Ezra · chapter 9 · verse 7
Ezra 9:7 in Kannada
ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ
Namma tandegala divasagalu modalugo ndu ee divasada varege dodda aparaadhakkolagaagiddeve. Indina prakaarave naavu ee deshagala arasugala kaige oppisalpattu namma akramagaligoskara naavoo namma arasugaloo namma yaajakaroo kattigoo seregoo kollegoo naachikegoo guriyaagiddeve
Ezra 9:7 in English
- King James Version (KJV)
- Since the days of our fathers [have] we [been] in a great trespass unto this day; and for our iniquities have we, our kings, [and] our priests, been delivered into the hand of the kings of the lands, to the sword, to captivity, and to a spoil, and to confusion of face, as [it is] this day.
- World English Bible (WEB)
- Since the days of our fathers we have been exceedingly guilty to this day; and for our iniquities we, our kings, and our priests have been delivered into the hand of the kings of the lands, to the sword, to captivity, to plunder, and to confusion of face, as it is this day.
- American Standard Version (ASV)
- Since the days of our fathers we have been exceeding guilty unto this day; and for our iniquities have we, our kings, and our priests, been delivered into the hand of the kings of the lands, to the sword, to captivity, and to plunder, and to confusion of face, as it is this day.
- Bible in Basic English (BBE)
- From the days of our fathers till this day we have been great sinners; and for our sins, we and our kings and our priests have been given up into the hands of the kings of the lands, to the sword and to prison and to loss of goods and to shame of face, as it is this day.
- Darby Translation (DBY)
- Since the days of our fathers, we have been in great trespass to this day; and for our iniquities we, our kings, our priests, have been given into the hand of the kings of the lands, to the sword, and to captivity, and to spoil, and to confusion of face, as it is this day.
- Webster's Bible (WBS)
- Since the days of our fathers [have] we [been] in a great trespass to this day; and for our iniquities have we, our kings, [and] our priests, been delivered into the hand of the kings of the lands, to the sword, to captivity, and to a spoil, and to confusion of face, as [it is] this day.
- Young's Literal Translation (YLT)
- 'From the days of our fathers we [are] in great guilt unto this day, and in our iniquities we have been given — we, our kings, our priests — into the hand of the kings of the lands, with sword, with captivity, and with spoiling, and with shame of face, as [at] this day.
Read in context
- 5ಆದರೆ ಸಾಯಂಕಾಲದ ಬಲಿಯನ್ನರ್ಪಿಸುವಾಗ ನಾನು ನನ್ನ ಭಾರದಿಂದೆದ್ದು ನನ್ನ ವಸ್ತ್ರವನ್ನೂ ನನ್ನ ನಿಲುವಂಗಿ ಯನ್ನೂ ಹರಿದುಕೊಂಡವನಾಗಿ ನನ್ನ ಮೊಣಕಾಲು ಗಳನ್ನೂರಿ ನನ್ನ ಕೈಗಳನ್ನು ನನ್ನ ದೇವರಾಗಿರುವ ಕರ್ತನ ಮುಂದೆ ಚಾಚಿ ಹೇಳಿದ್ದೇನಂದರೆ--
- 6ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು.
- 7ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ
- 8ಈಗ ನಮ್ಮ ದೇವರು, ನಮ್ಮ ಕಣ್ಣುಗಳು ಕಳೆಗೊಳ್ಳುವ ಹಾಗೆಯೂ ನಮ್ಮ ದಾಸತ್ವದಲ್ಲಿ ನಮ್ಮನ್ನು ಸ್ವಲ್ಪ ಉಜ್ಜೀವಿಸುವ ಹಾಗೆಯೂ ನಮಗಾಗಿ ಜನಶೇಷವನ್ನು ಉಳಿಸಿ ತನ್ನ ಪರಿಶುದ್ಧ ಸ್ಥಾನದಲ್ಲಿ ನಮಗೆ ಮೊಳೆಯನ್ನು ಕೊಡುವದಕ್ಕೂ ಸ್ವಲ್ಪ ಹೊತ್ತು ನಮ್ಮ ದೇವರಾಗಿರುವ ಕರ್ತನಿಂದ ನಮಗೆ ದಯವು ದೊರಕಿತು.
- 9ನಾವು ದಾಸರಾಗಿದ್ದೆವು; ಆದಾಗ್ಯೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮ ಕೈ ಬಿಟ್ಟುಬಿಡದೆ ನಮ್ಮನ್ನು ಉಜ್ಜೀವಿಸುವದಕ್ಕೂ ನಮ್ಮ ದೇವರ ಆಲಯವನ್ನು ಕಟ್ಟಿಸುವದಕ್ಕೂ ಅದರ ಹಾಳಾ ದವುಗಳನ್ನು ದುರಸ್ತು ಮಾಡುವದಕ್ಕೂ ಯೆಹೂದ ದಲ್ಲಿ ಮತ್ತು ಯೆರೂಸಲೇಮಿನಲ್ಲಿ ನಮಗೆ ಗೋಡೆ ಯನ್ನು ಕೊಡುವದಕ್ಕೂ ಪಾರಸಿಯ ಅರಸುಗಳ ಸಮ್ಮು ಖದಲ್ಲಿ ನಮ್ಮ ಮೇಲೆ ಕೃಪೆಯನ್ನು ಮುಂದುವರಿಸಿದ್ದಾನೆ.
Cross references
- 2 Chronicles 29:6 2 ಪೂರ್ವಕಾಲವೃತ್ತಾಂತ 29:6ನಮ್ಮ ಪಿತೃಗಳು ಅಪರಾಧಮಾಡಿ ನಮ್ಮ ದೇವರಾದ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ ಆತನನ್ನು ಬಿಟ್ಟು ಕರ್ತನ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ.
- Daniel 9:5–8 ದಾನಿಯೇಲನು 9:5–8ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.
- 1 Kings 9:6–9 1 ಅರಸುಗಳು 9:6–9ನೀವಾದರೂ ನಿಮ್ಮ ಮಕ್ಕಳಾದರೂ ನಾನು ನಿಮ್ಮ ಮುಂದೆ ಇಟ್ಟ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳದೆ ನನ್ನ ಕಡೆಯಿಂದ ಹೊರಟುಹೋಗಿ ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು. ಇಸ್ರಾಯೇಲು ಸಮಸ್ತ ಜನಗಳಲ್ಲಿ ಗಾದೆ ಯಾಗಿಯೂ ಅಪಹಾಸ್ಯವಾಗಿಯೂ ಇರುವದು. ಇದ ಲ್ಲದೆ ಈ ಎತ್ತರವಾಗಿರುವ ಮನೆಯನ್ನು ಹಾದುಹೋಗು ವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು--ಛೀ ಅಂದುಕರ್ತನು ಈ ದೇಶಕ್ಕೂ ಈ ಮಂದಿರಕ್ಕೂ ಹೀಗೆ ಯಾಕೆ ಮಾಡಿದನು ಎಂದು ಅನ್ನುವರು. ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.
- Numbers 32:14 ಅರಣ್ಯಕಾಂಡ 32:14ಇಗೋ, ಕರ್ತನ ಕೋಪವು ಇಸ್ರಾಯೇಲ್ ಕಡೆಗೆ ಇನ್ನೂ ಹೆಚ್ಚಾಗುವ ಹಾಗೆ ನೀವು ನಿಮ್ಮ ಪಿತೃಗಳಿಗೆ ಬದಲಾಗಿ ಪಾಪಿಗಳಾದ ಮನುಷ್ಯರ ಅಭಿವೃದ್ಧಿಯಾಗಿ ನಿಂತಿದ್ದೀರಿ.
