Hebrews · chapter 8 · verse 2
Hebrews 8:2 in Kannada
ಈತನು ಪವಿತ್ರ ಸ್ಥಾನದಲ್ಲಿ ಅಂದರೆ ಮನುಷ್ಯನಿಂದಲ್ಲ, ಕರ್ತನೇ ಹಾಕಿದ ನಿಜವಾದ ಗುಡಾರದಲ್ಲಿ ಸೇವೆ ನಡಿಸುವಾತನಾಗಿದ್ದಾನೆ.
Eetanu pavitra sthaanadalli andare manushyanindalla, kartane haakida nijavaada gudaaradalli seve nadisuvaatanaagiddaane.
Hebrews 8:2 in English
- King James Version (KJV)
- A minister of the sanctuary, and of the true tabernacle, which the Lord pitched, and not man.
- World English Bible (WEB)
- a servant of the sanctuary and of the true tabernacle which the Lord pitched, not man.
- American Standard Version (ASV)
- a minister of the sanctuary, and of the true tabernacle, which the Lord pitched, not man.
- Bible in Basic English (BBE)
- As a servant of the holy things and of the true Tent, which was put up by God, not by man.
- Darby Translation (DBY)
- minister of the holy places and of the true tabernacle, which the Lord has pitched, [and] not man.
- Webster's Bible (WBS)
- A minister of the sanctuary, and of the true tabernacle, which the Lord pitched, and not man.
- Young's Literal Translation (YLT)
- of the holy places a servant, and of the true tabernacle, which the Lord did set up, and not man,
Read in context
- 1ನಾವು ಈಗ ಹೇಳುವ ವಿಷಯಗಳ ಸಾರಾಂಶವೇನಂದರೆ--ಪರಲೋಕದೊ ಳಗೆ ಮಹಿಮೆಯುಳ್ಳಾತನ ಸಿಂಹಾಸನದ ಬಲಗಡೆಯಲ್ಲಿ ಕೂತುಕೊಂಡಿರುವ ಮಹಾಯಾಜಕನು ನಮಗಿದ್ದಾನೆ.
- 2ಈತನು ಪವಿತ್ರ ಸ್ಥಾನದಲ್ಲಿ ಅಂದರೆ ಮನುಷ್ಯನಿಂದಲ್ಲ, ಕರ್ತನೇ ಹಾಕಿದ ನಿಜವಾದ ಗುಡಾರದಲ್ಲಿ ಸೇವೆ ನಡಿಸುವಾತನಾಗಿದ್ದಾನೆ.
- 3ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರು ತ್ತಾನಷ್ಟೆ. ಆದದರಿಂದ ಸಮರ್ಪಿಸುವದಕ್ಕೆ ಈತನಿಗೆ ಸಹ ಏನಾದರೂ ಇರುವದು ಅವಶ್ಯವಾಗಿದೆ.
- 4ಈತನು ಇನ್ನೂ ಭೂಮಿಯ ಮೇಲೆ ಇದ್ದದ್ದೇಯಾಗಿದ್ದರೆ ಯಾಜಕ ನಾಗುವ ಹಾಗಿದ್ದಿಲ್ಲ. ಯಾಕಂದರೆ ನ್ಯಾಯಪ್ರಮಾಣದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವ ಯಾಜಕರು ಇದ್ದೇ ಇರುತ್ತಾರೆ;
Cross references
- Exodus 33:7 ವಿಮೋಚನಕಾಂಡ 33:7ಇದಲ್ಲದೆ ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ ಅದಕ್ಕೆ ದೇವದರ್ಶನ ಗುಡಾರ ಎಂದು ಹೆಸರಿಟ್ಟನು. ತರುವಾಯ ಕರ್ತನನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನ ಗುಡಾರಕ್ಕೆ ಹೋದರು.
- Romans 15:8 ರೋಮಾಪುರದವರಿಗೆ 15:8ಹೀಗಿರುವದರಿಂದ ಪಿತೃ ಗಳಿಗೆ ಮಾಡಿದ ವಾಗ್ದಾನಗಳನ್ನು ದೃಢಪಡಿಸುವದಕ್ಕೆ ದೇವರ ಸತ್ಯಕ್ಕಾಗಿ ಯೇಸು ಕ್ರಿಸ್ತನು ಸುನ್ನತಿಯವರಿಗೆ ಸೇವಕನಾಗಿದ್ದನೆಂದು ನಾನು ಹೇಳುತ್ತೇನೆ.
- 2 Corinthians 5:1 2 ಕೊರಿಂಥದವರಿಗೆ 5:1ಈ ಗುಡಾರವಾಗಿರುವ ಮಣ್ಣಿನ ನಮ್ಮ ಮನೆಯು (ಶರೀರವು) ತೆಗೆದುಹಾಕಲ್ಪ ಟ್ಟರೆ ಕೈಗಳಿಂದ ಮಾಡದಿರುವಂಥಾದ್ದೂ ಪರಲೋಕ ಗಳಲ್ಲಿ ನಿತ್ಯವಾಗಿರುವಂಥಾದ್ದೂ ಆಗಿರುವ ದೇವರ ಕಟ್ಟಡವು ನಮಗಿದೆಯೆಂದು ನಾವು ಬಲ್ಲೆವು.
- Hebrews 9:23–24 ಇಬ್ರಿಯರಿಗೆ 9:23–24ಪರಲೋಕದಲ್ಲಿರುವ ವಸ್ತುಗಳಿಗೆ ಮಾದರಿಯಾಗಿ ರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ ಪರಲೋಕದವುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಬೇಕು. ಯಾಕಂದರೆ ಕ್ರಿಸ್ತನು ನಿಜವಾದವುಗಳಿಗೆ ಸಾಮ್ಯ ವಾಗಿದ್ದು ಕೈಯಿಂದ ಕಟ್ಟಿದ್ದ ಪರಿಶುದ್ಧ ಸ್ಥಳಗಳಲ್ಲಿ ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳು ವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.
- Hebrews 9:8–12 ಇಬ್ರಿಯರಿಗೆ 9:8–12ಮೊದಲನೆಯ ಗುಡಾರವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಿಲ್ಲಿವೆಂಬದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ. ಆ ಕಾಲಕ್ಕೆ ಅದು ಸಾಮ್ಯವಾಗಿದ್ದು ಆಗ ಸೇವೆ ಮಾಡುವವನಿಗಾಗಿ ಮನಸ್ಸಾಕ್ಷಿಯ ವಿಷಯದಲ್ಲಿ ಸಂಪೂರ್ಣ ಮಾಡಲಾರದ ಕಾಣಿಕೆಗಳೂ ಯಜ್ಞಗಳೂ ಅರ್ಪಿಸಲ್ಪಡುತ್ತಿದ್ದವು. ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು. ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
- Exodus 28:1 ವಿಮೋಚನಕಾಂಡ 28:1ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲಿಯೇಜರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು.
- Colossians 2:11 ಕೊಲೊಸ್ಸೆಯವರಿಗೆ 2:11ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದ್ದಿರಿ; ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ; ಇದು ಕ್ರಿಸ್ತನಿಂದಾದ ಸುನ್ನತಿಯಾಗಿದ್ದು ಪಾಪದ ಶರೀರ ವನ್ನು ವಿಸರ್ಜಿಸುವದೇ.
- Exodus 28:35 ವಿಮೋಚನಕಾಂಡ 28:35ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಕರ್ತನ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ ಅವನು ಸಾಯದಂತೆ ಅವುಗಳ ಶಬ್ದವು ಕೇಳಿಸಬೇಕು.
- Luke 24:44 ಲೂಕನು 24:44ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
- Hebrews 11:10 ಇಬ್ರಿಯರಿಗೆ 11:10ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು.
- Hebrews 10:21 ಇಬ್ರಿಯರಿಗೆ 10:21ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವದರಿಂದ