Isaiah · chapter 33 · verse 18
Isaiah 33:18 in Kannada
ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
Aaga bhayavannu manassige tandukolluttaa bareyu vavanu elli? Angeekarisuvavanu elli? Buruju galannu (gopuragalannu) lekkamaadidavanu elli endu andukolluviri.
Isaiah 33:18 in English
- King James Version (KJV)
- Thine heart shall meditate terror. Where [is] the scribe? where [is] the receiver? where [is] he that counted the towers?
- World English Bible (WEB)
- Your heart will meditate on the terror. Where is he who counted? Where is he who weighed? Where is he who counted the towers?
- American Standard Version (ASV)
- Thy heart shall muse on the terror: Where is he that counted, where is he that weighed [the tribute]? where is he that counted the towers?
- Bible in Basic English (BBE)
- Your heart will give thought to the cause of your fear: where is the scribe, where is he who made a record of the payments, where is he by whom the towers were numbered?
- Darby Translation (DBY)
- Thy heart shall meditate on terror: Where is the scribe? where is the receiver? where is he that counted the towers?
- Webster's Bible (WBS)
- Thy heart shall meditate terror. Where [is] the scribe? where [is] the receiver? where [is] he that counted the towers?
- Young's Literal Translation (YLT)
- Thy heart doth meditate terror, Where [is] he who is counting? Where [is] he who is weighing? Where [is] he who is counting the towers?
Read in context
- 16ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
- 17ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವವು. ಅತಿವಿಸ್ತಾರವಾದ (ದೂರವಾಗಿರುವ) ದೇಶವನ್ನು ಕಣ್ಣು ತುಂಬಾ ನೋಡುವಿರಿ;
- 18ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
- 19ನೀನು ಕೇಳಕೂಡದ ಹಾಗೆ ಕಠಿಣವಾದ ಭಾಷೆಯೂ ತಿಳಿಯಕೂಡದ ಹಾಗೆ ಅಪರೂಪವಾದ ಮಾತೂ ಆಡಿದ ಜನರನ್ನು ನೀನು ನೋಡದೆ ಇರುವಿ.
- 20ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.
Cross references
- 1 Corinthians 1:20 1 ಕೊರಿಂಥದವರಿಗೆ 1:20ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ?
- Isaiah 38:9–22 ಯೆಶಾಯ 38:9–22ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣ ಹೊಂದಿದನಂತರ ಬರೆದದ್ದು-- ನನ್ನ ದಿವಸಗಳು ಕಡಿಮೆ ಮಾಡಲ್ಪಟ್ಟದ್ದರಿಂದ ನಾನು ಪಾತಾಳದ ದ್ವಾರ ಗಳೊಳಗೆ ಹೋಗಬೇಕು ನನ್ನ ಆಯುಷ್ಯದಲ್ಲಿ ಮಿಕ್ಕಾ ದದ್ದು ನನಗೆ ತಪ್ಪಿಹೋಯಿತು ಎಂದು ಅಂದು ಕೊಂಡನು. ಕರ್ತನನ್ನು, ಜೀವಿತರ ದೇಶದಲ್ಲಿಯೂ ಸಹ ಕರ್ತನನ್ನು ನೋಡೆನೆಂದೂ ಇನ್ನೂ ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ನೋಡಲಾರೆ ನಲ್ಲಾ ಎಂದು ಅಂದುಕೊಂಡೆನು. ನನ್ನ ಆಯುಷ್ಯ ಮುಗಿಯಿತು ಮತ್ತು ಕುರುಬನ ಗುಡಾರದಂತೆ ನನ್ನಿಂದ ತೆಗೆದುಹಾಕಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೇಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ. ಆತನು ಸಿಂಹದಂತೆ ಎಲುಬುಗಳನ್ನೆಲ್ಲಾ ಮುರಿದಿದ್ದಾಗ್ಯೂ ಬೆಳಗಿನ ವರೆಗೂ ತಾಳಿಕೊಂಡೇ ಇದ್ದೆನು; ಬೆಳಗಿನಿಂದ ರಾತ್ರಿಯೊಳಗೇ ನನ್ನನ್ನು ಕೊನೆಗಾಣಿಸುತ್ತೀ. ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು. ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು. ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ. ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು. ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು. ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು. ಯೆಶಾಯನು--ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಹುಣ್ಣಿನ ಮೇಲೆ ಇಟ್ಟರೆ ಅವನು ಬದುಕುವನೆಂದು ಹೇಳಿದ್ದನು.ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು. ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.
