Jeremiah · chapter 21 · verse 2
Jeremiah 21:2 in Kannada
ಅವನ ಬಳಿಗೆ ಕಳುಹಿಸಿ--ನಮಗೋಸ್ಕರ ಕರ್ತನನ್ನು ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ; ಒಂದು ವೇಳೆ ಅವನು ನಮ್ಮನ್ನು ಬಿಟ್ಟು ಹೊರಟುಹೋಗುವ ಹಾಗೆ ಕರ್ತನು ತನ್ನ ಎಲ್ಲಾ ಅದ್ಭುತಗಳ ಪ್ರಕಾರ ನಮಗೆ ಮಾಡುತ್ತಾನೆಂದು ಹೇಳಿಸಿದಾಗ ಯೆರೆವಿಾಯನಿಗೆ ಕರ್ತನ ವಾಕ್ಯವು ಬಂತು.
Avana balige kaluhisi--namagoskara kartanannu vichaarisu; baabelina arasanaada nebookadnechcharanu namage virodhavaagi yuddhamaaduttaane; ondu vele avanu nammannu bittu horatuhoguva haage kartanu tanna ellaa adbhutagala prakaara namage maaduttaanendu helisidaaga yereviాyanige kartana vaakyavu bantu.
Jeremiah 21:2 in English
- King James Version (KJV)
- Enquire, I pray thee, of the LORD for us; for Nebuchadrezzar king of Babylon maketh war against us; if so be that the LORD will deal with us according to all his wondrous works, that he may go up from us.
- World English Bible (WEB)
- “Please inquire of the LORD for us; for Nebuchadnezzar king of Babylon makes war against us. Perhaps the LORD will deal with us according to all his wondrous works, that he may withdraw from us.”
- American Standard Version (ASV)
- Inquire, I pray thee, of Jehovah for us; for Nebuchadrezzar king of Babylon maketh war against us: peradventure Jehovah will deal with us according to all his wondrous works, that he may go up from us.
- Bible in Basic English (BBE)
- Will you get directions from the Lord for us; for Nebuchadrezzar, king of Babylon, is making war against us; it may be that the Lord will do something for us like all the wonders he has done, and make him go away from us.
- Darby Translation (DBY)
- Inquire, I pray thee, of Jehovah for us; for Nebuchadrezzar the king of Babylon maketh war against us; if so be that Jehovah will deal with us according to all his marvellous works, that he may go up from us.
- Webster's Bible (WBS)
- Inquire, I pray thee, of the LORD for us; for Nebuchadnezzar king of Babylon maketh war against us; it may be that the LORD will deal with us according to all his wondrous works, that he may go up from us.
- Young's Literal Translation (YLT)
- 'Inquire, we pray thee, for us at Jehovah, for Nebuchadrezzar king of Babylon hath fought against us; perhaps Jehovah doth deal with us according to all His wonders, and doth cause him to go up from off us.'
Read in context
- 1ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನೂ ಯಾಜಕನಾದ ಚೆಫನ್ಯನನ್ನೂ
- 2ಅವನ ಬಳಿಗೆ ಕಳುಹಿಸಿ--ನಮಗೋಸ್ಕರ ಕರ್ತನನ್ನು ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ; ಒಂದು ವೇಳೆ ಅವನು ನಮ್ಮನ್ನು ಬಿಟ್ಟು ಹೊರಟುಹೋಗುವ ಹಾಗೆ ಕರ್ತನು ತನ್ನ ಎಲ್ಲಾ ಅದ್ಭುತಗಳ ಪ್ರಕಾರ ನಮಗೆ ಮಾಡುತ್ತಾನೆಂದು ಹೇಳಿಸಿದಾಗ ಯೆರೆವಿಾಯನಿಗೆ ಕರ್ತನ ವಾಕ್ಯವು ಬಂತು.
- 3ಆಗ ಯೆರೆವಿಾಯನು ಅವರಿಗೆ ಹೇಳಿದ್ದೇನಂ ದರೆ--ಚಿದ್ಕೀಯನಿಗೆ ಹೀಗೆ ಹೇಳಿರಿ--
- 4ಇಸ್ರಾಯೇ ಲಿನ ದೇವರಾದ ಯೆಹೋವನು ಹೇಳುವದೇನಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬೆಲಿನ ಅರಸನಿಗೂ ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿ ಬರುವಂತೆ ಮಾಡುತ್ತೇನೆ.
