Isaiah · chapter 36 · verse 8
Isaiah 36:8 in Kannada
ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು.
Haagaadare eega nanna yajamaananaada ashshoo rina arasanige honegaararannu kodu endu bedikolluttene. Aaga neenu avugala mele savaarimaaduvadakke janarannu koduvadakkaadare ninage eradu saavira kuduregalannu naanu kodu venu.
Isaiah 36:8 in English
- King James Version (KJV)
- Now therefore give pledges, I pray thee, to my master the king of Assyria, and I will give thee two thousand horses, if thou be able on thy part to set riders upon them.
- World English Bible (WEB)
- Now therefore, please make a pledge to my master the king of Assyria, and I will give you two thousand horses, if you are able on your part to set riders on them.
- American Standard Version (ASV)
- Now therefore, I pray thee, give pledges to my master the king of Assyria, and I will give thee two thousand horses, if thou be able on thy part to set riders upon them.
- Bible in Basic English (BBE)
- And now, take a chance with my master, the king of Assyria, and I will give you two thousand horses, if you are able to put horsemen on them.
- Darby Translation (DBY)
- And now engage, I pray thee, with my master the king of Assyria, and I will give thee two thousand horses, if thou be able on thy part to set riders upon them.
- Webster's Bible (WBS)
- Now therefore give pledges, I pray thee, to my master the king of Assyria, and I will give thee two thousand horses, if thou canst on thy part set riders upon them.
- Young's Literal Translation (YLT)
- 'And now, negotiate, I pray thee, with my lord the king of Asshur, and I give to thee two thousand horses, if thou art able to put for thee riders on them.
Read in context
- 6ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ.
- 7ಆದರೆ ನೀನು ನಮ್ಮ ದೇವರಾದ ಕರ್ತನಲ್ಲಿ ನಂಬಿಕೆಯಿಟ್ಟಿದ್ದೇವೆಂದು ನನಗೆ ಹೇಳಿದರೆ ಹಿಜ್ಕೀಯನು ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕೆಂಬದಾಗಿ ಯೆಹೂ ದಕ್ಕೂ ಯೆರೂಸಲೇಮಿಗೂ ಆಜ್ಞಾಪಿಸಿ, ಹಿಜ್ಕೀಯನು ಯಾವನ ಪೂಜಾ ಸ್ಥಳಗಳನ್ನೂ ಯಜ್ಞವೇದಿಗಳನ್ನೂ ತೆಗೆದುಹಾಕಿದ್ದಾನೋ ಅವನೇ ಅಲ್ಲವೋ?
- 8ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು.
- 9ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ.
- 10ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು.
Cross references
- 1 Samuel 17:40–43 1 ಸಮುವೇಲನು 17:40–43ತನ್ನ ಕೋಲನ್ನು ತನ್ನ ಕೈಯಲ್ಲಿ ಹಿಡಿದು ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆರಿಸಿಕೊಂಡು ಅವು ಗಳನ್ನು ತನಗಿರುವ ಕುರುಬರ ಚೀಲದಲ್ಲಿ ಹಾಕಿ ಕವಣೆ ಯನ್ನು ತನ್ನ ಕೈಯಲ್ಲಿ ಹಿಡುಕೊಂಡು ಆ ಫಿಲಿಷ್ಟಿಯನ ಬಳಿಗೆ ಹೋದನು. ಆಗ ಫಿಲಿಷ್ಟಿಯನು ತ್ವರೆಯಾಗಿ ದಾವೀದನ ಸವಿಾಪಕ್ಕೆ ಬಂದನು. ಗುರಾಣಿ ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದ ನನ್ನು ದೃಷ್ಟಿಸಿ ನೋಡಿ ಅವನು ಕೆಂಪಾದವನಾಗಿಯೂ ಸೌಂದರ್ಯ ರೂಪವುಳ್ಳವನಾಗಿಯೂ ಇರುವ ಹುಡು ಗನಾಗಿದ್ದದರಿಂದ ಅವನನ್ನು ತಿರಸ್ಕರಿಸಿ ದಾವೀದನಿಗೆ ನೀನು ಕೋಲು ಹಿಡುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು.
- Nehemiah 4:2–5 ನೆಹೆಮೀಯ 4:2–5ಈ ಬಲಹೀನರಾದ ಯೆಹೂ ದ್ಯರು ಮಾಡುವದೇನು? ತಮ್ಮನ್ನು ಬಲಪಡಿಸು ವರೋ? ಬಲಿಯನ್ನು ಅರ್ಪಿಸುವರೋ? ಒಂದೇ ದಿವಸದಲ್ಲಿ ತೀರಿಸುವರೋ? ಮಣ್ಣು ದಿಬ್ಬೆಗಳಲ್ಲಿರುವ ಸುಡಲ್ಪಟ್ಟ ಕಲ್ಲುಗಳನ್ನು ಉಜ್ಜೀವಿಸ ಮಾಡುವರೋ ಅಂದನು. ಇದಲ್ಲದೆ ಅಮ್ಮೋನ್ಯನಾದ ಟೋಬೀ ಯನು ಅವನ ಬಳಿಯಲ್ಲಿದ್ದು--ಒಂದು ನರಿಯು ಅವರು ಕಟ್ಟಿದರ ಮೇಲೆ ಹಾರಿದರೆ ಅದು ಅವರ ಕಲ್ಲುಗೋಡೆಯನ್ನು ಕೆಡವಿಹಾಕುವದು ಅಂದನು. ನಮ್ಮ ದೇವರೇ, ಕೇಳು; ಯಾಕಂದರೆ ನಾವು ತಿರಸ್ಕರಿಸಲ್ಪಟ್ಟವರಾಗಿದ್ದೇವೆ. ನೀನು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ತಿರುಗುವಂತೆ ಮಾಡಿ ಸೆರೆಯ ದೇಶದಲ್ಲಿ ಅವರನ್ನು ಕೊಳ್ಳೆಯಾಗಿ ಒಪ್ಪಿಸು. ಅವರು ಕಟ್ಟುವವರ ಮುಂದೆ ನಿನಗೆ ಕೋಪ ಎಬ್ಬಿಸಿದ್ದರಿಂದ ನೀನು ಅವರ ಅಕ್ರಮವನ್ನು ಮುಚ್ಚಬೇಡ. ಅವರ ಪಾಪವು ನಿನ್ನ ಮುಂದೆ ಅಳಿಸಲ್ಪಡದೆ ಇರಲಿ.
- 2 Kings 18:23 2 ಅರಸುಗಳು 18:23ಹಾಗಾದರೆ ಈಗ ನೀನು ದಯಮಾಡಿ ಅಶ್ಶೂರಿನ ಅರಸನಾದ ನನ್ನ ಯಜಮಾನನಿಗೆ ಹೊಣೆ ಗಾರರನ್ನು ಕೊಡು; ಈಗ ನೀನು ಅವುಗಳ ಮೇಲೆ ಏರುವವರನ್ನು ಇಡಲು ನಿನಗೆ ಸಾಮರ್ಥ್ಯವಿದ್ದರೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
- Psalm 123:3–4 ಕೀರ್ತನೆಗಳು 123:3–4ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು. ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು.
- 1 Kings 20:18 1 ಅರಸುಗಳು 20:18ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು.
- 1 Kings 20:10 1 ಅರಸುಗಳು 20:10ಆಗ ಬೆನ್ಹದದನು ಕಳುಹಿಸಿ--ನನ್ನನ್ನು ಹಿಂಬಾಲಿಸುವ ಸಮಸ್ತ ಜನರು ಕೈತುಂಬ ತಕ್ಕೊಳ್ಳಲು ಸಮಾರ್ಯದ ಧೂಳು ಸಾಕಾದರೆ ದೇವರುಗಳು ನನಗೆ ಹೀಗೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ ಎಂದು ಅವನಿಗೆ ಹೇಳಿ ಕಳುಹಿಸಿದನು.
- 2 Kings 14:14 2 ಅರಸುಗಳು 14:14ಕರ್ತನ ಆಲಯದಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ಬೆಳ್ಳಿಯನ್ನೂ ಎಲ್ಲಾ ಸಾಮಾನುಗಳನ್ನೂ ಹೊಣೆಗಾರ ರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ತಿರಿಗಿ ಹೋದನು.
- Psalm 20:7–8 ಕೀರ್ತನೆಗಳು 20:7–8ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳ ಲ್ಲಿಯೂ ಭರವಸವಿಡುತ್ತಾರೆ; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರನ್ನು ಜ್ಞಾಪಕಮಾಡುತ್ತೇವೆ. ಅವರು ಬೊಗ್ಗಿ ಬೀಳುತ್ತಾರೆ; ಆದರೆ ನಾವು ಎದ್ದು ನಿಂತುಕೊಳ್ಳುತ್ತೇವೆ.ಕರ್ತನೇ, ರಕ್ಷಿಸು; ನಾವು ಕರೆ ಯುವಾಗ ಅರಸನು ನಮಗೆ ಉತ್ತರ ಕೊಡಲಿ.
- Isaiah 10:13–14 ಯೆಶಾಯ 10:13–14ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ. ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು.