Jeremiah · chapter 23 · verse 24
Jeremiah 23:24 in Kannada
ನಾನು ಅವನನ್ನು ನೋಡದ ಹಾಗೆ ಒಬ್ಬನು ಮರೆಯಾದ ಸ್ಥಳಗಳಲ್ಲಿ ತನ್ನನ್ನು ಅಡಗಿಸಿಕೊ ಳ್ಳಬಹುದೋ ಎಂದು ಕರ್ತನು ಅನ್ನುತ್ತಾನೆ; ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವ ನಲ್ಲವೋ? ಎಂದು ಕರ್ತನು ಅನ್ನುತ್ತಾನೆ.
Naanu avanannu nodada haage obbanu mareyaada sthalagalalli tannannu adagisiko llabahudo endu kartanu annuttaane; naanu aakaashadalliyoo bhoomiyalliyoo vyaapisiruvava nallavo? Endu kartanu annuttaane.
Jeremiah 23:24 in English
- King James Version (KJV)
- Can any hide himself in secret places that I shall not see him? saith the LORD. Do not I fill heaven and earth? saith the LORD.
- World English Bible (WEB)
- Can anyone hide himself in secret places so that I can’t see him?” says the LORD. “Don’t I fill heaven and earth?” says the LORD.
- American Standard Version (ASV)
- Can any hide himself in secret places so that I shall not see him? saith Jehovah. Do not I fill heaven and earth? saith Jehovah.
- Bible in Basic English (BBE)
- In what secret place may a man take cover without my seeing him? says the Lord. Is there any place in heaven or earth where I am not? says the Lord.
- Darby Translation (DBY)
- Can any hide himself in secret places, that I shall not see him? saith Jehovah. Do not I fill the heavens and the earth? saith Jehovah.
- Webster's Bible (WBS)
- Can any hide himself in secret places that I shall not see him? saith the LORD. Do not I fill heaven and earth? saith the LORD.
- Young's Literal Translation (YLT)
- Is any one hidden in secret places, And I see him not? an affirmation of Jehovah, Do not I fill the heavens and the earth? An affirmation of Jehovah.
Read in context
- 22ಆದರೆ ಅವರು ನನ್ನ ಆಲೋಚನೆಯಲ್ಲಿ ನಿಂತಿದ್ದರೆ, ಅವರು ಜನರಿಗೆ ನನ್ನ ವಾಕ್ಯಗಳನ್ನು ಕೇಳಕೊಟ್ಟು ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು.
- 23ಕರ್ತನು ಅನ್ನುತ್ತಾನೆ--ನಾನು ಸವಿಾಪದಲ್ಲಿ ದೇವರಾಗಿದ್ದು ದೂರದಲ್ಲಿ ದೇವರ ಲ್ಲವೋ?
- 24ನಾನು ಅವನನ್ನು ನೋಡದ ಹಾಗೆ ಒಬ್ಬನು ಮರೆಯಾದ ಸ್ಥಳಗಳಲ್ಲಿ ತನ್ನನ್ನು ಅಡಗಿಸಿಕೊ ಳ್ಳಬಹುದೋ ಎಂದು ಕರ್ತನು ಅನ್ನುತ್ತಾನೆ; ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವ ನಲ್ಲವೋ? ಎಂದು ಕರ್ತನು ಅನ್ನುತ್ತಾನೆ.
- 25ನನ್ನ ಹೆಸರಿನಲ್ಲಿ ಸುಳ್ಳನ್ನು ಪ್ರವಾದಿಸುವ ಪ್ರವಾದಿಗಳು ಹೇಳುವದನ್ನು ಕೇಳಿದ್ದೇನೆ. ಅವರು--ನಾನು ಕನಸು ಕಂಡಿದ್ದೇನೆ, ಕನಸು ಕಂಡಿದ್ದೇನೆ ಅನ್ನುತ್ತಾರೆ.
- 26ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರ ವರೆಗೆ ಇರುವದು? ಹೌದು, ಅವರು ತಮ್ಮ ಹೃದಯದ ಮೋಸವನ್ನು ಪ್ರವಾದಿಸುವವರೇ;
Cross references
- Proverbs 15:3 ಜ್ಞಾನೋಕ್ತಿಗಳು 15:3ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ.
- Psalm 139:7 ಕೀರ್ತನೆಗಳು 139:7ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿನ್ನ ಸನ್ನಿಧಿಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಲಿ?
- Psalm 90:8 ಕೀರ್ತನೆಗಳು 90:8ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ.
- Isaiah 29:15 ಯೆಶಾಯ 29:15ತಮ್ಮ ಆಲೋಚನೆಯನ್ನು ಕರ್ತನಿಗೆ ಮರೆಮಾಜುವದಕ್ಕೆ ಅಗಾಧದಲ್ಲಿ ಮಾಡಿ--ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು ಅಂದುಕೊಂಡು ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸು ವವರಿಗೆ ಅಯ್ಯೋ!
- Amos 9:2–3 ಆಮೋಸ 9:2–3ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು. ಅವರು ಕರ್ಮೆಲಿನ ಬೆಟ್ಟದ ಕೊನೆಯಲ್ಲಿ ಅಡಗಿಕೊಂಡರೂ ನಾನು ಅವರನ್ನು ಹುಡುಕಿ ಅಲ್ಲಿಂದ ತೆಗೆಯುವೆನು; ಅವರು ನನ್ನ ಕಣ್ಣುಗಳಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ ಸರ್ಪಕ್ಕೆ ಅಪ್ಪಣೆಕೊಟ್ಟು ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.
- 1 Kings 8:27 1 ಅರಸುಗಳು 8:27ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- Psalm 139:11–16 ಕೀರ್ತನೆಗಳು 139:11–16ನಿಶ್ಚಯವಾಗಿ ಕತ್ತಲೆಯು ನನ್ನನ್ನು ಕವಿದು ಕೊಳ್ಳುವದೆಂದು ನಾನು ಹೇಳಿದರೆ ರಾತ್ರಿಯು ನನ್ನ ಸುತ್ತಲೂ ಬೆಳಕಾಗಿರುವದು. ಕರ್ತನೇ, ಕತ್ತಲೆಯು ನಿನಗೆ ಕಾಣದಂತೆ ಮುಚ್ಚುವದಿಲ್ಲ; ರಾತ್ರಿಯು ಹಗಲಿನ ಹಾಗೆ ಬೆಳಗುವದು; ಕತ್ತಲೂ ಬೆಳಕೂ ನಿನಗೆ ಒಂದೇ ಆಗಿವೆ. ನೀನು ನನ್ನ ಅಂತರಿಂದ್ರಿಯಗಳನ್ನು ರೂಪಿಸಿದ್ದೀ; ನನ್ನ ತಾಯಿಯ ಗರ್ಭದಲ್ಲಿ ನೀನು ನನ್ನನ್ನು ಮುಚ್ಚಿದ್ದೀ. ನಾನು ಭಯಭರಿತನಾಗಿಯೂ ಅದ್ಭುತ ವಾಗಿಯೂ ಮಾಡಲ್ಪಟ್ಟದ್ದರಿಂದ ನಿನ್ನನ್ನು ಕೊಂಡಾ ಡುತ್ತೇನೆ; ನಿನ್ನ ಕೆಲಸಗಳು ಅದ್ಭುತಗಳಾಗಿವೆ ಎಂದು ನನ್ನ ಮನಸ್ಸಿಗೆ ಚೆನ್ನಾಗಿ ತಿಳಿದಿದೆ; ನಾನು ಮರೆ ಯಲ್ಲಿ ಮಾಡಲ್ಪಟ್ಟಾಗಲೂ ಭೂಮಿಯ ಅಧೋ ಭಾಗಗಳಲ್ಲಿ ವಿಚಿತ್ರವಾಗಿ ಮಾಡಲ್ಪಟ್ಟಾಗಲೂ ನನ್ನ ಅಸ್ತಿತ್ವವು ನಿನಗೆ ಮರೆಯಾಗಿರಲಿಲ್ಲ. ಅದು ಇನ್ನೂ ಪೂರ್ಣವಾಗದಿರುವಾಗ ನನ್ನ ಅಸ್ತಿತ್ವವನ್ನು ನಿನ್ನ ಕಣ್ಣುಗಳು ನೋಡಿದವು; ನನ್ನ ಅಂಗಗಳೆಲ್ಲಾ ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು; ಅವುಗಳಲ್ಲಿ ಒಂದಾ ದರೂ ಇಲ್ಲದಿದ್ದಾಗ ಅವುಗಳು ರೂಪಿಸಲ್ಪಟ್ಟವು.
- Job 22:13–14 ಯೋಬನು 22:13–14ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ? ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.
- Psalm 10:11 ಕೀರ್ತನೆಗಳು 10:11ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
- Isaiah 66:1 ಯೆಶಾಯ 66:1ಕರ್ತನು ಹೇಳುವದೇನಂದರೆ--ಆಕಾಶವು ನನ್ನ ಸಿಂಹಾಸನವು; ಭೂಮಿಯು ನನ್ನ ಪಾದ ಪೀಠವು: ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?
- 2 Chronicles 6:18 2 ಪೂರ್ವಕಾಲವೃತ್ತಾಂತ 6:18ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾಕಾಶಗಳೂ ನಿನ್ನನ್ನು ಹಿಡಿಸಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಆಲಯವು ನಿನ್ನನ್ನು ಹಿಡಿಸುವದು ಹೇಗೆ?