Genesis · chapter 16 · verse 8
Genesis 16:8 in Kannada
ಸಾರಯಳ ದಾಸಿಯಾದ ಹಾಗರಳೇ, ನೀನು ಎಲ್ಲಿಂದ ಬಂದಿ? ನೀನು ಎಲ್ಲಿಗೆ ಹೋಗುತ್ತೀ ಅಂದನು. ಅವಳು--ನನ್ನ ಯಜಮಾನಿಯಾದ ಸಾರ ಯಳ ಸಮ್ಮುಖದಿಂದ ಓಡಿ ಹೋಗುತ್ತಿದ್ದೇನೆ ಅಂದಳು.
Saarayala daasiyaada haagarale, neenu ellinda bandi? Neenu ellige hoguttee andanu. Avalu--nanna yajamaaniyaada saara yala sammukhadinda odi hoguttiddene andalu.
Genesis 16:8 in English
- King James Version (KJV)
- And he said, Hagar, Sarai’s maid, whence camest thou? and whither wilt thou go? And she said, I flee from the face of my mistress Sarai.
- World English Bible (WEB)
- He said, “Hagar, Sarai’s servant, where did you come from? Where are you going?” She said, “I am fleeing from the face of my mistress Sarai.”
- American Standard Version (ASV)
- And he said, Hagar, Sarai’s handmaid, whence camest thou? and whither goest thou? And she said, I am fleeing from the face of my mistress Sarai.
- Bible in Basic English (BBE)
- And he said, Hagar, Sarai's servant, where have you come from and where are you going? And she said, I am running away from Sarai, my master's wife.
- Darby Translation (DBY)
- And he said, Hagar, Sarai's maidservant, whence comest thou? and whither art thou going? And she said, I am fleeing from the face of my mistress Sarai.
- Webster's Bible (WBS)
- And he said, Hagar, Sarai's maid, whence camest thou? and whither wilt thou go? And she said, I flee from the face of my mistress Sarai.
- Young's Literal Translation (YLT)
- and he saith, 'Hagar, Sarai's handmaid, whence hast thou come, and whither dost thou go?' and she saith, 'From the presence of Sarai, my mistress, I am fleeing.'
Read in context
- 6ಆಗ ಅಬ್ರಾಮನು ಸಾರಯಳಿಗೆ--ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ; ನೀನು ಮೆಚ್ಚುವದನ್ನು ಮಾಡು ಅಂದನು. ಆಗ ಸಾರಯಳು ಅವಳನ್ನು ಬಾಧಿಸಿದ್ದರಿಂದ ಅವಳು ಸಾರಯಳ ಬಳಿಯಿಂದ ಓಡಿಹೋದಳು.
- 7ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು
- 8ಸಾರಯಳ ದಾಸಿಯಾದ ಹಾಗರಳೇ, ನೀನು ಎಲ್ಲಿಂದ ಬಂದಿ? ನೀನು ಎಲ್ಲಿಗೆ ಹೋಗುತ್ತೀ ಅಂದನು. ಅವಳು--ನನ್ನ ಯಜಮಾನಿಯಾದ ಸಾರ ಯಳ ಸಮ್ಮುಖದಿಂದ ಓಡಿ ಹೋಗುತ್ತಿದ್ದೇನೆ ಅಂದಳು.
- 9ಕರ್ತನ ದೂತನು ಅವಳಿಗೆ--ನಿನ್ನ ಯಜಮಾನಿಯ ಬಳಿಗೆ ಹಿಂತಿರುಗಿ ಹೋಗಿ ಅವಳಿಗೆ ನೀನು ಅಧೀನಳಾಗಿರು ಅಂದನು.
- 10ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.
Cross references
- Genesis 3:9 ಆದಿಕಾಂಡ 3:9ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು.
- Genesis 4:10 ಆದಿಕಾಂಡ 4:10ಆತನು--ನೀನು ಮಾಡಿದ್ದೇನು? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ.
- Jeremiah 2:17–18 ಯೆರೆಮೀಯ 2:17–18ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ? ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ?
- Ecclesiastes 10:4 ಪ್ರಸಂಗಿ 10:4ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- Ephesians 6:5–8 ಎಫೆಸದವರಿಗೆ 6:5–8ಸೇವಕರೇ, ಶಾರೀರಕ್ಕನುಸಾರವಾಗಿ ನಿಮ್ಮ ಯಜ ಮಾನರಾಗಿರುವವರಿಗೆ ಕ್ರಿಸ್ತನಿಗೆಂದು ಹೃದಯ ಪೂರ್ವಕವಾಗಿ ನಡುಗುತ್ತಾ ವಿಧೇಯರಾಗಿರ್ರಿ. ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಕಣ್ಣಿಗೆ ಕಾಣುವಾಗ ಮಾತ್ರ ಸೇವೆ ಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಹೃದಯ ಪೂರ್ವಕವಾಗಿ ನಡಿಸಿರಿ. ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆ ಮಾಡುತ್ತೇವೆಂದು ಒಳ್ಳೇ ಮನಸ್ಸಿನಿಂದ ಸೇವೆಮಾಡಿರಿ. ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬದನ್ನು ನೀವು ತಿಳಿದವರಾಗಿಯೇ ಇದ್ದೀರಿ.
- 1 Timothy 6:1–2 1 ತಿಮೊಥೆಯನಿಗೆ 6:1–2ದೇವರ ನಾಮಕ್ಕೂ ಆತನ ಬೋಧನೆಗೂ ದೂಷಣೆ ಉಂಟಾಗದಂತೆ ನೊಗದ ಅಧೀನದಲ್ಲಿರುವ ಸೇವಕರೆಲ್ಲರೂ ತಮ್ಮ ಸ್ವಂತ ಯಜಮಾನರನ್ನೂ ಎಲ್ಲಾ ಮಾನಕ್ಕೂ ಯೋಗ್ಯರೆಂದೆ ಣಿಸಲಿ. ವಿಶ್ವಾಸಿಗಳಾದ ಯಜಮಾನರಿರುವವರು, ಆ ಯಜಮಾನರನ್ನು ಸಹೋದರರೆಂದು ತಾತ್ಸಾರ ಮಾಡದೆ ಆದಾಯದಲ್ಲಿ ಪಾಲು ಹೊಂದುವವರೂ ನಂಬುವವರೂ ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಹೆಚ್ಚಾದ ಸೇವೆ ಮಾಡಬೇಕು. ಇವುಗಳನ್ನು ಬೋಧಿಸಿ ಎಚ್ಚರಿಸು.
- 1 Samuel 26:19 1 ಸಮುವೇಲನು 26:19ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
- Genesis 16:1 ಆದಿಕಾಂಡ 16:1ಅಬ್ರಾಮನ ಹೆಂಡತಿಯಾದ ಸಾರಯಳು ಅವನಿಂದ ಮಕ್ಕಳನ್ನು ಪಡೆಯಲಿಲ್ಲ. ಆಕೆಗೆ ಹಾಗರಳೆಂಬ ಐಗುಪ್ತದೇಶದ ದಾಸಿಯು ಇದ್ದಳು.
- Genesis 16:4 ಆದಿಕಾಂಡ 16:4ಅವನು ಹಾಗರಳನ್ನು ಕೂಡಿದಾಗ ಗರ್ಭಿಣಿ ಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದಾಗ ಅವಳ ಯಜಮಾನಿಯು ಅವಳ ದೃಷ್ಟಿಯಲ್ಲಿ ತಿರಸ್ಕರಿಸ ಲ್ಪಟ್ಟಳು.