Isaiah · chapter 52 · verse 13
Isaiah 52:13 in Kannada
ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು.
Igo, nanna sevakanu vivekiyaagikaarya vannu saadhisi avanu unnatanaagi melakkeri mahonnatanaagiruvanu.
Isaiah 52:13 in English
- King James Version (KJV)
- Behold, my servant shall deal prudently, he shall be exalted and extolled, and be very high.
- World English Bible (WEB)
- Behold, my servant will deal wisely. He will be exalted and lifted up, and will be very high.
- American Standard Version (ASV)
- Behold, my servant shall deal wisely, he shall be exalted and lifted up, and shall be very high.
- Bible in Basic English (BBE)
- See, my servant will do well in his undertakings, he will be honoured, and lifted up, and be very high.
- Darby Translation (DBY)
- Behold, my servant shall deal prudently; he shall be exalted and be lifted up, and be very high.
- Webster's Bible (WBS)
- Behold, my servant shall deal prudently, he shall be exalted and extolled, and be very high.
- Young's Literal Translation (YLT)
- Lo, My servant doth act wisely, He is high, and hath been lifted up, And hath been very high.
Read in context
- 11ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ.
- 12ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.
- 13ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು.
- 14ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- 15ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
Cross references
- Philippians 2:7–11 ಫಿಲಿಪ್ಪಿಯವರಿಗೆ 2:7–11ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು.
- Matthew 28:18 ಮತ್ತಾಯನು 28:18ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
- Isaiah 42:1 ಯೆಶಾಯ 42:1ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
- John 3:31 ಯೋಹಾನನು 3:31ಮೇಲಿನಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ; ಯಾವನು ಭೂಸಂಬಂಧವಾದವನಾಗಿದ್ದಾನೋ ಅವನು ಭೂ ಸಂಬಂಧದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ.
- Jeremiah 23:5 ಯೆರೆಮೀಯ 23:5ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು.
- Revelation 5:6–13 ಪ್ರಕಟನೆ 5:6–13ನಾನು ನೋಡಲಾಗಿ ಇಗೋ, ಸಿಂಹಾಸ ನದ ಮತ್ತು ನಾಲ್ಕು ಜೀವಿಗಳ ಮಧ್ಯದಲ್ಲಿಯೂ ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ವಧಿಸಲ್ಪಟ್ಟಂತೆ ನಿಂತಿರುವದನ್ನು ಕಂಡೆನು; ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು; ಅವು ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮ ಆತನು ಬಂದು ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯೊಳಗಿಂದ ಆ ಪುಸ್ತಕ ವನ್ನು ತೆಗೆದುಕೊಂಡನು. ಆತನು ಆ ಪುಸ್ತಕವನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಮುಂದೆ ಅಡ್ಡಬಿದ್ದರು; ಅವರೆಲ್ಲರ ಕೈಗಳಲ್ಲಿ ವೀಣೆಗಳೂ ಪರಿ ಶುದ್ಧರ ಪರಿಮಳವಾದ ಪ್ರಾರ್ಥನೆಗಳಿಂದ ತುಂಬಿದ್ದ ಚಿನ್ನದ ಪಾತ್ರೆಗಳೂ ಇದ್ದವು. ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ; ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು. ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು. ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು. ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ--ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- John 5:22–23 ಯೋಹಾನನು 5:22–23ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ; ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.
- Isaiah 9:6–7 ಯೆಶಾಯ 9:6–7ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು. ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Hebrews 1:3 ಇಬ್ರಿಯರಿಗೆ 1:3ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
- Zechariah 3:8 ಜೆಕರ್ಯ 3:8ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
- Isaiah 49:3 ಯೆಶಾಯ 49:3ಆತನು ನನಗೆ--ನೀನು ನನ್ನ ಸೇವಕನು, ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ ಎಂದು ಹೇಳಿದನು.
- Isaiah 11:2–3 ಯೆಶಾಯ 11:2–3ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು; ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು;