Jeremiah · chapter 2 · verse 18
Jeremiah 2:18 in Kannada
ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ?
Eega sihorina neeru kudiyuvadakkaagi aiguptada daariyalli ninagenu kelasa? Illave nadiya neeru kudi yuvadakkaagi ashshoorina daariyalli ninagenu kelasa?
Jeremiah 2:18 in English
- King James Version (KJV)
- And now what hast thou to do in the way of Egypt, to drink the waters of Sihor? or what hast thou to do in the way of Assyria, to drink the waters of the river?
- World English Bible (WEB)
- Now what do you gain by going to Egypt, to drink the waters of the Shihor? Or why do you go on the way to Assyria, to drink the waters of the River?
- American Standard Version (ASV)
- And now what hast thou to do in the way to Egypt, to drink the waters of the Shihor? or what hast thou to do in the way to Assyria, to drink the waters of the River?
- Bible in Basic English (BBE)
- And now, what have you to do on the way to Egypt, to get your drink from the waters of the Nile? or what have you to do on the way to Assyria, to get your drink from the waters of the River?
- Darby Translation (DBY)
- And now, what hast thou to do with the way of Egypt, to drink the waters of Shihor? And what hast thou to do with the way of Assyria, to drink the waters of the River?
- Webster's Bible (WBS)
- And now what hast thou to do in the way of Egypt, to drink the waters of Sihor? or what hast thou to do in the way of Assyria, to drink the waters of the river?
- Young's Literal Translation (YLT)
- And now, what — to thee in the way of Egypt, To drink the waters of Sihor? And what — to thee in the way of Asshur, To drink the waters of the River?
Read in context
- 16ನೋಫ್ ಮತ್ತು ತಪನೆಯ ಮಕ್ಕಳೂ ಸಹ ನಿನ್ನ ತಲೆಯ ಕಿರೀಟವನ್ನು ಮುರಿದುಬಿಟ್ಟಿದ್ದಾರೆ.
- 17ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
- 18ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ?
- 19ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- 20ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
Cross references
- Joshua 13:3 ಯೆಹೋಶುವ 13:3ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ;
- Isaiah 31:1 ಯೆಶಾಯ 31:1ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವ ಬಲವನ್ನು ರಥವನ್ನು ಆಶ್ರಯಿಸುವವರಿಗೆ ಅಯ್ಯೊ! ರಥಗಳು ಬಹಳವೆಂದೂ ಸವಾರರು ಬಹು ಬಲಿಷ್ಠರೆಂದೂ ಅವರ ಮೇಲೆ ಭರವಸವಿಡುತ್ತಾರೆ. ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವದಿಲ್ಲ; ಇಲ್ಲವೆ ಕರ್ತನನ್ನು ಆಶ್ರಯಿಸು (ಹುಡು ಕು)ವದಿಲ್ಲ.
- Hosea 7:11 ಹೋಶೇಯ 7:11ಎಫ್ರಾಯಾಮು ಸಹ ಹೃದಯವಿಲ್ಲದ ಬುದ್ಧಿಹೀನವಾದ ಪಾರಿವಾಳದ ಹಾಗಿದ್ದಾನೆ; ಅವರು ಐಗುಪ್ತವನ್ನು ಕರೆಯುತ್ತಾರೆ, ಅವರು ಅಶ್ಯೂರಕ್ಕೆ ಹೋಗುತ್ತಾರೆ.
- Jeremiah 2:36 ಯೆರೆಮೀಯ 2:36ನಿನ್ನ ಮಾರ್ಗವನ್ನು ಬೇರೆಮಾಡಿಕೊಳ್ಳುವಷ್ಟು ಏಕೆ ತಿರುಗಾಡುತ್ತೀ? ನೀನು ಅಶ್ಶೂರಿನ ನಿಮಿತ್ತ ನಾಚಿಕೆ ಪಟ್ಟ ಹಾಗೆ ಐಗುಪ್ತದ ನಿಮಿತ್ತವೂ ನಾಚಿಕೆಪಡುವಿ.ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟುಹೋಗುವಿ; ಕರ್ತನು ನಿನ್ನ ಭರವಸೆಗಳನ್ನು ತಿರಸ್ಕರಿಸಿದ್ದಾನೆ, ಅವುಗಳಲ್ಲಿ ನಿನಗೆ ಸಫಲವಾಗುವದಿಲ್ಲ.
- Ezekiel 17:15 ಯೆಹೆಜ್ಕೇಲನು 17:15ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ?
- Hosea 5:13 ಹೋಶೇಯ 5:13ಎಫ್ರಾಯಾಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ ಎಫ್ರಾಯೀಮ್ ಅಶ್ಯೂರಕ್ಕೆ ಹೋಗಿ ಅರಸನಾದ ಯಾರೇಬನ ಬಳಿಗೆ ಕಳುಹಿಸಿತು; ಆದಾಗ್ಯೂ ಅವನು ನಿಮ್ಮನ್ನು ಸ್ವಸ್ಥಮಾಡ ಲಿಲ್ಲ, ಇಲ್ಲವೆ ನಿಮ್ಮ ಗಾಯವನ್ನು ಗುಣಪಡಿಸಲೂ ಇಲ್ಲ.
- Isaiah 30:1–7 ಯೆಶಾಯ 30:1–7ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ. ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ. ಆದಕಾರಣ ಫರೋಹನ ಬಲವು ನಿಮಗೆ ನಾಚಿಕೆಯೂ ಐಗುಪ್ತದ ನೆರಳಿನ ಭರವಸದಿಂದ ನಿಮ ಗೆ ನಿಂದೆಯೂ ಉಂಟಾಗುವದು. ಅವನ ಪ್ರಧಾ ನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿ ಗಳು ಹಾನೇಸಿಗೆ ಬಂದಿದ್ದಾರೆ. ತಮಗೆ ಪ್ರಯೋ ಜನವಾಗದೆ ಸಹಾಯಕ್ಕೂ ಪ್ರಯೋಜನಕ್ಕೂ ಅಲ್ಲ, ನಿಂದೆಗೂ ನಾಚಿಕೆಗೂ ಇರುವ ಜನಕ್ಕೆ ಎಲ್ಲರೂ ನಾಚಿಕೆಪಡುತ್ತಾರೆ. ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ. ಐಗುಪ್ತ್ಯರ ಸಹಾಯವು ವ್ಯರ್ಥವೇ ವ್ಯರ್ಥ. ಆದದರಿಂದ ಇದನ್ನು ಕುರಿತು ಅವರ ಬಲವು ನಿಂತುಹೋಗಿದೆ ಎಂದು ನಾನು ಕೂಗಿದ್ದೇನೆ.
- 2 Chronicles 28:20–21 2 ಪೂರ್ವಕಾಲವೃತ್ತಾಂತ 28:20–21ಆಗ ಅಶ್ಶೂರಿನ ಅರಸನಾದ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು ಅವನನ್ನು ಬಲಪಡಿಸದೆ ಬಾಧೆಪಡಿಸಿ ದನು. ಆಹಾಜನು ಕರ್ತನ ಮನೆಯಿಂದಲೂ ಅರಮನೆಯಿಂದಲೂ ಪ್ರಧಾನರಿಂದಲೂ ಒಂದು ಪಾಲನ್ನು ತೆಗೆದುಕೊಂಡು ಅಶ್ಶೂರಿನ ಅರಸನಿಗೆ ಕೊಟ್ಟನು; ಆದರೆ ಅವನು ಇವನಿಗೆ ಸಹಾಯ ಮಾಡದೆ ಹೋದನು.
- 2 Kings 16:7–9 2 ಅರಸುಗಳು 16:7–9ಆದರೆ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇ ಸೆರನಿಗೆ--ನಾನು ನಿನ್ನ ಸೇವಕನೂ ನಿನ್ನ ಮಗನೂ ಆಗಿದ್ದೇನೆ; ನನಗೆ ವಿರೋಧವಾಗಿ ಎದ್ದ ಅರಾಮ್ಯರ ಅರಸನ ಕೈಗೂ ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ ರಕ್ಷಿಸುವ ಹಾಗೆ ಬರ ಹೇಳು ಅಂದನು. ಇದಲ್ಲದೆ ಆಹಾಜನು ಕರ್ತನ ಮನೆಯಲ್ಲಿಯೂ ಅರಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಬೆಳ್ಳಿ ಬಂಗಾರವನ್ನು ತಕ್ಕೊಂಡು ಕಾಣಿಕೆಯಾಗಿ ಅಶ್ಶೂರಿನ ಅರಸನಿಗೆ ಕಳುಹಿ ಸಿದನು. ಆಗ ಅಶ್ಶೂರಿನ ಅರಸನು ಅವನ ಮಾತು ಕೇಳಿ ದಮಸ್ಕಕ್ಕೆ ಹೋಗಿ ಅದನ್ನು ಹಿಡಿದು ಅದರ ನಿವಾಸಿಗಳನ್ನು ಕೀರ್ ಪ್ರಾಂತಕ್ಕೆ ಸೆರೆಯಾಗಿ ತಂದು ರೆಚೀನನನ್ನು ಕೊಂದುಹಾಕಿದನು.
- Jeremiah 37:5–10 ಯೆರೆಮೀಯ 37:5–10ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತು; ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ ಯೆರೂಸಲೇಮನ್ನು ಬಿಟ್ಟುಹೋದರು. ಆಗ ಕರ್ತನ ವಾಕ್ಯವು ಪ್ರವಾದಿಯಾದ ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ನನ್ನ ಬಳಿಯಲ್ಲಿ ವಿಚಾರಿಸುವದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನಂದರೆ--ಇಗೋ, ನಿಮ್ಮ ಸಹಾಯಕ್ಕೆ ಹೊರಟ ಫರೋಹನ ಸೈನ್ಯವು ಅದರ ಸ್ವದೇಶವಾದ ಐಗುಪ್ತಕ್ಕೆ ಹಿಂತಿರುಗುವದು. ಕಸ್ದೀಯರು ತಿರುಗಿಕೊಂಡು ಈ ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು. ಕರ್ತನು ಹೀಗೆ ಹೇಳುತ್ತಾನೆ--ಕಸ್ದೀ ಯರು ನಿಜವಾಗಿ ನಮ್ಮನ್ನು ಬಿಟ್ಟುಹೋಗುವರೆಂದು ನಿಮಗೆ ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ. ನಿಮ್ಮ ಸಂಗಡ ಯುದ್ಧ ಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿ ದ್ದಾಗ್ಯೂ ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.
- Lamentations 4:17 ಪ್ರಲಾಪಗಳು 4:17ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು; ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.