Galatians · chapter 2 · verse 10
Galatians 2:10 in Kannada
ಆದರೆ ನಾವು ಬಡವರನ್ನು ಜ್ಞಾಪಕ ಮಾಡಿ ಕೊಳ್ಳಬೇಕೆಂಬ ಒಂದೇ ವಿಷಯವನ್ನು ಅವರು ಬೇಡಿ ಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.
Aadare naavu badavarannu jnyaapaka maadi kollabekemba onde vishayavannu avaru bedi kondaru; idannu maaduvadaralli naanoo aasaktanaagiddenu.
Galatians 2:10 in English
- King James Version (KJV)
- Only [they would] that we should remember the poor; the same which I also was forward to do.
- World English Bible (WEB)
- They only asked us to remember the poor—which very thing I was also zealous to do.
- American Standard Version (ASV)
- only [they would] that we should remember the poor; which very thing I was also zealous to do.
- Bible in Basic English (BBE)
- Only it was their desire that we would give thought to the poor; which very thing I had much in mind to do.
- Darby Translation (DBY)
- only that we should remember the poor, which same thing also I was diligent to do.
- Webster's Bible (WBS)
- Only [they would] that we should remember the poor; the same which I also was forward to do.
- Young's Literal Translation (YLT)
- only, of the poor that we should be mindful, which also I was diligent — this very thing — to do.
Read in context
- 8ಸುನ್ನತಿಯಾದವರಿಗೆ ಪೇತ್ರನ ಅಪೊಸ್ತಲತನವು ಪರಿಣಾಮವನ್ನುಂಟು ಮಾಡುವ ಹಾಗೆ ಮಾಡಿದಾತನೇ ಅನ್ಯ ಜನರಿಗೆ ನನ್ನ ಅಪೊಸ್ತಲತನವು ಶಕ್ತಿಯುಳ್ಳದ್ದಾಗಿರುವಂತೆ ಮಾಡಿ ದ್ದನ್ನು ಅವರು ಕಂಡರು.
- 9ಸ್ತಂಭಗಳೆಂದು ಕಾಣಿಸಿ ಕೊಂಡಿರುವ ಯಾಕೋಬ ಕೇಫ ಯೋಹಾನರು ನನಗೆ ದಯಪಾಲಿಸಿರುವ ಕೃಪೆಯನ್ನು ತಿಳಿದುಕೊಂಡು ಅನ್ಯೋ ನ್ಯತೆಯನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬ ನಿಗೂ ಬಲಗೈಕೊಟ್ಟು --ತಾವು ಸುನ್ನತಿಯವರ ಬಳಿಗೂ ನಾವು ಅನ್ಯಜನರ ಬಳಿಗೂ ಹೋಗುವದಕ್ಕೆ ಹೇಳಿ ದರು.
- 10ಆದರೆ ನಾವು ಬಡವರನ್ನು ಜ್ಞಾಪಕ ಮಾಡಿ ಕೊಳ್ಳಬೇಕೆಂಬ ಒಂದೇ ವಿಷಯವನ್ನು ಅವರು ಬೇಡಿ ಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.
- 11ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
- 12ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
Cross references
- 1 John 3:17 1 ಯೋಹಾನನು 3:17ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?
- Hebrews 13:16 ಇಬ್ರಿಯರಿಗೆ 13:16ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
- Acts 24:17 ಅಪೊಸ್ತಲರ ಕೃತ್ಯಗಳು 24:17ಅನೇಕ ವರುಷಗಳಾದ ಮೇಲೆ ನನ್ನ ಜನಾಂಗಕ್ಕೆ ದಾನಗಳನ್ನೂ ಕಾಣಿಕೆಗಳನ್ನೂ ತರುವದಕ್ಕಾಗಿ ನಾನು ಬಂದೆನು.
- 2 Corinthians 8:1–9 2 ಕೊರಿಂಥದವರಿಗೆ 8:1–9ಇದಲ್ಲದೆ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯನ್ನು ನಿಮಗೆ ತಿಳಿಸುತ್ತೇನೆ. ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು. ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ. ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು. ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು. ಹೀಗಿರಲಾಗಿ ಈ ಕೃಪಾಕಾರ್ಯವನ್ನು ಪ್ರಾರಂಭಿಸಿದ ತೀತನು ನಿಮ್ಮಲ್ಲಿ ಸಹ ಅದನ್ನು ಕೊನೆಗಾಣಿಸಬೇಕೆಂದು ನಾವು ಅವನನ್ನು ಬೇಡಿಕೊಂಡೆವು. ಆದದರಿಂದ ನೀವು ಎಲ್ಲವುಗಳಲ್ಲಿ ಅಂದರೆ ನಂಬಿಕೆಯಲ್ಲಿಯೂ ಮಾತಿ ನಲ್ಲಿಯೂ ಜ್ಞಾನದಲ್ಲಿಯೂ ಎಲ್ಲಾ ಆಸಕ್ತಿಯಲ್ಲಿಯೂ ನಮ್ಮ ಕಡೆಗಿರುವ ನಿಮ್ಮ ಪ್ರೀತಿಯಲ್ಲಿಯೂ ಸಮೃದ್ಧರಾಗಿರುವಂತೆಯೇ ಈ ಕೃಪೆಯಲ್ಲಿಯೂ ಸಮೃದ್ಧರಾಗಿರ್ರಿ. ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು.
- 1 Corinthians 16:1–2 1 ಕೊರಿಂಥದವರಿಗೆ 16:1–2ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ. ನಾನು ಬಂದಾಗ (ಹಣ) ಕೂಡಿಸುವದು ಇರದಂತೆ ದೇವರು ಅಭಿವೃದ್ಧಿ ಪಡಿಸಿದ ಪ್ರಕಾರ ವಾರದ ಮೊದಲನೆಯ ದಿನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹತ್ತಿರ ಕೂಡಿಟ್ಟುಕೊಳ್ಳಲಿ.
- Acts 11:29–30 ಅಪೊಸ್ತಲರ ಕೃತ್ಯಗಳು 11:29–30ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು. ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
- Romans 15:25–27 ರೋಮಾಪುರದವರಿಗೆ 15:25–27ಆದರೆ ಈಗ ಪರಿಶುದ್ಧರಿಗೆ ಸೇವೆಮಾಡುವದಕ್ಕೋಸ್ಕರ ನಾನು ಯೆರೂಸಲೇಮಿಗೆ ಹೋಗುತ್ತೇನೆ. ಯೆರೂಸಲೇಮಿನಲ್ಲಿರುವ ಬಡವ ರಾದ ಪರಿಶುದ್ಧರಿಗೆ ಸ್ವಲ್ಪ ಸಹಾಯಮಾಡಲು ಮಕೆದೋನ್ಯ ಮತ್ತು ಅಖಾಯದವರು ಇಷ್ಟಪಟ್ಟಿದ್ದಾರೆ. ಇದನ್ನು ಮಾಡುವದಕ್ಕೆ ಋಣಸ್ಥರಾಗಿರುವದರಿಂದ ಅವರು ನಿಜವಾಗಿಯೂ ಇಷ್ಟಪಟ್ಟಿದ್ದಾರೆ. ಹೇಗಂದರೆ ಅನ್ಯಜನರು ಅವರ ಆತ್ಮಸಂಬಂಧವಾದವುಗಳಲ್ಲಿ ಪಾಲುಗಾರರಾದ ಮೇಲೆ ಶರೀರಸಂಬಂಧವಾದ ವುಗಳಲ್ಲಿಯೂ ಅವರಿಗೆ ಸೇವೆ ಮಾಡುವದು ಮಾತ್ರ ವಲ್ಲದೆ ಅದು ಅವರ ಕರ್ತವ್ಯವೂ ಆಗಿದೆ.
- James 2:15–16 ಯಾಕೋಬನು 2:15–16ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು?