Isaiah · chapter 7 · verse 17
Isaiah 7:17 in Kannada
ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
Kartanu ninna mele yoo ninna janara meleyoo ninna tandeya maneya meleyoo yehoodadinda ephraa yaamu agalidandininda andare ashyoora ara sana kaaladindaloo baarade idda divasagalannu baramaaduvanu.
Isaiah 7:17 in English
- King James Version (KJV)
- The LORD shall bring upon thee, and upon thy people, and upon thy father’s house, days that have not come, from the day that Ephraim departed from Judah; [even] the king of Assyria.
- World English Bible (WEB)
- The LORD will bring on you, on your people, and on your father’s house days that have not come, from the day that Ephraim departed from Judah, even the king of Assyria.
- American Standard Version (ASV)
- Jehovah will bring upon thee, and upon thy people, and upon thy father’s house, days that have not come, from the day that Ephraim departed from Judah—[even] the king of Assyria.
- Bible in Basic English (BBE)
- The Lord is about to send on you, and on your people, and on your father's house, such a time of trouble as there has not been from the days of the separating of Ephraim from Judah; even the coming of the king of Assyria.
- Darby Translation (DBY)
- Jehovah will bring upon thee, and upon thy people, and upon thy father's house, days which have not come since the day when Ephraim turned away from Judah — [even] the king of Assyria.
- Webster's Bible (WBS)
- The LORD will bring upon thee, and upon thy people, and upon thy father's house, days that have not come, from the day that Ephraim departed from Judah; [even] the king of Assyria.
- Young's Literal Translation (YLT)
- Jehovah bringeth on thee, and on thy people, And on the house of thy father, Days that have not come, Even from the day of the turning aside of Ephraim from Judah, By the king of Asshur.
Read in context
- 15ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.
- 16ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.
- 17ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
- 18ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.
- 19ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು.
Cross references
- Isaiah 10:5–6 ಯೆಶಾಯ 10:5–6ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ. ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
- Isaiah 8:7–8 ಯೆಶಾಯ 8:7–8ಇಗೋ, ಕರ್ತನು ಎಲ್ಲಾ ಮಹಿಮೆಯಿಂದ ಕೂಡಿದ ಅಶ್ಯೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು; ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ವಿಾರಿ ಯೆಹೂದ ದಲ್ಲಿಯೂ ನುಗ್ಗಿ ತುಂಬಿ ತುಳುಕಿ ಹಬ್ಬಿಕೊಂಡು ಕತ್ತಿ ನವರೆಗೂ ಏರುವದು; ಓ ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವವು.
