Isaiah · chapter 13 · verse 9
Isaiah 13:9 in Kannada
ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು.
Igo, kartana dinavu baruttade, bhoomiyannu haalumaaduvadakkoo allinda paapigalannu nirmoolamaaduvadakkoo adu kopodreka dindaloo teekshna roshadindaloo krooravaagiru vadu.
Isaiah 13:9 in English
- King James Version (KJV)
- Behold, the day of the LORD cometh, cruel both with wrath and fierce anger, to lay the land desolate: and he shall destroy the sinners thereof out of it.
- World English Bible (WEB)
- Behold, the day of the LORD comes, cruel, with wrath and fierce anger; to make the land a desolation, and to destroy its sinners out of it.
- American Standard Version (ASV)
- Behold, the day of Jehovah cometh, cruel, with wrath and fierce anger; to make the land a desolation, and to destroy the sinners thereof out of it.
- Bible in Basic English (BBE)
- See, the day of the Lord is coming, cruel, with wrath and burning passion: to make the land a waste, driving the sinners in it to destruction.
- Darby Translation (DBY)
- Behold, the day of Jehovah cometh, cruel both with wrath and fierce anger, to lay the earth desolate; and he will destroy the sinners thereof out of it.
- Webster's Bible (WBS)
- Behold, the day of the LORD cometh, cruel both with wrath and fierce anger, to lay the land desolate: and he will destroy its sinners out of it.
- Young's Literal Translation (YLT)
- Lo, the day of Jehovah doth come, Fierce, with wrath, and heat of anger, To make the land become a desolation, Yea, its sinning ones He destroyeth from it.
Read in context
- 7ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.
- 8ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು.
- 9ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು.
- 10ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ.
- 11ಅವರ ಕೆಟ್ಟವುಗಳಿಗೋಸ್ಕರವೂ ದುಷ್ಟರ ಅಪ ರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸು ವೆನು; ಗರ್ವಿಷ್ಟರ ಅಹಂಕಾರವನ್ನು ನಿಲ್ಲಿಸಿಬಿಡುವೆನು, ಭಯಂಕರವಾದ ಹೆಮ್ಮೆಯನ್ನು ತಗ್ಗಿಸುವೆನು.
Cross references
- Nahum 1:6 ನಹೂಮ 1:6ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- Malachi 4:1 ಮಲಾಕಿಯ 4:1ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Isaiah 13:15–18 ಯೆಶಾಯ 13:15–18ಸಿಕ್ಕಿದ ಪ್ರತಿಯೊಬ್ಬನೂ ಇರಿಯಲ್ಪಡುವನು; ಅವರೊಂದಿಗೆ ಸೇರಿಕೊಂಡ ಪ್ರತಿಯೊಬ್ಬನೂ ಕತ್ತಿಯಿಂದ ಬೀಳು ವನು. ಅವರ ಮಕ್ಕಳೂ ಅವರ ಕಣ್ಣೆದುರಿಗೆ ತುಂಡು ತುಂಡಾಗುವಂತೆ ಅಪ್ಪಳಿಸಲ್ಪಡುವರು; ಅವರ ಮನೆ ಗಳು ಸೂರೆಯಾಗುವವು; ಅವರ ಪತ್ನಿಯರು ಕೆಡಿ ಸಲ್ಪಡುವರು. ಇಗೋ, ಬೆಳ್ಳಿಯನ್ನು ಲಕ್ಷಿಸದೆ ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧ ವಾಗಿ ನಾನು ಎಬ್ಬಿಸುವೆನು. ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ.
- Isaiah 13:6 ಯೆಶಾಯ 13:6ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.
- Jeremiah 50:40–42 ಯೆರೆಮೀಯ 50:40–42ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು. ಅವರು ಬಿಲ್ಲನ್ನೂ ಭಲ್ಲೆಯನ್ನೂ ಹಿಡಿಯುವರು; ಅವರು ಕ್ರೂರರು; ಅಂತಃಕರುಣೆ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುವದು; ಬಾಬೆಲಿನ ಮಗಳೇ, ನಿನಗೆ ವಿರೋಧವಾಗಿ ಯುದ್ಧಕ್ಕೆ ಸಿದ್ಧವಾಗಿ ರುವ ಪುರುಷರ ಹಾಗೆ ಕುದುರೆಗಳನ್ನು ಹತ್ತಿಕೊಂಡು ಬರುವರು.
- Nahum 1:2 ನಹೂಮ 1:2ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
- Psalm 104:35 ಕೀರ್ತನೆಗಳು 104:35ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.
- Isaiah 47:10–15 ಯೆಶಾಯ 47:10–15ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು ನನ್ನನ್ನು ಯಾರೂ ನೋಡುವದಿಲ್ಲವೆಂದು ಹೇಳಿದಿ. ನಿನ್ನ ಜ್ಞಾನವು, ನಿನ್ನ ತಿಳುವಳಿಕೆಯು ನಿನ್ನನ್ನು ದಾರಿತಪ್ಪಿಸಿದ್ದ ರಿಂದ ನಿನ್ನ ಹೃದಯದಲ್ಲಿ--ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ ಎಂದು ಅಂದು ಕೊಂಡಿ. ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು. ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು. ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ. ಇಗೋ, ಅವರೆಲ್ಲಾ ಕೂಳೆ ಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡು ವದು, ಜ್ವಾಲೆಯ ಶಕ್ತಿಯಿಂದ ತಮ್ಮನ್ನು ರಕ್ಷಿಸಿಕೊಳ್ಳ ಲಾರರು; ಇಲ್ಲವೆ ಕಾಯಿಸಿಕೊಳ್ಳುವದಕ್ಕೆ ಕೆಂಡವಿರು ವದಿಲ್ಲ, ಹತ್ತಿರ ಕೂತುಕೊಳ್ಳಲು ಬೆಂಕಿ ಇಲ್ಲ.ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು. ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
- Jeremiah 6:22–23 ಯೆರೆಮೀಯ 6:22–23ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ. ಅವರು ಬಿಲ್ಲನ್ನೂ ಬಲ್ಲೆಯನ್ನೂ ಹಿಡಿದ ಕ್ರೂರಿಗಳಾಗಿದ್ದಾರೆ, ಕನಿಕರ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುತ್ತದೆ; ಕುದುರೆ ಗಳ ಮೇಲೆ ಸವಾರಿ ಮಾಡುತ್ತಾರೆ; ಚೀಯೋನಿನ ಕುಮಾರಿಯೇ, ನಿನಗೆ ವಿರೋಧವಾಗಿ ಯುದ್ದ ಮಾಡುವ ಮನುಷ್ಯರಂತೆ ಸಿದ್ಧಮಾಡಿಕೊಂಡಿದ್ದಾರೆ;
- Jeremiah 51:35–58 ಯೆರೆಮೀಯ 51:35–58ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ; ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು. ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು. ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ. ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು. ಶೇಷಕ್ ಹೇಗೆ ಹಿಡಿಯಲ್ಪಟ್ಟಿದೆ, ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; ಬಾಬೆಲ್ ಜನಾಂಗಗಳೊಳಗೆ ಹೀಗೆ ವಿಸ್ಮಯಗೊಳಗಾಯಿತು! ಬಾಬೆಲಿನ ಮೇಲೆ ಸಮುದ್ರವು ಬಂತು; ಅದರ ತೆರೆಗಳ ಸಮೂಹದಿಂದ ಮುಚ್ಚಲ್ಪಟ್ಟಿದೆ. ಅದರ ಪಟ್ಟಣಗಳು ಹಾಳಾದವು; ಅವು ಒಣನೆಲವೂ ಅಡವಿಯೂ ಯಾರೂ ವಾಸಮಾಡದೆ, ಮನುಷ್ಯನ ಮಗನು ಹಾದುಹೋಗದೆ ಇರುವ ದೇಶವೂ ಆಗಿವೆ. ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು. ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ. ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು. ಆದದರಿಂದ ಇಗೋ, ದಿನಗಳು ಬರುವವು; ಆಗ ನಾನು ಬಾಬೆಲಿನ ವಿಗ್ರಹಗಳಿಗೆ ನ್ಯಾಯತೀರಿ ಸುವೆನು. ಅದರ ದೇಶವೆಲ್ಲಾ ನಾಚಿಕೆಪಡುವದು; ಕೊಲ್ಲಲ್ಪಟ್ಟವರು ಅದರ ಮಧ್ಯದಲ್ಲಿ ಬೀಳುವರು. ಆಗ ಆಕಾಶವೂ ಭೂಮಿಯೂ ಅವುಗಳಲ್ಲಿರುವ ಸಮಸ್ತವೂ ಬಾಬೆಲಿನ ವಿಷಯವಾಗಿ ಹಾಡುವೆವು. ಸೂರೆ ಮಾಡುವವರು ಉತ್ತರದಿಂದ ಅದಕ್ಕೆ ವಿರೋಧ ವಾಗಿ ಬರುವರೆಂದು ಕರ್ತನು ಅನ್ನುತ್ತಾನೆ. ಬಾಬೆಲು ಇಸ್ರಾಯೇಲಿನ ಕೊಲ್ಲಲ್ಪಟ್ಟವರನ್ನು ಬೀಳಿಸಿದ ಹಾಗೆ ಬಾಬೆಲಿನ ಸಮಸ್ತ ದೇಶದಲ್ಲಿ ಕೊಲ್ಲಲ್ಪಟ್ಟವರು ಬೀಳು ವರು. ಕತ್ತಿಗೆ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ; ದೂರದಲ್ಲಿ ಕರ್ತನನ್ನು ಜ್ಞಾಪಕಮಾಡಿ ಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ. ನಾಚಿಕೆಪಡುತ್ತೇವೆ, ನಿಂದೆಯನ್ನು ಕೇಳಿದ್ದೇವೆ; ಅವಮಾನ ನಮ್ಮ ಮುಖಗಳನ್ನು ಮುಚ್ಚಿದೆ; ಅನ್ಯರು ಕರ್ತನ ಆಲಯದ ಪರಿಶುದ್ಧ ಸ್ಥಳಗಳಲ್ಲಿ ಬಂದಿದ್ದಾರೆ. ಆದದರಿಂದ ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅವಳ ಕೆತ್ತಿದ ವಿಗ್ರಹಗಳಿಗೆ ನ್ಯಾಯತೀರಿಸುತ್ತೇನೆ. ಅವಳ ದೇಶದಲ್ಲೆಲ್ಲಾ ಗಾಯಪಟ್ಟವರು ನರಳುವರು. ಬಾಬೆಲ್ ಆಕಾಶಕ್ಕೆ ಏರಿದರೂ ಅದರ ಬಲದ ಉನ್ನತ ಸ್ಥಾನವನ್ನು ಭದ್ರಮಾಡಿದರೂ ಸೂರೆಮಾಡು ವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರೆಂದು ಕರ್ತನು ಅನ್ನುತ್ತಾನೆ. ಬಾಬೆಲಿನಿಂದ ಕೂಗುವ ಶಬ್ದವು! ಕಸ್ದೀಯರ ದೇಶದಿಂದ ಮಹಾನಾಶನವು ಬರುವದು. ಕರ್ತನು ಬಾಬೆಲನ್ನು ಸೂರೆಮಾಡಿ ದ್ದಾನೆ; ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿ ದ್ದಾನೆ; ಅವಳ ತೆರೆಗಳು ಬಹಳ ನೀರುಗಳ ಹಾಗೆ ಘೋಷಿಸುವಾಗ ಅವುಗಳ ಶಬ್ದದ ಧ್ವನಿ ಹೊರಟಿತು. ಸೂರೆ ಮಾಡುವವನು ಅದರ ಮೇಲೆ ಅಂದರೆ ಬಾಬೆಲಿನ ಮೇಲೆಯೇ ಬಂದಿದ್ದಾನೆ; ಅದರ ಪರಾಕ್ರಮಶಾಲಿಗಳು ಹಿಡಿಯಲ್ಪಟ್ಟಿದ್ದಾರೆ; ಅವಳ ಬಿಲ್ಲುಗಳು ಮುರಿಯಲ್ಪಟ್ಟಿವೆ; ಪ್ರತಿದಂಡನೆಗಳ ದೇವರಾದ ಕರ್ತನು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವನು. ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
- Proverbs 2:22 ಜ್ಞಾನೋಕ್ತಿಗಳು 2:22ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.
- Revelation 18:8 ಪ್ರಕಟನೆ 18:8ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.