Isaiah 53:11 in Kannada
ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
Aatanu tanna aatmada vedaneyannu kandu truptanaaguvanu; tanna tiluva likeyinda neetivantanaada nanna sevakanu aneka rige neetiyanu untumaaduvanu; yaakandare aatanu avara dushkrutyagalannu hottukolluvanu.aadadarinda naanu aatanigoskara dodda varondige bhaagamaaduvenu aatanu balishthara sangada kolleyalli paalumaaduvanu; aatanu tanna praanavannu maranada varege hoydu bittu drohigalondige enisalpattanu; anekara paapa vannu hottukondu drohigaligoskara vijnyaa pane maadidanu.
Isaiah 53:11 in English
- King James Version (KJV)
- He shall see of the travail of his soul, [and] shall be satisfied: by his knowledge shall my righteous servant justify many; for he shall bear their iniquities.
- World English Bible (WEB)
- After the suffering of his soul, he will see the light and be satisfied. My righteous servant will justify many by the knowledge of himself; and he will bear their iniquities.
- American Standard Version (ASV)
- He shall see of the travail of his soul, [and] shall be satisfied: by the knowledge of himself shall my righteous servant justify many; and he shall bear their iniquities.
- Bible in Basic English (BBE)
- ... made clear his righteousness before men ... had taken their sins on himself.
- Darby Translation (DBY)
- He shall see of [the fruit of] the travail of his soul, [and] shall be satisfied: by his knowledge shall my righteous servant instruct many in righteousness; and he shall bear their iniquities.
- Webster's Bible (WBS)
- He shall see of the travail of his soul, [and] shall be satisfied: by his knowledge shall my righteous servant justify many; for he shall bear their iniquities.
- Young's Literal Translation (YLT)
- Of the labour of his soul he seeth — he is satisfied, Through his knowledge give righteousness Doth the righteous one, My servant, to many, And their iniquities he doth bear.
Read in context
- 9ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ.
- 10ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
- 11ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- 12ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
Cross references
- Romans 5:18–19 ರೋಮಾಪುರದವರಿಗೆ 5:18–19ಹೀಗಿರಲಾಗಿ ಒಬ್ಬನ ಅಪರಾಧದಿಂದಲೇ ಎಲ್ಲಾ ಮನುಷ್ಯರಿಗೆ ಅಪರಾಧ ನಿರ್ಣಯವು ಹೇಗೆ ಬಂತೋ ಹಾಗೆಯೇ ಒಬ್ಬನ ನೀತಿಯಿಂದಲೇ ಉಚಿತಾರ್ಥವಾದ ದಾನವು ಎಲ್ಲಾ ಮನುಷ್ಯರಿಗೆ ಜೀವದ ನೀತಿ ನಿರ್ಣಯಕ್ಕಾಗಿ ಬಂದಿತು. ಒಬ್ಬ ಮನುಷ್ಯನ ಅವಿಧೇಯತ್ವದಿಂದ ಅನೇಕರು ಹೇಗೆ ಪಾಪಿಗಳಾ ದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಅನೇಕರು ನೀತಿವಂತರಾಗುವರು.
- Isaiah 53:4–6 ಯೆಶಾಯ 53:4–6ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
- 1 Peter 2:24 1 ಪೇತ್ರನು 2:24ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.
- Revelation 5:9–10 ಪ್ರಕಟನೆ 5:9–10ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ; ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು.
- 1 Peter 3:18 1 ಪೇತ್ರನು 3:18ಕ್ರಿಸ್ತನು ಸಹ ನೀತಿವಂತ ನಾಗಿದ್ದು ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವದಕ್ಕಾಗಿ ಪಾಪನಿವಾರಣೆಗೋಸ್ಕರ ಒಂದೇ ಸಾರಿ ಬಾಧೆಪಟ್ಟು ಶರೀರದಲ್ಲಿ ಕೊಲ್ಲಲ್ಪಟ್ಟನು, ಆತ್ಮನಿಂದ ಬದುಕುವವನಾದನು.
- Isaiah 53:12 ಯೆಶಾಯ 53:12ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- John 12:27–32 ಯೋಹಾನನು 12:27–32ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು. ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಆಗ--ನಾನು ಮಹಿ ಮೆಪಡಿಸಿದ್ದೇನೆ, ತಿರಿಗಿ ಅದನ್ನು ಮಹಿಮೆಪಡಿಸುವೆನು ಎಂದು ಹೇಳುವ ಧ್ವನಿಯು ಪರಲೋಕದಿಂದ ಬಂತು. ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ--ಗುಡುಗಿತು ಅಂದರು. ಬೇರೆಯವರು--ದೂತ ನೊಬ್ಬನು ಈತನ ಸಂಗಡ ಮಾತನಾಡಿದನು ಅಂದರು. ಯೇಸು ಪ್ರತ್ಯುತ್ತರವಾಗಿ--ಈ ಧ್ವನಿಯು ನನಗೋ ಸ್ಕರವಲ್ಲ, ನಿಮಗೋಸ್ಕರವೇ ಬಂದಿದೆ. ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ; ಇಹಲೋಕದ ಅಧಿಪತಿಯು ಈಗ ಹೊರಗೆ ಹಾಕಲ್ಪಡುವನು. ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು.
- John 17:3 ಯೋಹಾನನು 17:3ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
- Hebrews 12:2 ಇಬ್ರಿಯರಿಗೆ 12:2ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ
- Matthew 20:28 ಮತ್ತಾಯನು 20:28ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
- John 10:14–18 ಯೋಹಾನನು 10:14–18ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ. ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ. ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು. ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.