Isaiah · chapter 59 · verse 12
Isaiah 59:12 in Kannada
ಯಾಕಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ; ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ದ್ರೋಹಗಳು ನಮ್ಮ ಸಂಗಡ ಅವೆ; ನಮ್ಮ ಅಕ್ರಮಗಳ ನ್ನಾದರೋ, ನಾವು ಬಲ್ಲೆವು.
Yaakandare, namma drohagalu ninna munde bahalavaagive; namma paapagalu namage virodhavaagi saakshikoduttave; namma drohagalu namma sangada ave; namma akramagala nnaadaro, naavu ballevu.
Isaiah 59:12 in English
- King James Version (KJV)
- For our transgressions are multiplied before thee, and our sins testify against us: for our transgressions [are] with us; and [as for] our iniquities, we know them;
- World English Bible (WEB)
- For our transgressions are multiplied before you, and our sins testify against us; for our transgressions are with us, and as for our iniquities, we know them:
- American Standard Version (ASV)
- For our transgressions are multiplied before thee, and our sins testify against us; for our transgressions are with us, and as for our iniquities, we know them:
- Bible in Basic English (BBE)
- For our evil doings are increased before you, and our sins give witness against us: for our evil doings are with us, and we have knowledge of our sins:
- Darby Translation (DBY)
- For our transgressions are multiplied before thee, and our sins testify against us; for our transgressions are with us; and our iniquities, we know them:
- Webster's Bible (WBS)
- For our transgressions are multiplied before thee, and our sins testify against us: for our transgressions [are] with us; and [as for] our iniquities, we know them;
- Young's Literal Translation (YLT)
- For our transgressions have been multiplied before Thee, And our sins have testified against us, For our transgressions [are] with us, And our iniquities — we have known them.
Read in context
- 10ಕುರುಡರ ಹಾಗೆ ಗೋಡೆಯನ್ನು ತಡವರಿ ಸುತ್ತೇವೆ; ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ; ಮಧ್ಯಾಹ್ನದಲ್ಲಿ, ರಾತ್ರಿಯ ಹಾಗೆ ಎಡವುತ್ತೇವೆ, ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
- 11ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
- 12ಯಾಕಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ; ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ದ್ರೋಹಗಳು ನಮ್ಮ ಸಂಗಡ ಅವೆ; ನಮ್ಮ ಅಕ್ರಮಗಳ ನ್ನಾದರೋ, ನಾವು ಬಲ್ಲೆವು.
- 13ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ.
- 14ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ.
Cross references
- Ezra 9:6 ಎಜ್ರನು 9:6ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು.
- Jeremiah 14:7 ಯೆರೆಮೀಯ 14:7ಓ ಕರ್ತನೇ, ನಮ್ಮ ಅಕ್ರಮಗಳು ನಮಗೆ ವಿರೋಧ ವಾಗಿ ಸಾಕ್ಷಿಕೊಟ್ಟರೂ ನೀನೇ ನಿನ್ನ ಹೆಸರಿಗೋಸ್ಕರ ನಡಿಸು; ನಮ್ಮ ಹಿಂಜರಿಯುವಿಕೆಗಳು ಅನೇಕವಾಗಿವೆ; ನಿನಗೆ ವಿರೋಧವಾಗಿ ಪಾಪಮಾಡಿದ್ದೇವೆ.
- Hosea 5:5 ಹೋಶೇಯ 5:5ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ. ಆದದರಿಂದ ಇಸ್ರಾಯೇಲು ಮತ್ತು ಎಫ್ರಾಯಾಮು ತಮ್ಮ ಕೆಟ್ಟ ತನದಲ್ಲಿ ಬೀಳುವವು. ಯೆಹೂದವು ಅವರೊಂದಿಗೆ ಬೀಳುವದು.
- Ezekiel 5:6 ಯೆಹೆಜ್ಕೇಲನು 5:6ಆಕೆಯು (ಅದು) ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತ್ವಕ್ಕೆ ತಿರುಗಿಸಿ ಬಿಟ್ಟಳು. ಅವರು ನನ್ನ ನ್ಯಾಯಗಳನ್ನು ನಿಯಮಗಳನ್ನು ಅನುಸರಿಸದೆ ನಿರಾಕರಿಸಿದ್ದಾರೆ.
- Isaiah 1:4 ಯೆಶಾಯ 1:4ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.
- Hosea 4:2 ಹೋಶೇಯ 4:2ಆಣೆಯಿಡುವದೂ ಸುಳ್ಳು ಹೇಳು ವದೂ ಕೊಲ್ಲುವದೂ ಕದಿಯುವದೂ ವ್ಯಭಿಚಾರ ಮಾಡುವದೂ ಹೆಚ್ಚಾಗಿಬಿಟ್ಟಿವೆ; ರಕ್ತಕ್ಕೆ ರಕ್ತ ಸೇರುತ್ತದೆ;
- Ezekiel 23:2–49 ಯೆಹೆಜ್ಕೇಲನು 23:2–49ಮನುಷ್ಯಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು; ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದ ರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲ್ಪಟ್ಟವು; ಅವುಗಳ ತೊಟ್ಟುಗಳು ನಸುಕಲ್ಪಟ್ಟವು. ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು. ಒಹೊಲಳು ನನ್ನ ವಶವಾಗಿರುವಾಗ ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯ ದವರನ್ನು, ಅವರೆಲ್ಲರೂ ನೀಲಿಯಿಂದ ಹೊದಿಸಲ್ಪಟ್ಟ (ಧರಿಸಲ್ಪಟ್ಟ) ಯೋಧರು (ಮುಖಂಡರೂ) ಅಧಿಕಾರ ಸ್ಥರೂ ಅಪೇಕ್ಷಿಸತಕ್ಕ ಯೌವನಸ್ಥರೂ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರೂ ಆಗಿರುವ ಅಂಥವರನ್ನು, ಮೋಹಿಸಿದಳು. ಅವರಿಗೆ ಅವಳು ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು, ಅವರೆಲ್ಲರೂ ಅಶ್ಶೂರದಲ್ಲಿ ಆರಿಸಲ್ಪಟ್ಟವರಾಗಿದ್ದರು. (ನೇಮಿಸ ಲ್ಪಟ್ಟವರು) ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು. ಇಲ್ಲವೆ ಅವಳು ಐಗುಪ್ತದಲ್ಲಿದ್ದಂದಿನಿಂದಲೂ ವ್ಯಭಿ ಚಾರವನ್ನು ಸಹ ಬಿಡಲಿಲ್ಲ. ಅವಳ ಯೌವನದಲ್ಲಿ ಅವರು ಅವಳ ಸಂಗಡ ಇದ್ದರು; ಅವರೆಲ್ಲರೂ ಅವಳ ಕನ್ಯತ್ವದ ಸ್ತನಗಳನ್ನು ಒತ್ತಿ, ತಮ್ಮ ವ್ಯಭಿಚಾರಗಳನ್ನು ಅವಳ ಮೇಲೆ ನಡೆಸಿದರು. ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು; ಅವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಅವಳ ಪುತ್ರರನ್ನೂ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು; ಸ್ತ್ರೀಯರಲ್ಲಿ (ಕೆಟ್ಟತನಕ್ಕೆ) ಹೆಸರುಗೊಂಡಳು; ಅವಳಲ್ಲಿ ನ್ಯಾಯ ತೀರ್ಪುಮಾಡಿದರು. ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು. ಅವಳು ತನ್ನ ನೆರೆಯವರಾದ ಅಶ್ಶೂರ್ಯ ರನ್ನೂ ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಧರಿಸಲ್ಪಟ್ಟು ಕುದುರೆಗಳ ಮೇಲೆ ಸವಾರಿಮಾಡುವ ರಾಹುತರಾಗಿಯೂ ಅಪೇಕ್ಷಿಸತಕ್ಕ ಯೌವನಸ್ಥರಾ ಗಿಯೂ ಇರುವಂಥ ಅವರನ್ನು ಮೋಹಿಸಿದಳು. ಆಗ ನಾನು ಅವಳು ಅಪವಿತ್ರವಾದಳೆಂದು ನೋಡಿದೆನು; ಅವರಿಬ್ಬರೂ ಒಂದೇ ಮಾರ್ಗವನ್ನು ಹಿಡಿದರು. ಅವಳು ತನ್ನ ವ್ಯಭಿಚಾರವನ್ನು ಇನ್ನು ಹೆಚ್ಚಿಸಿದಳು; ಗೋಡೆಯ ಮೇಲೆ ಬರೆಯಲ್ಪಟ್ಟ ಮನುಷ್ಯರನ್ನೂ ಕುಂಕುಮ ಇಟ್ಟುಕೊಂಡ ಕಸ್ದೀಯರ ಹಾಗೆ ಕಂಡು ಬರುವ ಪ್ರತಿಮೆಗಳನ್ನೂ (ಮನುಷ್ಯ ಆಕಾರಗಳನ್ನೂ) ನೋಡಿದಾಗ, ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ ಕೊಂಡಂಥ ತನ್ನ ತಲೆಗಳಲ್ಲಿ ಅಲಂಕಾರವಾದ ರುಮಾ ಲನ್ನು ಧರಿಸಿದಂಥ ಎಲ್ಲರೂ ನೋಟದಲ್ಲಿ ಅವರ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಕುಮಾರರ ಹಾಗಿರುವದನ್ನು; ಅವಳು ಅವಳ ಕಣ್ಣುಗಳಿಂದ ತಕ್ಷಣವೇ ಅವರನ್ನು ನೋಡಿದಾಗ ಅವರನ್ನು ಮೋಹಿಸಿ ದಳು; ಅವರ ಬಳಿಗೆ ಕಸ್ದೀಯಕ್ಕೆ ದೂತರನ್ನು ಕಳುಹಿಸಿ ದಳು. ಬಾಬೆಲಿನವರು ಅವಳ, ಪ್ರೀತಿಯ ಹಾಸಿ ಗೆಯ ಮೇಲೆ ಬಂದು ಅವಳನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು; ಅವಳು ಅವರಿಂದ ಹಾಳಾದ ಮೇಲೆ ತನ್ನ ಮನಸ್ಸನ್ನು ಅವರ ಕಡೆಯಿಂದ ಅಗಲಿಸಿ ಕೊಂಡಳು. ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನು ಬಯಲುಪಡಿಸಿ ಕೊಂಡಾಗ, ತನ್ನ ಅನುರಾಗವು ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು. ಆದರೂ ಅವಳು ಐಗುಪ್ತದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿ ದಳು. ಹೇಗಂದರೆ, ಕತ್ತೆಗಳ ಮಾಂಸದಂತೆ ಮಾಂಸ ವುಳ್ಳವರಾಗಿಯೂ ಕುದುರೆಗಳ ವೀರ್ಯದಂತೆ ವೀರ್ಯ ವುಳ್ಳವರಾಗಿಯೂ ಇರುವ ತನ್ನ ಉಪಪತಿಗಳನ್ನು ಮೋಹಿಸಿದರು. ಹೀಗೆ ಐಗುಪ್ತರಿಂದ ನಿನ್ನ ಯೌವ ನದ ಸ್ತನಗಳ ತೊಟ್ಟುಗಳನ್ನು ಒತ್ತಿಸಿಕೊಂಡು ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ. ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ. ಬಾಬೆಲಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು ಕೋಯದವರು, ಮತ್ತು ಎಲ್ಲಾ ಅಶ್ಶೂರ್ಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿಹೊಂದಿ ದವರೂ ಎಲ್ಲರೂ ಕುದುರೆಗಳ ಮೇಲೆ ಸವಾರಿಮಾಡಿ ದವರೇ. ಅವರೆಲ್ಲರೂ ರಥಗಳ ಸಂಗಡಲೂ ಬಂಡಿ ಗಳ ಸಂಗಡಲೂ ಜನಗಳ ಸಮೂಹದ ಸಂಗಡಲೂ ಬಲವುಳ್ಳವರಾಗಿ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣ ವನ್ನೂ ನಿನಗೆ ವಿರುದ್ಧವಾಗಿರಿಸುವೆನು. ಇದಲ್ಲದೆ ನಾನು ಅವರ ಮುಂದೆ ನ್ಯಾಯವನ್ನು ಇಡುವೆನು; ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು. ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು. ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು; ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಅಗಲಿ ಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ. ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು. ನೀನು ಅನ್ಯಜನಾಂಗಗಳ ಹಿಂದೆ ಹೋಗಿ ವ್ಯಭಿಚರಿಸಿದ್ದರಿಂದಲೂ ಅವರ ವಿಗ್ರಹ ಗಳಿಂದ ನಿನ್ನನ್ನು ಅಪವಿತ್ರಪಡಿಸಿಕೊಂಡಿದ್ದರಿಂದಲೂ ಇವುಗಳನ್ನು ನಾನು ನಿನಗೆ ಮಾಡುತ್ತೇನೆ. ನೀನು ನಿನ್ನ ಸಹೋದರಿಯ ಮಾರ್ಗದಲ್ಲಿಯೇ ನಡೆದದ್ದರಿಂದ ಅವಳ ಪಾತ್ರೆಯನ್ನು ನಿನ್ನ ಕೈಗೆ ಕೊಡುತ್ತೇನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವಿ. ನೀನು ಹಾಸ್ಯಕ್ಕೂ ನಿಂದೆಗೂ ಗುರಿ ಯಾಗುವಿ. ಅದೇ ನಿನಗೆ ಹೆಚ್ಚಾಗುವದು. ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶನವೂ ಆಗುವದು; ನೀನು ಅಮಲೇರಿ ದುಃಖದಿಂದಲೂ ತುಂಬಿರುವಿ. ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವಿ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನ ಹಿಂದಕ್ಕೆ ಎಸೆದು ಮರೆತದ್ದರಿಂದ ನಿನ್ನ ದುಷ್ಕರ್ಮವನ್ನೂ ವ್ಯಭಿಚಾರವನ್ನೂ ಅನುಭವಿಸಲೇಬೇಕು. ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಒಹೊಲಳಿಗೂ ಒಹೊಲೀ ಬಳಿಗೂ ನ್ಯಾಯತೀರಿಸುವಿಯೋ? ಹೌದು, ಅವರ ಅಸಹ್ಯಗಳನ್ನು ಅವರಿಗೆ ತಿಳಿಸು. ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ. ಇದಲ್ಲದೆ ಇದನ್ನು ಮಾಡಿದ ದಿನದಲ್ಲಿಯೇ ನನ್ನ ಪರಿಶುದ್ಧಸ್ಥಳವನ್ನು ಅಪವಿತ್ರಪಡಿಸಿ ನನ್ನ ಸಬ್ಬತ್ತುಗಳನ್ನು ಕೆಡಿಸಿದ್ದಾರೆ. ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದು ಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವದಕ್ಕೆ ಬಂದರು. ಇಗೋ, ಅವರು ನನ್ನ ಆಲಯದ ಮಧ್ಯದಲ್ಲಿಯೇ ಹೀಗೆ ಮಾಡಿದ್ದಾರೆ; ದೂತನನ್ನು ಕಳುಹಿಸಿ ದೂರದಿಂದ ಬರಬೇಕೆಂದು ಮನುಷ್ಯರನ್ನು ಕರೇ ಕಳುಹಿಸಿದ್ದಾರೆ; ಇಗೋ, ಬಂದರು. ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ನಿನ್ನನ್ನು ಆಭರಣಗಳಿಂದ ಅಲಂಕರಿಸಿ ಕೊಂಡೆ. ವೈಭವದ ಮಂಚದ ಮೇಲೆ ಕೂತು ಕೊಂಡೆ; ಅವರ ಮುಂದೆ ನನ್ನ ಧೂಪವೂ ನನ್ನ ಎಣ್ಣೆಯೂ ಇರಿಸಲ್ಪಟ್ಟ ಮೇಜೂ ಸಿದ್ಧಮಾಡಲ್ಪಟ್ಟಿತು. ಅವಳ ಸಂಗಡ ಸುಖವುಳ್ಳ ಸಮೂಹದ ಶಬ್ದವು ಇತ್ತು; ಸಾಧಾರಣ ಮನುಷ್ಯರ ಸಂಗಡ ಅರಣ್ಯದಿಂದ ಸಿಬಾಯರು ಕರೆಯಲ್ಪಟ್ಟು ಅವರು ತಮ್ಮ ಕೈಗಳ ಮೇಲೆ ಕಡಗಗಳನ್ನೂ ತಮ್ಮ ತಲೆಗಳ ಮೇಲೆ ಶೃಂಗಾರವಾದ ಕಿರೀಟವನ್ನೂ ಇಟ್ಟರು. ಆಮೇಲೆ ನಾನು ಅವಳಿಗೆ ಹೇಳಿದ್ದೇನಂದರೆ, ವ್ಯಭಿಚಾರದಿಂದ ಸವೆದು ಹೋದ ವಳು ಅವಳೇ, ಮತ್ತೆ ಅವರು ಅವಳ ಸಂಗಡ ವ್ಯಭಿಚರಿಸಬಹುದೇ? ಆದರೂ ವ್ಯಭಿಚಾರಿಣಿ ಯನ್ನು ಸೇರುವ ಹಾಗೆ ಅವರು ಅವಳನ್ನು ಸೇರಿದರು. ಹಾಗೆಯೇ ದುಷ್ಕರ್ಮಿ ಸ್ತ್ರೀಯರಾದ ಒಹೊಲಳ ಬಳಿಗೂ ಒಹೊಲೀಬಳ ಬಳಿಗೂ ಹೋದರು. ನೀತಿ ಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ ವ್ಯಭಿ ಚಾರಿಣಿಯರಿಗೂ ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿ ಯರು, ಅವರ ಕೈ ರಕ್ತವಾಗಿದೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ ಅವರನ್ನು ತೆಗೆದುಹಾಕಲ್ಪಡು ವದಕ್ಕೂ ಸೂರೆಗೂ ಒಪ್ಪಿಸುವೆನು. ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಕತ್ತಿಗಳಿಂದ ಕೊಯ್ದು ಅವರ ಕುಮಾರರನ್ನೂ ಕುಮಾರ್ತೆಯರನ್ನೂ ಕೊಂದು ಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟು ಬಿಡುವರು. ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕ ರ್ಮದ ಪ್ರಕಾರ ಮಾಡದಿರಲೆಂದು ಬೋಧಿಸಿ ದೇಶ ದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ. ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.
- Ezekiel 16:51–52 ಯೆಹೆಜ್ಕೇಲನು 16:51–52ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ. ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ.
- Isaiah 3:9 ಯೆಶಾಯ 3:9ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
- Nehemiah 9:33 ನೆಹೆಮೀಯ 9:33ಆದರೆ ನೀನು ನಮ್ಮ ಮೇಲೆ ಬರಮಾಡಿದ ಎಲ್ಲಾದರಲ್ಲಿ ನೀತಿಪರನಾಗಿದ್ದಿ. ಯಾಕಂದರೆ ನೀನು ಮಾಡಿದ್ದು ಸತ್ಯವಾದದ್ದು; ಆದರೆ ನಾವು ದುಷ್ಟರಾಗಿ ನಡೆದೆವು.
- Ezekiel 22:24–30 ಯೆಹೆಜ್ಕೇಲನು 22:24–30ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು ಅಶುದ್ಧರಾಗದಂಥ ರೌದ್ರದ ದಿವಸ ಗಳಲ್ಲಿ ಮಳೆ ಸುರಿಯುವಂತಹ ದೇಶವು ನೀನೇ, ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ. ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು. ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ. ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ. ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ. ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 22:2–12 ಯೆಹೆಜ್ಕೇಲನು 22:2–12ಈಗ ಮನುಷ್ಯ ಪುತ್ರನೇ, ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧ ವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ ಹೌದು ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವಿ. ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ. ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ. ಅಶುದ್ಧ ಹೆಸರುಳ್ಳವಳೇ, ಬಹಳ ತೊಂದರೆಗೊಳಗಾದವಳೇ, ನಿನಗೆ ಹತ್ತಿರದವರೂ ದೂರದವರೂ ನಿಂದಿಸುವರು. ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ. ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ. ನೀನು ನನ್ನ ಪರಿಶುದ್ಧ ಸಂಗತಿಗಳನು ತಿರಸ್ಕರಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದ್ದೀ. ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ. ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ; ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ. ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.