Jeremiah · chapter 26 · verse 7
Jeremiah 26:7 in Kannada
ಹೀಗೆ ಯೆರೆವಿಾಯನು ಈ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಹೇಳುತ್ತಿರಲಾಗಿ ಯಾಜಕರೂ ಪ್ರವಾದಿಗಳೂ ಜನ ರೆಲ್ಲರೂ ಕೇಳುತ್ತಿದ್ದರು.
Heege yereviాyanu ee vaakyagalannu kartana aalayadalli heluttiralaagi yaajakaroo pravaadigaloo jana rellaroo keluttiddaru.
Jeremiah 26:7 in English
- King James Version (KJV)
- So the priests and the prophets and all the people heard Jeremiah speaking these words in the house of the LORD.
- World English Bible (WEB)
- The priests and the prophets and all the people heard Jeremiah speaking these words in the LORD’s house.
- American Standard Version (ASV)
- And the priests and the prophets and all the people heard Jeremiah speaking these words in the house of Jehovah.
- Bible in Basic English (BBE)
- And in the hearing of the priests and the prophets and all the people, Jeremiah said these words in the house of the Lord.
- Darby Translation (DBY)
- And the priests and the prophets and all the people heard Jeremiah speaking these words in the house of Jehovah.
- Webster's Bible (WBS)
- So the priests and the prophets, and all the people heard Jeremiah speaking these words in the house of the LORD.
- Young's Literal Translation (YLT)
- And the priests, and the prophets, and all the people, hear Jeremiah speaking these words in the house of Jehovah,
Read in context
- 5ನಾನು ಬೆಳಿಗ್ಗೆ ನಿಮ್ಮ ಬಳಿಗೆ ಕಳುಹಿಸಿದಂಥ ನೀವು ಕೇಳದಂಥ ನನ್ನ ಸೇವಕರಾದ ಪ್ರವಾದಿಗಳ ವಾಕ್ಯಗಳನ್ನು ಕೇಳದೆಹೋದರೆ
- 6ಆಗ ನಾನು ಈ ಮನೆಯನ್ನು ಶಿಲೋವಿನ ಹಾಗೆ ಮಾಡುತ್ತೇನೆ; ಈ ಪಟ್ಟಣವನ್ನು ಭೂಮಿಯ ಎಲ್ಲಾ ಜನಾಂಗಗಳಿಗೆ ಶಾಪಕ್ಕೆ ಗುರಿಯಾಗುವಂತೆ ಮಾಡುತ್ತೇನೆ ಅಂದನು.
- 7ಹೀಗೆ ಯೆರೆವಿಾಯನು ಈ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಹೇಳುತ್ತಿರಲಾಗಿ ಯಾಜಕರೂ ಪ್ರವಾದಿಗಳೂ ಜನ ರೆಲ್ಲರೂ ಕೇಳುತ್ತಿದ್ದರು.
- 8ಯೆರೆವಿಾಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಕರ್ತನು ಆಜ್ಞಾಪಿಸಿ ದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಹಿಡಿದು--ನೀನು ನಿಶ್ಚಯವಾಗಿ ಸಾಯಬೇಕು ಅಂದರು.
- 9ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.
Cross references
- Jeremiah 5:31 ಯೆರೆಮೀಯ 5:31ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ?
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Matthew 21:15 ಮತ್ತಾಯನು 21:15ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯ ದಲ್ಲಿ--ದಾವೀದನ ಕುಮಾರನಿಗೆ ಹೊಸನ್ನ ಎಂದು ಕೂಗುವದನ್ನು ಪ್ರಧಾನ ಯಾಜಕರೂ ಶಾಸ್ತ್ರಿಗಳೂ ನೋಡಿ ಕೋಪಗೊಂಡು ಆತನಿಗೆ--
- Acts 5:17 ಅಪೊಸ್ತಲರ ಕೃತ್ಯಗಳು 5:17ಆಗ ಮಹಾಯಾಜಕನೂ ಅವನೊಂದಿಗೆ ಇದ್ದ ವರೂ (ಇವರು ಸದ್ದುಕಾಯರ ಪಂಗಡಕ್ಕೆ ಸೇರಿದವರು) ಕೋಪದಿಂದ ತುಂಬಿದವರಾಗಿ ಎದ್ದು
- Ezekiel 22:25–26 ಯೆಹೆಜ್ಕೇಲನು 22:25–26ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ. ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು.
- Zephaniah 3:4 ಚೆಫನ್ಯ 3:4ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ.
- Jeremiah 23:11–15 ಯೆರೆಮೀಯ 23:11–15ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ. ಆದದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗೆ ಅವರಿಗಿರುವದು; ಅವರು ತಳ್ಳಲ್ಪಟ್ಟು ಬೀಳುವರು; ಕೇಡನ್ನು, ಅವರ ವಿಚಾರಣೆಯ ವರುಷವನ್ನು ಅವರ ಮೇಲೆ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ. ಸಮಾರ್ಯದ ಪ್ರವಾದಿಗಳಲ್ಲಿ ಬುದ್ಧಿಹೀನತೆಯನ್ನು ನೋಡಿದ್ದೇನೆ; ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ ನನ್ನ ಜನರಾದ ಇಸ್ರಾಯೇ ಲನ್ನು ತಪ್ಪುವಂತೆ ಮಾಡಿದ್ದಾರೆ. ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ. ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ.
- Acts 4:1–6 ಅಪೊಸ್ತಲರ ಕೃತ್ಯಗಳು 4:1–6ಅವರು ಜನರೊಂದಿಗೆ ಮಾತನಾಡು ತ್ತಿದ್ದಾಗ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅವರಿಗೆ ವಿರೋಧ ವಾಗಿ ಬಂದರು; ಯಾಕಂದರೆ ಯೇಸುವಿನ ಮೂಲಕ ಸತ್ತವರಿಗೆ ಪುನರುತ್ಥಾನವಾಗುವದೆಂದು ಅಪೊಸ್ತಲರು ಜನರಿಗೆ ಬೋಧಿಸಿ ಕಲಿಸುತ್ತಿದ್ದದರಿಂದ ಅವರು ಸಂತಾಪಪಟ್ಟಿದ್ದರು. ಇದಲ್ಲದೆ ಅವರನ್ನು ಹಿಡಿದು ಮರುದಿನದ ವರೆಗೆ ಕಾವಲಲ್ಲಿಟ್ಟರು; ಯಾಕಂದರೆ ಆಗ ಸಾಯಂಕಾಲವಾಗಿತ್ತು. ಆದಾಗ್ಯೂ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರವಾಗಿತ್ತು. ಮರುದಿನ ಅವರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.