Isaiah · chapter 44 · verse 4
Isaiah 44:4 in Kannada
ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು.
Neerina kaaluvegala baliyalli hasiru hullina naduve beleyuva neeravanjigalante vruddhi yaaguvaru.
Isaiah 44:4 in English
- King James Version (KJV)
- And they shall spring up [as] among the grass, as willows by the water courses.
- World English Bible (WEB)
- and they will spring up among the grass, as willows by the watercourses.
- American Standard Version (ASV)
- and they shall spring up among the grass, as willows by the watercourses.
- Bible in Basic English (BBE)
- And they will come up like grass in a well-watered field, like water-plants by the streams.
- Darby Translation (DBY)
- And they shall spring up among the grass, as willows by the water-courses.
- Webster's Bible (WBS)
- And they shall spring up [as] among the grass, as willows by the watercourses.
- Young's Literal Translation (YLT)
- And they have sprung up as among grass, As willows by streams of water.
Read in context
- 2ನಿನ್ನನ್ನು ನಿರ್ಮಾಣ ಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಕರ್ತನು ಹೀಗೆನ್ನುತ್ತಾನೆ--ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ.
- 3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- 4ನೀರಿನ ಕಾಲುವೆಗಳ ಬಳಿಯಲ್ಲಿ ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿ ಯಾಗುವರು.
- 5ಒಬ್ಬನು--ನಾನು ಕರ್ತನವನು, ಇನ್ನೊಬ್ಬನು ಯಾಕೋಬನ ಹೆಸರಿನವನು ಎಂದು ಹೇಳಿಕೊಳ್ಳುವನು; ಮತ್ತೊಬ್ಬನು ತನ್ನ ಕೈಯ ಮೇಲೆ ಕರ್ತನಿಗೆಂದು ಬರೆಯಿಸಿಕೊಂಡು ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡ ಹೆಸರನ್ನು ಇಟ್ಟುಕೊಳ್ಳುವನು.
- 6ಇಸ್ರಾಯೇಲಿನ ಅರಸನೂ ವಿಮೋಚಕನೂ ಸೈನ್ಯ ಗಳ ಕರ್ತನೂ ಇಂತೆನ್ನುತ್ತಾನೆ--ನಾನೇ ಮೊದಲನೆಯ ವನು, ನಾನೇ ಕಡೆಯವನು, ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
Cross references
- Isaiah 58:11 ಯೆಶಾಯ 58:11ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
- Psalm 1:3 ಕೀರ್ತನೆಗಳು 1:3ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
- Psalm 92:13–15 ಕೀರ್ತನೆಗಳು 92:13–15ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು. ಮುದಿ ಪ್ರಾಯದಲ್ಲಿಯೂ ಫಲ ಫಲಿಸುವರು. ಅವರು ಪುಷ್ಟಿಯಾಗಿ ವೃದ್ಧಿಯಾಗುವರು.ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ. ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- Ezekiel 17:5 ಯೆಹೆಜ್ಕೇಲನು 17:5ಅದು ದೇಶದ ಬೀಜವನ್ನೂ ಸಹ ತೆಗೆದು ಕೊಂಡು ಹೋಗಿ ಫಲವುಳ್ಳ ಹೊಲದಲ್ಲಿ ಇರಿಸಿತು; ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
- Psalm 137:1–2 ಕೀರ್ತನೆಗಳು 137:1–2ಬಾಬೆಲಿನ ನದಿಗಳ ಹತ್ತಿರ ನಾವು ಕೂತುಕೊಂಡು ಹೌದು, ಚೀಯೋ ನನ್ನು ಜ್ಞಾಪಕಮಾಡಿಕೊಂಡಾಗ ನಾವು ಅತ್ತೆವು. ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ ನಮ್ಮ ಕಿನ್ನರಿಗಳನ್ನು ತೂಗಹಾಕಿದೆವು.
- Acts 4:4 ಅಪೊಸ್ತಲರ ಕೃತ್ಯಗಳು 4:4ಆದಾಗ್ಯೂ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರವಾಗಿತ್ತು.
- Acts 5:14 ಅಪೊಸ್ತಲರ ಕೃತ್ಯಗಳು 5:14ವಿಶ್ವಾಸಿಗಳಾದ ಬಹಳ ಸ್ತ್ರೀ ಪುರುಷರ ಸಮೂಹದ ವರು ಕರ್ತನಲ್ಲಿ ಸೇರಿಕೊಂಡರು.
- Isaiah 61:11 ಯೆಶಾಯ 61:11ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವದೋ ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳಿಸುವದೋ ಹಾಗೆಯೇ ದೇವರಾದ ಕರ್ತನ ನೀತಿಯನ್ನೂ ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವನು.
- Acts 2:41–47 ಅಪೊಸ್ತಲರ ಕೃತ್ಯಗಳು 2:41–47ಆಗ ಅವನ ಮಾತನ್ನು ಸಂತೋಷವಾಗಿ ಅಂಗೀಕರಿಸಿದವರು ಬಾಪ್ತಿಸ್ಮ ಮಾಡಿಸಿಕೊಂಡರು. ಅದೇ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಸಲ್ಪಟ್ಟರು. ಅವರು ಅಪೊಸ್ತಲರ ಬೋಧನೆ ಯಲ್ಲಿಯೂ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿ ಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿ ಸ್ಥಿರಚಿತ್ತರಾಗಿದ್ದರು. ಆಗ ಪ್ರತಿಯೊಬ್ಬನಿಗೂ ಭಯಉಂಟಾಯಿತು; ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ ಸೂಚಕ ಕಾರ್ಯಗಳೂ ಅಪೊಸ್ತಲರಿಂದ ನಡೆದವು. ನಂಬಿದ ವರೆಲ್ಲರೂ ಒಂದಾಗಿದ್ದು ತಮಗಿದ್ದದ್ದನ್ನು ಹುದುವಾಗಿ ಅನುಭವಿಸುತ್ತಿದ್ದರು. ಅವರು ಚರಸ್ಥಿರಾಸ್ತಿಗಳನ್ನು ಮಾರಿ ಪ್ರತಿಯೊಬ್ಬನಿಗೆ ಅಗತ್ಯವಿದ್ದ ಹಾಗೆ ಹಂಚಿ ಕೊಟ್ಟರು. ಅವರು ದೇವಾಲಯದಲ್ಲಿ ಪ್ರತಿ ದಿನ ಒಮ್ಮನಸ್ಸಿನಿಂದ ಕೂಡುತ್ತಾ ಮನೆಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಉಲ್ಲಾಸದಿಂದಲೂ ಏಕಹೃದಯ ದಿಂದಲೂ ಊಟಮಾಡುತ್ತಿದ್ದರು.ಇದಲ್ಲದೆ ಅವರು ದೇವರನ್ನು ಕೊಂಡಾಡುವವರಾಗಿಯೂ ಜನ ರೆಲ್ಲರ ದಯೆಯನ್ನು ಹೊಂದುವವರಾಗಿಯೂ ಇದ್ದರು. ಪ್ರತಿ ದಿನ ರಕ್ಷಣೆ ಹೊಂದುತ್ತಿದ್ದವರನ್ನು ಕರ್ತನು ಸಭೆಗೆ ಸೇರಿಸುತ್ತಿದ್ದನು. ಇದಲ್ಲದೆ ಅವರು ದೇವರನ್ನು ಕೊಂಡಾಡುವವರಾಗಿಯೂ ಜನ ರೆಲ್ಲರ ದಯೆಯನ್ನು ಹೊಂದುವವರಾಗಿಯೂ ಇದ್ದರು. ಪ್ರತಿ ದಿನ ರಕ್ಷಣೆ ಹೊಂದುತ್ತಿದ್ದವರನ್ನು ಕರ್ತನು ಸಭೆಗೆ ಸೇರಿಸುತ್ತಿದ್ದನು.
- Leviticus 23:40 ಯಾಜಕಕಾಂಡ 23:40ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು.
- Job 40:22 ಯೋಬನು 40:22ನೆರಳಾದ ಗಿಡಗಳು ತಮ್ಮ ನೆರಳಾಗಿ ಅದನ್ನು ಮುಚ್ಚಿಕೊಳ್ಳುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ.