Isaiah · chapter 17 · verse 9
Isaiah 17:9 in Kannada
ಆ ದಿವಸದಲ್ಲಿ ಅವನ ಬಲ ವಾದ ಪಟ್ಟಣಗಳು ಬಿಟ್ಟುಬಿಟ್ಟ ಅರಣ್ಯಗಳ ಹಾಗೆಯೂ ಇಸ್ರಾಯೇಲಿನ ಮಕ್ಕಳ ಮುಂದೆ ಬಿಡಲ್ಪಟ್ಟ ಕೊನೆಗಳ ಹಾಗೆಯೂ ಇದ್ದು ಹಾಳಾಗಿರುವದು.
Aa divasadalli avana bala vaada pattanagalu bittubitta aranyagala haageyoo israayelina makkala munde bidalpatta konegala haageyoo iddu haalaagiruvadu.
Isaiah 17:9 in English
- King James Version (KJV)
- In that day shall his strong cities be as a forsaken bough, and an uppermost branch, which they left because of the children of Israel: and there shall be desolation.
- World English Bible (WEB)
- In that day, their strong cities will be like the forsaken places in the woods and on the mountain top, which were forsaken from before the children of Israel; and it will be a desolation.
- American Standard Version (ASV)
- In that day shall their strong cities be as the forsaken places in the wood and on the mountain top, which were forsaken from before the children of Israel; and it shall be a desolation.
- Bible in Basic English (BBE)
- In that day your towns will be like the waste places of the Hivites and the Amorites which the children of Israel took for a heritage, and they will come to destruction.
- Darby Translation (DBY)
- In that day shall his strong cities be as the forsaken tract in the woodland, and the mountain-top which they forsook before the children of Israel; and there shall be desolation.
- Webster's Bible (WBS)
- In that day shall his strong cities be as a forsaken bough, and an uppermost branch, which they left because of the children of Israel: and there shall be desolation.
- Young's Literal Translation (YLT)
- In that day are the cities of his strength As the forsaken thing of the forest, And the branch that they have left, Because of the sons of Israel, It also hath been a desolation.
Read in context
- 7ಆ ದಿನದಲ್ಲಿ ಮನುಷ್ಯನು ತನ್ನನ್ನು ಉಂಟು ಮಾಡಿದವನ ಮೇಲೆ ದೃಷ್ಟಿಯಿಡು ವನು ಇಸ್ರಾಯೇಲಿನ ಪರಿಶುದ್ಧನ ಕಡೆಗೆ ಅವನ ಕಣ್ಣುಗಳು ಲಕ್ಷಿಸುವವು.
- 8ಅವನು ತನ್ನ ಕೈಕೆಲಸ ವಾದ ಬಲಿಪೀಠಗಳನ್ನು ದೃಷ್ಟಿಸನು ತನ್ನ ಬೆರಳುಗಳು ಮಾಡಿದ್ದನೂಅಥವಾ ತೋಪುಗಳನ್ನೂ ವಿಗ್ರಹ ಗಳನ್ನೂ ನೋಡನು.
- 9ಆ ದಿವಸದಲ್ಲಿ ಅವನ ಬಲ ವಾದ ಪಟ್ಟಣಗಳು ಬಿಟ್ಟುಬಿಟ್ಟ ಅರಣ್ಯಗಳ ಹಾಗೆಯೂ ಇಸ್ರಾಯೇಲಿನ ಮಕ್ಕಳ ಮುಂದೆ ಬಿಡಲ್ಪಟ್ಟ ಕೊನೆಗಳ ಹಾಗೆಯೂ ಇದ್ದು ಹಾಳಾಗಿರುವದು.
- 10ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು ನಿನ್ನ ಬಲದ ಬಂಡೆ ಯನ್ನು ನೆನಸದೆ ಇದ್ದದರಿಂದ ನೀನು ರಮ್ಯವಾದ ಗಿಡಗಳನ್ನು ಸಸಿಯನ್ನು ನೆಡುವಿ, ಅಪರೂಪವಾದ ಸಸಿಗಳನ್ನು ಹಾಕುವಿ.
- 11ಸಸಿಯನ್ನು ಬೆಳೆಸಲು ಬೇಲಿ ಹಾಕಿದ ದಿನದಲ್ಲಿ ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆ ಯುವಂತೆ ಮಾಡುವಿ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವೇ.
