Isaiah · chapter 59 · verse 6
Isaiah 59:6 in Kannada
ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ.
Avara noolu vastrakkaagadu; tamma kelasagalinda tammannu hoddu kollaru; avara kelasagalu akramada kelasagale; avara kaigalalli hinseya kriyegalu ave.
Isaiah 59:6 in English
- King James Version (KJV)
- Their webs shall not become garments, neither shall they cover themselves with their works: their works [are] works of iniquity, and the act of violence [is] in their hands.
- World English Bible (WEB)
- Their webs won’t become garments. They won’t cover themselves with their works. Their works are works of iniquity, and acts of violence are in their hands.
- American Standard Version (ASV)
- Their webs shall not become garments, neither shall they cover themselves with their works: their works are works of iniquity, and the act of violence is in their hands.
- Bible in Basic English (BBE)
- Their twisted threads will not make clothing, and their works will give them nothing for covering themselves: their works are works of sin, and violent acts are in their hands.
- Darby Translation (DBY)
- Their webs shall not become garments, neither shall they cover themselves with their works; their works are works of iniquity, and the act of violence is in their hands.
- Webster's Bible (WBS)
- Their webs shall not become garments, neither shall they cover themselves with their works: their works [are] works of iniquity, and the act of violence [is] in their hands.
- Young's Literal Translation (YLT)
- Their webs become not a garment, Nor do they cover themselves with their works, Their works [are] works of iniquity, And a deed of violence [is] in their hands.
Read in context
- 4ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- 5ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತಾರೆ, ಜೇಡಹುಳದ ನೂಲನ್ನು ನೇಯುತ್ತಾರೆ; ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು; ಒಡೆಯುವಂಥಾದ್ದರಿಂದ ವಿಷದ ಮರಿಯು ಹೊರಡುವದು.
- 6ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ.
- 7ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ.
- 8ಸಮಾ ಧಾನದ ಮಾರ್ಗವನ್ನರಿಯರು; ಅವರ ದಾರಿಗಳಲ್ಲಿ ನ್ಯಾಯವಿಲ್ಲ; ತಮ್ಮ ಹಾದಿಗಳನ್ನು ಡೊಂಕು ಮಾಡಿ ಕೊಂಡಿದ್ದಾರೆ; ಅವುಗಳಲ್ಲಿ ನಡೆಯುವವರೆಲ್ಲರು ಸಮಾ ಧಾನವನ್ನರಿಯರು.
Cross references
- Revelation 3:17–18 ಪ್ರಕಟನೆ 3:17–18ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ. ನೀನು ಐಶ್ವರ್ಯವಂತ ನಾಗುವ ಹಾಗೆ ಬೆಂಕಿಯಲ್ಲಿ ಶೋಧಿಸಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದು ಕೊಳ್ಳುವದಕ್ಕಾಗಿ ಬಿಳೀ ವಸ್ತ್ರವನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇ
- Jeremiah 6:7 ಯೆರೆಮೀಯ 6:7ಬುಗ್ಗೆಯು ತನ್ನ ನೀರನ್ನು ಹರಿಯ ಮಾಡುವ ಹಾಗೆ ಅವಳು ತನ್ನ ಕೆಟ್ಟತನವನ್ನು ಹರಿಯ ಮಾಡುತ್ತಾಳೆ; ಬಲಾತ್ಕಾರವೂ ಸುಲಿಗೆಯೂ ಅವಳಲ್ಲಿ ಕೇಳಬರುತ್ತವೆ. ದುಃಖವೂ ಗಾಯಗಳೂ ಯಾವಾ ಗಲೂ ನನ್ನ ಮುಂದೆ ಅವೆ.
- Isaiah 57:12 ಯೆಶಾಯ 57:12ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.
- Isaiah 30:1 ಯೆಶಾಯ 30:1ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
- Zephaniah 3:3–4 ಚೆಫನ್ಯ 3:3–4ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ.
