Hebrews · chapter 1 · verse 1
Hebrews 1:1 in Kannada
ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು
Kaleda kaaladalli pitrugala sangada pravaadigala mukhaantara naanaa samayagalalli vidhavidhavaada reetiyalli maatanaadida devaru
Hebrews 1:1 in English
- King James Version (KJV)
- God, who at sundry times and in divers manners spake in time past unto the fathers by the prophets,
- World English Bible (WEB)
- God, having in the past spoken to the fathers through the prophets at many times and in various ways,
- American Standard Version (ASV)
- God, having of old time spoken unto the fathers in the prophets by divers portions and in divers manners,
- Bible in Basic English (BBE)
- In times past the word of God came to our fathers through the prophets, in different parts and in different ways;
- Darby Translation (DBY)
- God having spoken in many parts and in many ways formerly to the fathers in the prophets,
- Webster's Bible (WBS)
- God, who at sundry times and in divers manners spoke in time past to the fathers by the prophets,
- Young's Literal Translation (YLT)
- In many parts, and many ways, God of old having spoken to the fathers in the prophets,
Read in context
- 1ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು
- 2ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ತನ್ನ ಮಗನ ಮುಖಾಂತರ ಮಾತನಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಲೋಕಗಳನ್ನು ಉಂಟು ಮಾಡಿದನು.
- 3ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
Cross references
- 2 Peter 1:20–21 2 ಪೇತ್ರನು 1:20–21ಬರಹದ ಯಾವ ಪ್ರವಾದನೆಯೂ ಕೇವಲ ಸ್ವಂತ ವಾಗಿ ವಿವರಿಸತಕ್ಕಂಥದ್ದಲ್ಲವೆಂಬದನ್ನು ಮೊದಲು ತಿಳಿದುಕೊಳ್ಳಿರಿ.ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು. ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.
- Joel 2:28 ಯೋವೇಲ 2:28ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು.
- Numbers 12:6–8 ಅರಣ್ಯಕಾಂಡ 12:6–8ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು. ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ. ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- Luke 24:27 ಲೂಕನು 24:27ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು.
- 1 Peter 1:10–12 1 ಪೇತ್ರನು 1:10–12ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು. ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ಸಾಕ್ಷೀಕರಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವ ನೆಂಬದನ್ನು ಅವರು ಪರಿಶೋಧನೆ ಮಾಡಿದರು. ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.
- Genesis 46:2–4 ಆದಿಕಾಂಡ 46:2–4ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು. ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು. ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು.
- Luke 1:55 ಲೂಕನು 1:55ಇದಲ್ಲದೆ ನಮ್ಮ ಪಿತೃಗಳಿಗೂ ಅಬ್ರ ಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೆ ಆತನು ಹೇಳಿದಂತೆ ಮಾಡಿದ್ದಾನೆ ಅಂದಳು.
- Acts 2:30 ಅಪೊಸ್ತಲರ ಕೃತ್ಯಗಳು 2:30ದಾವೀದನು ಪ್ರವಾದಿಯಾಗಿದ್ದದರಿಂದ ಶರೀರದ ಪ್ರಕಾರ ತನ್ನ ಸಂತಾನದವರಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಿ ತನ್ನ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವನೆಂದು ಆಣೆಯಿಟ್ಟು ಪ್ರಮಾಣ ಪೂರ್ವಕ ವಾಗಿ ತನಗೆ ಹೇಳಿದ್ದನ್ನು ಅವನು ಬಲ್ಲವನಾಗಿದ್ದನು.
- Acts 13:32 ಅಪೊಸ್ತಲರ ಕೃತ್ಯಗಳು 13:32ಪಿತೃಗಳಿಗೆ ವಾಗ್ದಾನ ಮಾಡಿದ್ದು ಹೇಗೆ ಎಂಬ ಶುಭಸಂದೇಶ ವನ್ನು ನಾವು ನಿಮಗೆ ಪ್ರಕಟಿಸುತ್ತೇವೆ.
- Luke 24:44 ಲೂಕನು 24:44ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
- Genesis 12:1–3 ಆದಿಕಾಂಡ 12:1–3ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ. ನಿನ್ನನ್ನು ಆಶೀರ್ವದಿಸುವವರನ್ನು ಆಶೀರ್ವದಿಸು ವೆನು. ನಿನ್ನನ್ನು ಶಪಿಸುವವರನ್ನು ಶಪಿಸುವೆನು; ನಿನ್ನಲ್ಲಿ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡು ವವು ಎಂದು ಹೇಳಿದನು.
- Hebrews 2:2 ಇಬ್ರಿಯರಿಗೆ 2:2ಯಾಕಂದರೆ ದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ವಿಾರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯ ವಾದ ಪ್ರತಿಫಲ ಹೊಂದಿದ ಮೇಲೆ