Isaiah · chapter 22 · verse 3
Isaiah 22:3 in Kannada
ನಿನ್ನ ಅಧಿಕಾರಸ್ಥರೆಲ್ಲರು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದು ನಿನ್ನಲ್ಲಿ ಸಿಕ್ಕಿದವರೆಲ್ಲ ರೊಂದಿಗೆ ಕಟ್ಟುಬಿದ್ದಿದ್ದಾರೆ.
Ninna adhikaarastharellaru ottige odi billugaararillade sereyaagiddaare. Dooradinda odibandu ninnalli sikkidavarella rondige kattubiddiddaare.
Isaiah 22:3 in English
- King James Version (KJV)
- All thy rulers are fled together, they are bound by the archers: all that are found in thee are bound together, [which] have fled from far.
- World English Bible (WEB)
- All your rulers fled away together. They were bound by the archers. All who were found by you were bound together. They fled far away.
- American Standard Version (ASV)
- All thy rulers fled away together, they were bound by the archers; all that were found of thee were bound together; they fled afar off.
- Bible in Basic English (BBE)
- All your rulers ... have gone in flight; all your strong ones have gone far away.
- Darby Translation (DBY)
- All thy rulers have fled together, they are taken prisoners without the bow: all that are found of thee are made prisoners together; they were fleeing far off.
- Webster's Bible (WBS)
- All thy rulers have fled together, they are bound by the archers: all that are found in thee are bound together, [who] have fled from far.
- Young's Literal Translation (YLT)
- All thy rulers fled together from the bow, Bound have been all found of thee, They have been kept bound together, Afar off they have fled.
Read in context
- 1ದಿವ್ಯ ದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ, ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
- 2ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣ ವೇ ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಕೊಂದುಹಾಕಲ್ಪ ಟ್ಟವರು ಕತ್ತಿಯಿಂದ ಕೊಂದುಹಾಕಲ್ಪಟ್ಟವರಲ್ಲ ಅಥವಾ ಯುದ್ಧದಲ್ಲಿ ಸತ್ತವರಲ್ಲ.
- 3ನಿನ್ನ ಅಧಿಕಾರಸ್ಥರೆಲ್ಲರು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದು ನಿನ್ನಲ್ಲಿ ಸಿಕ್ಕಿದವರೆಲ್ಲ ರೊಂದಿಗೆ ಕಟ್ಟುಬಿದ್ದಿದ್ದಾರೆ.
- 4ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.
- 5ಸೈನ್ಯಗಳ ದೇವರಾದ ಕರ್ತನಿಗೆ ದರ್ಶ ನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಗಲಿಬಿಲಿಯ ದಿನವದೆ, ಗೋಡೆ ಒಡೆಯೋಣವು ಪರ್ವತದ ಕಡೆಗೆ ಹೋಗೋಣವು ಉಂಟಾಗುವದು.
Cross references
- 2 Kings 25:4–7 2 ಅರಸುಗಳು 25:4–7ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು. ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು. ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು.
- Isaiah 3:1–8 ಯೆಶಾಯ 3:1–8ಇಗೋ, ಕರ್ತನು, ಸೈನ್ಯಗಳ ಕರ್ತನೆಂಬ ನಾನು ಜೀವನಕ್ಕೆ ಆಧಾರವಾದ ಅನ್ನಪಾನ ಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದ ದಿಂದಲೂ ತೆಗೆದುಬಿಡುವೆನು. ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಪರಿಜ್ಞಾನಿ, ಪ್ರಾಚೀನ ಮನುಷ್ಯನು, ಪಂಚಶತಾಧಿಪತಿ, ಘನ ವುಳ್ಳವನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆ ದುಬಿಡುವೆನು. ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು. ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು. ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು. ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.
- 2 Kings 25:18–21 2 ಅರಸುಗಳು 25:18–21ಕಾವಲುಗಾರರ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂರು ಮಂದಿ ದ್ವಾರಪಾಲಕರನ್ನೂ ಹಿಡಿದನು. ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು. ಕಾವಲಿನ ವರ ಅಧಿಪತಿಯಾದ ನೆಬೂಜರದಾನನು ಇವರನ್ನು ತಕ್ಕೊಂಡು ರಿಬ್ಲದಲ್ಲಿದ್ದ ಬಾಬೆಲಿನ ಅರಸನ ಬಳಿಗೆ ಬಂದನು. ಬಾಬೆಲಿನ ಅರಸನು ಹಮಾತ್ ರಿಬ್ಲ ದಲ್ಲಿ ಅವರನ್ನು ಹೊಡೆದು ಕೊಂದುಹಾಕಿದನು. ಈ ಪ್ರಕಾರವೇ ಯೆಹೂದ್ಯರು ತಮ್ಮ ದೇಶದಲ್ಲಿಂದ ಸೆರೆ ಯಾಗಿ ಒಯ್ಯಲ್ಪಟ್ಟರು.
- Jeremiah 52:24–27 ಯೆರೆಮೀಯ 52:24–27ಕಾವಲಿನ ಅಧಿಪತಿಯು ಪ್ರಧಾನ ಯಾಜಕನಾದ ಸೆರಾಯನನ್ನೂ ಎರಡನೇ ಯಾಜಕನಾದ ಚೆಫನ್ಯನನ್ನೂ ಮೂವರು ದ್ವಾರಪಾಲಕರನ್ನೂ ತಕ್ಕೊಂಡನು. ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು. ಇವರನ್ನು ಕಾವಲಿನ ಅಧಿಪತಿಯಾದ ನೆಬೂಜರ ದಾನನು ತಕ್ಕೊಂಡು ಬಾಬೆಲಿನ ಅರಸನ ಬಳಿಗೆ ರಿಬ್ಲಕ್ಕೆ ಒಯ್ದನು. ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು.
- Jeremiah 39:4–7 ಯೆರೆಮೀಯ 39:4–7ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು; ಅವನು ಬೈಲುಸೀಮೆಯ ಮಾರ್ಗ ವಾಗಿ ಹೊರಟನು. ಆದರೆ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಅವರು ಅವನನ್ನು ಹಿಡಿದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು. ಅಲ್ಲಿ ಅವನು ಅವನಿಗೆ ನ್ಯಾಯತೀರಿಸಿದನು. ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು. ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು.