Isaiah · chapter 29 · verse 7
Isaiah 29:7 in Kannada
ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧ ವಾಗಿ ಯುದ್ಧ ಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ರಾತ್ರಿಯ ದರ್ಶನದ ಕನಸಿನಂತೆ ಮಾಯ ವಾಗುವದು.
Areeyelina mele horaadi adakkoo adara kotegoo viruddha vaagi yuddha maadi baadhisuva sakala janaangagala gumpu raatriya darshanada kanasinante maaya vaaguvadu.
Isaiah 29:7 in English
- King James Version (KJV)
- And the multitude of all the nations that fight against Ariel, even all that fight against her and her munition, and that distress her, shall be as a dream of a night vision.
- World English Bible (WEB)
- The multitude of all the nations that fight against Ariel, even all who fight against her and her stronghold, and who distress her, will be like a dream, a vision of the night.
- American Standard Version (ASV)
- And the multitude of all the nations that fight against Ariel, even all that fight against her and her stronghold, and that distress her, shall be as a dream, a vision of the night.
- Bible in Basic English (BBE)
- And all the nations making war on Ariel, and all those who are fighting against her and shutting her in with their towers, will be like a dream, like a vision of the night.
- Darby Translation (DBY)
- And the multitude of all the nations that war against Ariel, even all that war against her and her fortifications, and that distress her, shall be as a dream of a night vision.
- Webster's Bible (WBS)
- And the multitude of all the nations that fight against Ariel, even all that fight against her and her munition, and that distress her, shall be as a dream of a night-vision.
- Young's Literal Translation (YLT)
- And as a dream, a vision of night, hath been The multitude of all the nations Who are warring against Ariel, And all its warriors, and its bulwark, Even of those distressing her.
Read in context
- 5ಅದೂ ಅಲ್ಲದೆ ನಿನ್ನ ಅನ್ಯರ ಗುಂಪು ಸೂಕ್ಷ್ಮ ವಾದ ದೂಳಿನಂತಾಗುವದು, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರು ವದು; ಹೌದು, ಅದು ಕ್ಷಣ ಮಾತ್ರದಲ್ಲಿ ಫಕ್ಕನೆ ಆಗುವದು.
- 6ಸೈನ್ಯಗಳ ಕರ್ತನ ಕಡೆಯಿಂದಲೇ ನೀನು ಗುಡುಗಿನಿಂದಲೂ ಮಹಾಶಬ್ದದಿಂದಲೂ ಬಿರುಗಾಳಿ, ಸುಳಿಗಾಳಿಯಿಂದಲೂ ದಹಿಸುವ ಅಗ್ನಿಜ್ವಾಲೆಯಿಂದ ಲೂ ವಿಚಾರಿಸಲ್ಪಡುವಿ.
- 7ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧ ವಾಗಿ ಯುದ್ಧ ಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ರಾತ್ರಿಯ ದರ್ಶನದ ಕನಸಿನಂತೆ ಮಾಯ ವಾಗುವದು.
- 8ಹಸಿದ ಮನುಷ್ಯನು ಕನಸುಕಂಡು ಇಗೋ, ಉಣ್ಣುತ್ತಾನೆ ಆದರೆ ಅವನು ಎಚ್ಚತ್ತಾಗ ಪ್ರಾಣ ತುಂಬದ ಹಾಗೆಯೂ ಇಲ್ಲವೆ ಬಾಯಾರಿದ ವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತಾನೆ ಆದರೆ ಅವನು ಎಚ್ಚರವಾದಾಗ ಇಗೋ, ಬಲಹೀನನಾಗಿದ್ದು ಪ್ರಾಣ ಆಶಿಸುವ ಹಾಗೆಯೂ ಚೀಯೋನ್ ಪರ್ವ ತಕ್ಕೆ ವಿರೋಧವಾಗಿ ಯುದ್ಧಮಾಡುವ ಹಾಗೆಯೇ ಎಲ್ಲಾ ಜನಾಂಗಗಳ ಸಮೂಹವಿರುವದು.
- 9ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ.
Cross references
- Job 20:8 ಯೋಬನು 20:8ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು.
- Micah 4:11–12 ಮೀಕ 4:11–12ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ; ಅವರು--ಅವಳು ಕೆಡಿಸಲ್ಪಡಲಿ, ಚೀಯೋನಿನ ಮೇಲೆ ನಮ್ಮ ಕಣ್ಣುಗಳು ದೃಷ್ಟಿಸಲಿ ಎಂದು ಹೇಳುತ್ತಾರೆ. ಆದರೆ ಕರ್ತನ ಯೋಚನೆಗಳು ಅವರಿಗೆ ತಿಳಿಯವು, ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ; ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವನು.ಚೀಯೋನಿನ ಕುಮಾರ್ತೆಯೇ; ಎದ್ದು ತುಳಿ. ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸೆಗಳನ್ನು ತಾಮ್ರವಾಗಿಯೂ ಮಾಡುವೆನು. ನೀನು ಅನೇಕ ಜನಗಳನ್ನು ಪುಡಿಪುಡಿಮಾಡುವಿ; ಮತ್ತು ಅವರ ಲಾಭವನ್ನು ಕರ್ತನಿಗೂ ಅವರ ಸಂಪತ್ತನ್ನು ಸಮಸ್ತ ಭೂಮಿಯ ಕರ್ತನಿಗೂ ಪ್ರತಿಷ್ಠೆ ಮಾಡುವೆನು.
- Zechariah 12:9 ಜೆಕರ್ಯ 12:9ಆ ದಿನದಲ್ಲಿ ಆಗುವದೇ ನಂದರೆ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶ ಮಾಡುವದಕ್ಕೆ ನಾನು ಹುಡುಕುವೆನು.
- Zechariah 14:12–15 ಜೆಕರ್ಯ 14:12–15ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು. ಆ ದಿನದಲ್ಲಿ ಆಗುವದೇನಂದರೆ --ಕರ್ತನಿಂದಾದ ದೊಡ್ಡ ಕೋಲಾಹಲ ಅವರಲ್ಲಿ ಇರುವದು; ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಅವನ ಕೈ ತನ್ನ ನೆರೆಯವನ ಮೇಲೆ ಎತ್ತಲ್ಪಡುವದು. ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು. ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು.
- Psalm 73:20 ಕೀರ್ತನೆಗಳು 73:20ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- Isaiah 17:14 ಯೆಶಾಯ 17:14ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
- Revelation 20:8–9 ಪ್ರಕಟನೆ 20:8–9ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು. ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ದೇವರ ಬಳಿಯಿಂದ ಬೆಂಕಿಯು ಪರಲೋಕ ದೊಳಗಿಂದ ಇಳಿದು ಬಂದು ಅವರನ್ನು ನುಂಗಿಬಿಟ್ಟಿತು.
- Zechariah 12:3–5 ಜೆಕರ್ಯ 12:3–5ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು. ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು. ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು.
- Jeremiah 25:31–33 ಯೆರೆಮೀಯ 25:31–33ಭೂಮಿಯ ಅಂತ್ಯಗಳ ವರೆಗೆ ಘೋಷವು ಬರು ವದು; ಕರ್ತನಿಗೆ ಜನಾಂಗಗಳ ಸಂಗಡ ವ್ಯಾಜ್ಯವದೆ; ಆತನು ಎಲ್ಲಾ ಮನುಷ್ಯರ ಸಂಗಡ ವಾದಿಸುವನು; ದುಷ್ಟರನ್ನು ಕತ್ತಿಗೆ ಒಪ್ಪಿಸುವೆನೆಂದು ಕರ್ತನು ಅನ್ನುತ್ತಾನೆ. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವದು; ಭೂಮಿಯ ಮೇರೆಗಳಿಂದ ಮಹಾಬಿರುಗಾಳಿ ಎಬ್ಬಿಸ ಲ್ಪಡುವದು. ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯ ವರೆಗೆ ಕರ್ತ ನಿಂದ ಕೊಂದುಹಾಕಲ್ಪಟ್ಟವರು ಇರುವರು; ಅವರಿ ಗೋಸ್ಕರ ಗೋಳಾಡುವದಿಲ್ಲ; ಅವರನ್ನು ಕೂಡಿಸುವ ದಿಲ್ಲ; ಅವರನ್ನು ಹೂಣಿಡುವದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
- Isaiah 41:11–12 ಯೆಶಾಯ 41:11–12ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು; ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
- Zechariah 14:1–3 ಜೆಕರ್ಯ 14:1–3ಇಗೋ, ಕರ್ತನ ದಿನವು ಬರುತ್ತದೆ. ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ. ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು.
- Isaiah 37:36 ಯೆಶಾಯ 37:36ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.