- Leviticus 26:14–46 ಯಾಜಕಕಾಂಡ 26:14–46ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು. ನಾನು ನಿಮಗೆ ವಿಮುಖನಾಗಿರು ವೆನು. ನಿಮ್ಮ ಶತ್ರುಗಳ ಮುಂದೆ ನೀವು ಕೊಲ್ಲಲ್ಪಡುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗ ಓಡಿ ಹೋಗುವಿರಿ. ಇಷ್ಟಾದರು ನನ್ನ ಮಾತನ್ನು ಕೇಳದೆಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು. ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು. ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು. ನಿಮ್ಮ ಮೇಲೆ ಕಾಡುಮೃಗಗಳು ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದ ವರನ್ನಾಗಿ ಮಾಡಿ ನಿಮ್ಮ ದನಗಳನ್ನು ತಿಂದುಬಿಡುವವು ಮತ್ತು ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವವು; ನಿಮ್ಮ ಮಾರ್ಗಗಳು ಹಾಳಾಗಿಹೋಗುವವು. ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು. ಒಡಂಬಡಿ ಕೆಯ ನಿಮಿತ್ತ ಮುಯ್ಯಿಗೆ ಮುಯ್ಯಿ ತೀರಿಸುವ ಕತ್ತಿಯನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿಬಂದಾಗ ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನೀವು ಶತ್ರುವಿನ ಕೈಗೆ ಒಪ್ಪಿಸಲ್ಪಡು ವಿರಿ. ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ. ಇದೆಲ್ಲಾ ಆದಾಗ್ಯೂ ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು. ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ. ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು. ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು. ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು. ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು. ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು. ನೀವು ಅದರಲ್ಲಿ ವಾಸವಾಗಿದ್ದಾಗ ನಿಮ್ಮ ಸಬ್ಬತ್ತುಗಳಲ್ಲಿ ಅದಕ್ಕೆ ವಿಶ್ರಾಂತಿ ದೊರೆಯದ ಕಾರಣ ಅದು ಹಾಳುಬಿದ್ದಿರುವ ಕಾಲವೆಲ್ಲಾ ಅನುಭವಿಸುವದು. ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು. ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು. ಜನಾಂಗಗ ಳೊಳಗೆ ನಾಶವಾಗುವಿರಿ; ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವದು. ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು. ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ ನಾನೂ ಅವರಿಗೆ ವಿರೋಧವಾಗಿ ನಡೆದುಕೊಂಡು ತಮ್ಮ ಶತ್ರುಗಳ ದೇಶಕ್ಕೆ ಬರಮಾಡಿದ್ದನ್ನು ಅರಿಕೆಮಾಡಿ ಪರಿಛೇದನೆ ಇಲ್ಲದ ಅವರ ಹೃದಯವು ತಗ್ಗಿಸಲ್ಪಟ್ಟು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಅವರು ಒಪ್ಪಿಕೊಳ್ಳುವದಾದರೆ ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವ ರಿಗೆ ಮಾಡಿದ ನನ್ನ ಒಡಂಬಡಿಕೆಯನ್ನೂ ಅವರ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು. ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ. ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ. ನಾನು ಅವರಿಗೆ ದೇವರಾಗಿರುವದರಿಂದ ಜನಾಂಗಗಳ ಮುಂದೆ ಐಗುಪ್ತದೇಶದಿಂದ ಹೊರಗೆ ಬರಮಾಡಿದ ಅವರ ಪಿತೃಗಳ ಒಡಂಬಡಿಕೆಯನ್ನು ಅವರಿಗೊಸ್ಕರ ಜ್ಞಾಪಕ ಮಾಡಿಕೊಳ್ಳುವೆನು; ನಾನೇ ಕರ್ತನು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ. ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ.
- Deuteronomy 30:17–19 ಧರ್ಮೋಪದೇಶಕಾಂಡ 30:17–19ಆದರೆ ನಿನ್ನ ಹೃದಯವು ತಿರಿಗಿಬಿದ್ದು, ನೀನು ಕೇಳದೆಹೋದರೆ ಇಲ್ಲವೆ ಬೇರೆ ದೇವರುಗಳ ಕಡೆಗೆ ಸೆಳೆಯಲ್ಪಟ್ಟು ಅಡ್ಡಬಿದ್ದು ಅವುಗಳಿಗೆ ಸೇವೆಮಾಡಿದರೆ ಖಂಡಿತ ವಾಗಿಯೂ ನಶಿಸುವಿರೆಂದೂ ನೀವು ಸೇರಿ ಸ್ವಾಧೀನ ಮಾಡಿಕೊಳ್ಳುವದಕ್ಕೆ ಯೊರ್ದನನ್ನು ದಾಟಿಹೋಗುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವದಿಲ್ಲ ವೆಂದೂ ಈಹೊತ್ತು ನಿಮಗೆ ತಿಳಿಸುತ್ತೇನೆ. ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.
- 1 Samuel 12:15 1 ಸಮುವೇಲನು 12:15ನೀವು ಕರ್ತನ ಮಾತಿಗೆ ವಿಧೇಯರಾಗದಿದ್ದರೆ, ಕರ್ತನ ಆಜ್ಞೆಗೆ ವಿರೋಧವಾಗಿ ತಿರಿಗಿ ಬಿದ್ದರೆ, ಕರ್ತನ ಹಸ್ತವು ನಿಮ್ಮ ತಂದೆಗಳಿಗೆ ವಿರೋಧವಾಗಿದ್ದಂತೆಯೇ ನಿಮಗೂ ವಿರೋಧವಾಗಿ ರುವದು.
- 2 Chronicles 30:7 2 ಪೂರ್ವಕಾಲವೃತ್ತಾಂತ 30:7ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅಪರಾಧ ಮಾಡಿದಂಥ, ನೀವು ನೋಡುವ ಹಾಗೆ ನಾಶನಕ್ಕೆ ಒಪ್ಪಿಸಲ್ಪಟ್ಟಂಥ, ನಿಮ್ಮ ಪಿತೃಗಳ ಹಾಗೆಯೂ ನಿಮ್ಮ ಸಹೋದರರ ಹಾಗೆಯೂ ಇರಬೇಡಿರಿ.
- 2 Chronicles 36:16–19 2 ಪೂರ್ವಕಾಲವೃತ್ತಾಂತ 36:16–19ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು. ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು. ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು.
- Jeremiah 44:22 ಯೆರೆಮೀಯ 44:22ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ ನೀವು ಮಾಡಿದ ಅಸಹ್ಯಗಳನ್ನೂ ಕರ್ತನು ಇನ್ನು ತಾಳಲಾರದ್ದದರಿಂದ ನಿಮ್ಮ ದೇಶವು ಈ ದಿನ ಇರುವ ಪ್ರಕಾರ ನಿವಾಸಿಗಳಿಲ್ಲದೆ ಹಾಳಾಗಿಯೂ ವಿಸ್ಮಯ ವಾಗಿಯೂ ಶಾಪವಾಗಿಯೂ ಇದೆ.
- Deuteronomy 28:15–68 ಧರ್ಮೋಪದೇಶಕಾಂಡ 28:15–68ಆದರೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಳ್ಳದೆ ಹೋದರೆ ಈ ಎಲ್ಲಾ ಶಾಪಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ; ನಿನ್ನ ಪುಟ್ಟಿಗೂ ಕಣಜಕ್ಕೂ ಶಾಪ. ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ. ಬರು ವಾಗ ನಿನಗೆ ಶಾಪ; ಹೊರಡುವಾಗ ನಿನಗೆ ಶಾಪ. ನೀನು ನನ್ನನ್ನು ಬಿಟ್ಟು ನಿನ್ನ ದುಷ್ಕ್ರಿಯೆಗಳ ಕೆಟ್ಟತ ನದ ನಿಮಿತ್ತ ನೀನು ನಾಶವಾಗುವ ವರೆಗೂ ಶೀಘ್ರ ವಾಗಿ ಕೆಟ್ಟುಹೋಗುವ ವರೆಗೂ ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಶಾಪವನ್ನೂ ಗಾಬರಿಯನ್ನೂ ಗದರಿಕೆಯನ್ನೂ ಕರ್ತನು ನಿನ್ನ ಮೇಲೆ ಕಳುಹಿಸುವನು. ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವ ವರೆಗೆ ವ್ಯಾಧಿಯು ನಿನಗೆ ಅಂಟಿಕೊಳ್ಳುವಂತೆ ಕರ್ತನು ಮಾಡುವನು. ಕ್ಷಯರೋಗದಿಂದಲೂ ಜ್ವರದಿಂದಲೂ ಉರಿಪಾತ ದಿಂದಲೂ ಮಹಾತಾಪದಿಂದಲೂ ಕತ್ತಿಯಿಂದಲೂ ಕಾಡಿಗೆಯಿಂದಲೂ ಬಾಣಂತಿ ರೋಗದಿಂದಲೂ ಕರ್ತನು ನಿನ್ನನ್ನು ಹೊಡೆಯುವನು; ನೀನು ನಾಶ ವಾಗುವ ಪರ್ಯಂತರ ಅವು ನಿನ್ನನ್ನು ಹಿಂದಟ್ಟುವವು. ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು. ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು. ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ. ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ. ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು. ಕರ್ತನು ನಿನ್ನನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಹೊಡೆಯುವನು. ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ. ಹೆಂಡತಿಯನ್ನು ನಿಶ್ಚಯಿಸಿಕೊಂಡರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳುವನು; ಮನೆಯನ್ನು ಕಟ್ಟಿದರೆ ಅದರಲ್ಲಿ ವಾಸಮಾಡುವದಿಲ್ಲ; ದ್ರಾಕ್ಷೇತೋಟವನ್ನು ನೆಟ್ಟರೆ ಅದರ ಫಲವನ್ನು ಕೂಡಿಸುವದಿಲ್ಲ. ನಿನ್ನ ಎತ್ತು ನಿನ್ನ ಕಣ್ಣುಗಳ ಮುಂದೆ ಕೊಯ್ಯಲ್ಪಟ್ಟಾಗ ನೀನು ಅದರಲ್ಲಿ ತಿನ್ನುವದಿಲ್ಲ; ನಿನ್ನ ಕತ್ತೆ ನಿನ್ನ ಕಣ್ಣುಗಳ ಮುಂದೆ ಬಲಾತ್ಕಾರವಾಗಿ ಒಯ್ಯಲ್ಪಟ್ಟು ನಿನಗೆ ಮತ್ತೆ ಸಿಕ್ಕುವದಿಲ್ಲ; ನಿನ್ನ ಕುರಿಗಳು ನಿನ್ನ ಶತ್ರುವಿಗೆ ಕೊಡಲ್ಪಡುವವು; ಅವುಗಳನ್ನು ರಕ್ಷಿಸುವದಕ್ಕೆ ಯಾರೂ ಇರುವದಿಲ್ಲ. ನಿನ್ನ ಕುಮಾರ ಕುಮಾರ್ತೆಯರು ಬೇರೆ ಜನಕ್ಕೆ ಕೊಡಲ್ಪಟ್ಟಿರಲಾಗಿ ನಿನ್ನ ಕಣ್ಣುಗಳು ಅದನ್ನು ನೋಡಿ ಅವರ ನಿಮಿತ್ತ ಕ್ಷೀಣಿಸುತ್ತಾ ಇರುವಾಗ ನಿನ್ನ ಕೈಯಲ್ಲಿ ಏನೂ ತ್ರಾಣವಿಲ್ಲದೆ ಇರುವದು. ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ. ನಿನ್ನ ಕಣ್ಣುಗಳು ನೋಡುವ ನೋಟದಿಂದ ಹುಚ್ಚನಾಗುವಿ. ಕರ್ತನು ನಿನ್ನನ್ನು ಮೊಣಕಾಲುಗಳಲ್ಲಿಯೂ ಕಾಲು ಗಳಲ್ಲಿಯೂ ವಾಸಿಮಾಡಕೂಡದ ಕೆಟ್ಟ ಉರಿ ಹುಣ್ಣಿ ನಿಂದ ಅಂಗಾಲು ಮೊದಲುಗೊಂಡು ನೆತ್ತಿಯ ವರೆಗೆ ಹೊಡೆಯುವನು. ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ. ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ. ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು. ದ್ರಾಕ್ಷೇತೋಟಗಳನ್ನು ನೆಟ್ಟು ಕಾಪಾ ಡುವಿ; ಆದರೆ ದ್ರಾಕ್ಷಾರಸವನ್ನು ಕುಡಿಯುವದಿಲ್ಲ. ಹಣ್ಣು ಕೂಡಿಸುವದಿಲ್ಲ; ಯಾಕಂದರೆ ಹುಳ ಅದನ್ನು ತಿಂದುಬಿಡುವದು. ಎಣ್ಣೇ ಮರಗಳು ನಿನ್ನ ಎಲ್ಲಾ ಮೇರೆಗಳಲ್ಲಿ ಇರುವವು. ಆದರೆ ನೀನು ಎಣ್ಣೆ ಹಚ್ಚಿಕೊಳ್ಳುವದಿಲ್ಲ; ಯಾಕಂದರೆ ನಿನ್ನ ಎಣ್ಣೇ ಫಲಗಳು ಉದುರುವವು. ಕುಮಾರ ಕುಮಾರ್ತೆಯರನ್ನು ಪಡೆಯುವಿ; ಆದರೆ ಅವರ ಕೂಡ ಸಂತೋಷಿಸು ವದಿಲ್ಲ; ಯಾಕಂದರೆ ಅವರು ಸೆರೆಯಾಗಿ ಹೋಗು ವರು. ನಿನ್ನ ಎಲ್ಲಾ ಮರಗಳನ್ನೂ ಹೊಲದ ಪೈರನ್ನೂ ಈ ಮಿಡತೆ ತಿಂದುಬಿಡುವದು. ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ. ಅವನು ನಿನಗೆ ಸಾಲಕೊಡುವನು; ನೀನು ಅವನಿಗೆ ಸಾಲ ಕೊಡುವದಿಲ್ಲ. ಅವನು ತಲೆಯಾಗುವನು, ನೀನು ಬಾಲವಾಗುವಿ. ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳದೆ ಆತನ ಆಜ್ಞೆಗಳನ್ನೂ ಆತನು ನಿನಗೆ ಆಜ್ಞಾಪಿಸಿದ ನಿಯಮಗಳನ್ನೂ ಕೈಕೊಳ್ಳದೆ ಇದ್ದದರಿಂದ ಈ ಶಾಪಗಳೆಲ್ಲಾ ನಿನ್ನ ಮೇಲೆ ಬಂದು ನಿನ್ನನ್ನು ನಾಶಮಾಡುವ ವರೆಗೂ ನಿನ್ನನ್ನು ಹಿಂದಟ್ಟಿ ನಿನಗೆ ಪ್ರಾಪ್ತವಾಗುವವು. ಅವು ನಿನ್ನ ಮೇಲೆಯೂ ನಿನ್ನ ಸಂತತಿಯ ಮೇಲೆಯೂ ನಿತ್ಯವಾಗಿ ಗುರುತೂ ಅದ್ಭುತವೂ ಆಗಿರುವವು. ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು. ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ ಮುದುಕರ ಮುಖದಾಕ್ಷಿಣ್ಯ ನೋಡದೆಯೂ ಚಿಕ್ಕವ ರಿಗೆ ದಯೆತೋರಿಸದೆ ಇರುವಂಥ ಕಠಿಣ ಮುಖವುಳ್ಳ ಜನಾಂಗವನ್ನೂ ನಿನ್ನ ಮೇಲೆ ಬರಮಾಡುವನು. ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು. ನಿನ್ನ ದೇಶದಲ್ಲೆಲ್ಲಾ ನೀನು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿನ್ನ ಗೋಡೆಗಳೆಲ್ಲಾ ಬೀಳುವ ವರೆಗೆ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆ ಹಾಕುವದು; ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ನಿನ್ನ ದೇಶದಲ್ಲೆಲ್ಲಾ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆಹಾಕುವನು. ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ. ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು. ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ ಕರ್ತನು ನಿನ್ನ ಬಾಧೆಗಳನ್ನೂ ನಿನ್ನ ಸಂತತಿಯ ಬಾಧೆಗಳನ್ನೂ ಆಶ್ಚರ್ಯವಾಗ ಮಾಡುವನು; ಅವು ದೊಡ್ಡದಾದ ಮತ್ತು ಸ್ಥಿರವಾದ ಬಾಧೆಗಳೂ ಘೋರ ವಾದ ಮತ್ತು ಸ್ಥಿರವಾದ ರೋಗಗಳೂ ಆಗುವವು. ಇದಲ್ಲದೆ ನೀನು ಹೆದರಿಕೊಂಡ ಐಗುಪ್ತದ ರೋಗ ಗಳನ್ನೆಲ್ಲಾ ಆತನು ತಿರಿಗಿ ನಿನ್ನ ಮೇಲೆ ಬರಮಾಡು ವನು; ಅವು ನಿನ್ನನ್ನು ಅಂಟಿಕೊಳ್ಳುವವು. ನೀನು ಪೂರ್ಣವಾಗಿ ನಾಶವಾಗುವ ವರೆಗೆ ಈ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ಕರ್ತನು ನಿನ್ನ ಮೇಲೆ ತರುವನು. ಆಗ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ಇರುವದರಿಂದ ನೀವು ಅಸಂಖ್ಯವಾದ ಆಕಾಶದ ನಕ್ಷತ್ರಗಳ ಹಾಗಿದ್ದದ್ದಕ್ಕೆ ಬದಲಾಗಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ. ಆಗುವದೇನಂದರೆ, ಕರ್ತನು ಹೇಗೆ ನಿಮಗೆ ಒಳ್ಳೇದನ್ನು ಮಾಡುವದಕ್ಕೂ ನಿಮ್ಮನ್ನು ಹೆಚ್ಚಿಸು ವದಕ್ಕೂ ನಿಮಗೋಸ್ಕರ ಸಂತೋಷಿಸಿದನೋ ಹಾಗೆ ಕರ್ತನು ನಿಮ್ಮನ್ನು ಕೆಡಿಸುವದಕ್ಕೂ ನಿಮ್ಮನ್ನು ನಾಶ ಮಾಡುವದಕ್ಕೂ ನಿಮಗೆ ವಿರೋಧವಾಗಿ ಸಂತೋಷಿ ಸುವನು; ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಿಂದ ನೀನು ಕೀಳಲ್ಪಡುವಿ. ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ. ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು. ನಿನ್ನ ಜೀವವು ನಿನ್ನ ಮುಂದೆ ತೂಗಾಡುವದು. ರಾತ್ರಿ ಹಗಲು ನಿನ್ನ ಜೀವನಕ್ಕೆ ನಿಶ್ಚಯವಿಲ್ಲದೆ ಹೆದರುವಿ. ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ. ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.
- 2 Kings 17:5–8 2 ಅರಸುಗಳು 17:5–8ಆಗ ಅಶ್ಶೂರಿನ ಅರಸನು ದೇಶವೆಲ್ಲಾದರ ಮೇಲೆ ಬಂದು, ಸಮಾರ್ಯಕ್ಕೆ ಹೋಗಿ ಅದನ್ನು ಮೂರು ವರುಷಗಳ ವರೆಗೂ ಮುತ್ತಿಗೆ ಹಾಕಿದನು. ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು. ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು.
Original words (Hebrew)
- days · H3117יוֹם yôwm
- fathers · H1אָב ʼâb
- great · H1419גָּדוֹל gâdôwl
- trespass · H819אַשְׁמָה ʼashmâh
- day · H3117יוֹם yôwm
- iniquities · H5771עָוֺן ʻâvôn
- kings · H4428מֶלֶךְ melek
- priests · H3548כֹּהֵן kôhên
- delivered · H5414נָתַן nâthan
- hand · H3027יָד yâd
- kings · H4428מֶלֶךְ melek
- lands · H776אֶרֶץ ʼerets
- sword · H2719חֶרֶב chereb
- captivity · H7628שְׁבִי shᵉbîy
- spoil · H961בִּזָּה bizzâh
- confusion · H1322בֹּשֶׁת bôsheth
- face · H6440פָּנִים pânîym
- day · H3117יוֹם yôwm