- Psalm 71:20 ಕೀರ್ತನೆಗಳು 71:20ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
- 2 Kings 15:19 2 ಅರಸುಗಳು 15:19ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.
- 2 Kings 18:14 2 ಅರಸುಗಳು 18:14ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀ ಷನ ಬಳಿಯಲ್ಲಿದ್ದ ಅಶ್ಶೂರಿನ ಅರಸನಿಗೆ--ನಾನು ಪಾಪಮಾಡಿದ್ದೇನೆ; ನನ್ನನ್ನು ಬಿಟ್ಟು ಹಿಂತಿರಿಗಿ ಹೋಗು; ನೀನು ನನ್ನ ಮೇಲೆ ಹೊರಿಸುವದನ್ನು ನಾನು ತಾಳಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿ ದನು. ಆಗ ಅಶ್ಶೂರಿನ ಅರಸನು ಯೆಹೂದದ ಅರಸನಾದ ಹಿಜ್ಕೀಯನಿಗೆ ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಲು ನೇಮಕ ಮಾಡಿದನು.
- Isaiah 17:14 ಯೆಶಾಯ 17:14ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
- 1 Samuel 30:6 1 ಸಮುವೇಲನು 30:6ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
- 2 Kings 18:31 2 ಅರಸುಗಳು 18:31ಹಿಜ್ಕೀಯನ ಮಾತು ಕೇಳಬೇಡಿರಿ. ಅಶ್ಶೂರಿನ ಅರ ಸನು ಹೇಳುವದೇನಂದರೆ--ನೀವು ಸಾಯದೆ ಬದು ಕುವ ಹಾಗೆ ಕಾಣಿಕೆಯಿಂದ ನನ್ನ ಸಂಗಡ ಒಡಂಬಡಿಕೆ ಮಾಡಿ ನನ್ನ ಬಳಿಗೆ ಹೊರಟು ಬನ್ನಿರಿ.
- Genesis 23:16 ಆದಿಕಾಂಡ 23:16ಅಬ್ರಹಾಮನು ಎಫ್ರೋನನ ಮಾತನ್ನು ಕೇಳಿದನು. ಆದದರಿಂದ ಹೇತನ ಮಕ್ಕಳಿಗೆ ಕೇಳುವಂತೆ ಎಫ್ರೋನನು ಹೇಳಿದ ಬೆಲೆ ಅಂದರೆ ವರ್ತಕರಲ್ಲಿ ನಡಿಯುವ ನಾಲ್ಕುನೂರು ಶೆಕೆಲು (ಬೆಳ್ಳಿಯನ್ನು) ತೂಗಿ ಅವನಿಗೆ ಕೊಟ್ಟನು.
- Psalm 31:22 ಕೀರ್ತನೆಗಳು 31:22ಆದರೆ ನಾನು ನಿನ್ನ ಕಣ್ಣುಗಳ ಎದುರಿನಿಂದ ಕಡಿದು ಹಾಕಲ್ಪಟ್ಟಿದ್ದೇನೆಂದು ಆತುರ ದಲ್ಲಿ ಹೇಳಿದೆನು; ಆದರೂ ನಾನು ಮೊರೆಯಿಡು ವಾಗ ನನ್ನ ವಿಜ್ಞಾಪನೆಗಳ ಸ್ವರವನ್ನು ನೀನು ಕೇಳಿದಿ.
- Isaiah 10:16–19 ಯೆಶಾಯ 10:16–19ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು. ಇಸ್ರಾಯೇಲಿನ ಬೆಳಕು ಬೆಂಕಿಯಾಗುವದು, ಅದರ ಪರಿಶುದ್ಧನು ಜ್ವಾಲೆ ಯಂತಿರುವನು; ಅದು ಒಂದೇ ದಿನದಲ್ಲಿ ಅವನ ಮುಳ್ಳು ದತ್ತೂರಿಗಳನ್ನು ದಹಿಸಿನುಂಗಿಬಿಡುವದು; ಅದು ದೇಹ ಮತ್ತು ಆತ್ಮಗಳನ್ನೂ ಅವನವನ ಹಾಗೂ ಫಲವತ್ತಾದ ಹೊಲವು ಹೊಂದಿರುವ ಘನತೆಯನ್ನೂ ದಹಿಸಿಬಿಡುವದು; ಅದು ಮೂರ್ಛೆ ಹೋಗುವ ರೋಗಿಯಂತಿರುವದು. ಅವನ ಉಳಿ ದವನ ವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆ ಯಾಗಿರುವದು.
- 1 Samuel 25:33–36 1 ಸಮುವೇಲನು 25:33–36ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ. ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು. ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು. ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.