Jeremiah · chapter 42 · verse 9
Jeremiah 42:9 in Kannada
ಕರೆದು ಅವರಿಗೆ ಹೇಳಿದ್ದೇನಂದರೆ--ಯಾವಾತನ ಮುಂದೆ ನಿಮ್ಮ ವಿಜ್ಞಾ ಪನೆಯನ್ನು ತರುವದಕ್ಕೆ ನನ್ನನ್ನು ಕಳುಹಿಸಿದ್ದಿರೋ ಆ ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--
Karedu avarige heliddenandare--yaavaatana munde nimma vijnyaa paneyannu taruvadakke nannannu kaluhisiddiro aa israayelina devaraada kartanu heege helu ttaane--
Jeremiah 42:9 in English
- King James Version (KJV)
- And said unto them, Thus saith the LORD, the God of Israel, unto whom ye sent me to present your supplication before him;
- World English Bible (WEB)
- and said to them, “The LORD, the God of Israel, to whom you sent me to present your supplication before him, says:
- American Standard Version (ASV)
- and said unto them, Thus saith Jehovah, the God of Israel, unto whom ye sent me to present your supplication before him:
- Bible in Basic English (BBE)
- And said to them, These are the words of the Lord, the God of Israel, to whom you sent me to put your request before him:
- Darby Translation (DBY)
- and said unto them, Thus saith Jehovah the God of Israel, to whom ye sent me to present your supplication before him:
- Webster's Bible (WBS)
- And said to them, Thus saith the LORD, the God of Israel, to whom ye sent me to present your supplication before him;
- Young's Literal Translation (YLT)
- and he saith unto them, 'Thus said Jehovah, God of Israel, unto whom ye sent me, to cause your supplication to fall before Him:
Read in context
- 7ಹತ್ತು ದಿವಸಗಳಾದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಬಂತು.
- 8ಆಗ ಅವನು ಕಾರೇಹನ ಮಗನಾದ ಯೋಹಾನಾನನ್ನೂ ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ಕಿರಿಯರು ಮೊದಲುಗೊಂಡು ಹಿರಿಯರ ವರೆಗೆ ಜನರೆಲ್ಲರನ್ನೂ
- 9ಕರೆದು ಅವರಿಗೆ ಹೇಳಿದ್ದೇನಂದರೆ--ಯಾವಾತನ ಮುಂದೆ ನಿಮ್ಮ ವಿಜ್ಞಾ ಪನೆಯನ್ನು ತರುವದಕ್ಕೆ ನನ್ನನ್ನು ಕಳುಹಿಸಿದ್ದಿರೋ ಆ ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--
- 10ನೀವು ಇನ್ನು ಈ ದೇಶದಲ್ಲಿ ವಾಸ ಮಾಡಿದರೆ ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತುಹಾಕದೆ ನೆಡುವೆನು. ನಾನು ನಿಮಗೆ ಮಾಡಿರುವ ಕೇಡಿನ ವಿಷಯ ಪಶ್ಚಾತ್ತಾಪ ಪಡುತ್ತೇನೆ.
- 11ನೀವು ಭಯ ಪಡುವ ಬಾಬೆಲಿನ ಅರಸನಿಗೆ ಹೆದರಬೇಡಿರಿ; ಅವನಿಗೆ ಭಯಪಡಬೇಡಿರೆಂದು ಕರ್ತನು ಅನ್ನುತ್ತಾನೆ; ನಿಮ್ಮನ್ನು ರಕ್ಷಿಸುವದಕ್ಕೂ ಅವನ ಕೈಗೆ ನಿಮ್ಮನ್ನು ತಪ್ಪಿಸುವದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ.
Cross references
- 2 Kings 19:6 2 ಅರಸುಗಳು 19:6ಆಗ ಯೆಶಾಯನು ಅವರಿಗೆ -- ನೀವು ನಿಮ್ಮ ಯಜಮಾನನಿಗೆ ಹೇಳಬೇಕಾದದ್ದೇನಂದರೆ -- ನೀನು ಕೇಳಿದಂಥ, ಅಶ್ಶೂರಿನ ಅರಸನ ಸೇವಕರು ನನ್ನನ್ನು ದೂಷಿಸಿದಂಥ, ಮಾತುಗಳನ್ನು ನೀವು ಕೇಳಿದ್ದಕ್ಕೋಸ್ಕರ ಭಯಪಡಬೇಡಿರಿ.
- Jeremiah 42:2 ಯೆರೆಮೀಯ 42:2ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ್ದೇನಂ ದರೆ--ನಮ್ಮ ವಿಜ್ಞಾಪನೆ ನಿನ್ನ ಮುಂದೆ ಬರಲಿ; ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ ನಮ ಗೋಸ್ಕರವೂ ಅಂದರೆ ಈ ಸಮಸ್ತಶೇಷಕ್ಕೋಸ್ಕರವೂ
- 2 Kings 19:4 2 ಅರಸುಗಳು 19:4ಒಂದು ವೇಳೆ ನಿನ್ನ ದೇವರಾದ ಕರ್ತನು, ಜೀವವುಳ್ಳ ದೇವ ರನ್ನು ನಿಂದಿಸಲು ತನ್ನ ಯಜಮಾನನಾದ ಅಶ್ಶೂರಿನ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿ, ನಿನ್ನ ದೇವರಾದ ಕರ್ತನು ಕೇಳಿದ ಅವನ ಮಾತುಗಳಿಗೋಸ್ಕರ ಅವನನ್ನು ಗದರಿಸುವನು. ಆದ ದರಿಂದ ನೀನು ಉಳಿದವರಿಗೋಸ್ಕರ ಪ್ರಾರ್ಥನೆ ಸಲ್ಲಿಸಬೇಕು ಅಂದನು.
- 2 Kings 19:20–37 2 ಅರಸುಗಳು 19:20–37ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಅಶ್ಶೂರಿನ ಅರಸನಾದ ಸನ್ಹೇರೀಬನನ್ನು ಕುರಿತು ನೀನು ನನಗೆ ಪ್ರಾರ್ಥನೆ ಮಾಡಿದ್ದನ್ನು ನಾನು ಕೇಳಿ ದ್ದೇನೆ. ಕರ್ತನು ಅವನನ್ನು ಕುರಿತು ಹೇಳಿದ ವಾಕ್ಯ ವೇನಂದರೆ-- ಚೀಯೋನಿನ ಮಗಳಾದ ಕನ್ಯಾಸ್ತ್ರೀ ನಿನ್ನನ್ನು ಉದಾಸೀನ ಮಾಡಿ ನಿನಗೆ ಅಪಹಾಸ್ಯ ಮಾಡು ತ್ತಾಳೆ; ಯೆರೂಸಲೇಮಿನ ಕುಮಾರ್ತೆ ನಿನ್ನ ಹಿಂದೆ ತಲೆ ಅಲ್ಲಾಡಿಸುತ್ತಾಳೆ. ಯಾರನ್ನು ನಿಂದಿಸಿ ದೂಷಿ ಸಿದಿ? ಯಾರಿಗೆ ವಿರೋಧವಾಗಿ ಸ್ವರವನ್ನು ಎತ್ತಿ ನಿನ್ನ ಕಣ್ಣುಗಳನ್ನು ಮೇಲಕ್ಕೆ ಎತ್ತಿದಿ? ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೇ. ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ. ನಾನು ಅಗೆದು ಅನ್ಯರ ನೀರನ್ನು ಕುಡಿದಿದ್ದೇನೆ; ನನ್ನ ಅಂಗಾಲುಗಳಿಂದ ಕೋಟೆ ಸ್ಥಳಗಳ ಪ್ರವಾಹಗಳನ್ನು ಬತ್ತಿಹೋಗುವಂತೆ ಮಾಡಿ ದ್ದೇನೆ. ನಾನು ಅದನ್ನು ಮಾಡಿದೆನೆಂದು ನೀನು ಬಹುಕಾಲದಿಂದಲೂ ನಾನು ಅದನ್ನು ನಿರೂಪಿಸಿದ್ದೇ ನೆಂದು ನೀನು ಪೂರ್ವದ ದಿವಸಗಳಿಂದಲೂ ಕೇಳ ಲಿಲ್ಲವೋ? ಈಗ ಅದನ್ನು ನಾನು ಅನುಭವಿಸುವಂತೆ ಮಾಡಿದ್ದೇನೆ, ನೀನು ಬಲವಾದ ಪಟ್ಟಣಗಳನ್ನು ಹಾಳಾದ ದಿಬ್ಬೆಗಳಾಗಿ ಮಾಡಿಬಿಡುವ ಹಾಗೆ ಇರು ವದೇ. ಆದದರಿಂದ ಅವುಗಳ ನಿವಾಸಿಗಳು ಬಲ ಹೀನರಾಗಿ ಹೆದರಿ ನಾಚಿಕೆಪಟ್ಟರು. ಹೊಲದ ಹುಲ್ಲಿನ ಹಾಗೆಯೂ ಹಸುರು ಪಲ್ಯದ ಹಾಗೆಯೂ ಮಾಳಿಗೆಗೆಳ ಮೇಲಿರುವ ಹುಲ್ಲಿನ ಹಾಗೆಯೂ ಬೆಳೆಯುವದಕ್ಕಿಂತ ಮುಂಚೆ ಬಾಡುವ ಪೈರಿನ ಹಾಗೆಯೂ ಇದ್ದರು. ನಿನ್ನ ಕೂತಿರುವಿಕೆಯನ್ನೂ ಹೊರಡುವಿಕೆಯನ್ನೂ ನಿನ್ನ ಬರುವಿಕೆಯನ್ನೂ ನೀನು ನನಗೆ ವಿರೋಧವಾಗಿ ಮಾಡುವ ರೌದ್ರವನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಲ್ಲಿ ಬಂದದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ ನೀನು ಬಂದ ಮಾರ್ಗದಲ್ಲಿ ನಿನ್ನನ್ನು ಹಿಂತಿರುಗಿಸುವೆನು. ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ. ಯೆಹೂದದ ಮನೆತನದಲ್ಲಿ ಉಳಿದು ತಪ್ಪಿಸಿಕೊಂಡವರು ತಿರಿಗಿ ಕೆಳಗೆ ಬೇರೂರಿ ಮೇಲಕ್ಕೆ ಫಲ ಬಿಡುವರು. ಯೆರೂ ಸಲೇಮಿನಿಂದ ಉಳಿದವರೂ ಚಿಯೋನ್ ಪರ್ವತ ದಿಂದ ತಪ್ಪಿಸಿಕೊಂಡವರೂ ಹೊರಡುವರು. ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ಮಾಡುವದು. ಆದ ದರಿಂದ ಕರ್ತನು ಅಶ್ಶೂರಿನ ಅರಸನನ್ನು ಕುರಿತು ಹೇಳುವದೇನಂದರೆ--ಅವನು ಈ ಪಟ್ಟಣದಲ್ಲಿ ಬರು ವದಿಲ್ಲ; ಅಲ್ಲಿ ಬಾಣವನ್ನು ಎಸೆಯುವದಿಲ್ಲ; ಗುರಾಣಿ ಹಿಡಿದುಕೊಂಡು ಅದರ ಮುಂದೆ ಸೇರುವದಿಲ್ಲ; ಅದಕ್ಕೆ ವಿರೋಧವಾಗಿ ದಿನ್ನೆಯನ್ನು ಹಾಕುವದಿಲ್ಲ. ಅವನು ಬಂದ ಮಾರ್ಗವಾಗಿಯೇ ತಿರಿಗಿ ಹೋಗುವನು; ಆದರೆ ಅವನು ಈ ಪಟ್ಟಣದಲ್ಲಿ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ. ನನ್ನ ನಿಮಿತ್ತವೂ ನನ್ನ ಸೇವಕನಾದ ದಾವೀದನ ನಿಮಿತ್ತವೂ ನಾನು ಈ ಪಟ್ಟಣವನ್ನು ಕಾಪಾಡಿ ಅದನ್ನು ರಕ್ಷಿಸುವೆನು ಎಂಬದೇ. ಅದೇ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ದೂತನು ಹೊರಟು ಅಶ್ಶೂರಿನ ದಂಡಿನಲ್ಲಿ ಒಂದು ಲಕ್ಷ ಎಂಭತ್ತೈದು ಸಾವಿರ ಜನರನ್ನು ಸಂಹರಿಸಿದನು. ಉದಯದಲ್ಲಿ ಜನರು ಎದ್ದಾಗ ಇಗೋ, ಅವರೆಲ್ಲರೂ ಸತ್ತು ಹೆಣಗಳಾಗಿದ್ದರು. ಅಶ್ಶೂರಿನ ಅರಸನಾದ ಸನ್ಹೇರೀಬನು ಹಿಂತಿರುಗಿಹೋಗಿ ನಿನೆವೆಯಲ್ಲಿ ವಾಸ ವಾಗಿದ್ದನು.ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್ಹದ್ದೋನನು ಅವನಿಗೆ ಬದಲಾಗಿ ಅರಸನಾದನು. ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
- 2 Kings 22:15–20 2 ಅರಸುಗಳು 22:15–20ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು. ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ. ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ--ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ -- ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು. ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.