Jeremiah · chapter 23 · verse 19
Jeremiah 23:19 in Kannada
ಇಗೋ, ಕರ್ತನ ಬಿರುಗಾಳಿ ಉಗ್ರವಾಗಿ ಹೊರಟಿದೆ; ಅಘೋರ ವಾದ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣ ವಾಗಿ ಬೀಳುವದು.
Igo, kartana birugaali ugravaagi horatide; aghora vaada birugaaliyu dushtara taleya mele kathina vaagi beeluvadu.
Jeremiah 23:19 in English
- King James Version (KJV)
- Behold, a whirlwind of the LORD is gone forth in fury, even a grievous whirlwind: it shall fall grievously upon the head of the wicked.
- World English Bible (WEB)
- Behold, the LORD’s storm, his wrath, has gone out. Yes, a whirling storm! It will burst on the head of the wicked.
- American Standard Version (ASV)
- Behold, the tempest of Jehovah, [even his] wrath, is gone forth, yea, a whirling tempest: it shall burst upon the head of the wicked.
- Bible in Basic English (BBE)
- See, the storm-wind of the Lord, even the heat of his wrath, has gone out, a rolling storm, bursting on the heads of the evil-doers.
- Darby Translation (DBY)
- Behold, a tempest of Jehovah, fury is gone forth, yea, a whirling storm: it shall whirl down upon the head of the wicked.
- Webster's Bible (WBS)
- Behold, a whirlwind of the LORD is gone forth in fury, even a grievous whirlwind: it shall fall grievously upon the head of the wicked.
- Young's Literal Translation (YLT)
- Lo, a whirlwind of Jehovah — Fury hath gone out, even a piercing whirlwind, On the head of the wicked it stayeth.
Read in context
- 17ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ.
- 18ಆದರೆ ಯಾರು ಕರ್ತನ ಆಲೋಚನೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯದಲ್ಲಿ ಲಕ್ಷ್ಯವಿಟ್ಟು ಕೇಳಿದ್ದಾರೆ?
- 19ಇಗೋ, ಕರ್ತನ ಬಿರುಗಾಳಿ ಉಗ್ರವಾಗಿ ಹೊರಟಿದೆ; ಅಘೋರ ವಾದ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣ ವಾಗಿ ಬೀಳುವದು.
- 20ಆತನು ತನ್ನ ಹೃದಯದ ಅಲೋ ಚನೆಗಳನ್ನು ನಡೆಸಿ ತೀರಿಸುವ ವರೆಗೂ ಕರ್ತನ ಕೋಪವು ತಿರುಗುವದಿಲ್ಲ; ಅಂತ್ಯದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಯೋಚನೆ ಮಾಡುವಿರಿ.
- 21ನಾನು ಪ್ರವಾದಿಗಳನ್ನು ಕಳುಹಿಸಲಿಲ್ಲ, ಆದಾಗ್ಯೂ ಅವರು ಓಡಿದರು; ನಾನು ಅವರ ಸಂಗಡ ಮಾತನಾಡಲಿಲ್ಲ ಆದಾಗ್ಯೂ ಪ್ರವಾದಿಸಿದರು.
Cross references
- Jeremiah 30:23 ಯೆರೆಮೀಯ 30:23ಇಗೋ, ಕರ್ತನ ಬಿರುಗಾಳಿ ರೌದ್ರವಾಗಿ ಹೊರ ಡುತ್ತದೆ. ಅದು ಬಡಕೊಂಡು ಹೋಗುವ ಬಿರುಗಾಳಿ ಯೇ; ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವದು.ಕರ್ತನ ಕೋಪದ ಉರಿಯು ಅದನ್ನು ಮಾಡುವ ವರೆಗೂ ತನ್ನ ಹೃದಯದ ಆಲೋಚನೆಗಳನ್ನು ನಡಿಸಿ ರುವ ವರೆಗೂ ತಿರುಗುವದಿಲ್ಲ; ನೀವು ಅಂತ್ಯದಿನದಲ್ಲಿ ಅದನ್ನು ಯೋಚಿಸುವಿರಿ.
- Jeremiah 25:32 ಯೆರೆಮೀಯ 25:32ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವದು; ಭೂಮಿಯ ಮೇರೆಗಳಿಂದ ಮಹಾಬಿರುಗಾಳಿ ಎಬ್ಬಿಸ ಲ್ಪಡುವದು.
- Amos 1:14 ಆಮೋಸ 1:14ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.
- Isaiah 21:1 ಯೆಶಾಯ 21:1ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ.
- Proverbs 10:25 ಜ್ಞಾನೋಕ್ತಿಗಳು 10:25ಹೇಗೆ ಬಿರುಗಾಳಿಯು ಬೀಸುವದೋ ಹಾಗೆಯೇ ದುಷ್ಟರು ಇಲ್ಲವಾಗುವರು. ನೀತಿವಂತನು ಶಾಶ್ವತವಾದ ಅಸ್ತಿವಾರ ವಾಗಿದ್ದಾನೆ.
- Nahum 1:3–6 ನಹೂಮ 1:3–6ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ. ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ. ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು. ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- Psalm 58:9 ಕೀರ್ತನೆಗಳು 58:9ನಿಮ್ಮ ಗಡಿಗೆಗಳಿಗೆ ಮುಳ್ಳಿನಕಾವು ತಾಗುವದಕ್ಕಿಂತ ಮುಂಚೆ ಅದು ಹಸಿ ಇರುವಾಗಲೇ ದೇವರು ಕೋಪದಿಂದ ಬಿರುಗಾಳಿಯಿಂ ದಲೋ ಎಂಬಂತೆ ಅವರನ್ನು ಹಾರಿಸಿಬಿಡುವನು.
- Isaiah 5:25–28 ಯೆಶಾಯ 5:25–28ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ. ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು; ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ. ಅವರ ಬಾಣಗಳು ಹದವಾಗಿವೆ, ಅವರ ಬಿಲ್ಲುಗಳು ಬೊಗ್ಗಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ ಅವರ ಚಕ್ರಗಳು ಬಿರು ಗಾಳಿಯಂತೆಯೂ ರಭಸವಾಗಿವೆ.
- Isaiah 40:24 ಯೆಶಾಯ 40:24ಹೌದು, ಅವರು ನೆಡಲ್ಪಡುವದಿಲ್ಲ ಬಿತ್ತ ಲ್ಪಡುವದಿಲ್ಲ. ಹೌದು ಅವರ ಬುಡವು ಭೂಮಿ ಯಲ್ಲಿ ಬೇರೂರುವದಿಲ್ಲ. ಆತನು ಶ್ವಾಸವನ್ನು ಅವರ ಮೇಲೆ ಊದಲು ಒಣಗಿಹೋಗುವರು. ಬಿರು ಗಾಳಿಯು ಅವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವದು.
- Zechariah 9:14 ಜೆಕರ್ಯ 9:14ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು.
- Jeremiah 4:11 ಯೆರೆಮೀಯ 4:11ಆ ಸಮಯದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಹೇಳಲ್ಪಡುವದೇನಂದರೆ--ಒಣ ಗಾಳಿಯು ಅರಣ್ಯದ ಉನ್ನತ ಸ್ಥಳಗಳಿಂದ ನನ್ನ ಜನರ ಕುಮಾರಿಯ ಕಡೆಗೆ ಬರುತ್ತದೆ. ಅದು ತೂರುವದಕ್ಕೂ ಶುದ್ಧಮಾಡುವದಕ್ಕೂ ಆಗತಕ್ಕದ್ದಲ್ಲ.
- Proverbs 1:27 ಜ್ಞಾನೋಕ್ತಿಗಳು 1:27ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು.