Galatians · chapter 2 · verse 15
Galatians 2:15 in Kannada
ನಾವಂತೂ ಹುಟ್ಟುಯೆಹೂದ್ಯರು, ಅನ್ಯಜನ ರಂತೆ ಪಾಪಿಗಳಲ್ಲ.
Naavantoo huttuyehoodyaru, anyajana rante paapigalalla.
Galatians 2:15 in English
- King James Version (KJV)
- We [who are] Jews by nature, and not sinners of the Gentiles,
- World English Bible (WEB)
- “We, being Jews by nature and not Gentile sinners,
- American Standard Version (ASV)
- We being Jews by nature, and not sinners of the Gentiles,
- Bible in Basic English (BBE)
- We being Jews by birth, and not sinners of the Gentiles,
- Darby Translation (DBY)
- We, Jews by nature, and not sinners of [the] nations,
- Webster's Bible (WBS)
- We [who are] Jews by nature, and not sinners of the Gentiles,
- Young's Literal Translation (YLT)
- we by nature Jews, and not sinners of the nations,
Read in context
- 13ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟಮಾಡಿದರು; ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು.
- 14ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ ಹೇಳಿದ್ದೇನಂದರೆ--ನೀನು ಯೆಹೂದ್ಯ ನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ನಡೆದ ಮೇಲೆ ಅನ್ಯಜನರಿಗೆ--ನೀವು ಯೆಹೂದ್ಯರಂತೆ ನಡಕೊಳ್ಳಬೇಕೆಂದು ನೀನು ಬಲಾತ್ಕಾರ
- 15ನಾವಂತೂ ಹುಟ್ಟುಯೆಹೂದ್ಯರು, ಅನ್ಯಜನ ರಂತೆ ಪಾಪಿಗಳಲ್ಲ.
- 16ಆದರೆ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನ್ಯಾಯ ಪ್ರಮಾಣದ ಕ್ರಿಯೆಗಳಿಂದ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದ ರಿಂದ ನಾವು ಸಹ ನ್ಯಾಯ ಪ್ರಮಾಣದ ಕ್ರಿಯೆ ಗಳಿಂದಲ್ಲ, ಆದರೆ ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿ
- 17ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದು ವದಕ್ಕೆ ಪ್ರಯತ್ನಿಸುತ್ತಿರುವಾಗ ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸೇವಕನೆಂದು ಹೇಳ ಬೇಕೇನು? ಹಾಗೆ ಎಂದಿಗೂ ಹೇಳಬಾರದು.
Cross references
- Ephesians 2:3 ಎಫೆಸದವರಿಗೆ 2:3ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.
- Titus 3:3 ತೀತನಿಗೆ 3:3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- Romans 3:9 ರೋಮಾಪುರದವರಿಗೆ 3:9ಹಾಗಾದರೆ ಏನು? ನಾವು ಅವರಿಗಿಂತಲೂ ಉತ್ತಮರಾಗಿದ್ದೇವೋ? ಇಲ್ಲವೇ ಇಲ್ಲ; ಯಾಕಂದರೆ ಯೆಹೂದ್ಯರೂ ಅನ್ಯಜನರೂ ಎಲ್ಲರೂ ಪಾಪಕ್ಕೊಳಗಾಗಿದ್ದಾರೆಂದು ಮೊದಲೇ ನಾವು ಸ್ಥಾಪಿಸಿ ದ್ದೇವಲ್ಲಾ.
- Ephesians 2:11–12 ಎಫೆಸದವರಿಗೆ 2:11–12ಆದಕಾರಣ ಪೂರ್ವಕಾಲದಲ್ಲಿ ಶಾರೀರಿಕವಾಗಿ ಅನ್ಯಜನರಾಗಿದ್ದು ಶರೀರದಲ್ಲಿ ಕೈಗಳಿಂದ ಮಾಡಲ್ಪಟ ಸುನ್ನತಿಯಿದ್ದವರೆಂದು ಕರೆಯಲ್ಪಟ್ಟವರಿಂದ ಸುನ್ನತಿಯಿಲ್ಲ ದವರೆಂದು ನೀವು ಕರೆಯಲ್ಪಟ್ಟಿದ್ದೀರಿ. ಇದಲ್ಲದೆ ನೀವು ಆ ಕಾಲದಲ್ಲಿ ಕ್ರಿಸ್ತನಿಲ್ಲದವರು ಇಸ್ರಾಯೇಲಿನ ಬಾಧ್ಯತೆಯಲ್ಲಿ ಹಕ್ಕಿಲ್ಲದವರೂ ಪರಕೀಯರು ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಿಗೆ ಅನ್ಯರೂ ನಿರೀಕ್ಷೆ ಯಿಲ್ಲದವರೂ ಈ ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ.
- Romans 4:16 ರೋಮಾಪುರದವರಿಗೆ 4:16ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ
- John 8:39–41 ಯೋಹಾನನು 8:39–41ಅವರು ಪ್ರತ್ಯುತ್ತರವಾಗಿ ಆತನಿಗೆ--ಅಬ್ರಹಾಮನು ನಮ್ಮ ತಂದೆ ಅಂದರು; ಅದಕ್ಕೆ ಯೇಸು ಅವರಿಗೆ--ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನ ಕ್ರಿಯೆಗಳನ್ನು ಮಾಡು ತ್ತಿದ್ದಿರಿ. ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲುವದಕ್ಕೆ ನೋಡುತ್ತೀರಿ; ಇದನ್ನು ಅಬ್ರಹಾಮನು ಮಾಡಲಿಲ್ಲ. ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ ಅಂದನು. ಅದಕ್ಕವರು ಆತನಿಗೆ--ನಾವು ವ್ಯಭಿಚಾರದಿಂದ ಹುಟ್ಟಿ ದವರಲ್ಲ; ನಮಗೆ ಒಬ್ಬನೇ ತಂದೆ, ಆತನು ದೇವರೇ ಅಂದರು.
- Philippians 3:4 ಫಿಲಿಪ್ಪಿಯವರಿಗೆ 3:4ನಾನಾದರೋ ಶರೀರ ಸಂಬಂಧವಾದವು ಗಳಲ್ಲಿ ಭರವಸವಿಟ್ಟರೂ ಇಡಬಹುದು, ಬೇರೆ ಯಾವ ನಾದರೂ ಶರೀರ ಸಂಬಂಧವಾದವುಗಳಲ್ಲಿ ಭರವಸವಿಡ ಬಹುದೆಂದು ಯೋಚಿಸುವದಾದರೆ ನಾನು ಅವನಿ ಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
- Matthew 9:11 ಮತ್ತಾಯನು 9:11ಫರಿಸಾ ಯರು ಅದನ್ನು ನೋಡಿ ಆತನ ಶಿಷ್ಯರಿಗೆ--ನಿಮ್ಮ ಬೋಧಕನು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ ಎಂದು ಕೇಳಿದರು.
- 1 Samuel 15:18 1 ಸಮುವೇಲನು 15:18ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ ಅವರು ತೀರಿಹೋಗುವ ವರೆಗೂ ಅವರ ಸಂಗಡ ಯುದ್ಧಮಾಡಬೇಕೆಂದು ಕರ್ತನು ನಿನ್ನನ್ನು ಕಳುಹಿಸಿದನು.
- Matthew 3:7–9 ಮತ್ತಾಯನು 3:7–9ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ.
- Mark 7:26–28 ಮಾರ್ಕನು 7:26–28ಆ ಸ್ತ್ರೀಯು ಸುರೋಪೊಯಿನಿಕ ಜನಾಂ ಗದವಳಾದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳನ್ನು ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿ ಕೊಂಡಳು. ಆದರೆ ಯೇಸು ಆಕೆಗೆ--ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಯಾಕಂದರೆ ಮಕ್ಕಳ ರೊಟ್ಟಿ ಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು. ಆಕೆಯು ಪ್ರತ್ಯುತ್ತರ ವಾಗಿ ಆತನಿಗೆ--ಹೌದು, ಕರ್ತನೇ; ಆದರೂ ಮೇಜಿನ ಕೆಳಗೆ ಮಕ್ಕಳ ರೊಟ್ಟಿಯ ತುಂಡುಗಳನ್ನು ನಾಯಿಗಳು ತಿನ್ನುತ್ತವೆ ಅಂದಳು.
- Acts 22:21 ಅಪೊಸ್ತಲರ ಕೃತ್ಯಗಳು 22:21ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು.