Isaiah · chapter 6 · verse 13
Isaiah 6:13 in Kannada
ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
Aadare hattaneya paalu ulididdaroo saha adu hintiruguvada rinda adannu tindu biduvadu; elaamaravoo ok maravoo tamma elegalannu biduvaaga tamma saaravu tammolage iruvanteye parishuddha santaanavu adara aadhaaravaagiruvadu endu uttara kottanu.
Isaiah 6:13 in English
- King James Version (KJV)
- But yet in it [shall be] a tenth, and [it] shall return, and shall be eaten: as a teil tree, and as an oak, whose substance [is] in them, when they cast [their leaves: so] the holy seed [shall be] the substance thereof.
- World English Bible (WEB)
- If there is a tenth left in it, that also will in turn be consumed, as a terebinth, and as an oak whose stump remains when they are cut down, so the holy seed is its stump.”
- American Standard Version (ASV)
- And if there be yet a tenth in it, it also shall in turn be eaten up: as a terebinth, and as an oak, whose stock remaineth, when they are felled; so the holy seed is the stock thereof.
- Bible in Basic English (BBE)
- And even if there is still a tenth part in it, it will again be burned, like a tree of the woods whose broken end is still in the earth after the tree has been cut down (the holy seed is the broken end).
- Darby Translation (DBY)
- But a tenth part shall still be therein, and it shall return and be eaten; as the terebinth and as the oak whose trunk [remaineth] after the felling: the holy seed shall be the trunk thereof.
- Webster's Bible (WBS)
- But yet in it [shall be] a tenth, and [it] shall return, and shall be eaten: as a teil-tree, and as an oak whose substance [is] in them, when they cast [their leaves] : [so] the holy seed [shall be] the substance of it.
- Young's Literal Translation (YLT)
- And yet in it a tenth, and it hath turned, And hath been for a burning, As a teil-tree, and as an oak, that in falling, Have substance in them, The holy seed [is] its substance!'
Read in context
- 11ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ
- 12ಕರ್ತನು ಮನುಷ್ಯರನ್ನು ದೂರಮಾಡುವ ವರೆಗೂ ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವ ವರೆಗೂ ಅದು ಇರುವುದು;ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- 13ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
Cross references
- Job 14:7–9 ಯೋಬನು 14:7–9ಮರಕ್ಕೆ ನಿರೀಕ್ಷೆಯುಂಟು; ಅದು ಕೊಯ್ಯಲ್ಪಟ್ಟರೆ ಮತ್ತೆ ಚಿಗುರುವದು. ಚಿಗುರುವದನ್ನು ನಿಲ್ಲಿಸುವದೇ ಇಲ್ಲ. ಅದರ ಬೇರು ಭೂಮಿಯಲ್ಲಿ ಹಳೆಯದಾದರೂ ನೆಲದಲ್ಲಿ ಅದರ ಬುಡವು ಸತ್ತರೂ ನೀರಿನ ವಾಸನೆಯಿಂದ ಚಿಗುರಿ ಸಸಿಯ ಹಾಗೆ ಕೊಂಬೆ ಗಳನ್ನು ಬಿಡುವದು.
- Romans 11:5–6 ರೋಮಾಪುರದವರಿಗೆ 11:5–6ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ. ಕೃಪೆಯಿಂದಾಗಿದ್ದರೆ ಇನ್ನೆಂದಿಗೂ ಕ್ರಿಯೆಗಳಿಂದಲ್ಲ; ಇಲ್ಲವಾದರೆ ಕೃಪೆಯು ಇನ್ನೆಂದಿಗೂ ಕೃಪೆಯೇ ಅಲ್ಲ. ಕ್ರಿಯೆಗಳಿಂದಾಗಿದ್ದರೆ ಇನ್ನೆಂದಿಗೂ ಕೃಪೆಯಲ್ಲ; ಇಲ್ಲವಾದರೆ ಕ್ರಿಯೆಯು ಇನ್ನೆಂದಿಗೂ ಕ್ರಿಯೆಯಲ್ಲ.
- Genesis 22:18 ಆದಿಕಾಂಡ 22:18ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Romans 11:16–29 ರೋಮಾಪುರದವರಿಗೆ 11:16–29ಪ್ರಥಮ ಫಲವು ಪವಿತ್ರವಾಗಿದ್ದರೆ ಕಣಕವೂ ಪವಿತ್ರವಾಗಿದೆ ಮತ್ತು ಬೇರು ಪವಿತ್ರವಾಗಿದ್ದರೆ ಕೊಂಬೆಗಳೂ ಪವಿತ್ರವಾಗಿವೆ. ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ. ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ. ಈ ಮಾತಿಗೆ--ನಾನು ಕಸಿಕಟ್ಟಿಸಿ ಕೊಳ್ಳುವಂತೆ ಕೊಂಬೆಗಳು ಮುರಿದು ಹಾಕಲ್ಪಟ್ಟವಲ್ಲಾ ಎಂದು ನೀನು ಹೇಳುವಿ. ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು; ದೇವರು ಹುಟ್ಟು ಕೊಂಬೆಗಳನ್ನು ಉಳಿಸದೆಯಿದ್ದ ಮೇಲೆ ನಿನ್ನನ್ನೂ ಉಳಿಸು ವದಿಲ್ಲ. ಆದದರಿಂದ ದೇವರ ದಯೆಯನ್ನೂ ಕಾಠಿಣ್ಯ ವನ್ನೂ ನೋಡು; ಬಿದ್ದವರ ಕಡೆಗೆ ಕಾಠಿಣ್ಯ; ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ನಿನ್ನ ಕಡೆಗೆ ಆತನ ದಯೆ; ಇಲ್ಲವಾದರೆ ನೀನೂ ಕಡಿದು ಹಾಕಲ್ಪಡುವಿ. ಅವರು ಕೂಡ ಇನ್ನು ಅಪ ನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಕಸಿಕಟ್ಟಲ್ಪಡುವರು; ಯಾಕಂದರೆ ದೇವರು ಅವರನ್ನು ತಿರಿಗಿ ದೇವರು ಕಸಿಕಟ್ಟುವದಕ್ಕೆ ಸಮರ್ಥನಾಗಿದ್ದಾನೆ. ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ. ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು. ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು. ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ. ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.
- Isaiah 65:8–9 ಯೆಶಾಯ 65:8–9ಕರ್ತನು ಹೇಳುವದೇನಂದರೆ--ದ್ರಾಕ್ಷೇಗೊನೆ ಯಲ್ಲಿ ಹೊಸದ್ರಾಕ್ಷಾರಸ ಕಂಡುಕೊಳ್ಳುವದನ್ನು ಒಬ್ಬನು ನೋಡಿ--ಕೆಡಿಸಬೇಡ, ಅದರಲ್ಲಿ ಆಶೀರ್ವಾದ ಉಂಟೆಂದು ಹೇಳುವದು ಹೇಗೋ ಹಾಗೆಯೇ ನನ್ನ ಸೇವಕರಿಗೋಸ್ಕರ ಅವರನ್ನೆಲ್ಲಾ ನಾನು ಕೆಡಿಸಿ ಬಿಡದ ಹಾಗೆ ಮಾಡುವೆನು. ಯಾಕೋಬಿನೊಳಗಿಂದ ಒಂದು ಸಂತಾನವನ್ನೂ ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನೂ ಹೊರಗೆ ಬರಮಾಡುವೆನು; ನಾನು ಆದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು; ನನ್ನ ಸೇವಕರು ಅದರಲಿವಾಸವಾಗುವರು.
- Galatians 3:28–29 ಗಲಾತ್ಯದವರಿಗೆ 3:28–29ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ. ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Ezra 9:2 ಎಜ್ರನು 9:2ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.
- Isaiah 1:9 ಯೆಶಾಯ 1:9ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
- Galatians 3:16–19 ಗಲಾತ್ಯದವರಿಗೆ 3:16–19ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು; ಆತನು--ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ--ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬಾತನು ಕ್ರಿಸ್ತನೇ. ನಾನು ಹೇಳುವದೇನಂದರೆ, ದೇವರು ಕ್ರಿಸ್ತನಲ್ಲಿ ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರುಷಗಳ ಮೇಲೆ ಬಂದ ನ್ಯಾಯಪ್ರಮಾಣವು ರದ್ದು ಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ. ಆ ಬಾಧ್ಯತೆಯು ನ್ಯಾಯಪ್ರಮಾಣದಿಂದ ದೊರೆ ಯುವದಾದರೆ ಅದು ಇನ್ನು ವಾಗ್ದಾನದಿಂದ ದೊರೆಯು ವದಿಲ್ಲವೆಂದಾಯಿತು; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. ಹಾಗಾದರೆ ನ್ಯಾಯಪ್ರಮಾಣವು ಯಾತಕ್ಕೆ? ವಾಗ್ದಾನದ ಸಂತತಿಯಾದಾತನು ಬರುವತನಕ ದೇವರು ಇಂಥಿಂಥದ್ದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು.
- Mark 13:20 ಮಾರ್ಕನು 13:20ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾವನೂ ರಕ್ಷಣೆ ಹೊಂದುವ ದಿಲ್ಲ. ಆದರೆ ಆಯಲ್ಪಟ್ಟವರಿಗಾಗಿ ಅಂದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿ ದ್ದಾನೆ.
- Isaiah 10:20–22 ಯೆಶಾಯ 10:20–22ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು. ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾ ಕ್ರಮಿಯಾದ ದೇವರ ಕಡೆಗೆ ಹಿಂತಿರುಗುವರು. ತನ್ನ ಜನರಾದ ಇಸ್ರಾಯೇಲ್ಯರು ಸಮುದ್ರದ ಮರಳಿನಂತೆ ಇದ್ದರೂ ಅವರಲ್ಲಿ ಉಳಿದವರು ಮಾತ್ರ ಹಿಂತಿರು ಗುವರು; ನಾಶವಾಗುವದಕ್ಕೆ ವಿಧಿಸಲ್ಪಟ್ಟದ್ದು ನೀತಿ ಯೊಂದಿಗೆ ತುಂಬಿ ತುಳುಕುವದು.
- Malachi 2:15 ಮಲಾಕಿಯ 2:15ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ,