Hosea · chapter 8 · verse 2
Hosea 8:2 in Kannada
ಇಸ್ರಾಯೇಲಿ ನವರು--ನನ್ನ ದೇವರೇ, ನಾವು ನಿನ್ನನ್ನು ತಿಳಿದಿದ್ದೇವೆ ಎಂದು ನನಗೆ ಕೂಗುವರು.
Israayeli navaru--nanna devare, naavu ninnannu tilididdeve endu nanage kooguvaru.
Hosea 8:2 in English
- King James Version (KJV)
- Israel shall cry unto me, My God, we know thee.
- World English Bible (WEB)
- They cry to me, ‘My God, we, Israel, acknowledge you!’
- American Standard Version (ASV)
- They shall cry unto me, My God, we Israel know thee.
- Bible in Basic English (BBE)
- They will send up to me a cry for help: We, Israel, have knowledge of you, O God of Israel.
- Darby Translation (DBY)
- They shall cry unto me, My God, we know thee; [we], Israel.
- Webster's Bible (WBS)
- Israel shall cry to me, My God, we know thee.
- Young's Literal Translation (YLT)
- To Me they cry, 'My God, we — Israel — have known Thee.'
Read in context
- 1ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.
- 2ಇಸ್ರಾಯೇಲಿ ನವರು--ನನ್ನ ದೇವರೇ, ನಾವು ನಿನ್ನನ್ನು ತಿಳಿದಿದ್ದೇವೆ ಎಂದು ನನಗೆ ಕೂಗುವರು.
- 3ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ. ಶತ್ರುವು ಅವನನ್ನು ಹಿಂದಟ್ಟುವನು.
- 4ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
Cross references
- Matthew 7:21 ಮತ್ತಾಯನು 7:21ಕರ್ತನೇ, ಕರ್ತನೇ ಎಂದು ನನಗೆ ಹೇಳುವ ಪ್ರತಿಯೊಬ್ಬನು ಪರಲೋಕರಾಜ್ಯದಲ್ಲಿ ಪ್ರವೇಶಿಸು ವದಿಲ್ಲ; ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ಅದರಲ್ಲಿ ಪ್ರವೇಶಿ ಸುವನು.
- Titus 1:16 ತೀತನಿಗೆ 1:16ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
- Jeremiah 7:4 ಯೆರೆಮೀಯ 7:4ಇವುಗಳೇ ಕರ್ತನ ಆಲಯ, ಕರ್ತನ ಆಲಯ, ಕರ್ತನ ಆಲಯ ಎಂದು ಹೇಳುವ ಸುಳ್ಳು ಮಾತುಗಳಲ್ಲಿ ನಂಬಿಕೆ ಇಡಬೇಡಿರಿ.
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- 1 John 2:4 1 ಯೋಹಾನನು 2:4ಒಬ್ಬನು--ನಾನು ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ; ಸತ್ಯವು ಅವನಲ್ಲಿ ಇಲ್ಲ.
- Psalm 78:34–37 ಕೀರ್ತನೆಗಳು 78:34–37ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ ದೇವರು ತಮ್ಮ ಬಂಡೆ ಎಂದೂ ಮಹೋನ್ನತ ನಾದ ದೇವರು ತಮ್ಮ ವಿಮೋಚಕನೆಂದೂ ಜ್ಞಾಪಕ ಮಾಡಿಕೊಂಡರು. ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು. ಅವರ ಹೃದಯವು ಆತನ ಸಂಗಡ ಇರಲಿಲ್ಲ ಅವರು ಆತನ ಒಡಂಬಡಿ ಕೆಯಲ್ಲೂ ಸ್ಥಿರವಾಗಿರಲಿಲ್ಲ
- Matthew 25:11 ಮತ್ತಾಯನು 25:11ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು.
- Luke 13:25 ಲೂಕನು 13:25ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.
- Isaiah 48:1–2 ಯೆಶಾಯ 48:1–2ಇಸ್ರಾಯೇಲೆಂಬ ಹೆಸರಿನವರೂ ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ; ಕರ್ತನ ಹೆಸರಿನ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ. ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೈನ್ಯಗಳ ಕರ್ತನು ಎಂಬದು ಆತನ ಹೆಸರು.
- 2 Kings 10:16 2 ಅರಸುಗಳು 10:16ನೀನು ನನ್ನ ಸಂಗಡ ಬಂದು ಕರ್ತನಿಗೋ ಸ್ಕರ ನನಗುಂಟಾದ ಆಸಕ್ತಿಯನ್ನು ನೋಡು ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕೂಡ್ರಿಸಿಕೊಂಡನು.
- 2 Kings 10:29 2 ಅರಸುಗಳು 10:29ಆದರೆ ಬೇತೇಲ್, ದಾನ್ನಲ್ಲಿಯೂ ಇರುವ ಬಂಗಾರದ ಹೋರಿಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.
- Hosea 7:13–14 ಹೋಶೇಯ 7:13–14ಅವರಿಗೆ ಅಯ್ಯೋ, ಅವರು ನನ್ನನ್ನು ಬಿಟ್ಟು ಓಡಿ ಹೋಗಿದ್ದಾರೆ; ಅವರು ನಾಶವಾಗಲಿ! ಯಾಕಂದರೆ ನನಗೆ ಅವರು ವಿರುದ್ಧವಾಗಿ ದ್ರೋಹ ಮಾಡಿದ್ದಾರೆ; ನಾನು ಅವರಿಗೆ ವಿಮೋಚನೆ ಮಾಡಿದ್ದಾಗ್ಯೂ ಅವರು ನನಗೆ ವಿರುದ್ಧ ವಾಗಿ ಸುಳ್ಳು ಹೇಳಿದ್ದಾರೆ. ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.