Isaiah · chapter 48 · verse 10
Isaiah 48:10 in Kannada
ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
Igo, naanu ninnannu shodhisiddene; aadare belliyante alla; sankatada kulumeyinda ninnannu aadu kondiddene.
Isaiah 48:10 in English
- King James Version (KJV)
- Behold, I have refined thee, but not with silver; I have chosen thee in the furnace of affliction.
- World English Bible (WEB)
- Behold, I have refined you, but not as silver. I have chosen you in the furnace of affliction.
- American Standard Version (ASV)
- Behold, I have refined thee, but not as silver; I have chosen thee in the furnace of affliction.
- Bible in Basic English (BBE)
- See, I have been testing you for myself like silver; I have put you through the fire of trouble.
- Darby Translation (DBY)
- Behold, I have refined thee, but not as silver; I have chosen thee in the furnace of affliction.
- Webster's Bible (WBS)
- Behold, I have refined thee, but not with silver; I have chosen thee in the furnace of affliction.
- Young's Literal Translation (YLT)
- Lo, I have refined thee, and not with silver, I have chosen thee in a furnace of affliction.
Read in context
- 8ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
- 9ನನ್ನ ಹೆಸರು ಕೆಡದಂತೆ ನನ್ನ ಕೋಪವನ್ನು ತಡೆ ಮಾಡಿದೆ. ನನ್ನ ಸ್ತುತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.
- 10ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
- 11ನನಗಾಗಿಯೇ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಯಾಕೆ ಅಪವಿತ್ರ ವಾಗುವದು? ನನ್ನ ಮಹಿಮೆಯನ್ನು ನಾನು ಮತ್ತೊ ಬ್ಬನಿಗೆ ಸಲ್ಲಗೊಡಿಸೆನು.
- 12ಓ ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ಆತನು--ನಾನೇ; ನಾನೇ ಮೊದಲನೆಯವನು, ನಾನೇ ಕಡೆಯವನು.
Cross references
- 1 Peter 4:12 1 ಪೇತ್ರನು 4:12ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ.
- Proverbs 17:3 ಜ್ಞಾನೋಕ್ತಿಗಳು 17:3ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
- Job 23:10 ಯೋಬನು 23:10ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ, ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು.
- Hebrews 12:10–11 ಇಬ್ರಿಯರಿಗೆ 12:10–11ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ. ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ.
- Psalm 66:10 ಕೀರ್ತನೆಗಳು 66:10ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.
- 1 Peter 1:7 1 ಪೇತ್ರನು 1:7ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
- Jeremiah 9:7 ಯೆರೆಮೀಯ 9:7ಆದದರಿಂದ ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ಅವರನ್ನು ಕರಗಿಸಿ ಶೋಧಿ ಸುತ್ತೇನೆ; ನನ್ನ ಜನರ ಮಗಳಿಗೋಸ್ಕರ ನಾನು ಹೇಗೆ ಮಾಡಲಿ?
- Malachi 3:2–3 ಮಲಾಕಿಯ 3:2–3ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ. ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
- Zechariah 13:8–9 ಜೆಕರ್ಯ 13:8–9ಕರ್ತನು--ಇದಲ್ಲದೆ ಸಮಸ್ತ ದೇಶದಲ್ಲಿ ಆಗುವದೇನಂದರೆ-- ಅದರಲ್ಲಿ ಎರಡು ಪಾಲು ಕಡಿಯಲ್ಪಟ್ಟು ಸಾಯುವದು; ಆದರೆ ಮೂರನೇ ಪಾಲು ಅದರಲ್ಲಿ ಬಿಡಲ್ಪಡುವದು.ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ. ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Deuteronomy 4:20 ಧರ್ಮೋಪದೇಶಕಾಂಡ 4:20ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
- Ezekiel 22:18–22 ಯೆಹೆಜ್ಕೇಲನು 22:18–22ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ. ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು. ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ. ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.