Genesis · chapter 49 · verse 17
Genesis 49:17 in Kannada
ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು.
Daananu maargadalliruva sarpavoo daariyalliruva haavoo aagiruvanu. Kudureya himmadiyannu kachchidare hattidavanu boralu beeluvanu.
Genesis 49:17 in English
- King James Version (KJV)
- Dan shall be a serpent by the way, an adder in the path, that biteth the horse heels, so that his rider shall fall backward.
- World English Bible (WEB)
- Dan will be a serpent on the trail, an adder in the path, that bites the horse’s heels, so that his rider falls backward.
- American Standard Version (ASV)
- Dan shall be a serpent in the way, An adder in the path, That biteth the horse’s heels, So that his rider falleth backward.
- Bible in Basic English (BBE)
- May Dan be a snake in the way, a horned snake by the road, biting the horse's foot so that the horseman has a fall.
- Darby Translation (DBY)
- Dan will be a serpent on the way, A horned snake on the path, Which biteth the horse's heels, So that the rider falleth backwards.
- Webster's Bible (WBS)
- Dan shall be a serpent by the way, an adder in the path, that biteth the horse-heels, so that his rider shall fall backward.
- Young's Literal Translation (YLT)
- Dan is a serpent by the way, An adder by the path, Which is biting the horse's heels, And its rider falleth backward.
Read in context
- 15ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು.
- 16ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.
- 17ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು.
- 18ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ.
- 19ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು.
Cross references
- Judges 18:22–31 ನ್ಯಾಯಸ್ಥಾಪಕರು 18:22–31ಅವರು ವಿಾಕನ ಮನೆಯಿಂದ ದೂರವಾಗಿ ಹೋದಾಗ ವಿಾಕನ ಮನೆಯ ಸುತ್ತಲೂ ನೆರೆಮನೆ ಗಳಲ್ಲಿರುವ ಮನುಷ್ಯರು ಕೂಡಿಕೊಂಡು ದಾನ್ಯರನ್ನು ಸಂಧಿಸಿ ಅವರನ್ನು ಕೂಗಿದರು; ಅವರು ತಮ್ಮ ಮುಖ ತಿರುಗಿಸಿ ವಿಾಕನಿಗೆ--ನೀನು ಗುಂಪನ್ನು ಕೂಡಿಸಿ ಬರುವುದಕ್ಕೆ ನಿನಗೆ ಏನಾಯಿತು ಅಂದರು. ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು. ಆದರೆ ದಾನ್ಯರು ಅವ ನಿಗೆ--ಕೋಪಿಷ್ಠರು ನಿನ್ನ ಮೇಲೆ ಬೀಳದ ಹಾಗೆ, ನೀನು ನಿನ್ನ ಪ್ರಾಣವನ್ನೂ ನಿನ್ನ ಮನೆಯವರ ಪ್ರಾಣ ವನ್ನೂ ಕಳಕೊಳ್ಳದ ಹಾಗೆ, ನಿನ್ನ ಸ್ವರ ನಮ್ಮಲ್ಲಿ ಕೇಳಿ ಸದೆ ಇರಲಿ ಅಂದರು. ದಾನ್ಯರು ತಮ್ಮ ಮಾರ್ಗ ವಾಗಿ ಹೋದರು. ಆಗ ಅವರು ತನಗಿಂತ ಬಲಿಷ್ಠ ರೆಂದು ವಿಾಕನು ನೋಡಿ ತಿರುಗಿಕೊಂಡು ತನ್ನ ಮನೆಗೆ ಹೋದನು. ಆದರೆ ಅವರು ವಿಾಕನು ಮಾಡಿಕೊಂಡವು ಗಳನ್ನೂ ಅವನೊಂದಿಗಿದ್ದ ಯಾಜಕನನ್ನೂ ಅಪಹರಿಸಿ ಕೊಂಡು ವಿಶ್ರಾಂತಿಯಾಗಿಯೂ ಭರವಸವಾಗಿಯೂ ಇದ್ದ ಲಯಿಷಿನ ಜನರ ಮೇಲೆ ಬಂದು ಅವರನ್ನು ಕತ್ತಿಯಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು. ಅದು ಚೀದೋನಿಗೆ ದೂರವಾಗಿ ದ್ದದರಿಂದಲೂ ಯಾವ ಮನುಷ್ಯನ ಸಂಗಡವಾದರೂ ಅವರಿಗೆ ಕೆಲಸವಿಲ್ಲದ್ದರಿಂದಲೂ ತಪ್ಪಿಸುವವರು ಯಾರೂ ಇರಲಿಲ್ಲ. ಆ ಪಟ್ಟಣವು ಬೇತ್ರೆಹೋಬಿಗೆ ಸವಿಾಪವಾದ ತಗ್ಗಿನಲ್ಲಿ ಇತ್ತು. ಅಲ್ಲಿ ಅವರು ಪಟ್ಟಣವನ್ನು ಕಟ್ಟಿ ಅದರಲ್ಲಿ ವಾಸವಾಗಿದ್ದರು. ಆದರೆ ಪಟ್ಟಣಕ್ಕೆ ಇಸ್ರಾಯೇಲಿಗೆ ಹುಟ್ಟಿದ ತಮ್ಮ ತಂದೆಯಾದ ದಾನನ ಹೆಸರಿನ ಹಾಗೆಯೇ ದಾನನು ಎಂದು ಹೆಸರಿಟ್ಟರು. ಆದರೆ ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರು ಇತ್ತು. ಆಗ ದಾನನ ಮಕ್ಕಳು ಆ ಕೆತ್ತಿದ ವಿಗ್ರಹವನ್ನು ತಮಗೆ ಸ್ಥಾಪಿಸಿಕೊಂಡರು. ಮನಸ್ಸೆಯ ಮೊಮ್ಮಗನೂ ಗೆರ್ಷೋಮನ ಮಗನೂ ಯೋನಾ ತಾನನೂ ಅವನ ಮಕ್ಕಳೂ ಆ ದೇಶದವರು ಸೆರೆಯಾಗಿ ಒಯ್ಯಲ್ಪಡುವ ದಿವಸದ ವರೆಗೂ ದಾನನ ಗೋತ್ರದ ವರಿಗೆ ಯಾಜಕರಾಗಿದ್ದರು.ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು. ದೇವರ ಮನೆ ಶಿಲೋವಿ ನಲ್ಲಿ ಇರುವ ಮಟ್ಟಿಗೂ ವಿಾಕನು ಮಾಡಿದ ವಿಗ್ರಹ ವನ್ನು ಅವರು ಇಟ್ಟುಕೊಂಡಿದ್ದರು.
- 1 Chronicles 12:35 1 ಪೂರ್ವಕಾಲವೃತ್ತಾಂತ 12:35ದಾನನವರಲ್ಲಿ ಯುದ್ಧ ನಿಪುಣರು ಇಪ್ಪತೆಂಟು ಸಾವಿರದ ಆರುನೂರು ಮಂದಿ.
- Judges 14:1–15 ನ್ಯಾಯಸ್ಥಾಪಕರು 14:1–15ಸಂಸೋನನು ತಿಮ್ನಾಗೆ ಹೋಗಿ ತಿಮ್ನಾ ದೊಳಗೆ ಪಿಲಿಷ್ಟಿಯರ ಕುಮಾರ್ತೆಯರಲ್ಲಿ ಒಬ್ಬ ಸ್ತ್ರೀಯನ್ನು ನೋಡಿ ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ--ನಾನು ತಿಮ್ನಾದಲ್ಲಿ ಫಿಲಿಷ್ಟಿಯರ ಕುರ್ಮಾತೆಯರೊಳಗೆ ಒಬ್ಬ ಸ್ತ್ರೀಯನ್ನು ನೋಡಿದೆನು. ಈಗ ಅವಳನ್ನು ಹೆಂಡತಿಯಾಗುವದಕ್ಕೆ ನನಗೆ ತಕ್ಕೊಳ್ಳಿರಿ ಅಂದನು. ಆಗ ಅವನ ತಂದೆ ತಾಯಿಯೂ ಅವನಿಗೆ--ನಿನಗೆ ಸುನ್ನತಿ ಇಲ್ಲದ ಫಿಲಿಷ್ಟಿ ಯರಲ್ಲಿ ಹೆಂಡತಿಯನ್ನು ತಕ್ಕೊಳ್ಳುವದಕ್ಕೆ ನಿನ್ನ ಸಹೋ ದರರ ಕುಮಾರ್ತೆಯರಲ್ಲಿಯೂ ನಮ್ಮ ಎಲ್ಲಾ ಜನರ ಲ್ಲಿಯೂ ಸ್ತ್ರೀ ಇಲ್ಲವೋ ಅಂದರು. ಆದರೆ ಸಂಸೋನನು ತನ್ನ ತಂದೆಗೆ--ಅವಳನ್ನು ನನಗೆ ತೆಗೆದುಕೋ; ಅವಳು ನನ್ನ ಮನಸ್ಸಿಗೆ ಒಪ್ಪಿದ್ದಾಳೆ ಅಂದನು. ಇದು ಕರ್ತನಿಂದ ಉಂಟಾಯಿತೆಂದು ಅವನ ತಂದೆ ತಾಯಂದಿರು ಅರಿ ಯದೆ ಇದ್ದರು. ಏನಂದರೆ ಫಿಲಿಷ್ಟಿಯರಿಗೆ ವಿರೋಧ ವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲ ದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರನ್ನೂ ಆಳುತ್ತಿದ್ದರು. ಆಗ ಸಂಸೋನನೂ ಅವನ ತಂದೆತಾಯಿಯೂ ತಿಮ್ನಾಗೆ ಹೋಗುತ್ತಿದ್ದರು. ಅವರು ತಿಮ್ನಾದ ದ್ರಾಕ್ಷೇ ತೋಟಗಳ ಬಳಿಗೆ ಬಂದಾಗ ಇಗೋ, ಪ್ರಾಯದ ಸಿಂಹವು ಅವನ ಎದುರಿಗೆ ಬಂದು ಗರ್ಜಿಸಿತು. ಆಗ ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಕರ್ತನ ಆತ್ಮವು ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆ ಮರಿಯ ಹಾಗೆ ಸೀಳಿಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ. ಅವನು ಹೋಗಿ ಆ ಸ್ತ್ರೀಯ ಸಂಗಡ ಮಾತನಾ ಡಿದನು. ಅವಳು ಸಂಸೋನನ ಕಣ್ಣಿಗೆ ಒಪ್ಪುವವಳಾ ಗಿದ್ದಳು. ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ತಕ್ಕೊಳ್ಳುವದಕ್ಕೆ ತಿರಿಗಿ ಬರುವಾಗ ಸಿಂಹದ ಹೆಣವನ್ನು ನೋಡಲು ಪಕ್ಕಕ್ಕೆ ಹೋದನು. ಇಗೋ, ಸಿಂಹದ ಹೆಣದಲ್ಲಿ ಜೇನು ಹುಳಗಳೂ ಜೇನೂ ಇದ್ದವು. ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ ತನ್ನ ತಂದೆ ತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಲ್ಲಿ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ. ಅವನ ತಂದೆಯು ಆ ಸ್ತ್ರೀ ಇರುವ ಸ್ಥಳಕ್ಕೆ ಬಂದಾಗ ಯೌವನಸ್ಥರು ಮಾಡುವ ಮರ್ಯಾದೆಯ ಹಾಗೆ, ಸಂಸೋನನು ಅಲ್ಲಿ ಔತಣಮಾಡಿಸಿದನು. ತರು ವಾಯ ಅವರು ಅವನನ್ನು ನೋಡಲಾಗಿ ಅವನ ಸಂಗಡ ಇರುವದಕ್ಕೆ ಮೂವತ್ತು ಮಂದಿ ಸಂಗಡಿಗರನ್ನು ಕೊಟ್ಟರು. ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು. ಅದರ ಅರ್ಥವನ್ನು ನೀವು ನನಗೆ ಹೇಳದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತುವಸ್ತ್ರ ಗಳನ್ನೂ ಕೊಡಬೇಕು ಅಂದನು. ಅವರು ಅವನಿಗೆನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ ಅಂದರು. ಆಗ ಅವನು ಅವರಿಗೆ--ತಿನ್ನುವಂಥದ್ದರಿಂದ ತಿನ್ನ ತಕ್ಕದ್ದು ಹೊರಟಿತು, ಬಲವಾದದ್ದರಿಂದ ಸಿಹಿಯು ಹೊರಟಿತು ಅಂದನು. ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು. ಏಳನೇ ದಿವಸದಲ್ಲಿ ಆದದ್ದೇನಂದರೆ, ಅವರು ಸಂಸೋನನ ಹೆಂಡತಿಗೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯನ್ನೂ ಬೆಂಕಿ ಯಿಂದ ಸುಟ್ಟು ಬಿಡದಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರುಳುಗೊಳಿಸು. ನೀನು ನಮಗೆ ಉಂಟಾದದ್ದನ್ನು ಕಸಕೊಳ್ಳುವದಕ್ಕಲ್ಲವೇ ನಮ್ಮನ್ನು ಕರೆಸಿದಿ ಅಂದರು.