Genesis · chapter 24 · verse 16
Genesis 24:16 in Kannada
ಆ ಹುಡುಗಿಯು ನೋಡುವದಕ್ಕೆ ಬಹು ಸುಂದರಿಯಾಗಿದ್ದು ಯಾವ ಮನುಷ್ಯನು ಅರಿಯದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಗೆ ಇಳಿದುಹೋಗಿ ತನ್ನ ಕೊಡವನ್ನು ತುಂಬಿಕೊಂಡು ಮೇಲೆ ಬಂದಳು.
Aa hudugiyu noduvadakke bahu sundariyaagiddu yaava manushyanu ariyada kannikeyaagiddalu. Aakeyu baavige iliduhogi tanna kodavannu tumbikondu mele bandalu.
Genesis 24:16 in English
- King James Version (KJV)
- And the damsel [was] very fair to look upon, a virgin, neither had any man known her: and she went down to the well, and filled her pitcher, and came up.
- World English Bible (WEB)
- The young lady was very beautiful to look at, a virgin. No man had known her. She went down to the spring, filled her pitcher, and came up.
- American Standard Version (ASV)
- And the damsel was very fair to look upon, a virgin, neither had any man known her: and she went down to the fountain, and filled her pitcher, and came up.
- Bible in Basic English (BBE)
- She was a very beautiful girl, a virgin, who had never been touched by a man: and she went down to the spring to get water in her vessel.
- Darby Translation (DBY)
- And the maiden was very fair in countenance; a virgin, and no man had known her. And she went down to the well, and filled her pitcher, and came up.
- Webster's Bible (WBS)
- And the damsel [was] very fair to look upon, a virgin, neither had any man known her: and she went down to the well, and filled her pitcher, and came up.
- Young's Literal Translation (YLT)
- and the young person [is] of very good appearance, a virgin, and a man hath not known her; and she goeth down to the fountain, and filleth her pitcher, and cometh up.
Read in context
- 14ನಾನು ಯಾವ ಹುಡುಗಿಗೆ--(ನೀರು) ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು ಎಂದು ಕೇಳಿ ಕೊಂಡಾಗ --ನೀನು ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವದಕ್ಕೆ ಕೊಡುತ್ತೇನೆ ಎಂದು ಹೇಳುವಳೋ ಆಕೆಯನ್ನೇ ನೀನು ನಿನ್ನ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದಾಗಿರಲಿ. ಇದರಿಂದ ನೀನು ನನ್ನ ಯಜಮಾನನಿಗೆ ದಯೆ ತೋರಿಸಿದ್ದೀ ಎಂದು ನಾನು ತಿಳುಕೊಳ್ಳುವೆನು ಎಂದು ಬೇಡಿಕೊಂಡನು.
- 15ಅವನು ಹಾಗೆ ಹೇಳುವದನ್ನು ಮುಗಿಸುವದಕ್ಕಿಂತ ಮುಂಚೆ ಆದದ್ದೇನಂದರೆ, ಇಗೋ, ಅಬ್ರಹಾಮನ ಸಹೋದರ ನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲಿಟ್ಟುಕೊಂಡು ಹೊರಗೆ ಬಂದಳು.
- 16ಆ ಹುಡುಗಿಯು ನೋಡುವದಕ್ಕೆ ಬಹು ಸುಂದರಿಯಾಗಿದ್ದು ಯಾವ ಮನುಷ್ಯನು ಅರಿಯದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಗೆ ಇಳಿದುಹೋಗಿ ತನ್ನ ಕೊಡವನ್ನು ತುಂಬಿಕೊಂಡು ಮೇಲೆ ಬಂದಳು.
- 17ಆಗ ಆ ಸೇವಕನು ಅವಳೆದುರಿಗೆ ಓಡಿಹೋಗಿ--ನಿನ್ನ ಕೊಡದೊಳಗಿನಿಂದ ಸ್ವಲ್ಪ ನೀರು ನನಗೆ ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಂಡನು.
- 18ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು.
Cross references
- Genesis 26:7 ಆದಿಕಾಂಡ 26:7ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು--ರೆಬೆಕ್ಕಳು ನೋಟಕ್ಕೆ ಸೌಂದರ್ಯಳಾಗಿದ್ದರಿಂದ ಈಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು ಆಕೆಯು ತನ್ನ ಹೆಂಡತಿಯೆಂದು ಹೇಳುವದಕ್ಕೆ ಅಂಜಿ ಅವನು--ಆಕೆಯು ನನ್ನ ತಂಗಿ ಅಂದನು.
- Genesis 4:1 ಆದಿಕಾಂಡ 4:1ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಿದನು. ಆಗ ಆಕೆಯು ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು--ನಾನು ಕರ್ತ ನಿಂದ ಒಬ್ಬ ಮನುಷ್ಯನನ್ನು ಪಡೆದಿದ್ದೇನೆ ಅಂದಳು.
- Numbers 31:17–18 ಅರಣ್ಯಕಾಂಡ 31:17–18ಆದ ಕಾರಣ ಈಗ ಚಿಕ್ಕವರೊಳಗೆ ಎಲ್ಲಾ ಗಂಡಸರನ್ನೂ ಕೊಂದು, ಪುರುಷ ಸಂಗಮ ಮಾಡಿದ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ. ಆದರೆ ಪುರುಷ ಸಂಗಮ ಮಾಡದಿರುವ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗೆ ಉಳಿಸಿಕೊಳ್ಳಿರಿ.
- Genesis 39:6 ಆದಿಕಾಂಡ 39:6ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು.