Jeremiah · chapter 13 · verse 15
Jeremiah 13:15 in Kannada
ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ.
Keliri, kivigodiri, garvapadabediri; kartanu maatanaadiddaane.
Jeremiah 13:15 in English
- King James Version (KJV)
- Hear ye, and give ear; be not proud: for the LORD hath spoken.
- World English Bible (WEB)
- Hear, and give ear. Don’t be proud, for the LORD has spoken.
- American Standard Version (ASV)
- Hear ye, and give ear; be not proud; for Jehovah hath spoken.
- Bible in Basic English (BBE)
- Give ear and let your ears be open; be not lifted up: for these are the words of the Lord.
- Darby Translation (DBY)
- Hear ye, and give ear, be not lifted up; for Jehovah hath spoken.
- Webster's Bible (WBS)
- Hear ye, and give ear; be not proud: for the LORD hath spoken.
- Young's Literal Translation (YLT)
- Hear, and give ear — be not haughty, For Jehovah hath spoken.
Read in context
- 13ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
- 14ಅವರ ತಂದೆಗಳನ್ನೂ ಮಕ್ಕಳನ್ನೂ ಕೂಡ ಒಬ್ಬನ ಮೇಲೊಬ್ಬನನ್ನು ಅಪ್ಪಳಿಸು ವೆನು. ನಾನು ಅವರನ್ನು ಕನಿಕರಿಸುವದಿಲ್ಲ, ಕರುಣಿಸು ವದಿಲ್ಲ ಅಂತಃಕರುಣೆಪಡುವದಿಲ್ಲ ಅವರನ್ನು ಕೆಡಿಸು ವೆನು ಎಂದು ಕರ್ತನು ಅನ್ನುತ್ತಾನೆ.
- 15ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ.
- 16ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.
- 17ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.
Cross references
- Isaiah 28:14–22 ಯೆಶಾಯ 28:14–22ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನ ರನ್ನು ಆಳುವ ಹಾಸ್ಯದ ಜನರಾದ ನೀವು ಕರ್ತನ ಮಾತನ್ನು ಕೇಳಿರಿ, ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ (ನರಕದ)ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತವಾದ ಶಿಕ್ಷೆ ಯು ಹಾದುಹೋಗುವಾಗ ನಮ್ಮ ಮೇಲೆ ಬಾರದು; ಸುಳ್ಳನ್ನು ನಮ್ಮ ಆಶ್ರಯವಾಗಿ ಮಾಡಿಕೊಂಡು ಮೋಸದಲ್ಲಿ ಅಡಗಿಕೊಂಡಿದ್ದೇವೆ ಎಂದು ನೀವು ಅನ್ನುತ್ತೀರಲ್ಲಾ? ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ). ನಾನು ನ್ಯಾಯವನ್ನು ನೂಲ ನ್ನಾಗಿಯೂ ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು (ಗುಡಿಸಿ) ಬಡಿದುಕೊಂಡು ಹೋಗುವದು, ಅಡ ಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿಬಿಡು ವದು. ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವದಿಲ್ಲ; ವಿಪರೀತ ಬಾಧೆಯು ಹಾದುಹೋಗುವಾಗ ನೀವು ಅದರಿಂದ ತುಳಿಯಲ್ಪಡುವಿರಿ. ಅದು ಹಾದು ಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವದು. ಅದು ಹೊತ್ತಾರೆಯಿಂದ ಹೊತ್ತಾರೆಗೆ (ಬೆಳಬೆಳಕೂ) ಹಗಲು ರಾತ್ರಿಯೂ ಹಾದು ಹೋಗುವದು; ಅದರ ಸುದ್ದಿ ಯನ್ನು ತಿಳುಕೊಳ್ಳುವದರಿಂದ ಭಯವಾಗುವದು. ಮೈ ಚಾಚುವದಕ್ಕೆ ಅವನ ಹಾಸಿಗೆ ಚಿಕ್ಕದಾಗಿರು ವದು. ಮುದುರಿಕೊಂಡು ಮಲಗೇನಂದರೆ ಹೊದಿ ಕೆಯ ಅಗಲ ಸಾಲದು; ಕರ್ತನು ಪೆರಾಚೀಮ್ ಪರ್ವತದಲ್ಲಿ ಅದರ ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ ಅಪರೂಪವಾದ ತನ್ನ ಕೆಲಸ ವನ್ನು ನಡಿಸಿ ಅಪೂರ್ವವಾದ ತನ್ನ ಕಾರ್ಯವನ್ನು ನೇರವೇರಿಸುವನು. ಹೀಗಿರುವದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗ ಬೇಡಿರಿ; ಸೈನ್ಯಗಳ ಕರ್ತನಾದ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರವು ನಿರ್ಣಯಿಸಿದೆ ಎಂಬದನ್ನು ನಾನು ಕೇಳಿದ್ದೇನೆ.
- Revelation 2:29 ಪ್ರಕಟನೆ 2:29ಆತ್ಮನು ಸಭೆಗಳಿಗೆ ಹೇಳುವ ದನ್ನು ಕಿವಿಯುಳ್ಳವನು ಕೇಳಲಿ.
- Joel 1:2 ಯೋವೇಲ 1:2ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ; ಇದು ನಿಮ್ಮ ದಿವಸಗಳಲ್ಲಾದರೂ ನಿಮ್ಮ ತಂದೆಗಳ ದಿವಸಗಳಲ್ಲಾದರೂ ಉಂಟಾಯಿತೋ?
- James 4:10 ಯಾಕೋಬನು 4:10ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
- Acts 4:19–20 ಅಪೊಸ್ತಲರ ಕೃತ್ಯಗಳು 4:19–20ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ. ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
- Amos 7:15 ಆಮೋಸ 7:15ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆ ಯಲ್ಲಿ ಕರ್ತನು ನನ್ನನ್ನು ಕರೆದು ಹೇಳಿದ್ದೇನಂದರೆ--ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದಿಸು.
- Jeremiah 26:15 ಯೆರೆಮೀಯ 26:15ಆದರೂ ನೀವು ನನ್ನನ್ನು ಕೊಂದುಹಾಕಿದರೆ ನಿಮ್ಮ ಮೇಲೆಯೂ ಈ ಪಟ್ಟಣದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಅಪರಾಧವಿಲ್ಲದ ರಕ್ತವನ್ನು ಬರಮಾಡು ತ್ತೀರೆಂದು ನಿಶ್ಚಯವಾಗಿ ತಿಳುಕೊಳ್ಳಿರಿ, ಈ ವಾಕ್ಯಗಳ ನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಅಂದನು.
- Isaiah 42:23 ಯೆಶಾಯ 42:23ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಕೊಡುವರು, ಯಾರು ಇನ್ನು ಮುಂದೆ ಆಲಿಸಿ ಕೇಳುವರು?