Cross references
- Jeremiah 37:3 ಯೆರೆಮೀಯ 37:3ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ ಪ್ರವಾದಿಯಾದ ಯೆರೆವಿಾಯನ ಬಳಿಗೆ ಕಳುಹಿಸಿ--ನಮ್ಮ ದೇವರಾದ ಕರ್ತನಿಗೆ ನಮಗೋಸ್ಕರ ಪ್ರಾರ್ಥನೆ ಮಾಡೆಂದು ಹೇಳಿಸಿದನು.
- Jeremiah 37:7 ಯೆರೆಮೀಯ 37:7ನನ್ನ ಬಳಿಯಲ್ಲಿ ವಿಚಾರಿಸುವದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನಂದರೆ--ಇಗೋ, ನಿಮ್ಮ ಸಹಾಯಕ್ಕೆ ಹೊರಟ ಫರೋಹನ ಸೈನ್ಯವು ಅದರ ಸ್ವದೇಶವಾದ ಐಗುಪ್ತಕ್ಕೆ ಹಿಂತಿರುಗುವದು.
- Ezekiel 20:1–3 ಯೆಹೆಜ್ಕೇಲನು 20:1–3ಏಳನೆಯ ವರುಷದ ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಆದದ್ದೇನಂದರೆ-- ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಕರ್ತನ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತು ಕೊಂಡರು. ಆಮೇಲೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ, ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವ ರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಬಳಿಗೆ ವಿಚಾರಣೆಗಾಗಿ ಬಂದಿರೋ? ನನ್ನ ಜೀವದಾಣೆ, ನಾನು ನಿಮ್ಮಿಂದ ವಿಚಾರಿಸಲ್ಪಡುವದಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 42:4–6 ಯೆರೆಮೀಯ 42:4–6ಆಗ ಪ್ರವಾದಿಯಾದ ಯೆರೆವಿಾ ಯನು ಅವರಿಗೆ--ನಾನು ಕೇಳಿದ್ದೇನೆ; ಇಗೋ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡುತ್ತೇನೆ; ಕರ್ತನು ನಿಮಗೆ ಯಾವ ಉತ್ತರವನ್ನು ಕೊಡುವನೋ ಅದನ್ನು ನಿಮಗೆ ತಿಳಿಸು ವೆನು; ಒಂದು ಮಾತನ್ನಾದರೂ ನಿಮ್ಮಿಂದ ಹಿಂತೆಗೆ ಯುವದಿಲ್ಲವೆಂದು ಹೇಳಿದನು. ಆಗ ಅವರು ಯೆರೆ ವಿಾಯನಿಗೆ ಹೇಳಿದ್ದೇನಂದರೆ--ನಿನ್ನ ದೇವರಾದ ಕರ್ತನು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾನೋ ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ ಕರ್ತನು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಕರ್ತನ ಸ್ವರವನ್ನು ಕೇಳುವಾಗ ನಮಗೆ ಒಳ್ಳೇದಾ ಗುವ ಹಾಗೆ ನಾವು ಯಾವಾತನ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ ಆ ನಮ್ಮ ದೇವರಾದ ಕರ್ತನ ಸ್ವರವನ್ನು ಅದು ಒಳ್ಳೇದ್ದಾದರೂ ಸರಿಯೇ ಕೆಟ್ಟದ್ದಾದರೂ ಸರಿಯೇ ಕೇಳುವೆವು ಅಂದರು.
- 1 Samuel 28:6 1 ಸಮುವೇಲನು 28:6ಸೌಲನು ಕರ್ತನನ್ನು ಕೇಳಿಕೊಂಡಾಗ ಕರ್ತನು ಅವನಿಗೆ ಸ್ವಪ್ನಗ ಳಿಂದಲಾದರೂ ಊರೀಮಿನಿಂದಲಾದರೂ ಪ್ರವಾದಿ ಗಳಿಂದಲಾದರೂ ಪ್ರತ್ಯುತ್ತರಕೊಡಲಿಲ್ಲ.
- Psalm 44:1–4 ಕೀರ್ತನೆಗಳು 44:1–4ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ. ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ. ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ. ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.
- 1 Kings 14:2–3 1 ಅರಸುಗಳು 14:2–3ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ವೇಷಹಾಕಿಕೊಂಡು ಶೀಲೋವಿಗೆ ಹೋಗು; ಇಗೋ--ಈ ಜನರ ಮೇಲೆ ನೀನು ಅರಸನಾಗಿರುವಿ ಎಂದು ನನಗೆ ಹೇಳಿದ ಪ್ರವಾದಿಯಾದ ಅಹೀಯನು ಅಲ್ಲಿದ್ದಾನೆ. ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ ಭಕ್ಷ್ಯಗಳನ್ನೂ ಒಂದು ಮಡಕೆ ಜೇನು ತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವದನ್ನು ನಿನಗೆ ತಿಳಿಸುವನು ಅಂದನು.
- 1 Samuel 28:15 1 ಸಮುವೇಲನು 28:15ಆಗ ಸಮುವೇಲನು ಸೌಲನಿಗೆ--ನೀನು ನನ್ನನ್ನು ಏರಿ ಬರ ಮಾಡಿ ಯಾಕೆ ವಿಶ್ರಾಂತಿಯನ್ನು ಕೆಡಿಸಿದಿ ಅಂದನು. ಅದಕ್ಕೆ ಸೌಲನು--ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ; ಯಾಕಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧ ಮಾಡುತ್ತಾರೆ; ಆದರೆ ದೇವರು ನನ್ನನ್ನು ಬಿಟ್ಟುಹೋದನು. ಆತನು ಪ್ರವಾದಿಗಳ ಮುಖಾಂತರ ವಾದರೂ ಸ್ವಪ್ನದ ಮುಖಾಂತರವಾದರೂ ನನಗೆ ಪ್ರತ್ಯುತ್ತರಕೊಡಲಿಲ್ಲ; ಆದದರಿಂದ ನಾನು ಮಾಡ ಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು ಅಂದನು.
- Jeremiah 39:1–2 ಯೆರೆಮೀಯ 39:1–2ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು. ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು.
- Judges 20:27 ನ್ಯಾಯಸ್ಥಾಪಕರು 20:27ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಅವರ ಮುಂದೆ ನಿಂತಿದ್ದರಿಂದಲೂ, ಇಸ್ರಾಯೇಲ್ ಮಕ್ಕಳು
- Exodus 14:1–15 ವಿಮೋಚನಕಾಂಡ 14:1–15ಕರ್ತನು ಮಾತನಾಡಿ ಮೋಶೆಗೆ-- ಇಸ್ರಾಯೇಲ್ ಮಕ್ಕಳು ತಿರುಗಿಕೊಂಡು ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಹೇಳು. ಅದಕ್ಕೆ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳುಕೊಳ್ಳ ಬೇಕು. ಫರೋಹನು ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ--ಅವರು ದೇಶದಲ್ಲಿ ಸಿಕ್ಕಿಕೊಂಡರು. ಅರಣ್ಯವು ಅವರನ್ನು ಒಳಗೆ ಮುಚ್ಚಿಬಿಟ್ಟಿತು ಎಂದು ಹೇಳುವನು. ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು. ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು. ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು. ಇದಲ್ಲದೆ ಅವನು ಆರಿಸಿಕೊಂಡ ಆರು ನೂರು ರಥಗಳನ್ನೂ ಐಗುಪ್ತದ ಎಲ್ಲಾ ರಥಗಳನ್ನೂ ಅವುಗಳ ಮೇಲೆ ಅಧಿ ಪತಿಗಳನ್ನೂ ತೆಗೆದುಕೊಂಡು ಹೋದನು. ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು. ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು. ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು. ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ? ನಾವು ಐಗುಪ್ತದೇಶ ದಲ್ಲಿದ್ದಾಗಲೇ--ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ಸೇವೆಮಾಡುವೆವು. ನಾವು ಅರಣ್ಯ ದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ಸೇವೆ ಮಾಡು ವದು ಒಳ್ಳೇದಾಗಿತ್ತಲ್ಲವೇ ಎಂದು ಹೇಳಿದರು. ಅದಕ್ಕೆ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ; ಕದಲದೆ ನಿಲ್ಲಿರಿ; ಕರ್ತನು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವದಿಲ್ಲ. ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು. ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.
- Psalm 48:4–8 ಕೀರ್ತನೆಗಳು 48:4–8ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು; ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು. ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು. ಮೂಡಣ ಗಾಳಿಯಿಂದ ತಾರ್ಷಿಷ್ ಹಡಗುಗಳನ್ನು ನೀನು ಒಡೆಯುತ್ತೀ. ನಾವು ಹೇಗೆ ಕೇಳಿದೆವೋ ಹಾಗೆಯೇ ಸೈನ್ಯಗಳ ಕರ್ತನ ಪಟ್ಟಣದಲ್ಲಿ, ಅಂದರೆ ನಮ್ಮ ದೇವರ ಪಟ್ಟಣದಲ್ಲಿಯೇ ನೋಡಿದೆವು; ದೇವರು ಅದನ್ನು ಎಂದೆಂದಿಗೂ ಸ್ಥಿರಪಡಿಸುವನು. ಸೆಲಾ.