Hebrews · chapter 10 · verse 24
Hebrews 10:24 in Kannada
ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವದ ಕ್ಕಾಗಿಯೂ ಸತ್ಕಾರ್ಯ ಮಾಡುವದಕ್ಕಾಗಿಯೂ ಒಬ್ಬರ ನ್ನೊಬ್ಬರು ಪ್ರೇರೇಪಿಸೋಣ.
Naavu paraspara hitachintakaraagiddu preetisuvada kkaagiyoo satkaarya maaduvadakkaagiyoo obbara nnobbaru prerepisona.
Hebrews 10:24 in English
- King James Version (KJV)
- And let us consider one another to provoke unto love and to good works:
- World English Bible (WEB)
- Let’s consider how to provoke one another to love and good works,
- American Standard Version (ASV)
- and let us consider one another to provoke unto love and good works;
- Bible in Basic English (BBE)
- And let us be moving one another at all times to love and good works;
- Darby Translation (DBY)
- and let us consider one another for provoking to love and good works;
- Webster's Bible (WBS)
- And let us consider one another to excite to love and to good works:
- Young's Literal Translation (YLT)
- and may we consider one another to provoke to love and to good works,
Read in context
- 22ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
- 23ನಮ್ಮ ನಂಬಿಕೆಯಿಂದಾದ ಅರಿಕೆಯನ್ನು ನಿಶ್ಚಂಚಲ ದಿಂದ ಬಲವಾಗಿ ಹಿಡಿಯೋಣ. (ಯಾಕಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು).
- 24ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವದ ಕ್ಕಾಗಿಯೂ ಸತ್ಕಾರ್ಯ ಮಾಡುವದಕ್ಕಾಗಿಯೂ ಒಬ್ಬರ ನ್ನೊಬ್ಬರು ಪ್ರೇರೇಪಿಸೋಣ.
- 25ಸಭೆಯಾಗಿ ಕೂಡಿ ಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿ ಸೋಣ. ಆ ದಿನವು ಸವಿಾಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.
- 26ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ.
Cross references
- 1 Thessalonians 5:11 1 ಥೆಸಲೊನೀಕದವರಿಗೆ 5:11ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿ ಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.
- 1 John 3:18 1 ಯೋಹಾನನು 3:18ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- Hebrews 13:1 ಇಬ್ರಿಯರಿಗೆ 13:1ಸಹೋದರ ಪ್ರೀತಿಯು ನೆಲೆಯಾಗಿರಲಿ.
- Galatians 5:13 ಗಲಾತ್ಯದವರಿಗೆ 5:13ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
- Colossians 3:16 ಕೊಲೊಸ್ಸೆಯವರಿಗೆ 3:16ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ.
- Titus 3:8 ತೀತನಿಗೆ 3:8ಇದು ನಂಬತಕ್ಕ ಮಾತಾ ಗಿದೆ. ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಮಾತುಗಳನ್ನು ಯಾವಾಗಲೂ ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಉತ್ತಮವೂ ಪ್ರಯೋಜನಕರವೂ ಆಗಿವೆ.
- 1 Thessalonians 3:12–13 1 ಥೆಸಲೊನೀಕದವರಿಗೆ 3:12–13ನಮ್ಮ ಪ್ರಿತಿಯು ನಿಮ್ಮ ಕಡೆಗೆ ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ನಿಮಗೆ ಅನುಗ್ರಹಿಸಲಿ.ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ ನಿಮ್ಮ ಹೃದಯಗಳನ್ನು ದೃಢಪಡಿಸಿ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿ ಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ ನಿಮ್ಮ ಹೃದಯಗಳನ್ನು ದೃಢಪಡಿಸಿ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿ ಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ.
- 1 Timothy 6:18 1 ತಿಮೊಥೆಯನಿಗೆ 6:18ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.
- Galatians 6:1 ಗಲಾತ್ಯದವರಿಗೆ 6:1ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.
- 1 Corinthians 10:33 1 ಕೊರಿಂಥದವರಿಗೆ 10:33ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
- Hebrews 6:10–11 ಇಬ್ರಿಯರಿಗೆ 6:10–11ನೀವು ಪರಿಶುದ್ಧರಿಗೆ ಉಪಚಾರ ಮಾಡಿದಿರಿ, ಇನ್ನು ಮಾಡುತ್ತಾ ಇದ್ದೀರಿ. ಈ ನಿಮ್ಮ ಕೆಲಸವನ್ನೂ ಇದರಲ್ಲಿ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ. ಅಂತ್ಯದವರೆಗೆ ನಿರೀಕ್ಷೆಯ ಸಂಪೂರ್ಣ ನಿಶ್ಚಯ ತ್ವಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
- 2 Corinthians 8:8 2 ಕೊರಿಂಥದವರಿಗೆ 8:8ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ.