Isaiah · chapter 24 · verse 11
Isaiah 24:11 in Kannada
ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ.
Draakshaarasada korateyinda beedigalalli arachuttaare; ullaasavella astamiside; deshada sadagaravu tolagihogide.
Isaiah 24:11 in English
- King James Version (KJV)
- [There is] a crying for wine in the streets; all joy is darkened, the mirth of the land is gone.
- World English Bible (WEB)
- There is a crying in the streets because of the wine. All joy is darkened. The mirth of the land is gone.
- American Standard Version (ASV)
- There is a crying in the streets because of the wine; all joy is darkened, the mirth of the land is gone.
- Bible in Basic English (BBE)
- There is a crying in the streets because of the wine; there is an end of all delight, the joy of the land is gone.
- Darby Translation (DBY)
- There is a crying for wine in the streets; all joy is darkened, the mirth of the land is gone;
- Webster's Bible (WBS)
- [There] is a crying for wine in the streets; all joy is darkened, the mirth of the land is gone.
- Young's Literal Translation (YLT)
- A cry over the wine [is] in out-places, Darkened hath been all joy, Removed hath been the joy of the land.
Read in context
- 9ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು.
- 10ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
- 11ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ.
- 12ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.
- 13ಎಣ್ಣೇ ಮರವನ್ನು ಬಡಿದ ಮೇಲೆಯೂ ದ್ರಾಕ್ಷೇ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವದು.
Cross references
- Hosea 7:14 ಹೋಶೇಯ 7:14ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.
- Lamentations 5:14–15 ಪ್ರಲಾಪಗಳು 5:14–15ಹಿರಿಯರು ಬಾಗಿಲನ್ನು ಪ್ರವೇಶಿಸುವದೂ ಯೌವನಸ್ಥರು ಸಂಗೀತವನ್ನು ಹಾಡುವದೂ ನಿಂತು ಹೋಯಿತು. ನಮ್ಮ ಹೃದಯದ ಸಂತೋಷವು ನಿಂತುಹೋಯಿತು; ನಮ್ಮ ನಾಟ್ಯವು ದುಃಖದ ಕಡೆಗೆ ತಿರುಗಿತು.
- Isaiah 24:7–9 ಯೆಶಾಯ 24:7–9ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು. ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು.
- Jeremiah 48:33 ಯೆರೆಮೀಯ 48:33ಫಲವುಳ್ಳ ಹೊಲದಿಂದಲೂ ಮೋವಾಬಿನ ದೇಶದಿಂದಲೂ ಸಂತೋಷವೂ ಉಲ್ಲಾ ಸವೂ ತೆಗೆಯಲ್ಪಟ್ಟಿವೆ; ದ್ರಾಕ್ಷೇಯಾಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಅರ್ಭಟದ ಸಂಗಡ ಅವರು ಯಾರೂ ತುಳಿಯುವದಿಲ್ಲ; ಆರ್ಭ ಟವೇ ಆರ್ಭಟವಾಗುವದಿಲ್ಲ.
- Isaiah 16:10 ಯೆಶಾಯ 16:10ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೆಗೆಯಲ್ಪಡುವವು; ದ್ರಾಕ್ಷೇತೋಟಗ ಳಲ್ಲಿ ಕೀರ್ತನೆಗಳಾಗಲಿ ಆರ್ಭಟವಾಗಲಿ ಇರುವದಿಲ್ಲ; ದ್ರಾಕ್ಷೇತೋಟಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ; ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿ ದ್ದೇನೆ.
- Luke 16:25 ಲೂಕನು 16:25ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.
- Amos 5:16–20 ಆಮೋಸ 5:16–20ಆದದ ರಿಂದ ಕರ್ತನು, ಸೈನ್ಯಗಳ ದೇವರಾದ ಕರ್ತನು, ಹೀಗೆ ಹೇಳುತ್ತಾನೆ ಎಲ್ಲಾ ಬೀದಿಗಳಲ್ಲೂ ಗೋಳಾಟ ಗಳು, ಹೆದ್ದಾರಿಗಳಲ್ಲೂ ಅಯ್ಯೋ, ಅಯ್ಯೋ ಅನ್ನು ವರು. ಒಕ್ಕಲಿಗರನ್ನು ದುಃಖಿಸುವದಕ್ಕೂ ಪ್ರಲಾಪಿ ಸುವದಕ್ಕೆ ತಿಳಿದವರನ್ನು ಗೋಳಾಟಕ್ಕೂ ಕರೆಯುವರು. ಎಲ್ಲಾ ದ್ರಾಕ್ಷೇತೋಟಗಳಲ್ಲೂ ಗೋಳಾಟವಿರು ವದು; ಯಾಕಂದರೆ ನಾನು ನಿನ್ನ ಮಧ್ಯೆ ಹಾದುಹೋಗು ವೆನೆಂದು ಕರ್ತನು ಹೇಳುತ್ತಾನೆ. ಕರ್ತನ ದಿನವನ್ನು ಅಪೇಕ್ಷಿಸುವ ನಿಮಗೆ ಅಯ್ಯೋ! ನಿಮ್ಮ ಅಂತ್ಯವೇನಾಗುವದು? ಅಯ್ಯೋ, ಕರ್ತನ ದಿನವು ನಿಮಗೆ ಬೆಳಕಲ್ಲ, ಕತ್ತಲೆಯೇ. ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ ಕರಡಿಯನ್ನು ಎದುರುಗೊಂಡ ಹಾಗೆಯೂ ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈ ಒರಗಿ ಸಿದಾಗ ಸರ್ಪವು ಕಚ್ಚಿದ ಹಾಗೆಯೂ ಇರುವದು. ಹೀಗೆ ಕರ್ತನ ದಿನವು ಬೆಳಕಲ್ಲ ಕತ್ತಲಲ್ಲವೇ? ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲಲ್ಲವೋ? ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ.
- Isaiah 8:22 ಯೆಶಾಯ 8:22ಅವರು ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವದು; ಅವರು ಕಾರ್ಗತ್ತಲೆಗೆ ತಳ್ಳಲ್ಪ ಡುವರು.
- Joel 1:15 ಯೋವೇಲ 1:15ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
- Isaiah 9:19 ಯೆಶಾಯ 9:19ಸೈನ್ಯಗಳ ಕರ್ತನ ಕೋಪೋದ್ರೇಕದಿಂದ ದೇಶವು ಕತ್ತಲೆಯಾಗಿದೆ; ಜನರು ಉರಿಯುವ ಸೌದೆಯಂತಿದ್ದಾರೆ; ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವದಿಲ್ಲ.
- Isaiah 32:13 ಯೆಶಾಯ 32:13ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು.
- Proverbs 31:6 ಜ್ಞಾನೋಕ್ತಿಗಳು 31:6ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು.