Jeremiah · chapter 37 · verse 18
Jeremiah 37:18 in Kannada
ಇದಲ್ಲದೆ ಯೆರೆವಿಾಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇ ನಂದರೆ--ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ ನಿನ್ನ ಸೇವಕರಿಗೂ ಈ ಜನರಿಗೂ ವಿರೋಧವಾಗಿ ಏನು ಅಡ್ಡಿ ಮಾಡಿದ್ದೇನೆ? ಇದಲ್ಲದೆ
Idallade yereviాyanu arasanaada chidkeeyanige helidde nandare--neevu nannannu seremaneyalli haakuva haage naanu ninagoo ninna sevakarigoo ee janarigoo virodhavaagi enu addi maadiddene? Idallade
Jeremiah 37:18 in English
- King James Version (KJV)
- Moreover Jeremiah said unto king Zedekiah, What have I offended against thee, or against thy servants, or against this people, that ye have put me in prison?
- World English Bible (WEB)
- Moreover Jeremiah said to King Zedekiah, “How have I sinned against you, against your servants, or against this people, that you have put me in prison?
- American Standard Version (ASV)
- Moreover Jeremiah said unto king Zedekiah, Wherein have I sinned against thee, or against thy servants, or against this people, that ye have put me in prison?
- Bible in Basic English (BBE)
- Then Jeremiah said to King Zedekiah, What has been my sin against you or against your servants or against this people, that you have put me in prison?
- Darby Translation (DBY)
- And Jeremiah said unto king Zedekiah, What have I offended against thee, or against thy servants, or against this people, that ye have put me in the prison?
- Webster's Bible (WBS)
- Moreover Jeremiah said to king Zedekiah, In what have I offended against thee, or against thy servants, or against this people, that ye have put me in prison?
- Young's Literal Translation (YLT)
- And Jeremiah saith unto the king Zedekiah, 'What have I sinned against thee, and against thy servants, and against this people, that ye have given me unto a prison-house?
Read in context
- 16ಯೆರೆವಿಾಯನು ನೆಲಮಾಳಿಗೆಯಲ್ಲಿಯೂ ಸಣ್ಣಕೋಣೆಯಲ್ಲಿಯೂ ಪ್ರವೇಶಿಸಿ ಬಹಳ ದಿವಸ ಅಲ್ಲಿ ಇದ್ದ ಮೇಲೆ ಅರಸನಾದ ಚಿದ್ಕೀಯನು
- 17ಅವನನ್ನು ಹೊರಗೆ ತನ್ನ ಮನೆಯಲ್ಲಿ ಕರತರಿಸಿ--ರಹಸ್ಯವಾಗಿ ಕರ್ತನಿಂದ ವಾಕ್ಯ ಉಂಟೋ ಎಂದು ಅವನನ್ನು ಕೇಳಿದನು; ಉಂಟು ಎಂದು ಯೆರೆವಿಾಯನು ಹೇಳಿ ರಹಸ್ಯವಾಗಿ ನೀನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವಿ ಅಂದನು.
- 18ಇದಲ್ಲದೆ ಯೆರೆವಿಾಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇ ನಂದರೆ--ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ ನಿನ್ನ ಸೇವಕರಿಗೂ ಈ ಜನರಿಗೂ ವಿರೋಧವಾಗಿ ಏನು ಅಡ್ಡಿ ಮಾಡಿದ್ದೇನೆ? ಇದಲ್ಲದೆ
- 19ಬಾಬೆಲಿನ ಅರಸನು ನಿಮ್ಮ ಮೇಲೆಯೂ ಈ ದೇಶದ ಮೇಲೆಯೂ ಬರುವದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? ಆದದರಿಂದ ಈಗ ಕಿವಿಗೊಡು,
- 20ಅರಸನಾದ ನನ್ನೊ ಡೆಯನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀ ಕಾರವಾಗಲಿ, ಲೇಖಕನಾದ ಯೋನಾತಾನನ ಮನೆ ಯಲ್ಲಿ ನಾನು ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ ಅಂದನುಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು.
Cross references
- John 10:32 ಯೋಹಾನನು 10:32ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.
- Acts 25:8 ಅಪೊಸ್ತಲರ ಕೃತ್ಯಗಳು 25:8ಆಗ ಪೌಲನು--ಯೆಹೂದ್ಯರ ನ್ಯಾಯಪ್ರಮಾಣಕ್ಕೆ ವಿರೋಧವಾಗಿಯಾಗಲೀ ಈ ದೇವಾಲಯಕ್ಕೆ ವಿರೋಧವಾಗಿಯಾಗಲೀ ಮಾತ್ರ ವಲ್ಲದೆ ಕೈಸರನಿಗೆ ವಿರೋಧವಾಗಿಯಾಗಲೀ ನಾನು ಯಾವ ತಪ್ಪನ್ನೂ ಮಾಡಲಿಲ್ಲ ಎಂದು ಪ್ರತ್ಯುತ್ತರವಾಗಿ ಹೇಳಿದನು.
- Daniel 6:22 ದಾನಿಯೇಲನು 6:22ನನ್ನ ದೇವರು ತನ್ನ ದೂತನನ್ನು ಕಳುಹಿಸಿ ನನಗೆ ಕೇಡು ಮಾಡದ ಹಾಗೆ ಸಿಂಹಗಳ ಬಾಯಿಗಳನ್ನು ಮುಚ್ಚಿ ಹಾಕಿದ್ದಾನೆ; ಆತನ ಮುಂದೆ ನಾನು ಯಥಾರ್ಥನೆಂದು ತಿಳಿದುಬಂದಿದ್ದೇನೆ. ಓ ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ಕೇಡುಮಾಡಲಿಲ್ಲ ಎಂದು ಹೇಳಿದನು.
- Acts 25:11 ಅಪೊಸ್ತಲರ ಕೃತ್ಯಗಳು 25:11ನಾನು ಅನ್ಯಾಯಮಾಡಿದವ ನಾಗಿದ್ದರೆ ಇಲ್ಲವೆ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದರೆ ಸಾಯುವದಕ್ಕೆ ನಾನು ಬೇಡವೆನ್ನುವದಿಲ್ಲ; ನನ್ನ ಮೇಲೆ ಅವರು ತಪ್ಪು ಹೊರಿಸುವವುಗಳಲ್ಲಿ ಯಾವದೂ ಇಲ್ಲದೆ ಹೋದರೆ ನನ್ನನ್ನು ಅವರಿಗೆ ಯಾವ ಮನುಷ್ಯನೂ ಒಪ್ಪಿಸಲಾರನು; ನಾನು ಕೈಸರ
- Acts 25:25 ಅಪೊಸ್ತಲರ ಕೃತ್ಯಗಳು 25:25ಆದರೆ ಮರಣದಂಡನೆಗೆ ಕಾರಣವಾದ ಯಾವ ದನ್ನೂ ಇವನು ಮಾಡಲಿಲ್ಲವೆಂದು ನಾನು ಕಂಡು ಕೊಂಡೆನು. ತಾನೇ ಔಗುಸ್ತನ ಮುಂದೆ ಹೇಳಿಕೊಳ್ಳು ತ್ತೇನೆಂದು ಬೇಡಿಕೊಂಡದ್ದರಿಂದ ಇವನನ್ನು ಕಳುಹಿಸು ವದಕ್ಕೆ ನಾನು ತೀರ್ಮಾನಿಸಿದ್ದೇನೆ.
- Acts 24:16 ಅಪೊಸ್ತಲರ ಕೃತ್ಯಗಳು 24:16ಈ ವಿಷಯ ದೇವರ ಮುಂದೆಯೂ ಮನುಷ್ಯರ ಮುಂದೆಯೂ ಯಾವಾಗಲೂ ನಾನು ದೋಷರಹಿತವಾದ ಮನಸ್ಸಾಕ್ಷಿಯುಳ್ಳವನಾಗಿರುವಂತೆ ಅಭ್ಯಾಸಮಾಡಿಕೊಳ್ಳುತ್ತೇನೆ.
- Galatians 4:16 ಗಲಾತ್ಯದವರಿಗೆ 4:16ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳು ವದರಿಂದ ನಿಮಗೆ ಶತ್ರುವಾಗಿದ್ದೇನೋ?
- Acts 23:1 ಅಪೊಸ್ತಲರ ಕೃತ್ಯಗಳು 23:1ಆಗ ಪೌಲನು ಆಲೋಚನಾ ಸಭೆಯನ್ನು ದೃಷ್ಟಿಸಿ ನೋಡುತ್ತಾ--ಜನರೇ, ಸಹೋ ದರರೇ, ನಾನು ಈ ದಿನದ ವರೆಗೆ ದೇವರ ಮುಂದೆ ಒಳ್ಳೇಮನಸ್ಸಾಕ್ಷಿಯಿಂದ ಜೀವಿಸಿದ್ದೇನೆ ಎಂದು ಹೇಳಿದನು.
- Jeremiah 26:19 ಯೆರೆಮೀಯ 26:19ಅವನನ್ನು ಯೆಹೂದ ಅರಸನಾದ ಹಿಜ್ಕೀಯನೂ ಸಮಸ್ತ ಯೆಹೂದವೂ ಕೊಂದುಹಾಕಿದರೋ? ಅವನು ಕರ್ತನಿಗೆ ಭಯಪಟ್ಟು ಕರ್ತನ ಸಮ್ಮುಖದಲ್ಲಿ ಮೊರೆ ಯಿಟ್ಟನಲ್ಲವೋ? ಆ ಮೇಲೆ ಕರ್ತನು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು.
- 1 Samuel 24:9–15 1 ಸಮುವೇಲನು 24:9–15ದಾವೀದನು ಸೌಲನಿಗೆ--ಇಗೋ, ದಾವೀದನು ನಿನಗೆ ಕೇಡುಮಾಡ ಹುಡುಕು ತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಯಾಕೆ ಕೇಳುತ್ತಿದ್ದೀ? ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು. ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ. ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ ದುಷ್ಟರಿಂದ ದುಷ್ಟತ್ವವು ಹುಟ್ಟುವದು. ಆದರೂ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. ಇಸ್ರಾಯೇಲಿನ ಅರಸನು ಯಾರನ್ನು ಬೆನ್ನಟ್ಟಿ ಹೊರಟನು? ಯಾರನ್ನು ನೀನು ಹಿಂದಟ್ಟುತ್ತೀ? ಸತ್ತನಾಯಿಯನ್ನೇ? ಒಂದು ಕೀಟವನ್ನೇ? ಕರ್ತನು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ ನನ್ನ ವ್ಯಾಜ್ಯವನ್ನು ನೋಡಿ ವ್ಯಾಜ್ಯವಾಡಿ ನನ್ನನ್ನು ನಿನ್ನ ಕೈಗೆ ತಪ್ಪಿಸಿಬಿಡಲಿ ಅಂದನು.
- Genesis 31:36 ಆದಿಕಾಂಡ 31:36ಆಗ ಯಾಕೋಬನು ಕೋಪಗೊಂಡು ಲಾಬಾ ನನ ಕೂಡ ವಾದಿಸಿದನು. ಯಾಕೋಬನು ಪ್ರತ್ಯುತ್ತರ ವಾಗಿ ಲಾಬಾನನಿಗೆ--ನೀನು ನನ್ನನ್ನು ಬೆನ್ನಟ್ಟಿ ಬರು ವದಕ್ಕೆ ನನ್ನ ಅಪರಾಧವೇನು? ನನ್ನ ಪಾಪವೇನು?
- Proverbs 17:13 ಜ್ಞಾನೋಕ್ತಿಗಳು 17:13ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ.