Jeremiah · chapter 33 · verse 5
Jeremiah 33:5 in Kannada
ಅವರು ಕಸ್ದೀಯರ ಸಂಗಡ ಯುದ್ಧಮಾಡುವದಕ್ಕೂ ನಾನು ನನ್ನ ಕೋಪದಲ್ಲಿಯೂ ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವದಕ್ಕೂ ಬರುತ್ತಾರೆ; ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅದರ ಸಮಸ್ತ ಕೆಟ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
Avaru kasdeeyara sangada yuddhamaaduvadakkoo naanu nanna kopadalliyoo nanna uriyalliyoo konduhaakida manushyara henagalinda avugalannu tumbisuvadakkoo baruttaare; naanu ee pattanakke virodhavaagi adara samasta kettatanada nimitta nanna mukhavannu maremaadiddene.
Jeremiah 33:5 in English
- King James Version (KJV)
- They come to fight with the Chaldeans, but [it is] to fill them with the dead bodies of men, whom I have slain in mine anger and in my fury, and for all whose wickedness I have hid my face from this city.
- World English Bible (WEB)
- ‘While men come to fight with the Chaldeans, and to fill them with the dead bodies of men, whom I have killed in my anger and in my wrath, and for all whose wickedness I have hidden my face from this city,
- American Standard Version (ASV)
- while [men] come to fight with the Chaldeans, and to fill them with the dead bodies of men, whom I have slain in mine anger and in my wrath, and for all whose wickedness I have hid my face from this city:
- Bible in Basic English (BBE)
- ... and to make them full of the dead bodies of men whom I have put to death in my wrath and in my passion, and because of whose evil-doing I have kept my face covered from this town.
- Darby Translation (DBY)
- They come to fight with the Chaldeans, but to fill them with the dead bodies of the men whom I have slain in mine anger and in my fury, and for all whose wickedness I have hid my face from this city.
- Webster's Bible (WBS)
- They come to fight with the Chaldeans, but [it is] to fill them with the dead bodies of men, whom I have slain in my anger and in my fury, and for all whose wickedness I have hid my face from this city.
- Young's Literal Translation (YLT)
- they are coming in to fight with the Chaldeans, and to fill them with the carcases of men, whom I have smitten in Mine anger, and in My fury, and [for] whom I have hidden My face from this city, because of all their evil:
Read in context
- 3ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು.
- 4ದಿಬ್ಬಗಳಿಂದಲೂ ಕತ್ತಿಯಿಂದಲೂ ಕೆಡವಿ ಹಾಕಲ್ಪಟ್ಟ ಈ ಪಟ್ಟಣದ ಮನೆಗಳ ವಿಷಯವೂ ಯೆಹೂದದ ಅರಸರ ಮನೆಗಳ ವಿಷಯವೂ ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
- 5ಅವರು ಕಸ್ದೀಯರ ಸಂಗಡ ಯುದ್ಧಮಾಡುವದಕ್ಕೂ ನಾನು ನನ್ನ ಕೋಪದಲ್ಲಿಯೂ ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವದಕ್ಕೂ ಬರುತ್ತಾರೆ; ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅದರ ಸಮಸ್ತ ಕೆಟ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.
- 6ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
- 7ಯೆಹೂದದ ಸೆರೆಯನ್ನೂ ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ ಅವರನ್ನು ಮುಂಚಿನ ಹಾಗೆ ಕಟ್ಟುವೆನು.
Cross references
- Isaiah 8:17 ಯೆಶಾಯ 8:17ಯಾಕೋಬಿನ ಮನೆಯವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಕರ್ತನಿಗಾಗಿ ನಾನು ಕಾದುಕೊಂಡು ಎದುರುನೋಡುತ್ತಿರುವೆನು.
- Jeremiah 21:10 ಯೆರೆಮೀಯ 21:10ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು. ನಾನು ಒಳ್ಳೇದಕ್ಕಲ್ಲ ಕೆಟ್ಟದ್ದಕ್ಕೆ ಈ ಪಟ್ಟಣದ ಮೇಲೆ ನನ್ನ ದೃಷ್ಟಿಯನ್ನಿಟ್ಟಿದ್ದೇನೆಂದು ಕರ್ತನು ಹೇಳುತ್ತಾನೆ; ಅದು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದು; ಅವನು ಅದನ್ನು ಬೆಂಕಿ ಯಿಂದ ಸುಟ್ಟುಬಿಡುವನು.
- Jeremiah 21:4–7 ಯೆರೆಮೀಯ 21:4–7ಇಸ್ರಾಯೇ ಲಿನ ದೇವರಾದ ಯೆಹೋವನು ಹೇಳುವದೇನಂದರೆ, ಇಗೋ, ಗೋಡೆಯ ಹೊರಗೆ ನಿಮಗೆ ಮುತ್ತಿಗೆ ಹಾಕುವ ಬಾಬೆಲಿನ ಅರಸನಿಗೂ ಕಸ್ದೀಯರಿಗೂ ವಿರೋಧವಾಗಿ ನೀವು ಯುದ್ಧಮಾಡುವದಕ್ಕೆ ನಿಮ್ಮ ಕೈಗಳಲ್ಲಿರುವ ಯುದ್ಧದ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಅವರನ್ನು ಈ ಪಟ್ಟಣದ ಮಧ್ಯದಲ್ಲಿ ಕೂಡಿ ಬರುವಂತೆ ಮಾಡುತ್ತೇನೆ. ನಾನೇ ಚಾಚಿದ ಕೈಯಿಂದಲೂ ಬಲವಾದ ತೋಳಿನಿಂದಲೂ ಕೋಪ ದಿಂದಲೂ ಉಗ್ರದಿಂದಲೂ ಮಹಾರೌದ್ರದಿಂದಲೂ ನಿಮಗೆ ವಿರೋಧವಾಗಿ ಯುದ್ಧಮಾಡುವೆನು. ಈ ಪಟ್ಟಣದ ನಿವಾಸಿಗಳನ್ನೂ ಮನುಷ್ಯರನ್ನೂ ಮೃಗ ಗಳನ್ನೂ ಸಹಿತವಾಗಿ ಹೊಡೆಯುವೆನು; ಅವರು ದೊಡ್ಡ ಜಾಡ್ಯದಿಂದ ಸಾಯುವರು. ಇದಲ್ಲದೆ ಕರ್ತನು ಅನ್ನುವದೇನಂದರೆ--ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಸೇವಕರನ್ನೂ ಜನರನ್ನೂ ಈ ಪಟ್ಟಣದಲ್ಲಿ ಜಾಡ್ಯದಿಂದಲೂ ಕತ್ತಿಯಿಂದಲೂ ಕ್ಷಾಮದಿಂದಲೂ ಉಳಿದವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ ಅವರ ಶತ್ರುಗಳ ಕೈಗೂ ಅವರ ಪ್ರಾಣವನ್ನು ಹುಡುಕುವವರಕೈಗೂ ಒಪ್ಪಿಸುವೆನು; ಅವನು ಅವರನ್ನು ಕತ್ತಿಯಿಂದ ಹೊಡೆಯುವನು. ಅವರ ಮೇಲೆ ಕರುಣೆ ಇಡುವದಿಲ್ಲ, ಕನಿಕರಿಸುವದಿಲ್ಲ ಅಂತಃಕರುಣೆ ಪಡುವದಿಲ್ಲ.
