Hebrews · chapter 13 · verse 22
Hebrews 13:22 in Kannada
ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
Sahodarare, ee echcharikeya maatannu sahisikollabekendu nimmannu bedikolluva haage sankshepavaagi naanu ee patravannu barediddene.
Hebrews 13:22 in English
- King James Version (KJV)
- And I beseech you, brethren, suffer the word of exhortation: for I have written a letter unto you in few words.
- World English Bible (WEB)
- But I exhort you, brothers, endure the word of exhortation, for I have written to you in few words.
- American Standard Version (ASV)
- But I exhort you, brethren, bear with the word of exhortation: for I have written unto you in few words.
- Bible in Basic English (BBE)
- But, brothers, take kindly the words which I have said for your profit; for I have not sent you a long letter.
- Darby Translation (DBY)
- But I beseech you, brethren, bear the word of exhortation, for it is but in few words that I have written to you.
- Webster's Bible (WBS)
- And I beseech you, brethren, suffer the word of exhortation: for I have written a letter to you in few words.
- Young's Literal Translation (YLT)
- And I entreat you, brethren, suffer the word of the exhortation, for also through few words I have written to you.
Read in context
- 20ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
- 21ನಿಮ್ಮನ್ನು ಸಕಲ ಸತ್ಕಾರ್ಯಗಳಲ್ಲಿ ಆತನ ಚಿತ್ತವನ್ನು ಮಾಡುವಂತೆ ಪರಿಪೂರ್ಣ ಮಾಡಲಿ. ತನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದ ದ್ದನ್ನು ಯೇಸು ಕ್ರಿಸ್ತನ ಮೂಲಕ ನಿಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
- 22ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.
- 23ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ; ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
- 24ನಿಮ್ಮ ಸಭಾನಾಯಕರೆಲ್ಲರಿಗೆ ಮತ್ತು ಪರಿಶುದ್ಧರೆಲ್ಲರಿಗೆ ವಂದನೆ. ಇತಾಲ್ಯದವರು ನಿಮ್ಮನ್ನು ವಂದಿಸುತ್ತಾರೆ.ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
Cross references
- Hebrews 3:1 ಇಬ್ರಿಯರಿಗೆ 3:1ಆದದರಿಂದ ಪರಿಶುದ್ಧರಾದ ಸಹೋ ದರರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಒಪ್ಪಿಕೊಂಡಿರುವ ಅಪೊ ಸ್ತಲನೂ ಮಹಾಯಾಜಕನೂ ಆಗಿರುವ ಕ್ರಿಸ್ತ ಯೇಸುವನ್ನು ಆಲೋಚಿಸಿರಿ.
- 2 Corinthians 6:1 2 ಕೊರಿಂಥದವರಿಗೆ 6:1ಆದದರಿಂದ ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದೇವೆ; ನೀವು ಸಹ ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿ ಕೊಳ್ಳಬೇಡಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.
- 1 Peter 5:12 1 ಪೇತ್ರನು 5:12ನಿಮ್ಮನ್ನು ಎಚ್ಚರಿಸುವದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವದಕ್ಕೂ ನಿಮಗೆ ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.
- Galatians 6:11 ಗಲಾತ್ಯದವರಿಗೆ 6:11ನನ್ನ ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರ ಗಳಲ್ಲಿ ನಾನು ನಿಮಗೆ ಬರೆದಿದ್ದೇನೆ ನೋಡಿರಿ.
- Hebrews 13:1–3 ಇಬ್ರಿಯರಿಗೆ 13:1–3ಸಹೋದರ ಪ್ರೀತಿಯು ನೆಲೆಯಾಗಿರಲಿ. ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ. ಸೆರೆಯವರ ಸಂಗಡ ನೀವೂ ಬಂಧಿಸಲ್ಪಟ್ಟವರೆಂದು ಅವರನ್ನು ಜ್ಞಾಪಕ ಮಾಡಿಕೊಳ್ಳಿರಿ. ನೀವು ಶರೀರದಲ್ಲಿರುವ ದರಿಂದ ಕಷ್ಟವನ್ನು ಅನುಭವಿಸುವವರನ್ನು ನೆನಸಿರಿ.
