Isaiah · chapter 14 · verse 4
Isaiah 14:4 in Kannada
ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ.
Heege hinsakanu kone gondanu, bangaarada pattanavu summane ide.
Isaiah 14:4 in English
- King James Version (KJV)
- That thou shalt take up this proverb against the king of Babylon, and say, How hath the oppressor ceased! the golden city ceased!
- World English Bible (WEB)
- that you will take up this parable against the king of Babylon, and say, “How the oppressor has ceased! The golden city has ceased!”
- American Standard Version (ASV)
- that thou shalt take up this parable against the king of Babylon, and say, How hath the oppressor ceased! the golden city ceased!
- Bible in Basic English (BBE)
- That you will take up this bitter song against the king of Babylon, and say, How has the cruel overseer come to an end! He who was lifted up in pride is cut off;
- Darby Translation (DBY)
- that thou shalt take up this proverb against the king of Babylon, and say, How hath the oppressor ceased, — the exactress of gold ceased!
- Webster's Bible (WBS)
- That thou shalt take up this proverb against the king of Babylon, and say, How hath the oppressor ceased! the golden city ceased!
- Young's Literal Translation (YLT)
- That thou hast taken up this simile Concerning the king of Babylon, and said, How hath the exactor ceased,
Read in context
- 2ಜನರು ಅವರನ್ನು ತೆಗೆದುಕೊಂಡು ತಮ್ಮ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಕರ್ತನ ದೇಶದಲ್ಲಿ ಆ ಜನಾಂಗದ ವರನ್ನು ಗಂಡು ಹೆಣ್ಣಾಳುಗಳನ್ನಾಗಿ (ದಾಸದಾಸಿಯ ರನ್ನಾಗಿ) ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದ ವರನ್ನು ಸೆರೆಹಿಡಿಯುವರು, ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು.
- 3ಕರ್ತನು ನಿಮ್ಮ ಸಂಕಟದಿಂದಲೂ ಕಳವಳದಿಂದ ಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಸಾಮತಿಯನ್ನು (ಪದ್ಯವನ್ನು) ನೀವು ಹೀಗೆ ಎತ್ತಿ ಹೇಳಬೇಕು.
- 4ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ.
- 5ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ
- 6ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.
Cross references
- Isaiah 49:26 ಯೆಶಾಯ 49:26ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
- Revelation 18:5–8 ಪ್ರಕಟನೆ 18:5–8ಅವಳ ಪಾಪಗಳು ಆಕಾಶದ ವರೆಗೂ ಮುಟ್ಟಿವೆ. ದೇವರು ಅವಳ ದ್ರೋಹಗಳನ್ನು ಜ್ಞಾಪಿಸಿಕೊಂಡಿದ್ದಾನೆ. ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ. ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.
- Daniel 2:38 ದಾನಿಯೇಲನು 2:38ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.
- Isaiah 51:23 ಯೆಶಾಯ 51:23ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Revelation 18:16 ಪ್ರಕಟನೆ 18:16ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ,
- Jeremiah 51:34–35 ಯೆರೆಮೀಯ 51:34–35ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ. ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು.
- Jeremiah 51:20–24 ಯೆರೆಮೀಯ 51:20–24ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ. ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
- Revelation 13:15–17 ಪ್ರಕಟನೆ 13:15–17ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು. ಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುತ್ತದೆ.ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
- Jeremiah 27:6–7 ಯೆರೆಮೀಯ 27:6–7ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ. ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು.
- Revelation 17:6 ಪ್ರಕಟನೆ 17:6ಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕ
- Jeremiah 50:22–23 ಯೆರೆಮೀಯ 50:22–23ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು. ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು!
- Isaiah 13:19 ಯೆಶಾಯ 13:19ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು.