Isaiah · chapter 18 · verse 1
Isaiah 18:1 in Kannada
ಓ ಐಥಿಯೋಪಿಯ ನದಿಗಳ ಆಚೆಯಲ್ಲಿರುವ ರೆಕ್ಕೆಗಳು ಪಟಪಟನೆ ಆಡುವ ನಾಡೇ, ಅಯ್ಯೋ!
O aithiyopiya nadigala aacheyalliruva rekkegalu patapatane aaduva naade, ayyo!
Isaiah 18:1 in English
- King James Version (KJV)
- Woe to the land shadowing with wings, which [is] beyond the rivers of Ethiopia:
- World English Bible (WEB)
- Ah, the land of the rustling of wings, which is beyond the rivers of Ethiopia;
- American Standard Version (ASV)
- Ah, the land of the rustling of wings, which is beyond the rivers of Ethiopia;
- Bible in Basic English (BBE)
- Ho! land of the sounding of wings, on the other side of the rivers of Ethiopia:
- Darby Translation (DBY)
- Ha! land shadowing with wings, which art beyond the rivers of Cush,
- Webster's Bible (WBS)
- Woe to the land shadowing with wings, which [is] beyond the rivers of Cush:
- Young's Literal Translation (YLT)
- Ho, land shadowed [with] wings, That [is] beyond the rivers of Cush,
Read in context
- 1ಓ ಐಥಿಯೋಪಿಯ ನದಿಗಳ ಆಚೆಯಲ್ಲಿರುವ ರೆಕ್ಕೆಗಳು ಪಟಪಟನೆ ಆಡುವ ನಾಡೇ, ಅಯ್ಯೋ!
- 2ಸಮುದ್ರ ಮಾರ್ಗದಿಂದಲೂ ಹಾ! ಆಪಿನ ದೋಣಿಗಳಲ್ಲಿ ನೀರಿನ ಮೇಲೆಯೂ ರಾಯಭಾರಿ ಗಳನ್ನು ಕಳುಹಿಸುವಂತಾದ್ದೇ! ಆಶ್ಚರ್ಯ ತೀವ್ರವಾದ ದೂತರೇ, ಚದುರಿಸಲ್ಪಟ್ಟಿರುವ ಮತ್ತು ಸೂರೆಯಾಗಿ ರುವ ಜನಾಂಗದವರ ಬಳಿಗೂ ಹುಟ್ಟಿದಂದಿನಿಂದ ಇಲ್ಲಿನ ವರೆಗೂ ಭಯಂಕರವಾದ ಜನರ ಬಳಿಗೂ ಮಹಾಬಲದಿಂದ ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ಜನಾಂಗದ ಬಳಿಗೂ ಹೋಗಿರಿ.
- 3ಭೂಲೋಕದ ನಿವಾಸಿಗಳೆಲ್ಲರೇ! ಭೂಮಿಯಲ್ಲಿ ವಾಸ ವಾಗಿರುವವರೆಲ್ಲರೇ! ಬೆಟ್ಟಗಳಲ್ಲಿ ಆತನು ಧ್ವಜವನ್ನು ಎತ್ತುವಾಗ ನೋಡಿರಿ; ಅವನು ತುತೂರಿಯನ್ನೂದು ವಾಗ ಕೇಳಿರಿ.
Cross references
- Zephaniah 3:10 ಚೆಫನ್ಯ 3:10ಕೂಷಿನ ನದಿಗಳ ಆಚೆಯಿಂದ ನನ್ನ ಭಕ್ತರೂ ಚದರಿ ಹೋದವರ ನನ್ನ ಮಗಳೂ ನನ್ನ ಕಾಣಿಕೆಯನ್ನು ತರುವರು.
- 2 Kings 19:9 2 ಅರಸುಗಳು 19:9ಆಗ ಅವನು ಕೂಷಿನ ಅರಸನಾದ ತಿರ್ಹಾಕನನ್ನು ಕುರಿತು--ಇಗೋ, ಅವನು ನಿನ್ನ ಮೇಲೆ ಯುದ್ಧ ಮಾಡಲು ಹೊರಟಿದ್ದಾನೆಂದು ಕೇಳಿದಾಗ ತಿರಿಗಿ ಹಿಜ್ಕೀ ಯನ ಬಳಿಗೆ ಸೇವಕರನ್ನು ಕಳುಹಿಸಿ ಹೇಳಿದ್ದೇನಂದರೆ
- Zephaniah 2:12 ಚೆಫನ್ಯ 2:12ಕೂಷ್ಯರೇ, ನೀವೂ ಸಹ ನನ್ನ ಕತ್ತಿ ಯಿಂದ ಕೊಲ್ಲಲ್ಪಡುವಿರಿ;
- Ezekiel 30:4–5 ಯೆಹೆಜ್ಕೇಲನು 30:4–5ಕತ್ತಿಯು ಐಗುಪ್ತದ ಮೇಲೆ ಬರುವದು, ಅಲ್ಲಿನ ಪ್ರಜೆಗಳು ಹತರಾಗಲು ಐಥಿಯೋಪ್ಯ ದಲ್ಲಿಯೂ ಸಂಕಟವಾಗುವದು; ಐಗುಪ್ತದ ಜನಸಮೂ ಹವು ಒಯ್ಯಲ್ಪಡುವದು ಅದರ ಅಸ್ತಿವಾರವು ಮುರಿದು ಹಾಳಾಗುವದು. ಐಥಿಯೋಪ್ಯ, ಲಿಬಿಯ ಮತ್ತು ಲಿಡಿಯ ಎಲ್ಲಾ ಮಿಶ್ರಜನರೂ ಕೂಬ್ಯರೂ ಮಿತ್ರರಾಜ್ಯ ದವರೂ ಅವರ ಸಂಗಡ ಕತ್ತಿಯಿಂದ ಹತರಾಗುವರು.
- Psalm 63:7 ಕೀರ್ತನೆಗಳು 63:7ನೀನು ನನ್ನ ಸಹಾಯಕನಾಗಿರುವದರಿಂದ ನಿನ್ನ ರೆಕ್ಕೆಗಳ ನೆರಳಿನಲ್ಲಿ ನಾನು ಉತ್ಸಾಹಪಡುವೆನು.
- Isaiah 31:1 ಯೆಶಾಯ 31:1ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವ ಬಲವನ್ನು ರಥವನ್ನು ಆಶ್ರಯಿಸುವವರಿಗೆ ಅಯ್ಯೊ! ರಥಗಳು ಬಹಳವೆಂದೂ ಸವಾರರು ಬಹು ಬಲಿಷ್ಠರೆಂದೂ ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವದಿಲ್ಲ; ಇಲ್ಲವೆ ಕರ್ತನನ್ನು ಆಶ್ರಯಿಸು (ಹುಡು ಕು)ವದಿಲ್ಲ.
- Psalm 61:4 ಕೀರ್ತನೆಗಳು 61:4ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
- Matthew 23:37 ಮತ್ತಾಯನು 23:37ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ
- Ruth 2:12 ರೂತಳು 2:12ನೀನು ಮಾಡಿದ್ದಕ್ಕೆ ಕರ್ತನು ನಿನಗೆ ಬದಲು ಕೊಡಲಿ; ಇಸ್ರಾಯೇಲ್ ದೇವರಾದ ಕರ್ತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಆತನಿಂದ ಬರುವ ನಿನ್ನ ಬಹುಮಾನ ಪರಿಪೂರ್ಣವಾಗಿರಲಿ ಅಂದನು.
- Psalm 36:7 ಕೀರ್ತನೆಗಳು 36:7ಓ ದೇವರೇ, ನಿನ್ನ ಪ್ರೀತಿ ಕರುಣೆಯು ಎಷ್ಟೋ ಶ್ರೇಷ್ಠ ವಾದದ್ದು! ಮನುಷ್ಯನ ಮಕ್ಕಳು ನಿನ್ನ ರೆಕ್ಕೆಗಳ ನೆರಳಿನಲ್ಲಿ ಭರವಸೆ ಇಡುತ್ತಾರೆ.
- Psalm 91:4 ಕೀರ್ತನೆಗಳು 91:4ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.
- Isaiah 20:3–6 ಯೆಶಾಯ 20:3–6ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು. ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು. ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.