- Isaiah 30:12–14 ಯೆಶಾಯ 30:12–14ಆದಕಾರಣ ಇಸ್ರಾಯೇಲ್ಯರ ಪರಿ ಶುದ್ಧನು ಹೇಳುವದೇನಂದರೆ-- ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲತ್ಕಾರ, ಕುಯುಕ್ತಿಗಳನ್ನು ನಂಬಿ ಅವುಗಳನ್ನೇ ಆಧಾರಮಾಡಿಕೊಂಡದ್ದರಿಂದ ಎತ್ತರ ವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವದು. ಉರಿಯಿಂದ ಕೆಂಡವನ್ನು ತೆಗೆಯುವದಕ್ಕಾಗಲಿ ಬಾವಿಯಿಂದ ನೀರನ್ನು ತೆಗೆಯುವದಕ್ಕಾಗಲಿ ಬೋಕಿ ಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.
- Zephaniah 1:9 ಚೆಫನ್ಯ 1:9ಆ ದಿನದಲ್ಲಿ ಹೊಸ್ತಿಲನ್ನು ಹಾರಿ ದಾಟುವವರೆಲ್ಲರನ್ನೂ ತಮ್ಮ ಯಜಮಾನರ ಮನೆ ಗಳನ್ನು ಬಲಾತ್ಕಾರ ಮೋಸಗಳಿಂದ ತುಂಬಿಸುವವರನ್ನೂ ದಂಡಿಸುವೆನು.
- Ezekiel 7:11 ಯೆಹೆಜ್ಕೇಲನು 7:11ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
- Micah 2:8 ಮೀಕ 2:8ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.
- Isaiah 58:4 ಯೆಶಾಯ 58:4ಇಗೋ, ವ್ಯಾಜ್ಯ ಕ್ಕೂ ಹೋರಾಟಕ್ಕೂ ದುಷ್ಟತ್ವದ ಮುಷ್ಟಿಯಿಂದ ಹೊಡೆಯುವದಕ್ಕೂ ನೀವು ಉಪವಾಸಮಾಡುತ್ತೀರಿ. ನಿಮ್ಮ ಸ್ವರವು ಮೇಲಕ್ಕೆ ಕೇಳಿಸುವಂತೆ ಈ ದಿವಸ ಉಪವಾಸ ಮಾಡಿದ ಹಾಗೆ ನೀವು ಮಾಡಬೇಡಿರಿ.
- Romans 4:6–8 ರೋಮಾಪುರದವರಿಗೆ 4:6–8ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗಂ ದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು; ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು.
- Micah 3:1–11 ಮೀಕ 3:1–11ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ? ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ. ಆಗ ಅವರು ಕರ್ತನಿಗೆ ಮೊರೆಯಿಡುವರು; ಆದರೆ ಆತನು ಅವರಿಗೆ ಉತ್ತರ ಕೊಡುವದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತನ್ನ ಮುಖವನ್ನು ಮರೆಮಾಡುವನು. ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು. ದರ್ಶನವಿಲ್ಲದ ನಿಮಗೆ ರಾತ್ರಿ ಯಾಗುವದು; ಶಕುನವಿಲ್ಲದೆ ನಿಮಗೆ ಕತ್ತಲಾಗುವದು; ಹೌದು, ಪ್ರವಾದಿಗಳ ಮೇಲೆ ಸೂರ್ಯ ಮುಣುಗು ವದು, ಅವರ ಮೇಲೆ ಹಗಲು ಕತ್ತಲಾಗುವದು. ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ವಿಸ್ಮಯಗೊಳ್ಳುವರು; ಹೌದು, ದೇವರಿಂದ ಉತ್ತರ ವಿಲ್ಲದ ಕಾರಣ ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿ ಕೊಳ್ಳುವರು. ಆದರೆ ನಿಶ್ಚಯವಾಗಿ ನಾನು ಯಾಕೋ ಬ್ಯರಿಗೆ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವದಕ್ಕೆ ದೇವರ ಆತ್ಮನ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ. ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ, ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.