- Jeremiah 32:5 ಯೆರೆಮೀಯ 32:5ಅವನು ಚಿದ್ಕೀಯನನ್ನು ಬಾಬೆಲಿಗೆ ಒಯ್ಯುವನು, ನಾನು ಅವನನ್ನು ದರ್ಶಿಸುವ ವರೆಗೆ ಅಲ್ಲೇ ಇರುವನೆಂಬದಾಗಿ ಕರ್ತನು ಅನ್ನುತ್ತಾನೆ, ನೀವು ಕಸ್ದೀಯರ ಸಂಗಡ ಯುದ್ಧ ಮಾಡಿದಾಗ್ಯೂ ನಿಮಗೆ ಸಫಲವಾಗುವದಿಲ್ಲವೆಂದು ಯಾಕೆ ಪ್ರವಾದಿಸುತ್ತೀ ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದನು.
- Isaiah 1:15–16 ಯೆಶಾಯ 1:15–16ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ. ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ;
- Isaiah 64:7 ಯೆಶಾಯ 64:7ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
- Jeremiah 37:9–10 ಯೆರೆಮೀಯ 37:9–10ಕರ್ತನು ಹೀಗೆ ಹೇಳುತ್ತಾನೆ--ಕಸ್ದೀ ಯರು ನಿಜವಾಗಿ ನಮ್ಮನ್ನು ಬಿಟ್ಟುಹೋಗುವರೆಂದು ನಿಮಗೆ ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ. ನಿಮ್ಮ ಸಂಗಡ ಯುದ್ಧ ಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿ ದ್ದಾಗ್ಯೂ ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.
- Deuteronomy 31:17 ಧರ್ಮೋಪದೇಶಕಾಂಡ 31:17ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.
- Micah 3:4 ಮೀಕ 3:4ಆಗ ಅವರು ಕರ್ತನಿಗೆ ಮೊರೆಯಿಡುವರು; ಆದರೆ ಆತನು ಅವರಿಗೆ ಉತ್ತರ ಕೊಡುವದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತನ್ನ ಮುಖವನ್ನು ಮರೆಮಾಡುವನು.
- Jeremiah 18:17 ಯೆರೆಮೀಯ 18:17ಮೂಡಣ ಗಾಳಿಯಿಂದಾದ ಹಾಗೆ ಅವರನ್ನು ಶತ್ರುವಿನ ಮುಂದೆ ಚದುರಿಸುವೆನು; ಅವರ ಆಪತ್ತಿನ ದಿನದಲ್ಲಿ ಅವರಿಗೆ ಮುಖವನ್ನಲ್ಲ, ಬೆನ್ನನ್ನು ತೋರಿಸುವೆನು.
- Ezekiel 39:23–24 ಯೆಹೆಜ್ಕೇಲನು 39:23–24ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಅನ್ಯಜನಾಂಗಗಳು ತಿಳಿಯುವವು; ಅವರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಕತ್ತಿಯಿಂದ ಹತರಾದರು. ಅವರ ಅಶುದ್ಧತ್ವದ ಪ್ರಕಾರವೂ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
- Deuteronomy 32:20 ಧರ್ಮೋಪದೇಶಕಾಂಡ 32:20ಆತನು--ನನ್ನ ಮುಖವನ್ನು ಅವರಿಗೆ ಮರೆ ಮಾಡುವೆನು; ಅವರ ಅಂತ್ಯವು ಏನೆಂದು ನೋಡು ವೆನು; ಅವರು ಮೂರ್ಖ ಸಂತತಿಯೇ, ನಂಬಿಕೆಯಿಲ್ಲದ ಮಕ್ಕಳೇ.
Original words (Hebrew)
- come · H935בּוֹא bôwʼ
- fight · H3898לָחַם lâcham
- Chaldeans · H3778כַּשְׂדִּי Kasdîy
- fill · H4390מָלֵא mâlêʼ
- bodies · H6297פֶּגֶר peger
- men · H120אָדָם ʼâdâm
- slain · H5221נָכָה nâkâh
- anger · H639אַף ʼaph
- fury · H2534חֵמָה chêmâh
- wickedness · H7451רַע raʻ
- hid · H5641סָתַר çâthar
- face · H6440פָּנִים pânîym
- city · H5892עִיר ʻîyr