ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು. ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ್ದ ಕರ್ತನಾದ ನಾನು ಪರಿಶುದ್ಧನಾಗಿರುವದರಿಂದ ನೀವು ನನಗೆ ಪರಿಶುದ್ಧ ರಾಗಿರಬೇಕು.ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು. ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.
- Exodus 21:1–22 ವಿಮೋಚನಕಾಂಡ 21:1–22ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ. ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ. ಅವನು ಒಬ್ಬನಾಗಿ ಬಂದಿದ್ದರೆ ಒಬ್ಬನಾಗಿಯೇ ಹೋಗ ಬೇಕು. ಅವನು ಮದುವೆಯಾದವನಾಗಿದ್ದರೆ ಅವನ ಹೆಂಡತಿಯು ಅವನ ಸಂಗಡ ಹೋಗಬೇಕು. ಅವನ ಯಜಮಾನನು ಅವನಿಗೆ ಕೊಟ್ಟ ಹೆಂಡತಿಯು ಅವನಿಗೆ ಕುಮಾರರನ್ನೂ ಕುಮಾರ್ತೆಯರನ್ನೂ ಹೆತ್ತಿದ್ದರೆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನವ ರಾಗಿರಬೇಕು. ಅವನು ಒಬ್ಬನಾಗಿಯೇ ಹೋಗಬೇಕು. ಆದರೆ ದಾಸನು--ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿ ಮಾಡು ತ್ತೇನೆ. ಆದದರಿಂದ ನಾನು ಬಿಡುಗಡೆಯಾಗಿ ಹೋಗು ವದಕ್ಕೆ ಮನಸ್ಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು ಬಾಗಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ ಅವನ ಯಜಮಾ ನನು ಅವನ ಕಿವಿಯನ್ನು ಸಲಾಕಿಯಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ಸೇವೆಮಾಡಬೇಕು. ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ ದಾಸರು ಹೋಗುವಂತೆ ಆಕೆಯು ಹೋಗಬಾರದು. ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ; ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ. ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯಮಾಡಿದರೆ ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು. ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು. ಈ ಮೂರನ್ನು ಅವಳಿಗೆ ಮಾಡದೆ ಹೋದರೆ ಅವಳು ಹಣಕೊಡದೆ ಸ್ವತಂತ್ರ ಳಾಗಿ ಹೋಗಬಹುದು. ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು. ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು. ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು. ತಂದೆ ತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಸಾಯಬೇಕು. ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಅವನು ಖಂಡಿತವಾಗಿ ಸಾಯಬೇಕು. ತಂದೆಗಾದರೂ ತಾಯಿಗಾದರೂ ಶಾಪಕೊಟ್ಟ ವನು ಖಂಡಿತವಾಗಿ ಸಾಯಬೇಕು. ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬ ನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದ ದ್ದರಿಂದ ಅವನು ಸಾಯದೆ ಹಾಸಿಗೆಯಲ್ಲಿ ಬಿದ್ದರೆ ಅವನು ಎದ್ದು ಕೋಲೂರಿಕೊಂಡು ತಿರುಗಾಡು ವಾಗ ಅವನಿಗೆ ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಅವನ ನಷ್ಟವಾದ ಸಮಯಕ್ಕಾಗಿ ಮಾತ್ರ ಅವನಿಗೆ ಹಣ ಕೊಡಬೇಕು. ಅವನನ್ನು ಪೂರ್ಣ ಸ್ವಸ್ಥಮಾಡಿಸಬೇಕು. ಒಬ್ಬನು ದಾಸನನ್ನಾಗಲಿ ದಾಸಿಯನ್ನಾಗಲಿ ಸಾಯು ವಂತೆ ತನ್ನ ಕೋಲಿನಿಂದ ಹೊಡೆದರೆ ಅವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು. ಆದರೂ ಅವನು ಒಂದೆರೆಡು ದಿನಗಳು ಉಳಿದರೆ ಶಿಕ್ಷೆಯಾಗಬಾರದು. ಅವನು ಅವನ ಸೊತ್ತು. ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿ ಯಾದ ಸ್ತ್ರೀಗೆ ಏಟು ತಗಲಿದದರಿಂದ ಅವಳಿಗೆ ಗರ್ಭ ಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಸ್ತ್ರೀಯ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡು ತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.
- Daniel 6:26 ದಾನಿಯೇಲನು 6:26ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು.
- 2 Chronicles 30:12 2 ಪೂರ್ವಕಾಲವೃತ್ತಾಂತ 30:12ಇದಲ್ಲದೆ ಕರ್ತನ ವಾಕ್ಯದಿಂದುಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಕೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂ ದದವರಲ್ಲಿ ಇತ್ತು.
- Daniel 3:28–29 ದಾನಿಯೇಲನು 3:28–29ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ--ಶದ್ರಕ್ ಮೇಷಕ್ ಅಬೇದ್ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ. ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
- Psalm 52:5 ಕೀರ್ತನೆಗಳು 52:5ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.
Original words (Hebrew)
- whosoever · H3606כֹּל kôl
- not · H3809לָא lâʼ
- do · H1934הָוָא hâvâʼ
- law · H1882דָּת dâth
- God · H426אֱלָהּ ʼĕlâhh
- law · H1882דָּת dâth
- king · H4430מֶלֶךְ melek
- judgment · H1780דִּין dîyn
- be · H1934הָוָא hâvâʼ
- executed · H5648עֲבַד ʻăbad
- speedily · H629אׇסְפַּרְנָא ʼoçparnâʼ
- him · H4481מִן min
- whether · H2006הֵן hên
- death · H4193מוֹת môwth
- or · H2006הֵן hên
- banishment · H8332שְׁרֹשׁוּ shᵉrôshûw
- or · H2006הֵן hên
- confiscation · H6065עֲנַשׁ ʻănash
- goods · H5232נְכַס nᵉkaç
- imprisonment · H613אֱסוּר ʼĕçûwr