Isaiah · chapter 1 · verse 22
Isaiah 1:22 in Kannada
ನಿನ್ನ ಬೆಳ್ಳಿಯು ಕಂದಾಯಿತು, ನಿನ್ನ ದ್ರಾಕ್ಷಾರಸವು ನೀರಿನೊಂದಿಗೆ ಬೆರಿಕೆಯಾಯಿತು.
Ninna belliyu kandaayitu, ninna draakshaarasavu neerinondige berikeyaayitu.
Isaiah 1:22 in English
- King James Version (KJV)
- Thy silver is become dross, thy wine mixed with water:
- World English Bible (WEB)
- Your silver has become dross, your wine mixed with water.
- American Standard Version (ASV)
- Thy silver is become dross, thy wine mixed with water.
- Bible in Basic English (BBE)
- Your silver is no longer true metal, your wine is mixed with water.
- Darby Translation (DBY)
- Thy silver is become dross, thy wine is mixed with water:
- Webster's Bible (WBS)
- Thy silver is become dross, thy wine mixed with water:
- Young's Literal Translation (YLT)
- Thy silver hath become dross, Thy drink polluted with water.
Read in context
- 20ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
- 21ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
- 22ನಿನ್ನ ಬೆಳ್ಳಿಯು ಕಂದಾಯಿತು, ನಿನ್ನ ದ್ರಾಕ್ಷಾರಸವು ನೀರಿನೊಂದಿಗೆ ಬೆರಿಕೆಯಾಯಿತು.
- 23ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ.
- 24ಆದದರಿಂದ ಸೈನ್ಯಗಳ ಕರ್ತನೂ ಇಸ್ರಾಯೇಲಿನ ಪರಾಕ್ರಮಿಯೂ ಆದ ಕರ್ತನು ಹೇಳುವದೇನಂದರೆ ಹಾ, ನನ್ನ ವಿರೋಧಿಗಳಿಂದ ನಾನು ಶಾಂತನಾಗಿರು ವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.
Cross references
- Lamentations 4:1–2 ಪ್ರಲಾಪಗಳು 4:1–2ಬಂಗಾರವು ಹೇಗೆ ಮುಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧ ಸ್ಥಳದ ಕಲ್ಲುಗಳು ಪ್ರತಿಯೊಂದು ಬೀದಿಯ ಬದಿಯಲ್ಲಿ ಸುರಿಯಲ್ಪಟ್ಟಿವೆ. ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!
- Ezekiel 22:18–22 ಯೆಹೆಜ್ಕೇಲನು 22:18–22ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ. ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು. ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ. ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.
- Hosea 4:18 ಹೋಶೇಯ 4:18ಅವರು ಮಿತಿವಿಾರಿ ಕುಡಿಯುತ್ತಾರೆ; ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ; ಅವರನ್ನು ಆಳುವವರು ನಾಚಿಕೆ ಯನ್ನು ಪ್ರೀತಿ ಮಾಡಿಯೇ ಮಾಡುತ್ತಾರೆ.ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸದೆ ಮತ್ತು ಅವರು ತಮ್ಮ ಬಲಿಗಳಿಂದ ನಾಚಿಕೆ ಪಡುವರು.
- Jeremiah 6:28–30 ಯೆರೆಮೀಯ 6:28–30ಅವರೆಲ್ಲರು ಘೋರವಾಗಿ ತಿರುಗಿ ಬೀಳುವವರೇ; ಚಾಡಿಕೋರರಾಗಿ ನಡೆಯುತ್ತಾರೆ; ಹಿತ್ತಾಳೆಯೂ ಕಬ್ಬಿಣವೂ ಆಗಿದ್ದಾರೆ; ಅವರೆಲ್ಲರೂ ಕೆಡಿಸುವವರೇ. ತಿದಿಯು ಸುಡುತ್ತದೆ, ಬೆಂಕಿಯೊಳಗಿಂದ ಸೀಸವು ಕರಗುತ್ತದೆ; ಪುಟಕ್ಕೆ ಹಾಕುವವನು ವ್ಯರ್ಥವಾಗಿ ಹಾಕುತ್ತಾನೆ; ಕೆಟ್ಟವರು ಕಿತ್ತು ತೆಗೆಯಲ್ಪಡಲಿಲ್ಲ;ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ. ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ.
- 2 Corinthians 2:17 2 ಕೊರಿಂಥದವರಿಗೆ 2:17ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- Hosea 6:4 ಹೋಶೇಯ 6:4ಓ ಎಫ್ರಾಯಾಮೇ, ನಿನಗೆ ನಾನು ಏನು ಮಾಡಲಿ? ಓ ಯೆಹೂದವೇ, ನಿನಗೆ ನಾನು ಏನು ಮಾಡಲಿ? ನಿಮ್ಮ ಒಳ್ಳೇತನವು ಹೊತ್ತಾ ರೆಯ ಮೇಘದ ಹಾಗೆಯೂ ಮುಂಜಾನೆಯ ಮಂಜಿ ನಂತೆಯೂ ಹೋಗಿಬಿಡುತ್ತದೆ.