Jeremiah · chapter 22 · verse 1
Jeremiah 22:1 in Kannada
ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಅಲ್ಲಿ ಈ ವಾಕ್ಯವನ್ನು ಹೇಳು.
Kartanu heege heluttaane--yehoodada arasana manege ilidu hogi alli ee vaakyavannu helu.
Jeremiah 22:1 in English
- King James Version (KJV)
- Thus saith the LORD; Go down to the house of the king of Judah, and speak there this word,
- World English Bible (WEB)
- The LORD said, “Go down to the house of the king of Judah, and speak this word there:
- American Standard Version (ASV)
- Thus said Jehovah: Go down to the house of the king of Judah, and speak there this word,
- Bible in Basic English (BBE)
- This is what the Lord has said: Go down to the house of the king of Judah and there give him this word,
- Darby Translation (DBY)
- Thus saith Jehovah: Go down to the house of the king of Judah, and speak there this word,
- Webster's Bible (WBS)
- Thus saith the LORD; Go down to the house of the king of Judah, and speak there this word,
- Young's Literal Translation (YLT)
- Thus said Jehovah, 'Go down [to] the house of the king of Judah, and thou hast spoken there this word, and hast said,
Read in context
- 1ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಅಲ್ಲಿ ಈ ವಾಕ್ಯವನ್ನು ಹೇಳು.
- 2ಹೇಗಂದರೆ--ದಾವೀ ದನ ಸಿಂಹಾಸನದ ಮೇಲೆ ಕೂತುಕೊಳ್ಳುವ ಯೆಹೂದದ ಅರಸನೇ, ನೀನೂ ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಕರ್ತನ ವಾಕ್ಯವನ್ನು ಕೇಳಲಿ, ಕರ್ತನು ಹೇಳುವದೇನಂದರೆ--
- 3ನ್ಯಾಯವನ್ನೂ ನೀತಿಯನ್ನೂ ನಡಿಸಿರಿ; ಸುಲಿಗೆಯಾದ ವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ; ಪರದೇಶಸ್ಥನಿಗೆ ದಿಕ್ಕಿಲ್ಲದವನಿಗೆ ವಿಧವೆಗೆ ಉಪದ್ರವವ ನ್ನಾದರೂ ಬಲಾತ್ಕಾರವನ್ನಾದರೂ ಮಾಡಬೇಡಿರಿ; ಇಲ್ಲವೆ ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲ ಬೇಡಿರಿ.
Cross references
- Jeremiah 34:2 ಯೆರೆಮೀಯ 34:2ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕ ದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸುತ್ತೇನೆ; ಅವನು ಅದನ್ನು ಬೆಂಕಿಯಿಂದ ಸುಡು ವನು.
- 2 Samuel 12:1 2 ಸಮುವೇಲನು 12:1ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.
- Amos 7:13 ಆಮೋಸ 7:13ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ; ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ ರಾಜನ ಅರಮನೆಯಾಗಿಯೂ ಇದೆ.
- Luke 3:19–20 ಲೂಕನು 3:19–20ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು.
- 2 Chronicles 25:15–16 2 ಪೂರ್ವಕಾಲವೃತ್ತಾಂತ 25:15–16ಆದಕಾರಣ ಕರ್ತನ ಕೋಪವು ಅಮಚ್ಯನ ಮೇಲೆ ಹೊತ್ತಿತು; ಆತನು ಅವನ ಬಳಿಗೆ ಪ್ರವಾದಿ ಯನ್ನು ಕಳುಹಿಸಿದನು. ಅವನು ಅವನಿಗೆ--ತಮ್ಮ ಜನ ರನ್ನು ನಿನ್ನ ಕೈಯಿಂದ ತಪ್ಪಿಸಲಾರದ ದೇವರುಗಳನ್ನು ನೀನು ಹುಡುಕುವದೇನು ಅಂದನು. ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು.
- 1 Kings 21:18–20 1 ಅರಸುಗಳು 21:18–20ನೀನೆದ್ದು ಸಮಾರ್ಯದ ಲ್ಲಿರುವ ಇಸ್ರಾಯೇಲಿನ ಅರಸನಾದ ಅಹಾಬನಿಗೆದು ರಾಗಿ ಹೋಗು; ಇಗೋ, ಅವನು ನಾಬೋತನ ದ್ರಾಕ್ಷೇ ತೋಟದಲ್ಲಿದ್ದಾನೆ; ಅದನ್ನು ಸ್ವಾಧೀನ ಮಾಡಿ ಕೊಳ್ಳಲು ಅಲ್ಲಿಗೆ ಹೋಗಿದ್ದಾನೆ. ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು. ಆಗ ಅಹಾಬನು ಎಲೀಯನಿಗೆ--ನನ್ನ ಶತ್ರುವೇ, ನೀನು ನನ್ನನ್ನು ಕಂಡುಕೊಂಡಿಯಾ ಅಂದನು. ಅದಕ್ಕ ವನು--ಕಂಡುಕೊಂಡೆನು;
- 2 Chronicles 33:10 2 ಪೂರ್ವಕಾಲವೃತ್ತಾಂತ 33:10ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.
- 2 Samuel 24:11–12 2 ಸಮುವೇಲನು 24:11–12ದಾವೀದನು ಉದಯದಲ್ಲಿ ಎದ್ದಾಗ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಕರ್ತನ ವಾಕ್ಯ ಉಂಟಾಗಿ ಅವನಿಗೆ-- ನೀನು ಹೋಗಿ ದಾವೀದ ನಿಗೆ--ಮೂರು ವಿಷಯಗಳನ್ನು ನಾನು ನಿನ್ನ ಮುಂದೆ ಇಡುವೆನು. ನಾನು ನಿನಗೆ ಮಾಡುವ ಹಾಗೆ ಅವುಗ ಳಲ್ಲಿ ಒಂದನ್ನು ಆದುಕೋ ಎಂದು ಕರ್ತನು ಹೇಳು ತ್ತಾನೆ ಅಂದನು.
- 1 Samuel 15:16–23 1 ಸಮುವೇಲನು 15:16–23ಆಗ ಸಮುವೇಲನು ಸೌಲನಿಗೆಅದಿರಲಿ ಕರ್ತನು ಈ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುವೆನು ಅಂದನು. ಅದಕ್ಕವನು--ಹೇಳು ಅಂದನು. ಸಮುವೇಲನು--ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಇಸ್ರಾಯೇಲ್ ಗೋತ್ರಗಳ ಮೇಲೆ ಯಜಮಾನನಾಗಿ ಮಾಡಲ್ಪಟ್ಟಿಯಲ್ಲವೋ? ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿ ಅಭಿಷೇಕಿಸಿ ದನಲ್ಲವೋ? ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ ಅವರು ತೀರಿಹೋಗುವ ವರೆಗೂ ಅವರ ಸಂಗಡ ಯುದ್ಧಮಾಡಬೇಕೆಂದು ಕರ್ತನು ನಿನ್ನನ್ನು ಕಳುಹಿಸಿದನು. ಹೀಗಿರುವಾಗ ನೀನು ಯಾಕೆ ಕರ್ತನ ಮಾತಿಗೆ ವಿಧೇಯನಾಗದೆ ಕೊಳ್ಳೆಯ ಮೇಲೆ ಬಿದ್ದು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ ಅಂದನು. ಆಗ ಸೌಲನು ಸಮುವೇಲನಿಗೆ--ಹೌದು, ನಾನು ಕರ್ತನ ಮಾತಿಗೆ ವಿಧೇಯನಾಗಿ, ಕರ್ತನು ನನ್ನನ್ನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು. ಆದರೆ ಜನರು ನಿನ್ನ ದೇವರಾದ ಕರ್ತನಿಗೆ ಗಿಲ್ಗಾಲಿ ನಲ್ಲಿ ಬಲಿ ಕೊಡುವದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣ ವಾಗಿ ನಾಶಮಾಡಬೇಕೆಂದಿರುವ ಕುರಿ ಪಶುಗಳಲ್ಲಿ ಮೇಲ್ತರವಾದವುಗಳನ್ನು ಹಿಡುಕೊಂಡು ಬಂದರು ಅಂದನು. ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು. ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
- Hosea 5:1 ಹೋಶೇಯ 5:1ಓ ಯಾಜಕರೇ, ಇದನ್ನು ನೀವು ಕೇಳಿರಿ, ಇಸ್ರಾಯೇಲಿನ ಮನೆತನದವರೇ, ನೀವು ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ, ನೀವು ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರ್ಲಾಗಿಯೂ ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.
- Jeremiah 21:11 ಯೆರೆಮೀಯ 21:11ಯೆಹೂದದ ಅರಸನ ಮನೆಯವರಿಗೆ ಹೀಗೆ ಹೇಳು--
- Mark 6:18 ಮಾರ್ಕನು 6:18ಆದರೆ ಯೋಹಾ ನನು ಹೆರೋದನಿಗೆ--ನಿನ್ನ ಸಹೋದರನ ಹೆಂಡತಿ ಯನ್ನು ಇಟ್ಟುಕೊಂಡಿರುವದು ನ್ಯಾಯವಲ್ಲವೆಂದು ಹೇಳಿ ದ್ದನು.