Genesis · chapter 43 · verse 3
Genesis 43:3 in Kannada
ಆಗ ಯೆಹೂದನು ಅವನಿಗೆ--ಆ ಮನುಷ್ಯನು ನಮಗೆ--ನಿಮ್ಮ ತಮ್ಮನನ್ನು ನಿಮ್ಮ ಸಂಗಡ ಕರಕೊಂಡುಬಾರದ ಹೊರತು ನೀವು ನನ್ನ ಮುಖ ವನ್ನು ನೋಡಬಾರದೆಂದು ನಮಗೆ ಖಂಡಿತವಾಗಿ ಹೇಳಿದ್ದಾನೆ.
Aaga yehoodanu avanige--aa manushyanu namage--nimma tammanannu nimma sangada karakondubaarada horatu neevu nanna mukha vannu nodabaaradendu namage khanditavaagi heliddaane.
Genesis 43:3 in English
- King James Version (KJV)
- And Judah spake unto him, saying, The man did solemnly protest unto us, saying, Ye shall not see my face, except your brother [be] with you.
- World English Bible (WEB)
- Judah spoke to him, saying, “The man solemnly warned us, saying, ‘You shall not see my face, unless your brother is with you.’
- American Standard Version (ASV)
- And Judah spake unto him, saying, The man did solemnly protest unto us, saying, Ye shall not see my face, except your brother be with you.
- Bible in Basic English (BBE)
- And Judah said to him, The man said to us with an oath, You are not to come before me again without your brother.
- Darby Translation (DBY)
- And Judah spoke to him, saying, The man did positively testify to us, saying, Ye shall not see my face, unless your brother be with you.
- Webster's Bible (WBS)
- And Judah spoke to him, saying, The man did solemnly protest to us, saying, Ye shall not see my face, except your brother [be] with you.
- Young's Literal Translation (YLT)
- And Judah speaketh unto him, saying, 'The man protesting protested to us, saying, Ye do not see my face without your brother [being] with you;
Read in context
- 1ದೇಶದಲ್ಲಿ ಬರವು ಘೋರವಾಗಿತ್ತು.
- 2ಅವರು ಐಗುಪ್ತದಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ--ತಿರಿಗಿ ಹೋಗಿ ನಮಗಾಗಿ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ ಅಂದನು.
- 3ಆಗ ಯೆಹೂದನು ಅವನಿಗೆ--ಆ ಮನುಷ್ಯನು ನಮಗೆ--ನಿಮ್ಮ ತಮ್ಮನನ್ನು ನಿಮ್ಮ ಸಂಗಡ ಕರಕೊಂಡುಬಾರದ ಹೊರತು ನೀವು ನನ್ನ ಮುಖ ವನ್ನು ನೋಡಬಾರದೆಂದು ನಮಗೆ ಖಂಡಿತವಾಗಿ ಹೇಳಿದ್ದಾನೆ.
- 4ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ ನಾವು ಇಳಿದುಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಳ್ಳುತ್ತೇವೆ.
- 5ಅವನನ್ನು ಕಳುಹಿಸದೆ ಹೋದರೆ ನಾವು ಹೋಗುವದಿಲ್ಲ; ಯಾಕಂದರೆ ಆ ಮನುಷ್ಯನು--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು ಎಂದು ನಮಗೆ ಹೇಳಿದ್ದಾನೆ ಅಂದನು.
Cross references
- Genesis 44:23 ಆದಿಕಾಂಡ 44:23ಆಗ ನೀನು ನಿನ್ನ ದಾಸರಿಗೆ--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು ಎಂದು ನೀನು ಹೇಳಿದಿ.
- Genesis 43:5 ಆದಿಕಾಂಡ 43:5ಅವನನ್ನು ಕಳುಹಿಸದೆ ಹೋದರೆ ನಾವು ಹೋಗುವದಿಲ್ಲ; ಯಾಕಂದರೆ ಆ ಮನುಷ್ಯನು--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು ಎಂದು ನಮಗೆ ಹೇಳಿದ್ದಾನೆ ಅಂದನು.
- 2 Samuel 14:24 2 ಸಮುವೇಲನು 14:24ಆದರೆ ಅರಸನು--ಅವನು ತನ್ನ ಮನೆಗೆ ತಿರುಗಿ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು ಅಂದನು. ಆದದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿ ಹೋದನು.
- Acts 20:25 ಅಪೊಸ್ತಲರ ಕೃತ್ಯಗಳು 20:25ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು.
- Genesis 42:33–34 ಆದಿಕಾಂಡ 42:33–34ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು--ನೀವು ಯಥಾರ್ಥರೆಂದು ನಾನು ಇದರ ಮೂಲಕ ತಿಳುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತಕ್ಕೊಂಡುಹೋಗಿರಿ. ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ, ಆಗ ನೀವು ಗೂಢಚಾರರಲ್ಲವೆಂದೂ ಯಥಾರ್ಥ ರೆಂದೂ ತಿಳುಕೊಂಡು ನಿಮ್ಮ ಸಹೋದರನನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿದನು ಅಂದರು.
- 2 Samuel 3:13 2 ಸಮುವೇಲನು 3:13ಅದಕ್ಕವನು--ಒಳ್ಳೇದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು; ಆದರೆ ಒಂದನ್ನು ನಾನು ನಿನ್ನನ್ನು ಕೇಳುತ್ತೇನೆ; ಏನಂದರೆ, ನೀನು ನನ್ನ ಮುಖವನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ವಿಾಕಲಳನ್ನು ನೀನು ಕರಕೊಂಡು ಬಾರದೆ ಹೋದರೆ ನೀನು ನನ್ನ ಮುಖವನ್ನು ನೋಡಬಾರದು ಅಂದನು.
- 2 Samuel 14:28 2 ಸಮುವೇಲನು 14:28ಹೀಗೆಯೇ ಅಬ್ಷಾಲೋಮನು ಅರಸನ ಮುಖ ವನ್ನು ನೋಡದೆ ಪೂರ್ಣವಾಗಿ ಎರಡು ವರುಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.
- 2 Samuel 14:32 2 ಸಮುವೇಲನು 14:32ಅಬ್ಷಾಲೋಮನು ಯೋವಾಬನಿಗೆ--ಇಗೋ, ನಾನು ಗೆಷೂರಿನಿಂದ ಯಾಕೆ ಬಂದೆನೆಂದು ಅರಸನಿಗೆ ಹೇಳುವದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ಇಲ್ಲಿಗೆ ಬಾ ಎಂದು ನಿನ್ನನ್ನು ಕರೇಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು; ನನ್ನಲ್ಲಿ ಅಕ್ರಮ ಇದ್ದರೆ ಅವನು ನನ್ನನ್ನು ಕೊಂದುಹಾಕಲಿ ಅಂದನು.ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ ಅರಸನು ಅಬ್ಷಾ ಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ಅರಸನು ಅಬ್ಷಾಲೋಮನನ್ನು ಮುದ್ದಿಟ್ಟನು.
- Genesis 42:15–20 ಆದಿಕಾಂಡ 42:15–20ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು. ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ನಿಮ್ಮ ಸಹೋದರ ನನ್ನು ಕರಕೊಂಡು ಬರಲಿ. ಆದರೆ ನೀವು ಸೆರೆಮನೆ ಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ ಇಲ್ಲವೋ ಎಂದು ನಿಮ್ಮ ಮಾತುಗಳು ಪರೀಕ್ಷಿಸಲ್ಪಡು ವವು. ಇಲ್ಲದಿದ್ದರೆ ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು ಎಂದು ಹೇಳಿದನು. ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು. ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ--ಇದನ್ನು ಮಾಡಿ ಬದುಕಿರಿ, ಯಾಕಂದರೆ ನಾನು ದೇವರಿಗೆ ಭಯಪಡುವವನಾ ಗಿದ್ದೇನೆ. ನೀವು ಸತ್ಯವಂತರಾಗಿದ್ದರೆ ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿಸಲ್ಪಡಲಿ. ಆದರೆ ನೀವು ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯವನ್ನು ತಕ್ಕೊಂಡು ಹೋಗಿರಿ. ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು, ನೀವು ಸಾಯದೆ ಇರುವಿರಿ ಅಂದನು. ಅವರು ಹಾಗೆಯೇ ಮಾಡಿದರು.
- Acts 7:34 ಅಪೊಸ್ತಲರ ಕೃತ್ಯಗಳು 7:34ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.
- Acts 20:38 ಅಪೊಸ್ತಲರ ಕೃತ್ಯಗಳು 20:38ತನ್ನ ಮುಖವನ್ನು ಅವರು ಇನ್ನು ನೋಡುವದಿಲ್ಲವೆಂದು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ವ್ಯಥೆಪಟ್ಟರು. ತರುವಾಯ ಅವರು ಅವನನ್ನು ಹಡಗಿನ ವರೆಗೆ ಸಾಗ ಕಳುಹಿಸಿದರು.