- Hebrews 12:1–2 ಇಬ್ರಿಯರಿಗೆ 12:1–2ಆದಕಾರಣ ಸಾಕ್ಷಿಯವರ ಇಷ್ಟು ದೊಡ್ಡ ಮೇಘವು ನಮ್ಮ ಸುತ್ತಲು ಇರುವದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ
- 2 Corinthians 5:20 2 ಕೊರಿಂಥದವರಿಗೆ 5:20ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Hebrews 10:19–39 ಇಬ್ರಿಯರಿಗೆ 10:19–39ಹೀಗಿರುವಲ್ಲಿ ಸಹೋದರರೇ, ಯೇಸುವಿನ ರಕ್ತದ ಮೂಲಕ ಅತಿಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು. ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು. ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವದರಿಂದ ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ. ನಮ್ಮ ನಂಬಿಕೆಯಿಂದಾದ ಅರಿಕೆಯನ್ನು ನಿಶ್ಚಂಚಲ ದಿಂದ ಬಲವಾಗಿ ಹಿಡಿಯೋಣ. (ಯಾಕಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು). ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವದ ಕ್ಕಾಗಿಯೂ ಸತ್ಕಾರ್ಯ ಮಾಡುವದಕ್ಕಾಗಿಯೂ ಒಬ್ಬರ ನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿ ಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿ ಸೋಣ. ಆ ದಿನವು ಸವಿಾಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ. ಆದರೆ ಭಯದಿಂದ ಖಂಡಿತವಾಗಿ ಎದುರು ನೋಡತಕ್ಕ ತೀರ್ಪು ವಿರೋಧಿ ಗಳನ್ನು ದಹಿಸುವ ಕೋಪಾಗ್ನಿಯೂ ಇರುವವು. ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು. ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ. ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ. ಜೀವವುಳ್ಳ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು. ಆದರೆ ನೀವು ಪ್ರಕಾಶದಲ್ಲಿ ಸೇರಿದ ಮೇಲೆ ಸಂಕಷ್ಟಗಳ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. ಕೆಲವು ಸಾರಿ ನೀವು ಎರಡನ್ನು ಅಂದರೆ ನಿಂದೆಗಳನ್ನೂ ಉಪ ದ್ರವಗಳನ್ನೂ ಅನುಭವಿಸಿ ಹಾಸ್ಯದ ನೋಟಕ್ಕೆ ಗುರಿ ಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸು ವವರ ಜೊತೆಗಾರರಾದಿರಿ. ಬೇಡಿಗಳನ್ನು ಹಾಕಿಸಿ ಕೊಂಡವನಾದ ನನ್ನ ವಿಷಯದಲ್ಲಿ ನೀವು ಅನುತಾಪ ಗೊಂಡು ಪರಲೋಕದಲ್ಲಿ ನಿಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ನಿಮ್ಮಲ್ಲಿ ನೀವೇ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳು ವವರಿಗೆ ಸಂತೋಷದಿಂದ ಬಿಟ್ಟಿರಿ. ಆದದರಿಂದ ನಿಮ್ಮ ಭರವಸವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ನಷ್ಟ ಪರಿಹಾರದ ದೊಡ್ಡ ಪ್ರತಿಫಲ ಉಂಟು. ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ. ನಿಶ್ಚಯವಾಗಿ ಬರುವಾತನು ಇನ್ನು ಸ್ವಲ್ಪ ಕಾಲ ದಲ್ಲಿ ಬರುವನು, ತಡಮಾಡುವದಿಲ್ಲ. ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ. ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- Philemon 1:8–9 ಫಿಲೆಮೋನನಿಗೆ 1:8–9ಆದಕಾರಣ ನಿನಗೆ ಯುಕ್ತವಾದದ್ದನ್ನು ಆಜ್ಞಾಪಿಸು ವದಕ್ಕೆ ಕ್ರಿಸ್ತನಲ್ಲಿ ನನಗೆ ಬಹು ಧೈರ್ಯವಿದ್ದರೂ ಹಾಗೆ ಆಜ್ಞಾಪಿಸದೆ ಮುದುಕನೂ ಈಗ ಯೇಸು ಕ್ರಿಸ್ತನ ಸೆರೆಯವನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.
- Hebrews 4:1 ಇಬ್ರಿಯರಿಗೆ 4:1ಹೀಗಿರಲಾಗಿ ಆತನ ವಿಶ್ರಾಂತಿಯಲ್ಲಿ ಸೇರುವೆವೆಂಬ ವಾಗ್ದಾನವು ಇನ್ನೂ ಇರು ವಲ್ಲಿ ನಿಮ್ಮೊಳಗೆ ಯಾವನಾದರೂ ಆದರಿಂದ ತಪ್ಪುವವನಾದಾನೋ ಎಂದು ನಾವು ಭಯಪಡೋಣ.
- Hebrews 12:25–28 ಇಬ್ರಿಯರಿಗೆ 12:25–28ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು. ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು; ಈಗಲಾದರೋ ಆತನು--ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆಂದು ವಾಗ್ದಾನ ಮಾಡಿ ಹೇಳಿದ್ದಾನೆ. ಇದಲ್ಲದೆ ಇನ್ನೊಂದೇ ಸಾರಿ ಎಂಬ ಮಾತು ಕದಲಿ ಸಿರುವ ವಸ್ತುಗಳು ನಿರ್ಮಿತವಾದವುಗಳಾದದರಿಂದ ತೆಗೆದುಹಾಕಲ್ಪಡ ಬೇಕೆಂಬದನ್ನು ಸೂಚಿಸುತ್ತದೆ; ಆಗ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು. ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
- Hebrews 6:11–12 ಇಬ್ರಿಯರಿಗೆ 6:11–12ಅಂತ್ಯದವರೆಗೆ ನಿರೀಕ್ಷೆಯ ಸಂಪೂರ್ಣ ನಿಶ್ಚಯ ತ್ವಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ. ಹೀಗೆ ನೀವು ಮೈಗಳ್ಳರಾಗಿರದೆ ನಂಬಿಕೆಯಿಂದಲೂ ತಾಳ್ಮೆ ಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವ ವರನ್ನು ಅನುಸರಿಸುವವರಾಗಿರುವಿರಿ.
Original words (Greek)
- And · G1161δέ dé
- beseech · G3870παρακαλέω parakaléō
- you · G5209ὑμᾶς hymâs
- brethren · G80ἀδελφός adelphós
- suffer · G430ἀνέχομαι anéchomai
- word · G3056λόγος lógos
- exhortation · G3874παράκλησις paráklēsis
- for · G1063γάρ gár
- letter · G1989ἐπιστέλλω epistéllō
- you · G5213ὑμῖν hymîn
- in · G1223διά diá
- words · G1024βραχύς brachýs