Cross references
- Isaiah 27:10 ಯೆಶಾಯ 27:10ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
- Amos 3:11–15 ಆಮೋಸ 3:11–15ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ವಿರೋಧಿಯು ದೇಶದ ಸುತ್ತಲೂ ಇರುವನು; ನಿನ್ನಲ್ಲಿರುವ ನಿನ್ನ ಬಲವನ್ನು ತಗ್ಗಿಸುವನು; ನಿನ್ನ ಅರಮನೆಗಳು ಸೂರೆಯಾಗುವವು. ಕರ್ತನು ಹೀಗೆ ಹೇಳುತ್ತಾನೆ--ಕುರುಬರು ಸಿಂಹದ ಬಾಯಲ್ಲಿರುವ ಎರಡು ಕಾಲನ್ನು ಅಥವಾ ಕಿವಿಯ ಒಂದು ತುಂಡನ್ನು ಹೊರ ತೆಗೆಯುವ ಹಾಗೆ ಸಮಾರ್ಯ ದಲ್ಲಿ ಹಾಸಿಗೆಯ ಮೂಲೆಯಲ್ಲಿಯೂ ದಮಸ್ಕದಲ್ಲಿ ಸುಪ್ಪತ್ತಿಗೆಯಲ್ಲಿಯೂ ಇರುವ ಇಸ್ರಾಯೇಲಿನ ಮಕ್ಕಳು ತಪ್ಪಿಸಲ್ಪಡುವರು. ಸೈನ್ಯಗಳ ದೇವರಾದ ಕರ್ತನಾಗಿರುವ ದೇವರು ಹೇಳುವದೇನಂದರೆ--ನೀವು ಕೇಳಿ ಯಾಕೋಬಿನ ಮನೆತನದವರಿಗೆ ಸಾಕ್ಷಿಕೊಡಿರಿ. ಅದು--ನಾನು ಇಸ್ರಾಯೇಲಿನ ಅಪರಾಧಗಳನ್ನು ವಿಚಾರಿಸುವ ದಿನದಲ್ಲಿ ಬೇತೇಲಿನ ಯಜ್ಞವೇದಿಗಳನ್ನು ವಿಚಾರಿಸುವೆನು; ಯಜ್ಞವೇದಿಯ ಕೊಂಬುಗಳು ಕಡಿಯಲ್ಪಟ್ಟು ನೆಲಕ್ಕೆ ಉರುಳುವವು.ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತಮಂದಿರಗಳು ನಾಶವಾಗು ವವು ಮತ್ತು ದೊಡ್ಡ ಮನೆಗಳು ಕೊನೆಗಾಣುವವು ಎಂದು ಕರ್ತನು ಹೇಳುತ್ತಾನೆ. ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತಮಂದಿರಗಳು ನಾಶವಾಗು ವವು ಮತ್ತು ದೊಡ್ಡ ಮನೆಗಳು ಕೊನೆಗಾಣುವವು ಎಂದು ಕರ್ತನು ಹೇಳುತ್ತಾನೆ.
- Isaiah 17:4–5 ಯೆಶಾಯ 17:4–5ಆ ದಿವಸದಲ್ಲಿ ಆಗುವದೇನಂದರೆ--ಯಾಕೋ ಬಿನ ವೈಭವ ತಗ್ಗುವದು; ಅದರ ಮಾಂಸದ ಕೊಬ್ಬು ಕರಗಿಸಲ್ಪಡುವದು. ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ ರೆಫಾಯಾಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವದು.
- Micah 5:11 ಮೀಕ 5:11ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
- Amos 7:9 ಆಮೋಸ 7:9ಇಸಾಕನ ಉನ್ನತ ಸ್ಥಳಗಳು ನಾಶವಾಗುವವು; ಇಸ್ರಾಯೇಲ್ಯನ ಪರಿಶುದ್ಧ ಸ್ಥಳಗಳು ಹಾಳಾಗುವವು; ನಾನು ಕತ್ತಿಯೊಂದಿಗೆ ಯಾರೊ ಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು ಅಂದನು.
- Micah 7:13 ಮೀಕ 7:13ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು.
- Isaiah 6:11–13 ಯೆಶಾಯ 6:11–13ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ ಕರ್ತನು ಮನುಷ್ಯರನ್ನು ದೂರಮಾಡುವ ವರೆಗೂ ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವ ವರೆಗೂ ಅದು ಇರುವುದು;ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು. ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- Micah 6:16 ಮೀಕ 6:16ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
- Hosea 13:15–16 ಹೋಶೇಯ 13:15–16ಅವನು ತನ್ನ ಸಹೋದರರ ಮಧ್ಯದಲ್ಲಿ ಫಲಭರಿತನಾಗಿದ್ದರೂ ಪೂರ್ವದ ಗಾಳಿಯು ಬರಲು ಕರ್ತನ ಗಾಳಿಯು ಅರಣ್ಯದಿಂದ ಏರಿಬರುವದು, ಆಗ ಅವನ ಬುಗ್ಗೆಯು ಒಣಗಿ ಅವನ ಒರತೆಯು ಬತ್ತಿ ಹೋಗುವದು. ಅವನು ಎಲ್ಲಾ ಪ್ರಿಯ ವಸ್ತುಗಳ ನಿಧಿಯನ್ನು ಹಾಳು ಮಾಡುವನು.ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು. ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.
- Isaiah 9:9–12 ಯೆಶಾಯ 9:9–12ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು; ಅತ್ತಿಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು ಎಂದು ಹೃದಯದ ಗರ್ವದಿಂದಲೂ ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯಾಮ್ಯ ರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವದು. ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು. ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
- Isaiah 7:16–20 ಯೆಶಾಯ 7:16–20ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು. ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು. ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು. ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು. ಅದೇ ದಿನದಲ್ಲಿ ಕರ್ತನು ನದಿಯ ಆಚೆಗಿರುವ ಅಶ್ಯೂರದ ರಾಜನೆಂಬವನಿಂದ ಬಾಡಿಗೆ ಕ್ಷೌರದ ಕತ್ತಿ ಯಿಂದ (ಯೆಹೂದದ) ತಲೆಯನ್ನು ಕಾಲುಕೂದ ಲನ್ನು ಬೋಳಿಸುವನು ಗಡ್ಡವನ್ನು ತೆಗೆದುಬಿಡುವನು.
- Isaiah 24:1–12 ಯೆಶಾಯ 24:1–12ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ. ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು. ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ. ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವದು. ಲೋಕವು ಸೊರಗಿ ಬಾಡಿಹೋಗುವದು ಭೂಮಿಯ ಗರ್ವಿಷ್ಠರು ಕುಗ್ಗಿಹೋಗುವರು. ಭೂನಿವಾಸಿಗಳು ನ್ಯಾಯಪ್ರಮಾಣಗಳನ್ನು ವಿಾರಿ ನಿಯಮಗಳನ್ನು ಬದ ಲಾಯಿಸಿ ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿ ದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆ ಯಿಂದ ಅಪವಿತ್ರವಾಗುವದು. ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ. ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು. ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು. ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ. ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ. ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.