Isaiah · chapter 44 · verse 11
Isaiah 44:11 in Kannada
ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು.
Igo, avana sangadigarellaa naachikegolagaaguvaru; aa kelasa davaru manushya maatradavare; avarellaroo ottugoodikondu nintukollali, aadaroo avaru bhayapattu ottige lajjepaduvaru.
Isaiah 44:11 in English
- King James Version (KJV)
- Behold, all his fellows shall be ashamed: and the workmen, they [are] of men: let them all be gathered together, let them stand up; [yet] they shall fear, [and] they shall be ashamed together.
- World English Bible (WEB)
- Behold, all his fellows will be disappointed; and the workmen are mere men. Let them all be gathered together. Let them stand up. They will fear. They will be put to shame together.
- American Standard Version (ASV)
- Behold, all his fellows shall be put to shame; and the workmen, they are of men: let them all be gathered together, let them stand up; they shall fear, they shall be put to shame together.
- Bible in Basic English (BBE)
- Truly, all those who make use of secret arts will be put to shame, and their words of power are only words of men: let them all come forward together; they will all be in fear and be put to shame.
- Darby Translation (DBY)
- Behold, all his fellows shall be ashamed; and the workmen are but men. Let them all be gathered together, let them stand up: they shall fear, they shall be ashamed together.
- Webster's Bible (WBS)
- Behold, all his fellows shall be ashamed: and the workmen, they [are] of men: let them all be assembled, let them stand up; [yet] they shall fear, [and] they shall be ashamed together.
- Young's Literal Translation (YLT)
- Lo, all his companions are ashamed, As to artisans — they [are] of men, All of them gather together, they stand up, They fear, they are ashamed together.
Read in context
- 9ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು.
- 10ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು?
- 11ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು.
- 12ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ.
- 13ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು.
Cross references
- Isaiah 42:17 ಯೆಶಾಯ 42:17ಕೆತ್ತಿದ ವಿಗ್ರಹಗಳಲ್ಲಿ ನಂಬಿಕೆಯಿಡುವವರು ಎರಕಹೊಯ್ದ ವಿಗ್ರಹಗಳಿಗೆ ನೀವೇ ನಮ್ಮ ದೇವರುಗಳೆಂದು ಹೇಳುವ ವರು ಹಿಂದೆ ಬಿದ್ದು ನಾಚಿಕೆಗೆ ಈಡಾಗುವರು.
- Isaiah 45:16 ಯೆಶಾಯ 45:16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
- Psalm 97:7 ಕೀರ್ತನೆಗಳು 97:7ಕೆತ್ತಿದ ವಿಗ್ರಹಗಳನ್ನು ಸೇವಿಸಿ, ವಿಗ್ರಹಗಳಲ್ಲಿ ಹೆಮ್ಮೆಪಡುವ ವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಆತನನ್ನು ಆರಾಧಿಸಿರಿ.
- Isaiah 1:29 ಯೆಶಾಯ 1:29ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
- Jeremiah 2:26–27 ಯೆರೆಮೀಯ 2:26–27ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲಿನ ಮನೆತನ ದವರಿಗೆ ನಾಚಿಕೆಯಾಯಿತು; ಅವರಿಗೂ ಅವರ ಅರಸರಿಗೂ ಸಾಮಂತರಿಗೂ ಯಾಜಕರಿಗೂ ಅವರ ಪ್ರವಾದಿಗಳಿಗೂ ನಾಚಿಕೆಯಾಯಿತು. ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು.
- Isaiah 41:5–7 ಯೆಶಾಯ 41:5–7ದ್ವೀಪ ನಿವಾಸಿಗಳೆಲ್ಲರೂ ನೋಡಿ ಬೆರಗಾದರು; ಭೂಮಿಯ ಕಟ್ಟಕಡೆಯವರು ನಡುಗಿದರು. ಅವರ ಸವಿಾಪಕ್ಕೆ ಬಂದರು. ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯಮಾಡಿ ಮತ್ತು ಪ್ರತಿಯೊಬ್ಬನು ತನ್ನ ಸಹೋದರನಿಗೆ--ಧೈರ್ಯ ವಾಗಿರ್ರಿ ಎಂದು ಹೇಳಲಿ. ಹಾಗೆಯೇ ಮರಗೆಲಸ ದವನು ಅಕ್ಕಸಾಲಿಗನನ್ನು ಪ್ರೋತ್ಸಾಹಗೊಳಿಸಿದನು, ಸುತ್ತಿಗೆಯಿಂದ ಸಮಮಾಡುವವನು ಬಡಿಗಲ್ಲಿನ ಮೇಲೆ ಹೊಡೆಯುವವನನ್ನು ಧೈರ್ಯಪಡಿಸಿದನು; ಬೇಸಿಗೆ ಚೆನ್ನಾಗಿದೆ ಎಂದು ಹೇಳಿ ಅದು ಕದಲದ ಹಾಗೆ ಮೊಳೆಗಳಿಂದ ಜಡಿದರು.
