Hosea · chapter 5 · verse 2
Hosea 5:2 in Kannada
ನಾನು ಅವರನ್ನು ಗದರಿಸಿದ್ದಾಗ್ಯೂ ನನಗೆ ತಿರುಗಿಬಿದ್ದವರು ಕೊಲೆಯನ್ನು ಮಾಡುವದರಲ್ಲಿ ಮಗ್ನರಾಗಿದ್ದಾರೆ.
Naanu avarannu gadarisiddaagyoo nanage tirugibiddavaru koleyannu maaduvadaralli magnaraagiddaare.
Hosea 5:2 in English
- King James Version (KJV)
- And the revolters are profound to make slaughter, though I [have been] a rebuker of them all.
- World English Bible (WEB)
- The rebels are deep in slaughter, but I discipline all of them.
- American Standard Version (ASV)
- And the revolters are gone deep in making slaughter; but I am a rebuker of them all.
- Bible in Basic English (BBE)
- They have gone deep in the evil ways of Shittim, but I am the judge of all.
- Darby Translation (DBY)
- And they have plunged themselves in the corruption of apostasy, but I will be a chastiser of them all.
- Webster's Bible (WBS)
- And the revolters are profound to make slaughter, though I [have been] a rebuker of them all.
- Young's Literal Translation (YLT)
- And to slaughter sinners have gone deep, And I [am] a fetter to them all.
Read in context
- 1ಓ ಯಾಜಕರೇ, ಇದನ್ನು ನೀವು ಕೇಳಿರಿ, ಇಸ್ರಾಯೇಲಿನ ಮನೆತನದವರೇ, ನೀವು ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ, ನೀವು ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.
- 2ನಾನು ಅವರನ್ನು ಗದರಿಸಿದ್ದಾಗ್ಯೂ ನನಗೆ ತಿರುಗಿಬಿದ್ದವರು ಕೊಲೆಯನ್ನು ಮಾಡುವದರಲ್ಲಿ ಮಗ್ನರಾಗಿದ್ದಾರೆ.
- 3ನಾನು ಎಫ್ರಾಯಾಮನ್ನು ಬಲ್ಲೆನು ಮತ್ತು ಇಸ್ರಾ ಯೇಲು ನನಗೆ ಮರೆಯಾಗಿಲ್ಲ; ಓ ಎಫ್ರಾಯಾಮೇ, ನೀನು ಈಗಲೇ ವ್ಯಭಿಚಾರಮಾಡುತ್ತೀ, ಇಸ್ರಾಯೇಲು ಸಹ ಅಪವಿತ್ರವಾಯಿತು.
- 4ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ; ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು; ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ.
Cross references
- Isaiah 29:15 ಯೆಶಾಯ 29:15ತಮ್ಮ ಆಲೋಚನೆಯನ್ನು ಕರ್ತನಿಗೆ ಮರೆಮಾಜುವದಕ್ಕೆ ಅಗಾಧದಲ್ಲಿ ಮಾಡಿ--ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು ಅಂದುಕೊಂಡು ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸು ವವರಿಗೆ ಅಯ್ಯೋ!
- Hosea 9:15 ಹೋಶೇಯ 9:15ಅವರ ಕೆಟ್ಟತನ ವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ನಾನು ಅವರನ್ನು ಹಗೆ ಮಾಡಿದ್ದೇನೆ. ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ ಅವ ರನ್ನು ಇನ್ನು ಪ್ರೀತಿಮಾಡುವದೇ ಇಲ್ಲ; ಅವರ ಪ್ರಭು ಗಳೆಲ್ಲಾ ತಿರುಗಿ ಬೀಳುವವರೇ.
- Hosea 6:9 ಹೋಶೇಯ 6:9ಕಳ್ಳರ ಗುಂಪು ಮನುಷ್ಯನಿಗೋಸ್ಕರ ಕಾಯುವ ಪ್ರಕಾರ ಯಾಜಕರ ಗುಂಪು ಒಪ್ಪಿಗೆಯಿಂದ ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.
- Psalm 64:3–6 ಕೀರ್ತನೆಗಳು 64:3–6ಅವರು ತಮ್ಮ ನಾಲಿಗೆಯನ್ನು ಕತ್ತಿಯ ಹಾಗೆ ಮಸೆಯುತ್ತಾರೆ. ಕಹಿ ಮಾತುಗಳೆಂಬ ಬಾಣಗಳನ್ನು ಹೂಡುತ್ತಾರೆ. ನಿರ್ದೋಷಿಯ ಕಡೆಗೆ ಗುಪ್ತವಾಗಿ ಫಕ್ಕನೆ ಎಸೆಯುವದಕ್ಕೆ ಅವರು ಭಯ ಪಡುವದಿಲ್ಲ. ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ. ಅವರು ದ್ರೋಹಗಳನ್ನು ಹುಡುಕುತ್ತಾರೆ; ಎಚ್ಚರಿಕೆಯಿಂದ ಹುಡುಕಿದ್ದನ್ನು ಅವರು ಪೂರೈಸುತ್ತಾರೆ; ಅವರೆಲ್ಲರ ಅಂತರಗವೂ ಹೃದಯವೂ ಅಶೋದ್ಯವಾಗಿವೆ.
- Luke 22:2–5 ಲೂಕನು 22:2–5ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಆತನನ್ನು ಹೇಗೆ ಕೊಲ್ಲ ಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು. ಹನ್ನೆರಡು ಮಂದಿಯಲ್ಲಿ ಎಣಿಕೆ ಯಾಗಿದ್ದ ಇಸ್ಕರಿಯೋತನೆಂಬ ಅಡ್ಡಹೆಸರಿನ ಯೂದ ನಲ್ಲಿ ಸೈತಾನನು ಪ್ರವೇಶಿಸಿದನು. ಅವನು ಪ್ರಧಾನ ಯಾಜಕರ ಬಳಿಗೂ ಸೈನ್ಯಾಧಿಪತಿಗಳ ಬಳಿಗೂ ಹೋಗಿ ತಾನು ಹೇಗೆ ಆತನನ್ನು ಅವರಿಗೆ ಹಿಡುಕೊಡುವ ದೆಂಬದನ್ನು ಅವರ ಕೂಡ ಮಾತನಾಡಿದನು. ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವದಕ್ಕೆ ಒಡಂಬಟ್ಟರು.
- Zephaniah 3:1–2 ಚೆಫನ್ಯ 3:1–2ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ.
- Isaiah 1:5 ಯೆಶಾಯ 1:5ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
- Psalm 140:1–5 ಕೀರ್ತನೆಗಳು 140:1–5ಓ ಕರ್ತನೇ, ಕೆಡುಕರಿಂದ ನನ್ನನ್ನು ಬಿಡಿಸು; ಬಲಾತ್ಕಾರಿಗಳಿಂದ ತಪ್ಪಿಸಿ ನನ್ನನ್ನು ಕಾಪಾಡು. ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ. ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಅವರು ಹದಮಾಡುತ್ತಾರೆ; ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ ಸೆಲಾ. ಓ ಕರ್ತನೇ, ದುಷ್ಟನ ಕೈಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು; ಬಲಾತ್ಕಾರಿಯಿಂದ ನನ್ನನ್ನು ತಪ್ಪಿಸಿ ಕಾಯಿ; ನಾನು ಎಡವಿ ಬೀಳಬೇಕೆಂದು ಯೋಚಿಸುತ್ತಾರೆ. ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Amos 4:6–12 ಆಮೋಸ 4:6–12ನಾನು ಸಹ ನಿಮಗೆ ಎಲ್ಲಾ ಪಟ್ಟಣಗಳಲ್ಲಿ ಹಲ್ಲಿಗೆ ಏನೂ ಸಿಕ್ಕದಂತೆ ನಿಮ್ಮ ಎಲ್ಲಾ ಸ್ಥಳಗಳಲ್ಲಿ ರೊಟ್ಟಿಯ ಕೊರತೆಯನ್ನು ಕೊಟ್ಟಿದ್ದೇನೆ; ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲ ಎಂದು ಕರ್ತನು ಹೇಳು ತ್ತಾನೆ. ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು. ಆದ್ದರಿಂದ ನೀರು ಕುಡಿಯುವದಕ್ಕಾಗಿ ಒಂದು ಪಟ್ಟಣದವರು ಮತ್ತೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ ಅವರಿಗೆ ತೃಪ್ತಿಯಾಗಲಿಲ್ಲ, ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ಆದದ ರಿಂದ ಓ ಇಸ್ರಾಯೇಲೇ, ನಿನಗೆ ನಾನು ಹೀಗೆ ಮಾಡುತ್ತೇನೆ; ನಾನು ನಿನಗೆ ಇದನ್ನು ಮಾಡುವದರಿಂದ ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧ ಮಾಡಿಕೊ.ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
- Jeremiah 6:28 ಯೆರೆಮೀಯ 6:28ಅವರೆಲ್ಲರು ಘೋರವಾಗಿ ತಿರುಗಿ ಬೀಳುವವರೇ; ಚಾಡಿಕೋರರಾಗಿ ನಡೆಯುತ್ತಾರೆ; ಹಿತ್ತಾಳೆಯೂ ಕಬ್ಬಿಣವೂ ಆಗಿದ್ದಾರೆ; ಅವರೆಲ್ಲರೂ ಕೆಡಿಸುವವರೇ.
- Hosea 6:5 ಹೋಶೇಯ 6:5ಆದದರಿಂದ ನಾನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು ನನ್ನ ಬಾಯಿ ಮಾತುಗಳಿಂದ ಅವರನ್ನು ಕೊಂದುಹಾಕಿದ್ದೇನೆ; ನಿನ್ನ ನ್ಯಾಯತೀರ್ಪುಗಳು ಬೆಳಕಿನ ಹಾಗೆ ಹೊರಟವು.