- Isaiah 36:1–22 ಯೆಶಾಯ 36:1–22ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರದ ಅರಸ ನಾದ ಸನ್ಹೇರೀಬನು ಬಂದು ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು. ಆಗ ಅಶ್ಶೂರದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದ ಸಂಗಡ ರಬ್ಷಾಕನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಮೇಲಿನ ಕೆರೆಯ ಕಾಲುವೆಯ ಸವಿಾಪದಲ್ಲಿ ಅಗಸರ ಹೊಲದ ರಾಜಮಾರ್ಗದಲ್ಲಿ ನಿಂತುಕೊಂಡನು. ಆಗ ಮನೆಯ ವಿಚಾರಕನಾದ ಹಿಲ್ಕೀಯನ ಮಗನಾದ ಎಲ್ಯಾಕೀ ಮನು, ಲೇಖಕನಾದ ಶೆಬ್ನ, ದಾಖಲೆಗಾರನಾದ ಆಸಾ ಫನ ಮಗನಾಗಿದ್ದ ಯೋವ ಎಂಬವರು ಬಂದರು. ರಬ್ಷಾಕನು ಅವರಿಗೆ--ನೀವು ಅಶ್ಶೂರಿನ ಅರಸನಾದ ಮಹಾರಾಜನ ಈ ಮಾತುಗಳನ್ನು ಹಿಜ್ಕೀಯನಿಗೆ ತಿಳಿ ಸಿರಿ--ಈ ನಿನ್ನ ಭರವಸಕ್ಕೆ ಯಾವ ಆಧಾರವುಂಟು? ಯುದ್ಧಕ್ಕೆ ಬೇಕಾದ ಆಲೋಚನೆಯೂ ಪರಾಕ್ರಮವೂ ನನಗೆ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿ ಕೊಂಡು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಿ? ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ. ಆದರೆ ನೀನು ನಮ್ಮ ದೇವರಾದ ಕರ್ತನಲ್ಲಿ ನಂಬಿಕೆಯಿಟ್ಟಿದ್ದೇವೆಂದು ನನಗೆ ಹೇಳಿದರೆ ಹಿಜ್ಕೀಯನು ಇದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಬೇಕೆಂಬದಾಗಿ ಯೆಹೂ ದಕ್ಕೂ ಯೆರೂಸಲೇಮಿಗೂ ಆಜ್ಞಾಪಿಸಿ, ಹಿಜ್ಕೀಯನು ಯಾವನ ಪೂಜಾ ಸ್ಥಳಗಳನ್ನೂ ಯಜ್ಞವೇದಿಗಳನ್ನೂ ತೆಗೆದುಹಾಕಿದ್ದಾನೋ ಅವನೇ ಅಲ್ಲವೋ? ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು. ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ. ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು. ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬವರು ರಬ್ಷಾಕೆಗೆ--ನೀನು ಮಾತನಾಡುವದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯ ವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಸಿರಿಯಾ ಭಾಷೆ ಯಲ್ಲಿ ಮಾತನಾಡು ಅದು ನಮಗೆ ತಿಳಿಯುತ್ತದೆ; ಯೆಹೂದ್ಯರ ಭಾಷೆಯಲ್ಲಿ ಮಾತನಾಡಬೇಡ ಎಂದು ಹೇಳಿದರು. ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು. ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ. ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ. ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ; ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ. ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು. ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ? ಹಮಾತ್, ಅರ್ಪಾದ್, ಸೆಫರ್ವ ಯಿಮ್ನ ದೇವರುಗಳು ಎಲ್ಲಿ? ಅವು ಸಮಾರ್ಯವ ನ್ನಾದರೂ ನನ್ನ ಕೈಯಿಂದ ತಪ್ಪಿಸಿದವೋ? ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು. ಅದರೆ ಅವರು ಅವನಿಗೆ ಒಂದು ಮಾತನ್ನಾದರೂ ಉತ್ತರ ಕೊಡದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು. ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.
- 2 Chronicles 10:16–19 2 ಪೂರ್ವಕಾಲವೃತ್ತಾಂತ 10:16–19ಅರಸನು ತಮಗೆ ಕಿವಿಗೊಡದೆ ಹೋದ ನೆಂದು ಸಮಸ್ತ ಇಸ್ರಾಯೇಲ್ಯರು ನೋಡಿ ಅರಸನಿಗೆ ಪ್ರತ್ಯುತ್ತರವಾಗಿ--ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಇಲ್ಲ. ಇಸ್ರಾ ಯೇಲ್ಯರೇ, ನಿಮ್ಮ ಗುಡಾರಗಳಿಗೆ ಹೋಗಿರಿ; ದಾವೀ ದನೇ, ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರೆಲ್ಲರು ತಮ್ಮ ಗುಡಾರಗಳಿಗೆ ಹೋದರು. ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲಿನ ಮಕ್ಕಳ ಮೇಲೆ ರೆಹಬ್ಬಾಮನು ಆಳಿದನು. ಆಗ ರೆಹಬ್ಬಾಮನು ಕಪ್ಪಕ್ಕೆ ಗೊತ್ತುಗಾರನಾದ ಹದೋರಾಮನನ್ನು ಕಳು ಹಿಸಲು ಇಸ್ರಾಯೇಲಿನ ಮಕ್ಕಳು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು, ಆದದರಿಂದ ಅರಸನಾದ ರೆಹಬ್ಬಾಮನು ಯೆರೂಸಲೇಮಿಗೆ ಓಡಿಹೋಗಲು ಆತುರಪಟ್ಟು ತನ್ನ ರಥವನ್ನೇರಿದನು.ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು. ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು.
- 2 Chronicles 33:11 2 ಪೂರ್ವಕಾಲವೃತ್ತಾಂತ 33:11ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.
- 2 Chronicles 28:19–21 2 ಪೂರ್ವಕಾಲವೃತ್ತಾಂತ 28:19–21ಯಾಕಂದರೆ ಇಸ್ರಾಯೇಲಿನ ಅರಸನಾದ ಆಹಾ ಜನ ನಿಮಿತ್ತ ಕರ್ತನು ಯೆಹೂದವನ್ನು ತಗ್ಗಿಸಿದನು. ಅವನು ಯೆಹೂದವನ್ನು ಬೆತ್ತಲೆಯಾಗಿ ಮಾಡಿ ಕರ್ತ ನಿಗೆ ವಿರೋಧವಾಗಿ ಬಹಳ ಅಪರಾಧ ಮಾಡಿದನು. ಆಗ ಅಶ್ಶೂರಿನ ಅರಸನಾದ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು ಅವನನ್ನು ಬಲಪಡಿಸದೆ ಬಾಧೆಪಡಿಸಿ ದನು. ಆಹಾಜನು ಕರ್ತನ ಮನೆಯಿಂದಲೂ ಅರಮನೆಯಿಂದಲೂ ಪ್ರಧಾನರಿಂದಲೂ ಒಂದು ಪಾಲನ್ನು ತೆಗೆದುಕೊಂಡು ಅಶ್ಶೂರಿನ ಅರಸನಿಗೆ ಕೊಟ್ಟನು; ಆದರೆ ಅವನು ಇವನಿಗೆ ಸಹಾಯ ಮಾಡದೆ ಹೋದನು.
- 2 Kings 18:1–19 2 ಅರಸುಗಳು 18:1–19ಇಸ್ರಾಯೇಲಿನ ಅರಸನಾಗಿರುವ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಆಹಾಜನ ಮಗನಾದ ಹಿಜ್ಕೀಯನು ಆಳಲು ಆರಂಭಿ ಸಿದನು. ಅವನು ಆಳಲು ಆರಂಭಿಸಿದಾಗ ಇಪ್ಪ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪ ತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬಿಯು; ಅವಳು ಜೆಕರ್ಯನ ಮಗಳಾಗಿದ್ದಳು. ಅವನು ತನ್ನ ತಂದೆಯಾದ ದಾವೀದನು ಮಾಡಿದ ಹಾಗೆ ಕರ್ತನ ದೃಷ್ಟಿಗೆ ಒಳ್ಳೆಯದನ್ನು ಮಾಡಿದನು. ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು. ಅವನು ಇಸ್ರಾಯೇಲಿನ ದೇವರಾದ ಕರ್ತನಲ್ಲಿ ಭರವಸವುಳ್ಳ ವನಾಗಿದ್ದನು; ಅವನಿಗೆ ಮುಂಚೆ ಇದ್ದವರಲ್ಲಿಯೂ ಅವನ ತರುವಾಯ ಯೆಹೂದದ ಎಲ್ಲಾ ಅರಸುಗಳ ಲ್ಲಿಯೂ ಅವನ ಹಾಗೆ ಇದ್ದವನು ಒಬ್ಬನೂ ಇಲ್ಲ. ಅವನು ಕರ್ತನನ್ನು ಹಿಂಬಾಲಿಸುವದನ್ನು ಬಿಟ್ಟುಬಿಡದೆ ಆತನಿಗೆ ಹೊಂದಿಕೊಂಡು ಕರ್ತನು ಮೋಶೆಗೆ ಆಜ್ಞಾ ಪಿಸಿದ ಆಜ್ಞೆಗಳನ್ನು ಕೈಕೊಂಡನು. ಕರ್ತನು ಅವನ ಸಂಗಡ ಇದ್ದನು; ಅವನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಗುತ್ತಿತ್ತು. ಅವನು ಅಶ್ಶೂರಿನ ಅರಸ ನನ್ನು ಸೇವಿಸದೆ ಅವನ ಮೇಲೆ ತಿರುಗಿ ಬಿದ್ದನು. ಅವನು ಫಿಲಿಷ್ಟಿಯರನ್ನು ಗಾಜದ ವರೆಗೂ ಅದರ ಮೇರೆಗಳ ವರೆಗೂ ಕಾವಲುಗಾರರ ಬುರುಜುಗಳ ಮೊದಲುಗೊಂಡು ಕೋಟೆಯುಳ್ಳ ಪಟ್ಟಣದ ವರೆಗೂ ಸಂಹರಿಸಿದನು. ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ನಾದ ಹೋಶೇಯನ ಆಳ್ವಿಕೆಯ ಏಳನೇ ವರುಷದಲ್ಲಿ, ಅರಸನಾಗಿರುವ ಹಿಜ್ಕೀಯನ ನಾಲ್ಕನೇ ವರುಷದಲ್ಲಿ ಏನಾಯಿತಂದರೆ, ಅಶ್ಶೂರಿನ ಅರಸನಾದ ಶಲ್ಮನೆಸೆರನು ಸಮಾರ್ಯದ ಮೇಲೆ ಬಂದು ಅದನ್ನು ಮುತ್ತಿಗೆ ಹಾಕಿದನು. ಮೂರು ವರುಷವಾದ ತರುವಾಯ ಅವರು ಅದನ್ನು ತೆಗೆದುಕೊಂಡರು. ಇಸ್ರಾಯೇಲಿನ ಅರಸನಾಗಿರುವ ಹೋಶೇಯನ ಆಳ್ವಿಕೆಯ ಒಂಭತ್ತನೇ ವರುಷವಾದ ಹಿಜ್ಕೀಯನ ಆರನೇ ವರುಷದಲ್ಲಿ ಸಮಾ ರ್ಯವು ತೆಗೆದುಕೊಳ್ಳಲ್ಪಟ್ಟಿತು. ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು. ಅವರು ತಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ ಆತನ ಒಡಂಬಡಿಕೆಯನ್ನೂ ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಎಲ್ಲ ವನ್ನೂ ವಿಾರಿದರು; ಅವುಗಳನ್ನು ಕೇಳದೆಯೂ ಮಾಡ ದೆಯೂ ಹೋದರು. ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರಿನ ಅರಸನಾದ ಸನ್ಹೇರೀಬನು ಯೆಹೂದದ ಕೋಟೆಯುಳ್ಳ ಸಕಲ ಪಟ್ಟಣಗಳ ಮೇಲೆ ಬಂದು ಅವುಗಳನ್ನು ವಶಪಡಿಸಿಕೊಂಡನು. ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀ ಷನ ಬಳಿಯಲ್ಲಿದ್ದ ಅಶ್ಶೂರಿನ ಅರಸನಿಗೆ--ನಾನು ಪಾಪಮಾಡಿದ್ದೇನೆ; ನನ್ನನ್ನು ಬಿಟ್ಟು ಹಿಂತಿರಿಗಿ ಹೋಗು; ನೀನು ನನ್ನ ಮೇಲೆ ಹೊರಿಸುವದನ್ನು ನಾನು ತಾಳಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿ ದನು. ಆಗ ಅಶ್ಶೂರಿನ ಅರಸನು ಯೆಹೂದದ ಅರಸನಾದ ಹಿಜ್ಕೀಯನಿಗೆ ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಲು ನೇಮಕ ಮಾಡಿದನು. ಆದದರಿಂದ ಹಿಜ್ಕೀಯನು ಕರ್ತನ ಮನೆಯಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಎಲ್ಲಾ ಬೆಳ್ಳಿ ಯನ್ನು ಕೊಟ್ಟನು. ಆ ಕಾಲದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು ಕರ್ತನ ಮಂದಿರದ ಕದ ಗಳ ಮೇಲೆಯೂ ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನು ಕತ್ತರಿಸಿ ಅಶ್ಶೂರಿನ ಅರಸ ನಿಗೆ ಕೊಟ್ಟನು. ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು. ಆದರೆ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾ ಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ಅವರ ಬಳಿಗೆ ಬಂದರು. ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು?
- 1 Kings 12:16–19 1 ಅರಸುಗಳು 12:16–19ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲ್ಯರು ನೋಡಿದಾಗ ಜನರು ಅರಸನಿಗೆ ಪ್ರತ್ಯುತ್ತರವಾಗಿ ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾ ಯೇಲ್ಯರೇ, ನಿಮ್ಮ ಡೇರೆಗಳಿಗೆ ಹೋಗಿರಿ; ದಾವೀ ದನೇ, ಈಗ ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರು ತಮ್ಮ ತಮ್ಮ ಡೇರೆಗಳಿಗೆ ಹೋದರು. ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲ್ ಮಕ್ಕಳ ಮೇಲೆ ರೆಹ ಬ್ಬಾಮನು ಆಳಿದನು. ಆಗ ರೆಹಬ್ಬಾಮನು ಕಪ್ಪಕ್ಕೆ ಗೊತ್ತುಗಾರನಾದ ಅದೋರಾಮನನ್ನು ಕಳುಹಿಸಿದನು. ಆದರೆ ಇಸ್ರಾಯೇಲ್ಯರೆಲ್ಲರು ಅವನ ಮೇಲೆ ಕಲ್ಲೆ ಸೆದು ಕೊಂದುಹಾಕಿದರು. ಆದದರಿಂದ ಅರಸನಾದ ರೆಹಬ್ಬಾಮನು ಯೆರೂಸಲೇಮಿಗೆ ಓಡಿಹೋಗಲು ತ್ವರೆಮಾಡಿ ತನ್ನ ರಥದ ಮೇಲೆ ಏರಿದನು. ಹೀಗೆಯೇ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಯ ಮೇಲೆ ತಿರುಗಿಬಿದ್ದರು.
- Nehemiah 9:32 ನೆಹೆಮೀಯ 9:32ಆದಕಾರಣ ನಮ್ಮ ದೇವರೇ, ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವಂಥ ಮಹಾಪರಾಕ್ರಮವು ಳ್ಳಂಥ ಭಯಂಕರನಾದ ದೇವರೇ, ಅಶ್ಶೂರಿನ ಅರಸು ಗಳ ಕಾಲ ಮೊದಲುಗೊಂಡು ಇಂದಿನ ವರೆಗೆ ನಮ್ಮ ಮೇಲೆಯೂ ಅರಸುಗಳ ಮೇಲೆಯೂ ಪ್ರಧಾನರ ಮೇಲೆಯೂ ಯಾಜಕರ ಮೇಲೆಯೂ ಪ್ರವಾದಿಗಳ ಮೇಲೆಯೂ ಪಿತೃಗಳ ಮೇಲೆಯೂ ನಿನ್ನ ಸಮಸ್ತ ಜನರ ಮೇಲೆಯೂ ಬಂದ ಶ್ರಮೆಯು ನಿನಗೆ ಅಲ್ಪ ವಾಗಿ ಕಾಣಲ್ಪಡದೆ ಇರಲಿ.
- 2 Chronicles 32:1–33 2 ಪೂರ್ವಕಾಲವೃತ್ತಾಂತ 32:1–33ಈ ಕಾರ್ಯಗಳೂ ಇವುಗಳ ಸ್ಥಾಪನೆಯೂ ಆದ ತರುವಾಯ ಅಶ್ಶೂರಿನ ಅರಸನಾದ ಸನ್ಹೇರೀಬನು ಹೊರಟು ಬಂದು ಯೆಹೂದದಲ್ಲಿ ಪ್ರವೇಶಿಸಿ ಕೋಟೆಯುಳ್ಳ ಪಟ್ಟಣಗಳ ಬಳಿಯಲ್ಲಿ ದಂಡಿಳಿದು ಅವುಗಳನ್ನು ತನಗಾಗಿ ಜಯಿಸಬೇಕೆಂದು ಅಂದುಕೊಂಡನು. ಸನ್ಹೇರೀಬನು ಬಂದದ್ದನ್ನೂ ಅವನು ಯೆರೂಸಲೇಮಿನ ಮೇಲೆ ಯುದ್ಧಮಾಡಲು ಮುಖ ತಿರುಗಿಸಿದ್ದನ್ನೂ ಹಿಜ್ಕೀಯನು ಕಂಡಾಗ ಅವನು ಪಟ್ಟಣದ ಹೊರಗಿರುವ ನೀರು ಬುಗ್ಗೆಗ ಳನ್ನು ಮುಚ್ಚಿಸುವದಕ್ಕೆ ತನ್ನ ಪ್ರಧಾನರ ಸಂಗಡಲೂ ತನ್ನ ಪರಾಕ್ರಮಶಾಲಿಗಳ ಸಂಗಡಲೂ ಯೋಚಿಸಿ ಕೊಂಡನು. ಅವರು ಅವನಿಗೆ ಸಹಾಯಕೊಟ್ಟರು. ಆದದರಿಂದ ಅನೇಕ ಜನರು ಕೂಡಿಕೊಂಡು ನೀರು ಬುಗ್ಗೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹಳ್ಳ ವನ್ನೂ ಮುಚ್ಚಿಬಿಟ್ಟು--ಅಶ್ಶೂರಿನ ಅರಸುಗಳು ಬಂದು ಬಹಳ ನೀರು ದೊರಕಿಸಿಕೊಳ್ಳುವದು ಯಾಕೆ ಅಂದರು. ಇದಲ್ಲದೆ ಅವನು ತನ್ನನ್ನು ಬಲಪಡಿಸಿಕೊಂಡು ಕೆಡವಲ್ಪಟ್ಟ ಗೋಡೆಯನ್ನೆಲ್ಲಾ ಕಟ್ಟಿಸಿ ಗೋಪುರಗಳ ಪರ್ಯಂತರ ಅದನ್ನು ಎತ್ತರ ಮಾಡಿ ಅದರ ಹೊರ ಭಾಗದಲ್ಲಿ ಮತ್ತೊಂದು ಗೋಡೆಯನ್ನು ಕಟ್ಟಿಸಿ ದಾವೀ ದನ ಪಟ್ಟಣದಲ್ಲಿರುವ ಮಿಲ್ಲೋವನ್ನು ದುರಸ್ತುಮಾಡಿ ಈಟಿಗಳನ್ನೂ ಗುರಾಣಿಗಳನ್ನೂ ಬಹಳವಾಗಿ ಮಾಡಿಸಿ ದನು. ಜನರ ಮೇಲೆ ಯುದ್ಧದ ಸೈನ್ಯಗಳ ಅಧಿಪತಿ ಗಳನ್ನು ಇರಿಸಿ ಪಟ್ಟಣದ ಬಾಗಲ ಬೀದಿಯಲ್ಲಿ ತನ್ನ ಬಳಿಗೆ ಅವರನ್ನು ಕೂಡಿಸಿಕೊಂಡು ಸಮಾಧಾನವಾಗಿ ಅವರ ಸಂಗಡ ಮಾತನಾಡಿ-- ಬಲಗೊಳ್ಳಿರಿ; ಧೈರ್ಯ ವಾಗಿರ್ರಿ; ಅಶ್ಶೂರಿನ ಅರಸನ ನಿಮಿತ್ತವೂ ಅವನ ಸಂಗಡ ಕೂಡಿರುವ ಮಹಾಗುಂಪಿನ ನಿಮಿತ್ತವೂ ಭಯ ಪಡಬೇಡಿರಿ; ಹೆದರಬೇಡಿರಿ. ಯಾಕಂದರೆ ಅವನ ಸಂಗಡ ಇರುವವರಿಗಿಂತ ನಮ್ಮ ಸಂಗಡ ಅನೇಕರು ಇದ್ದಾರೆ. ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು. ಇದರ ತರುವಾಯ ಅಶ್ಶೂರಿನ ಅರಸನಾದ ಸನ್ಹೇ ರೀಬನೂ ಅವನ ಸಂಗಡ ಕೂಡಿರುವ ಅವನ ಸಮಸ್ತ ಬಲವೂ ಲಾಕೀಷನ್ನು ಮುತ್ತಿಗೆ ಹಾಕಿದಾಗ ಅವನು ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಹಿಜ್ಕೀ ಯನ ಬಳಿಗೂ ಯೆರೂಸಲೇಮಿನಲ್ಲಿರುವ ಸಮಸ್ತ ಯೆಹೂದದವರ ಬಳಿಗೂ ತನ್ನ ಸೇವಕರನ್ನು ಕಳು ಹಿಸಿ--ಅಶ್ಶೂರಿನ ಅರಸನಾದ ಸನ್ಹೇರೀಬನು ಹೀಗೆ ಹೇಳುತ್ತಾನೆ-- ನೀವು ಯೆರೂಸಲೇಮಿನ ಮುತ್ತಿಗೆ ಯಲ್ಲಿ ವಾಸವಾಗಿರುವ ಹಾಗೆ ಯಾವದರ ಮೇಲೆ ಭರವಸವುಳ್ಳವರಾಗಿದ್ದೀರಿ? ನಮ್ಮ ದೇವರಾದ ಕರ್ತನು ಅಶ್ಶೂರಿನ ಅರಸನ ಕೈಯಿಂದ ನಮ್ಮನ್ನು ಬಿಡಿಸುವನೆಂದು ಹಿಜ್ಕೀಯನು ಹೇಳಿ ಹಸಿವೆ ಯಿಂದಲೂ ದಾಹದಿಂದಲೂ ಸಾಯುವದಕ್ಕೆ ನಿಮ್ಮನ್ನು ಒಪ್ಪಿಸಿಕೊಡಲು ಪ್ರೇರೇಪಿಸುತ್ತಾನಲ್ಲವೇ? ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ? ನಾನೂ ನನ್ನ ಪಿತೃಗಳೂ ದೇಶ ಗಳ ಜನರಿಗೆ ಮಾಡಿದ್ದನ್ನು ನೀವು ತಿಳಿಯಲಿಲ್ಲವೋ? ಆ ದೇಶಗಳ ಜನಾಂಗಗಳ ದೇವರುಗಳು ಆ ದೇಶ ಗಳನ್ನು ನನ್ನ ಕೈಯೊಳಗಿಂದ ಹೇಗಾದರೂ ಬಿಡಿಸಲು ಸಾಮರ್ಥ್ಯವುಳ್ಳವುಗಳಾಗಿದ್ದವೋ? ನನ್ನ ಪಿತೃಗಳು ನಿರ್ಮೂಲ ಮಾಡಿದ ಆ ಜನಾಂಗಗಳ ಸಮಸ್ತ ದೇವ ರುಗಳಲ್ಲಿ ನನ್ನ ಕೈಯೊಳಗಿಂದ ತನ್ನ ಜನರನ್ನು ಬಿಡಿಸಲು ಸಾಮರ್ಥ್ಯವುಳ್ಳದ್ದು ಯಾವದು? ಹಾಗಾದರೆ ನಿಮ್ಮ ದೇವರು ನನ್ನ ಕೈಯೊಳಗಿಂದ ನಿಮ್ಮನ್ನು ಹೇಗೆ ಬಿಡಿಸ ಬಹುದು? ಆದದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ಈ ಪ್ರಕಾರ ನಿಮ್ಮನ್ನು ಪ್ರೇರೇಪಿಸದಿರಲಿ; ಅವನ ಮಾತು ನಂಬಬೇಡಿರಿ. ಯಾಕಂದರೆ ನನ್ನ ಕೈಯೊಳಗಿಂದಲೂ ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯೊಳಗಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು ಅನ್ನುತ್ತಾನೆ. ಹೀಗೆ ಅವನ ಸೇವಕರು ಇನ್ನೂ ಕರ್ತನಾದ ದೇವರಿಗೆ ವಿರೋಧ ವಾಗಿಯೂ ಆತನ ಸೇವಕನಾದ ಹೀಜ್ಕೀಯನಿಗೆ ವಿರೋ ಧವಾಗಿಯೂ ಮಾತನಾಡಿದರು. ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು. ಇದಲ್ಲದೆ ಅವರು ಪಟ್ಟಣ ವನ್ನು ಹಿಡಿಯುವ ಹಾಗೆ ಗೋಡೆಯ ಮೇಲೆ ಇರುವ ಯೆರೂಸಲೇಮಿನಲ್ಲಿರುವ ಜನರನ್ನು ಭಯಪಡಿಸುವ ದಕ್ಕೂ ಅವರನ್ನು ಕಳವಳಪಡಿಸುವದಕ್ಕೂ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿ ದರು. ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು. ಇದರ ನಿಮಿತ್ತ ಅರಸನಾದ ಹಿಜ್ಕೀಯನೂ ಆಮೋ ಚನ ಮಗನಾಗಿರುವ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು. ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು. ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು. ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು. ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು. ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು. ಆದಾಗ್ಯೂ ಹಿಜ್ಕೀಯನೂ ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ ಹಿಜ್ಕೀಯನ ದಿವಸಗಳಲ್ಲಿ ಕರ್ತನ ರೌದ್ರವು ಅವರ ಮೇಲೆ ಬರಲಿಲ್ಲ. ಹಿಜ್ಕೀಯನಿಗೆ ಅತ್ಯಧಿಕವಾದ ಐಶ್ವರ್ಯವೂ ಘನವೂ ಇದ್ದದ್ದರಿಂದ ಅವನು ಬೆಳ್ಳಿಬಂಗಾರ ರತ್ನ ಸುಗಂಧದ್ರವ್ಯ ಗುರಾಣಿಗಳಿಗೋಸ್ಕರವೂ ಎಲ್ಲಾ ವಿಧದ ಮನೋಹರವಾದ ಆಭರಣಗಳಿಗೋಸ್ಕರವೂ ತನಗೆ ಬೊಕ್ಕಸಗಳನ್ನು ಕಟ್ಟಿಸಿದನು. ಇದಲ್ಲದೆ ಧಾನ್ಯದ ಹುಟ್ಟುವಳಿಯೂ ದ್ರಾಕ್ಷಾರಸವೂ ಎಣ್ಣೆಯೂ ಇವುಗಳ ನಿಮಿತ್ತವಾಗಿ ಉಗ್ರಾಣಗಳನ್ನೂ ಸಕಲವಿಧ ವಾದ ಪಶುಗಳ ನಿಮಿತ್ತವಾಗಿ ಕೊಟ್ಟಿಗೆಗಳನ್ನೂ ಕುರಿ ಮಂದೆಯ ನಿಮಿತ್ತವಾಗಿ ಹಟ್ಟಿಗಳನ್ನೂ ಮಾಡಿದನು. ಇದಲ್ಲದೆ ತನಗೆ ಪಟ್ಟಣಗಳನ್ನೂ ದನಕುರಿಗಳ ಸ್ವಾಸ್ತ್ಯವನ್ನೂ ಬಹಳವಾಗಿ ಮಾಡಿಕೊಂಡನು. ದೇವರು ಅವನಿಗೆ ಬಹು ಹೆಚ್ಚಾಗಿ ಸಂಪತ್ತನ್ನು ಕೊಟ್ಟನು. ಈ ಹಿಜ್ಕೀಯನು ಗೀಹೋನೆಂಬ ಮೇಲಿನ ಕಾಲುವೆಯನ್ನು ಮುಚ್ಚಿಬಿಟ್ಟು ಅದನ್ನು ದಾವೀದನ ಪಟ್ಟಣದಲ್ಲಿ ಪಶ್ಚಿಮ ದಿಕ್ಕಿಗೆ ಕಾಲುವೆಯಾಗಿ ಬರಮಾಡಿದನು. ಹೀಗೆಯೇ ಹಿಜ್ಕೀಯನು ತನ್ನ ಸಮಸ್ತ ಕ್ರಿಯೆಗಳಲ್ಲಿ ವೃದ್ಧಿಹೊಂದಿ ದನು. ಆದರೆ ದೇಶದಲ್ಲಿ ಅದ್ಭುತಕ್ಕೋಸ್ಕರ ವಿಚಾ ರಣೆ ಮಾಡಲು ಬಾಬೆಲಿನ ಅಧಿಪತಿಗಳಿಂದ ತನ್ನ ಬಳಿಗೆ ಕಳುಹಿಸಲ್ಪಟ್ಟ ರಾಯಭಾರಿಗಳ ಕಾರ್ಯದಲ್ಲಿ ಅವನು ತನ್ನ ಹೃದಯದೊಳಗಿದ್ದದ್ದನ್ನೆಲ್ಲಾ ತಿಳುಕೊಳ್ಳುವ ಹಾಗೆ ಅವನನ್ನು ಶೋಧಿಸುವದಕ್ಕೆ ದೇವರು ಅವನನ್ನು ಬಿಟ್ಟುಬಿಟ್ಟನು. ಹಿಜ್ಕೀಯನ ಮಿಕ್ಕಾದ ಕಾರ್ಯಗಳೂ ಅವನ ಒಳ್ಳೆಯತನವೂ ಇಗೋ, ಅವು ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ದರ್ಶನದ ಪುಸ್ತಕ ದಲ್ಲಿಯೂ ಯೆಹೂದ ಇಸ್ರಾಯೇಲ್ ಅರಸುಗಳ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.ಹಿಜ್ಕೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದದರಲ್ಲಿ ಅವ ನನ್ನು ಹೂಣಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗನಾದ ಮನ ಸ್ಸೆಯು ಅವನಿಗೆ ಬದಲಾಗಿ ಆಳಿದನು. ಹಿಜ್ಕೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದದರಲ್ಲಿ ಅವ ನನ್ನು ಹೂಣಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗನಾದ ಮನ ಸ್ಸೆಯು ಅವನಿಗೆ ಬದಲಾಗಿ ಆಳಿದನು.
- 2 Chronicles 36:6–20 2 ಪೂರ್ವಕಾಲವೃತ್ತಾಂತ 36:6–20ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು. ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು. ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು. ಚಿದ್ಕೀಯನು ಆಳಲು ಆರಂಭಿಸಿದಾಗ ಅವನು ಇಪ್ಪತ್ತೊಂದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹನ್ನೊಂದು ವರುಷ ಆಳಿದನು. ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು. ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು. ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು. ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.