- Daniel 3:1–7 ದಾನಿಯೇಲನು 3:1–7ಅರಸನಾದ ನೆಬೂಕದ್ನೆಚ್ಚರನು ಅರವತ್ತು ಮೊಳ ಎತ್ತರವಾಗಿಯೂ ಆರು ಮೊಳ ಅಗಲವಾಗಿಯೂ ಇರುವ ಒಂದು ಬಂಗಾರದ ಪ್ರತಿ ಮೆಯನ್ನು ಮಾಡಿಸಿ, ಬಾಬೆಲ್ ಪ್ರಾಂತ್ಯದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. ಆ ಮೇಲೆ ಅರಸನಾದ ನೆಬೂಕದ್ನೆಚ್ಚರನು ಪ್ರಭುಗಳನ್ನೂ ರಾಜ್ಯ ಪಾಲರನ್ನೂ ಆಲೋಚನಾಕರ್ತರು ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಬೊಕ್ಕಸದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿ ಷ್ಠೆಗೆ ಕರೆಯಿಸಿದನು. ಆಗ ಪ್ರಧಾನರು (ಆಲೋಚ ನಾಗಾರರು) ರಾಜ್ಯಪಾಲರು ಅಧಿಕಾರಸ್ಥರು, ನ್ಯಾಯಾ ಧಿಪತಿಗಳು, ಬೊಕ್ಕಸದವರು ಸಲಹೆಗಾರರು, ಪಂಡಿ ತರು, ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೆಗಾಗಿ ಕೂಡಿ ಬಂದು ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ಬಂದು ನಿಂತರು. ಆಗ ಸಾರುವವನು ಗಟ್ಟಿ ಯಾಗಿ ಕೂಗಿ--ಓ ಪ್ರಜೆಗಳೇ, ಜನಾಂಗಗಳೇ ಮತ್ತು ನಾನಾ ಭಾಷೆಯವರೇ, ನಿಮಗೆ ಆಜ್ಞಾಪಿಸುವದೇ ನಂದರೆ-- ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು. ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು. ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
- 1 Samuel 5:3–7 1 ಸಮುವೇಲನು 5:3–7ಆದರೆ ಅಷ್ಡೋದ್ಯರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ಆಗ ಅವರು ದಾಗೋನನನ್ನು ತೆಗೆದು ಅದನ್ನು ಅದರ ಸ್ಥಳದಲ್ಲಿ ತಿರಿಗಿ ಇಟ್ಟರು. ಅವರು ಮಾರನೆ ದಿವಸ ಬೆಳಿಗ್ಗೆ ಬಂದಾಗ ಇಗೋ, ದಾಗೋನ್ ಕರ್ತನ ಮಂಜೂಷದ ಮುಂದೆ ಬೋರಲು ಬಿದ್ದಿತ್ತು; ದಾಗೋನನ ತಲೆಯೂ ಅದರ ಎರಡು ಕೈಗಳೂ ಹೊಸ್ತಿಲ ಮೇಲೆ ಕಡಿಯಲ್ಪಟ್ಟು ಬಿದ್ದಿದ್ದವು; ಮುಂಡ ಮಾತ್ರ ಅದಕ್ಕೆ ಉಳಿದಿತ್ತು. ಆದದರಿಂದ ಈ ದಿನದ ವರೆಗೂ ದಾಗೋನನ ಯಾಜಕರೂ ದಾಗೋನನ ಮನೆಯಲ್ಲಿ ಪ್ರವೇಶಿಸುವ ವರೆಲ್ಲರೂ ಅಷ್ಡೋದಿನಲ್ಲಿರುವ ದಾಗೋನನ ಹೊಸ್ತಿ ಲನ್ನು ತುಳಿಯುವದಿಲ್ಲ. ಆದರೆ ಕರ್ತನ ಕೈ ಅಷ್ಡೋದಿನವರ ಮೇಲೆ ಭಾರ ವಾಗಿದ್ದು ಅವರನ್ನು ನಾಶಮಾಡಿ ಅಷ್ಡೋದನ್ನೂ ಅದರ ಮೇರೆಗಳನ್ನೂ ಗಡ್ಡೆರೋಗದಿಂದ ಹೊಡೆದನು. ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ನೋಡಿ--ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಯಾಕಂದರೆ ಆತನ ಕೈ ನಮ್ಮ ಮೇಲೆಯೂ ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ ಅಂದರು.
- 1 Kings 18:19–29 1 ಅರಸುಗಳು 18:19–29ಆದದರಿಂದ ನೀನು ಸಮಸ್ತ ಇಸ್ರಾಯೇಲ್ಯರನ್ನೂ ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ ಈಜೆಬೇಲಳ ಮೇಜಿನ ಹತ್ತಿರ ಭೋಜನ ಮಾಡುವ ತೋಪುಗಳ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕರ್ಮೆಲ್ ಬೆಟ್ಟಕ್ಕೆ ಕೂಡಿಸು ಅಂದನು. ಹೀಗೆ ಅಹಾಬನು ಇಸ್ರಾಯೇಲಿನ ಮಕ್ಕಳೆಲ್ಲರನ್ನೂ ಕರೆಯಿಸಿ ಕರ್ಮೆಲ್ ಬೆಟ್ಟದ ಬಳಿಯಲ್ಲಿ ಪ್ರವಾದಿಗಳನ್ನು ಕೂಡಿಸಿದನು. ಆಗ ಎಲೀಯನು ಸಕಲ ಜನರ ಬಳಿಗೆ ಬಂದು--ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ. ಕರ್ತನು ದೇವರಾಗಿದ್ದರೆ ಆತನನ್ನು ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿರಿ ಅಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ. ಆಗ ಎಲೀಯನು ಜನರಿಗೆ--ಕರ್ತನ ಪ್ರವಾದಿ ಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಆದರೆ ಬಾಳನ ಪ್ರವಾದಿಗಳು ನಾನೂರಐವತ್ತು ಮಂದಿ ಇದ್ದಾರೆ. ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ; ಒಂದು ಹೋರಿಯನ್ನು ಅವರು ಆದು ಕೊಂಡು ಅದನ್ನು ತುಂಡು ತುಂಡಾಗಿ ಕಡಿದು ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆಯೇ ಮಾಡಿ ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು. ಆಗ ನೀವು ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ; ನಾನು ಕರ್ತನ ಹೆಸರನ್ನು ಹೇಳಿ ಪ್ರಾರ್ಥಿಸುವೆನು. ಆಗ ಬೆಂಕಿಯಿಂದ ಪ್ರತ್ಯುತ್ತರ ಕೊಡುವ ದೇವರು ತಾನೇ ದೇವರಾಗಿ ರುವನು ಅಂದನು. ಅದಕ್ಕೆ ಜನರೆಲ್ಲರು ಪ್ರತ್ಯುತ್ತರ ವಾಗಿ--ಈ ಮಾತು ಒಳ್ಳೇದು ಅಂದರು. ಆಗ ಎಲೀ ಯನು ಬಾಳನ ಪ್ರವಾದಿಗಳಿಗೆ--ನೀವು ಅನೇಕರಾಗಿ ರುವದರಿಂದ ಒಂದು ಹೋರಿಯನ್ನು ಆದುಕೊಂಡು ಅದನ್ನು ಮೊದಲು ಸಿದ್ಧಮಾಡಿ ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ; ಆದರೆ ಬೆಂಕಿಯನ್ನು ಹಾಕದೆ ಇರ್ರಿ ಅಂದನು. ಅವರು ತಮಗೆ ಕೊಡಲ್ಪಟ್ಟ ಹೋರಿ ಯನ್ನು ತೆಗೆದುಕೊಂಡು ಸಿದ್ಧಮಾಡಿ--ಓ ಬಾಳನೇ, ನಮ್ಮನ್ನು ಕೇಳೆಂದು ಉದಯದಿಂದ ಮಧ್ಯಾಹ್ನದ ವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ ಪ್ರತ್ಯುತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು. ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು. ಅವರು ದೊಡ್ಡ ಶಬ್ದದಿಂದ ಕೂಗಿ ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಕತ್ತಿಗಳಿಂದಲೂ ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು. ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸಲ್ಪಡುವ ವೇಳೆಯ ವರೆಗೂ ಪ್ರವಾದಿಸುತ್ತಾ ಇದ್ದರು. ಆದರೆ ಶಬ್ದವಾ ದರೂ ಪ್ರತ್ಯುತ್ತರಕೊಡುವವನಾದರೂ ಲಕ್ಷಿಸುವವ ನಾದರೂ ಇರಲಿಲ್ಲ.
- Acts 19:24–34 ಅಪೊಸ್ತಲರ ಕೃತ್ಯಗಳು 19:24–34ಹೇಗಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಡಯಾನಿಗೆ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸಬಿನವರಿಗೆ ಬಹಳ ಲಾಭವನ್ನುಂಟುಮಾಡುತ್ತಿದ್ದನು. ಅವನು ಅವರನ್ನೂ ಆ ಕಸಬಿನ ಸಂಬಂಧವಾದ ಕೆಲಸದವರನ್ನೂ ಒಟ್ಟಿಗೆ ಕರೆಯಿಸಿ ಅವರಿಗೆ--ಅಯ್ಯ ಗಳಿರಾ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾ ಗುತ್ತದೆಂದು ನೀವು ಬಲ್ಲಿರಿ. ಆದರೆ ಕೈಯಿಂದ ಮಾಡಿದವುಗಳು ದೇವರುಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯ ಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿ ಬಿಟ್ಟಿದ್ದಾನೆಂಬದನ್ನು ನೀವು ನೋಡುತ್ತೀರಿ ಇದರಿಂದ ನಮ್ಮ ಈ ಉದ್ಯೋಗಕ್ಕೆ ಅಪಾಯ ಬರುವ ಹಾಗಿರುವದಲ್ಲದೆ ಡಯಾನಿ ಮಹಾದೇವಿಯ ಗುಡಿಯು ಗಣನೆಗೆ ಬಾರದೆ ಹೋಗುವ ಹಾಗೆ ಎಲ್ಲಾ ಆಸ್ಯಸೀಮೆ ಮತ್ತು ಲೊಕವು ಪೂಜಿಸುವ ಈಕೆಯ ವೈಭವವು ನಾಶವಾಗ ತಕ್ಕದೆಂದು ಹೇಳಿದನು. ಅವರು ಈ ಮಾತುಗಳನ್ನು ಕೇಳಿ ರೌದ್ರವುಳ್ಳವರಾಗಿ-- ಎಫೆಸದವರ ಡಯಾನಿಯು ದೊಡ್ಡವಳು ಎಂದು ಕೂಗುತ್ತಾ ಹೇಳಿದರು. ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು. ಪೌಲನು ಜನರೊಳಗೆ ಹೋಗ ಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ. ಇದಲ್ಲದೆ ಆಸ್ಯದಲ್ಲಿ ಅವನಿಗೆ ಸ್ನೇಹಿತರಾಗಿದ್ದ ಪ್ರಮುಖರಲ್ಲಿ ಕೆಲವರು ಅವನು ನಾಟಕ ಶಾಲೆಯೊಳಗೆ ಹೋಗಿ ಅಪಾಯಕ್ಕೆ ಗುರಿಮಾಡಿಕೊಳ್ಳ ಬಾರದೆಂದು ಅವನಿಗೆ ಹೇಳಿ ಕಳುಹಿಸಿದರು. ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ. ಅವರು ಅಲೆಕ್ಸಾಂದ್ರನನ್ನು ಸಮೂಹ ದೊಳಗಿಂದ ಹೊರಗೆ ತಂದಾಗ ಯೆಹೂದ್ಯರು ಅವನನ್ನು ಮುಂದೆ ತಂದರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಜನರಿಗೆ ಪ್ರತಿವಾದ ಮಾಡ ಬೇಕೆಂದಿದ್ದನು. ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.
- 1 Samuel 6:4–5 1 ಸಮುವೇಲನು 6:4–5ಆಗ ಅವರು--ಅಪ ರಾಧ ಕಾಣಿಕೆಯಾಗಿ ನಾವು ಅದರ ಸಂಗಡ ಕಳುಹಿಸ ತಕ್ಕದ್ದೇನು ಅಂದರು. ಅದಕ್ಕವರು--ಫಿಲಿಷ್ಟಿಯರ ಅಧಿ ಪತಿಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬರಿಗೆ ಗಡ್ಡೆವ್ಯಾಧಿಯ ವಿಧವಾದ ಐದು ಬಂಗಾರದ ಗಡ್ಡೆಗಳನ್ನೂ ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ; ಯಾಕಂದರೆ ನಿಮ್ಮೆ ಲ್ಲರಿಗೂ ನಿಮ್ಮ ಅಧಿಪತಿಗಳಿಗೂ ಒಂದೇ ತರವಾದ ವ್ಯಾಧಿಯು ಅದೆ. ಆದದರಿಂದ ನಿಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಭೂಮಿಯನ್ನು ಕೆಡಿಸಿಬಿಟ್ಟ ನಿಮ್ಮ ಇಲಿ ಗಳ ರೂಪಗಳನ್ನೂ ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಆತನು ನಿಮ್ಮ ಮೇಲೆಯೂ ನಿಮ್ಮ ದೇವರುಗಳ ಮೇಲೆಯೂ ನಿಮ್ಮ ಭೂಮಿಯ ಮೇಲೆಯೂ ಇರುವ ತನ್ನ ಕೈಯನ್ನು ತೆಗೆದು ಹಗುರಮಾಡುವನು.
- Revelation 19:19–21 ಪ್ರಕಟನೆ 19:19–21ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.