Isaiah · chapter 19 · verse 17
Isaiah 19:17 in Kannada
ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೈನ್ಯಗಳ ಕರ್ತನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆ ಯನ್ನು ತಿಳಿದು ಬೆರಗಾಗುವನು.
Aiguptavu bechchi beeluvadakke yehooda deshavu kaaranavaaguvadu; ee deshada hesarannu keluva pratiyobbanoo sainyagala kartanu aiguptakke pratikoolavaagi maadikondiruva aalochane yannu tilidu beragaaguvanu.
Isaiah 19:17 in English
- King James Version (KJV)
- And the land of Judah shall be a terror unto Egypt, every one that maketh mention thereof shall be afraid in himself, because of the counsel of the LORD of hosts, which he hath determined against it.
- World English Bible (WEB)
- The land of Judah will become a terror to Egypt. Everyone to whom mention is made of it will be afraid, because of the plans of the LORD of Armies, which he determines against it.
- American Standard Version (ASV)
- And the land of Judah shall become a terror unto Egypt; every one to whom mention is made thereof shall be afraid, because of the purpose of Jehovah of hosts, which he purposeth against it.
- Bible in Basic English (BBE)
- And the land of Judah will become a cause of great fear to Egypt; whenever its name comes to mind, Egypt will be in fear before the Lord of armies because of his purpose against it.
- Darby Translation (DBY)
- And the land of Judah shall be a dismay unto Egypt: every one that thinketh of it shall be afraid for himself, because of the counsel of Jehovah of hosts, which he hath purposed against it.
- Webster's Bible (WBS)
- And the land of Judah shall be a terror to Egypt, every one that maketh mention of it shall be afraid in himself, because of the counsel of the LORD of hosts, which he hath determined against it.
- Young's Literal Translation (YLT)
- And the land of Judah hath been to Egypt for a cause of staggering, Every one who doth mention it, for himself feareth, Because of the counsel of Jehovah of Hosts, That He is counselling against it.
Read in context
- 15ಇಲ್ಲವೆ ಐಗುಪ್ತದಲ್ಲಿ ತಲೆಯಾಗಲಿ ಬಾಲವಾಗಲಿ ಕೊಂಬೆಯಾಗಲಿ ಒಂದು ಕಡ್ಡಿಯಾಗಲಿ ಸಾಧಿಸಲು ಮಾಡತಕ್ಕ ಕೆಲಸವು ಒಂದಾದರೂ ಐಗುಪ್ತದ ಲ್ಲಿರುವದಿಲ್ಲ.
- 16ಆ ದಿನದಲ್ಲಿ ಐಗುಪ್ತವು ಹೆಂಗಸರ ಹಾಗೆ ಇರು ವದು. ಸೈನ್ಯಗಳ ಕರ್ತನು ಅದರ ಮೇಲೆ ಆಡಿಸುವ ಕೈಯನ್ನು ಬೀಸುತ್ತಿರುವದರಿಂದ ಹೆದರಿ ಭಯಪಡು ವದು.
- 17ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೈನ್ಯಗಳ ಕರ್ತನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಆಲೋಚನೆ ಯನ್ನು ತಿಳಿದು ಬೆರಗಾಗುವನು.
- 18ಆ ದಿವಸದಲ್ಲಿ ಕಾನಾನಿನ ಭಾಷೆಯನ್ನಾಡುವ ಐಗುಪ್ತದ ಐದು ಪಟ್ಟಣಗಳು ಸೈನ್ಯಗಳ ಕರ್ತನಿಗೆ ಆಣೆ ಇಟ್ಟುಕೊಳ್ಳುವವು. ಅವುಗಳಲ್ಲಿ ಒಂದರ ಹೆಸರು ನಾಶಪುರ.
- 19ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಕರ್ತನಿಗೆ ಬಲಿಪೀಠವೂ ದೇಶದ ಎಲ್ಲೆಯಲ್ಲಿ ಕರ್ತನಿಗೆ ಒಂದು ಸ್ತಂಭವೂ ಇರುವವು.
Cross references
- Isaiah 14:24 ಯೆಶಾಯ 14:24ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು.
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- Ezekiel 29:6–7 ಯೆಹೆಜ್ಕೇಲನು 29:6–7ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು. ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದಿ; ಅವರು ನಿನ್ನನ್ನು ಊರಿಕೊಂಡಾಗ ನೀನು ಒಡೆದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.
- Isaiah 20:2–5 ಯೆಶಾಯ 20:2–5ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು. ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು. ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು. ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.
- Jeremiah 25:27–31 ಯೆರೆಮೀಯ 25:27–31ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ. ಅವರು ಪಾತ್ರೆಯನ್ನು ನಿನ್ನ ಕೈಯಿಂದ ತಕ್ಕೊಂಡು ಕುಡಿಯಲು ತಿರಸ್ಕರಿಸಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ಕುಡಿಯಬೇಕು. ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ. ಆದದರಿಂದ ನೀನು ಅವರಿಗೆ ವಿರೋಧವಾಗಿ ಈ ವಾಕ್ಯಗಳನ್ನೆಲ್ಲಾ ಪ್ರವಾದಿಸಿ ಅವರಿಗೆ ಹೇಳತಕ್ಕದ್ದೇ ನಂದರೆ--ಕರ್ತನು ಉನ್ನತದಿಂದ ಘರ್ಜಿಸಿ ತನ್ನ ಪರಿಶುದ್ಧ ನಿವಾಸದೊಳಗಿಂದ ತನ್ನ ಶಬ್ದವನ್ನು ಕೊಡು ವನು ತನ್ನ ನಿವಾಸದ ಮೇಲೆ ಗಟ್ಟಿಯಾಗಿ ಘರ್ಜಿಸಿ ದ್ರಾಕ್ಷೇ ತುಳಿಯುವವರ ಹಾಗೆ ಆರ್ಭಟವನ್ನು ಭೂನಿವಾಸಿಗಳೆಲ್ಲರಿಗೆ ವಿರೋಧವಾಗಿ ಎತ್ತುವನು. ಭೂಮಿಯ ಅಂತ್ಯಗಳ ವರೆಗೆ ಘೋಷವು ಬರು ವದು; ಕರ್ತನಿಗೆ ಜನಾಂಗಗಳ ಸಂಗಡ ವ್ಯಾಜ್ಯವದೆ; ಆತನು ಎಲ್ಲಾ ಮನುಷ್ಯರ ಸಂಗಡ ವಾದಿಸುವನು; ದುಷ್ಟರನ್ನು ಕತ್ತಿಗೆ ಒಪ್ಪಿಸುವೆನೆಂದು ಕರ್ತನು ಅನ್ನುತ್ತಾನೆ.
- Jeremiah 44:28–30 ಯೆರೆಮೀಯ 44:28–30ಆದರೆ ಕತ್ತಿಗೆ ತಪ್ಪಿಸಿಕೊಂಡು ಸ್ವಲ್ಪ ಜನರು ಐಗುಪ್ತದೇಶದೊಳಗಿಂದ ಯೆಹೂದ ದೇಶಕ್ಕೆ ಹಿಂತಿರುಗಿ ಹೋಗುವರು; ಆಗ ಐಗುಪ್ತ ದೇಶದಲ್ಲಿ ತಂಗುವದಕ್ಕೆ ಬಂದಿರುವ ಯೆಹೂದದ ಉಳಿದವರೆಲ್ಲಾ ನನ್ನ ಮಾತು ನಿಲ್ಲುವದೋ ಅವರ ಮಾತು ನಿಲ್ಲುವದೋ ಎಂಬದನ್ನು ತಿಳಿದುಕೊಳ್ಳುವರು. ನನ್ನ ಮಾತುಗಳು ನಿಮಗೆ ವಿರೋಧವಾಗಿ ಕೇಡಿಗಾಗಿ ನಿಶ್ಚಯವಾಗಿ ನಿಲ್ಲುವವೆಂದು ನೀವು ತಿಳಿಯುವ ಹಾಗೆ ನಾನು ಈ ಸ್ಥಳದಲ್ಲಿ ನಿಮ್ಮನ್ನು ದಂಡಿಸುವೆನಂಬದಕ್ಕೆ ಇದೇ ನಿಮಗೆ ಗುರುತೆಂದು ಕರ್ತನು ಅನ್ನುತ್ತಾನೆ.ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಶತ್ರು ವಾದಂಥ ಅವನ ಪ್ರಾಣವನ್ನು ಹುಡುಕಿದಂಥ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಹೇಗೆ ಒಪ್ಪಿಸಿದೆನೋ ಹಾಗೆಯೇ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣವನ್ನು ಹುಡು ಕುವ ಶತ್ರುಗಳ ಕೈಯಲ್ಲಿ ಅವನನ್ನು ಒಪ್ಪಿಸುತ್ತೇನೆ. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಶತ್ರು ವಾದಂಥ ಅವನ ಪ್ರಾಣವನ್ನು ಹುಡುಕಿದಂಥ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಹೇಗೆ ಒಪ್ಪಿಸಿದೆನೋ ಹಾಗೆಯೇ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣವನ್ನು ಹುಡು ಕುವ ಶತ್ರುಗಳ ಕೈಯಲ್ಲಿ ಅವನನ್ನು ಒಪ್ಪಿಸುತ್ತೇನೆ.
- Jeremiah 43:8–13 ಯೆರೆಮೀಯ 43:8–13ಆಗ ತಹಪನೇಸಿನಲ್ಲಿ ಕರ್ತನ ವಾಕ್ಯವು ಯೆರೆವಿಾ ಯನಿಗೆ ಉಂಟಾಯಿತು. ಹೇಗಂದರೆ--ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತಕ್ಕೊಂಡು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದದ ಮನುಷ್ಯರ ಮುಂದೆ ಬಚ್ಚಿಟ್ಟು ಅವರಿಗೆ ಹೇಳತಕ್ಕದ್ದೇನಂದರೆ-- ಇಸ್ರಾ ಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು; ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು. ಅವನು ಬಂದು ಐಗುಪ್ತದೇಶವನ್ನು ಹೊಡೆದು ಮರಣಕ್ಕೆ ಇರುವವರನ್ನು ಮರಣಕ್ಕೂ ಸೆರೆಗೆ ಇರುವವರನ್ನು ಸೆರೆಗೂ ಕತ್ತಿಗೆ ಇರುವವರನ್ನು ಕತ್ತಿಗೂ ಒಪ್ಪಿಸುವನು. ಇದಲ್ಲದೆ ನಾನು ಐಗುಪ್ತದ ದೇವರುಗಳ ಮನೆಗಳಲ್ಲಿ ಬೆಂಕಿ ಹಚ್ಚುವೆನು; ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು; ಕುರುಬನು ತನ್ನ ವಸ್ತ್ರವನ್ನು ಹೊದ್ದು ಕೊಳ್ಳುವಂತೆ ಐಗುಪ್ತದೇಶವನ್ನು ಹೊದ್ದುಕೊಂಡು ಸಮಾಧಾನವಾಗಿ ಅಲ್ಲಿಂದ ಹೊರಡುವನು.ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು. ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು.
- Isaiah 14:26–27 ಯೆಶಾಯ 14:26–27ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
- Isaiah 36:1 ಯೆಶಾಯ 36:1ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರದ ಅರಸ ನಾದ ಸನ್ಹೇರೀಬನು ಬಂದು ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
- Jeremiah 25:19 ಯೆರೆಮೀಯ 25:19ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ
- Isaiah 46:10–11 ಯೆಶಾಯ 46:10–11ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ. ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.