Isaiah · chapter 49 · verse 2
Isaiah 49:2 in Kannada
ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ; ಆತನು ನುಣುಪಾದ ಬಾಣವನ್ನಾಗಿ ನನ್ನನ್ನು ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
Aatanu nanna baayannu haritavaada khadgavannaagi maadi, tanna kai neralinalli nannannu mareyaagittiddaane; aatanu nunupaada baanavannaagi nannannu roopisi tanna battalikeyalli muchchittiddaane.
Isaiah 49:2 in English
- King James Version (KJV)
- And he hath made my mouth like a sharp sword; in the shadow of his hand hath he hid me, and made me a polished shaft; in his quiver hath he hid me;
- World English Bible (WEB)
- He has made my mouth like a sharp sword. He has hidden me in the shadow of his hand. He has made me a polished shaft. He has kept me close in his quiver.
- American Standard Version (ASV)
- and he hath made my mouth like a sharp sword; in the shadow of his hand hath he hid me: and he hath made me a polished shaft; in his quiver hath he kept me close:
- Bible in Basic English (BBE)
- And he has made my mouth like a sharp sword, in the shade of his hand he has kept me; and he has made me like a polished arrow, keeping me in his secret place;
- Darby Translation (DBY)
- And he hath made my mouth like a sharp sword, he hath concealed me under the shadow of his hand, and he hath made me a polished shaft: in his quiver hath he hidden me.
- Webster's Bible (WBS)
- And he hath made my mouth like a sharp sword; in the shade of his hand hath he hid me, and made me a polished shaft; in his quiver hath he hid me;
- Young's Literal Translation (YLT)
- And he maketh my mouth as a sharp sword, In the shadow of His hand He hath hid me, And He maketh me for a clear arrow, In His quiver He hath hid me.
Read in context
- 1ಓ ದ್ವೀಪ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ದೂರದ ಜನಗಳೇ, ಕಿವಿಗೊಡಿರಿ! ನಾನು ಗರ್ಭದಲ್ಲಿದ್ದಾಗಲೇ ಕರ್ತನು ನನ್ನನ್ನು ಕರೆ ದನು. ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.
- 2ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ; ಆತನು ನುಣುಪಾದ ಬಾಣವನ್ನಾಗಿ ನನ್ನನ್ನು ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.
- 3ಆತನು ನನಗೆ--ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
- 4ಅದಕ್ಕೆ ನಾನು--ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
Cross references
- Hebrews 4:12 ಇಬ್ರಿಯರಿಗೆ 4:12ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
- Revelation 1:16 ಪ್ರಕಟನೆ 1:16ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು.
- Isaiah 50:4 ಯೆಶಾಯ 50:4ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.
- Revelation 2:12 ಪ್ರಕಟನೆ 2:12ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ: ಹದವಾದ ಇಬ್ಬಾಯಿ ಕತ್ತಿಯನ್ನು ಹಿಡಿದಾತನು ಹೇಳು ವವುಗಳು ಯಾವವೆಂದರೆ,
- Isaiah 51:16 ಯೆಶಾಯ 51:16ಆಕಾಶಗಳನ್ನು ನಿಲ್ಲಿಸುವದಕ್ಕೂ ಭೂಮಿಗೆ ಅಸ್ತಿವಾರವನ್ನು ಹಾಕುವ ದಕ್ಕೂ ಚೀಯೋನಿಗೆ ನೀನು ನನ್ನ ಜನರೆಂದು ಹೇಳುವ ದಕ್ಕೂ ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.
- Isaiah 11:4 ಯೆಶಾಯ 11:4ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
- Jeremiah 1:18 ಯೆರೆಮೀಯ 1:18ಇಗೋ, ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧ ವಾಗಿಯೂ ಅದರ ಪ್ರಧಾನರಿಗೆ ವಿರೋಧವಾಗಿಯೂ ಅದರ ಯಾಜಕರಿಗೆ ವಿರೋಧವಾಗಿಯೂ ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ ಕಬ್ಬಿಣದ ಸ್ತಂಭವಾಗಿಯೂ ಹಿತ್ತಾಳೆಯ ಗೋಡೆಗಳಾಗಿಯೂ ಮಾಡಿದ್ದೇನೆ.ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
- Psalm 91:1 ಕೀರ್ತನೆಗಳು 91:1ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
- Jeremiah 15:19–20 ಯೆರೆಮೀಯ 15:19–20ಆದದರಿಂದ ಕರ್ತನು -- ನೀನು ಹಿಂತಿರುಗಿ ಕೊಂಡರೆ ನಾನು ನಿನ್ನನ್ನು ತಿರುಗಿ ತರುವೆನು; ಆಗ ನೀನು ನನ್ನ ಮುಂದೆ ನಿಲ್ಲುವಿ; ನೀನು ಅಮೂಲ್ಯವಾದ ದ್ದನ್ನು ನೀಚವಾದದರೊಳಗಿಂದ ಹೊರಗೆ ತಂದರೆ ನನ್ನ ಬಾಯಿಯ ಹಾಗಿರುವಿ; ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂತಿರುಗಬೇಡ. ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
- Hosea 6:5 ಹೋಶೇಯ 6:5ಆದದರಿಂದ ನಾನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು ನನ್ನ ಬಾಯಿ ಮಾತುಗಳಿಂದ ಅವರನ್ನು ಕೊಂದುಹಾಕಿದ್ದೇನೆ; ನಿನ್ನ ನ್ಯಾಯತೀರ್ಪುಗಳು ಬೆಳಕಿನ ಹಾಗೆ ಹೊರಟವು.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Luke 23:46 ಲೂಕನು 23:46ಯೇಸು ಮಹಾಧ್ವನಿಯಿಂದ--ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ ಎಂದು ಕೂಗಿ ಹೇಳಿದನು; ಹೀಗೆ ಹೇಳಿದ ಮೇಲೆ ಆತನು ಪ್ರಾಣಬಿಟ್ಟನು.